Breaking News

ವೀಡಿಯೊ ದೃಶ್ಯ ಆಧರಿಸಿ ಆರೋಪಿಯ ಪತ್ತೆ…

ಬೆಂಗಳೂರು: ನಗರದ ಲುಲು ಮಾಲ್​ನಲ್ಲಿ ಯುವತಿಯ ಹಿಂಭಾಗ ಮುಟ್ಟಿ ವಿಕೃತಿ ಮೆರೆದ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಇದೀಗ ವೀಡಿಯೊ ದೃಶ್ಯ ಆಧರಿಸಿ ಆರೋಪಿಯ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಬಸವೇಶ್ವರನಗರ ನಿವಾಸಿ ಅಶ್ವಥ್ ನಾರಾಯಣ್ (60) ಆರೋಪಿ. ಮೂರು ದಿನಗಳ ಹಿಂದೆ ಲುಲು ಮಾಲ್ ನಲ್ಲಿ ಯವತಿಯರ ಜೊತೆ ಅಸಭ್ಯವಾಗಿ ಅಶ್ವಥ್ ನಾರಾಯಣ್ ವರ್ತಿಸಿದ್ದ. ಈ ವೇಳೆ ಯುವಕ ಯಶವಂತ್ ವೀಡಿಯೊ ಚಿತ್ರೀಕರಿಸಿದ್ದ.

ವೀಡಿಯೊ ವೈರಲ್ ಬಳಿಕ ಲುಲು ಮ್ಯಾನೇಜರ್ ಕೇಸ್ ದಾಖಲಿಸಿದ್ರು. ವೀಡಿಯೊ ಆಧರಿಸಿ ಸದ್ಯ ಆರೋಪಿಯ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ನಿವೃತ್ತನಾಗಿದ್ದ. ಕಳೆದ ಎಂಟು ತಿಂಗಳ ಹಿಂದೆ ಅಶ್ವಥ್ ನಾರಾಯಣ್ ನಿವೃತ್ತನಾಗಿದ್ದ. ಸದ್ಯ ಅಶ್ವಥ್ ನಾರಾಯಣ್ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದು, ಆತನ ಪತ್ತೆಗೆ ಮಾಗಡಿ ರೋಡ್ ಪೊಲೀಸ್ರು ಹುಡುಕಾಟ ಮುಂದುವರೆಸಿದ್ದಾರೆ.

Share News

About BigTv News

Check Also

ಧಾರವಾಡನಲ್ಲಿ ಪ್ರತಿಭಟನೆಯ ಬೆನ್ನಲ್ಲೇ 24 ಸಾವಿರ ಹುದ್ದೆಗಳಿಗೆ ಮಂಜೂರಾತಿ…

ಬೆಂಗಳೂರು : ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ Dharwadನಲ್ಲಿ ಯುವಕರ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ರಾಜ್ಯ …

Leave a Reply

Your email address will not be published. Required fields are marked *