Breaking News

ಸಾರಿಗೆ ಬಸ್ ಸಾಕ್ಷಿಯಾಗಿ ಸಾರಿಗೆ ಕರ್ನಾಟಕ ರಾಜ್ಯದ ಬಾವುಟದಲ್ಲಿ ಕಂಗೋಳಿಸುತ್ತಿದೆ…

ಕುಂದಗೋಳ : ಕರ್ನಾಟಕ ರಾಜ್ಯೋತ್ಸವ ಕನ್ನಡಿಗರ ಹಬ್ಬ ಎಂದ್ರೇ ಎಲ್ಲೇಡೆಯೂ ವಿಶೇಷ ವಿಶೇಷತೆ ಇದ್ದೇ ಇರುತ್ತೆ ಈ ವಿಶೇಷತೆಗೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಸಾರಿಗೆ ಬಸ್ ಸಾಕ್ಷಿಯಾಗಿ ಸಾರಿಗೆ ಕರ್ನಾಟಕ ರಾಜ್ಯದ ಬಾವುಟದಲ್ಲಿ ಕಂಗೋಳಿಸುತ್ತಿದೆ. ನಿತ್ಯ ಗ್ರಾಮದ ಜನರಿಗೆ ಸೇವೆ ಸಲ್ಲಿಸುವ ಸಾರಿಗೆ ಬಸ್’ನ್ನು ಸಾರ್ವಜನಿಕರು ಹಳದಿ ಕೆಂಪು ಬಾವುಟದಿಂದ ಮದುವಣಗಿತ್ತಿಯಂತೆ ಶೃಂಗರಿಸಿ ಬಾಳೆ ಗಿಡ ಕಟ್ಟಿ ಪೂಜೆ ಸಲ್ಲಿಸಿ ಕನ್ನಡಿಗರ ಪ್ರೇಮ ತೋರಿದ್ದಾರೆ.

ಮಂಗಳವಾರ ರಾತ್ರಿಯೆ ತಮ್ಮೂರಿನಲ್ಲಿ ತಂಗಿದ ಬಸ್’ಗೆ ಗ್ರಾಮಸ್ಥರು ಹಾಗೂ ಚಾಲಕ ಎಸ್.ಎಲ್.ನಾಮಕ ನಿರ್ವಾಹಕ ದೇವಪ್ಪ ಬೆಳಗಲಿ ಅವರ ಸಹಕಾರ ಪಡೆದು ಸಾರಿಗೆ ಬಸ್ ಒಳಗೆ ಮತ್ತು ಹೊರಗೆ ಕರ್ನಾಟಕ ರಾಜ್ಯದ ಬಾವುಟಗಳಿಂದ ಶೃಂಗರಿಸಿದ್ದಾರೆ. ಶಾಲಾ ಮಕ್ಕಳು ಸಮ್ಮುಖದಲ್ಲಿ ಬೆಳಿಗ್ಗೆ ಬಸ್’ಗೆ ಮಂಗಳಾರತಿ ಸಲ್ಲಿಸಿ ಚಾಲನೆ ನೀಡಿದ್ದು, ಇದೀಗ ಸಾರಿಗೆ ಬಸ್ ರಸ್ತೆಯುದ್ದಕ್ಕೂ ಕನ್ನಡದ ಕಂಪನ್ನು ಸೂಸುತ್ತಿದೆ.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *