Breaking News

ಕಾಲುವೆಗಳಲ್ಲಿ ಹಾಕಿದ ಕಾಂಕ್ರೀಟ ಬೆಡ್ ಗಳನ್ನು ಹಾಡು ಹಗಲೇ ಕೆಲವರು ದೋಚುತ್ತಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ….

ನವಲಗುಂದ : ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನ ಬಸಾಪೂರ ಮಧ್ಯದ ಮಲಪ್ರಭಾ ಕಾಲುವೆಗಳಲ್ಲಿ ಹಾಕಿದ ಕಾಂಕ್ರೀಟ ಬೆಡ್ ಗಳನ್ನು ಹಾಡು ಹಗಲೇ ಕೆಲವರು ದೋಚುತ್ತಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ಬಸಾಪೂರ ಸಮೀಪದ ಮಲಪ್ರಭಾ ಕಾಲುವೆಯಲ್ಲಿ ನೀರು ರೈತರ ಬೆಳೆಗಳಿಗೆ ಹಾಗೂ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ಸರಾಗವಾಗಿ ಹರಿದು ಹೋಗಲೆಂದು ಕರ್ನಾಟಕ ಸರಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡಿ ಕಾಲುವೆಗಳನ್ನು ಕಾಂಕ್ರೀಟ ಮಾಡಿದ್ದಾರೆ. ಆದರೆ ಕೆಲವು ದುಷ್ಟರು ಕಾಲುವೆಯಲ್ಲಿ ಬಿರುಕು ಬಿಟ್ಟ ಕಾಂಕ್ರೀಟನ್ನು ಒಡೆದು ಟ್ರ್ಯಾಕ್ಟರಗಳಲ್ಲಿ ತುಂಬಿಕೊಂಡು ಮಾರಾಟ ಹಾಗೂ ತಮ್ಮ ಮನೆಗಳಿಗೆ ಬಳಸುತ್ತಿದ್ದಾರೆ ಎಂಬ ಆರೋಪಗಳು ಕೂಡಾ ಕೇಳಿಬರುತ್ತಿವೆ.

ಇನ್ನು ಕೆಲವು ರೈತರು ತಮ್ಮ ಹೊಲದ ಬದುವಿಗೆ ಹಾಕಿರುವ ದಿಂಡು ಕಲ್ಲುಗಳನ್ನು ಕೂಡಾ ಟ್ರ್ಯಾಕ್ಟರಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ನೀರಾವರಿ ಇಲಾಖೆಗೆ ಮೇಲಿಂದ ಮೇಲೆ ತಿಳಿಸಿದರೂ ಕೂಡಾ ಯಾವುದೇ ಪ್ರಯೋಜನವಾಗುತ್ತಿಲ್ಲ. ರೈತರು ಸ್ವತಃ ಅಧಿಕಾರಿಗಳನ್ನೇ ಸ್ಥಳಕ್ಕೆ ಕರೆದುಕೊಂಡು ಹೋದಾಗಲೂ ಕೂಡಾ ಖದೀಮರನ್ನು ಹಿಡಿದು ಹಾಜರಪಡಿಸಿದ್ದರೂ ಕೂಡ ಅವರು ರಾಜಕಾರಣಿಗಳ ಹೆಸರು ಬಳಸಿಕೊಂಡು ನುಣುಚಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಬಿಟ್ಟಿರುವುದು ಯಾವ ನ್ಯಾಯ ಎಂಬುದು ರೈತರ ಪ್ರಶ್ನೆಯಾಗಿದೆ ?

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *