ಧಾರವಾಡ: ಮೊನ್ನೆಯಷ್ಟೇ ಧಾರವಾಡ ಹೊರವಲಯದ ಹಳಿಯಾಳ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ರಜಾಕ್ ಕವಲಗೇರಿ ಎಂಬುವವರನ್ನು ಕೊಚ್ಚಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಾಲ್ವರು ಅಣ್ಣ, ತಮ್ಮಂದಿರೇ ಸೇರಿಕೊಂಡು ರಜಾಕ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ ಆಸ್ತಿ ವಿಚಾರವೇ ಕಾರಣ ಎಂದು ಗೊತ್ತಾಗಿದೆ.
ಕೆಇಬಿಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಬಾಡ ಗ್ರಾಮದ ರಜಾಕ್ ಕವಲಗೇರಿ ಮೊನ್ನೆ ತಮ್ಮೂರಿನತ್ತ ಹೋಗುತ್ತಿದ್ದ ಸಂದರ್ಭದಲ್ಲಿ ದಾವಲಮಲೀಕ್ ಶರೀಫಸಾಬ್ ಕವಲಗೇರಿ, ದಾದಾಕಲಂದರ್ ಶರೀಫಸಾಬ್ ಕವಲಗೇರಿ, ಮಾಬೂಬಸಾಬ್ ಶರೀಫಸಾಬ್ ಕವಲಗೇರಿ ಹಾಗೂ ಬುಡೇಸಾಬ್ ಶರೀಫಸಾಬ್ ಕವಲಗೇರಿ ಎಂಬ ನಾಲ್ಕು ಜನ ಸಹೋದರರೇ ಸೇರಿಕೊಂಡು ಅಡ್ಡಗಟ್ಟಿ ರಜಾಕ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದೀಗ ನಾಲ್ಕೂ ಜನರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





