ನವೆಂಬರ್ 23ರಂದು ವಿಶಾಖಪಟ್ಟಣದಲ್ಲಿ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡದ ಆಯ್ಕೆ ಮಾಡಲಾಗಿದೆ.2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ, ಟಿ20 ತಂಡವು ತಾಜಾ ಹಾಗೂ ಯುವ ಮುಖಗಳನ್ನು ಹೊಂದಿದೆ. ಇದೇ ವೇಳೆ ಭಾರತ ತಂಡದ ನೂತನ ನಾಯಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗುವ ಸಮೀಪದಲ್ಲಿದ್ದಾರೆ. 2000 ಟಿ20 ರನ್ ದಾಖಲೆಯನ್ನು ನಿರ್ಮಿಸಲು ಬಲಗೈ ಬ್ಯಾಟರ್ ಸೂರ್ಯಕುಮಾರ್ ಅವರ ಮುಂದಿನ ಇನ್ನಿಂಗ್ಸ್‌ಗಳಿಂದ 159 ರನ್‌ಗಳ ಅಗತ್ಯವಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





