Warning: Undefined array key "wpdb" in /home/eamphica/public_html/wp-content/mu-plugins/blaze-curator-hq.php on line 4442
ಪತ್ನಿ ತ್ರಿಷಿಕಾ ಕುಮಾರಿ ಸಮೇತರಾಗಿ ಅರ್ಜುನನ ಸಮಾಧಿ ದರ್ಶನ ಪಡೆದ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿ ಅಂತಿಮ ನಮನ… - bigtvnews | Hubli Dharwad News | Kannada News | Karnataka News
Breaking News

ಪತ್ನಿ ತ್ರಿಷಿಕಾ ಕುಮಾರಿ ಸಮೇತರಾಗಿ ಅರ್ಜುನನ ಸಮಾಧಿ ದರ್ಶನ ಪಡೆದ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿ ಅಂತಿಮ ನಮನ…

ಹಾಸನದಲ್ಲಿ ಸಾವನ್ನಪ್ಪಿದ ದಸರಾ ಅಂಬಾರಿ ಹೊತ್ತ ಅರ್ಜುನನ ಸಮಾಧಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದರು.ಅರ್ಜುನನ ಅಂತ್ಯಕ್ರಿಯೆ ವೇಳೆಯೇ ಅರಮನೆಯಿಂದ ಪೂಜಾ ಸಾಮಗ್ರಿ, ಹಾರ, ಶಾಲು ಕೊಟ್ಟು ಕಳಿಸಿದ್ದ ಯದುವೀರ್ ಇಂದು ಸಮಾಧಿಗೆ ಭೇಟಿ ನೀಡಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿರೋ ಸಮಾಧಿ ಬಳಿ‌ ತೆರಳಿ ಭೇಟಿ ನೀಡಿದ ಯದುವೀರ್ ಒಡೆಯರ್ ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಅರ್ಜುನನ ಸಮಾಧಿ ಬಳಿ ಅಂತಿಮ ನಮನ ಸಲ್ಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಯದುವೀರ್ ಒಡೆಯರ್ ಅರಣ್ಯ ಸಿಬ್ಬಂದಿ ಜೊತೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಪತ್ನಿ ತ್ರಿಷಿಕಾ ಕುಮಾರಿ ಸಮೇತರಾಗಿ ಅರ್ಜುನನ ಸಮಾಧಿ ದರ್ಶನ ಪಡೆದ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿ ಅಂತಿಮ ನಮನಗಳನ್ನು ಅರ್ಜುನನಿಗೆ ಸಲ್ಲಿಸಿದ್ದಾರೆ.ಡಿಸೆಂಬರ್ 5 ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿ ಅರ್ಜುನನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

Share News

About BigTv News

Check Also

ಮರಳು ದಂಧೆಯಲ್ಲಿ ಖಾಕಿಯ ‘ಮಂತ್ಲಿ’ ಆಟ? ಠಾಣೆಯಲ್ಲೇ ಲಾರಿ, ಮೇಲ್ವಿಚಾರಣೆ ಯಾರದ್ದು..?

ಧಾರವಾಡ–ಹುಬ್ಬಳ್ಳಿ: ಅಕ್ರಮ ಮರಳು ಸಾಗಾಟದ ಲಾರಿಗಳನ್ನು ಬಿಡಿಸಲು ಲಂಚದ ಬೇಡಿಕೆ ಇಟ್ಟ ಆರೋಪದಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಲೋಕಾಯುಕ್ತರ ಬಲೆಗೆ …

Leave a Reply

Your email address will not be published. Required fields are marked *