Breaking News

ನವಲಗುಂದ

ನವಲಗುಂದ. ಯಮನೂರು ಜಾತ್ರಾ, ಬಂದು ಬಸ್ತನ್ನು ಪರಿಶೀಲಿಸಿದ ಎಸ್ ಪಿ

ನವಲಗುಂದ ತಾಲೂಕಿನ ಯಮನೂರು ಚಾಂಗದೇವರ ಜಾತ್ರೆ ಆರಂಭವಾಗಿದ್ದು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಗೋಪಾಲ್ ಬ್ಯಾಕೋಡ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಜಾತ್ರೆ ಅಂಗವಾಗಿ ಕಾನೂನು ಸುವ್ಯವಸ್ಥೆ ಪಾರ್ಕಿಂಗ್ ವ್ಯವಸ್ಥೆ ಮತ್ತು ಬಸ್ ಸಂಚಾರ ವೀಕ್ಷಣೆ ಮಾಡಿದರು ನಂತರ ದೇವರ ದರ್ಶನ ಪಡೆದರು.

Read More »

ನವಲಗುಂದ್ , ಬೈಕ್ ಅಪಘಾತ ಸವಾರ ಸಾವು

ನವಲಗುಂದ್ ಪಟ್ಟಣದ ರೈತ ಭವನದ ಹತ್ತಿರ ವಾಹನವನ್ನು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ . ಅಣ್ಣಿಗೇರಿ ತಾಲೂಕಿನ ಬಸ್ಸಾಪುರ್ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ ಸ್ಥಳಕ್ಕೆ ಪೊಲೀಸರ ಆಗಮಿಸಿ ತನಿಖೆ ಶುರು ಮಾಡಿದ್ದಾರೆ.

Read More »

ನವಲಗುಂದ್ ಯಮನೂರು ಜಾತ್ರಾ ಮಹೋತ್ಸವ

ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಚಾಂಗದೇವ ದೇವಸ್ಥಾನದ ಪಾದಯಾತ್ರೆಯ ಮೆರವಣಿಗೆ ಮೂಲಕ ಬೆನ್ನೆ ಹಳ್ಳಕ್ಕೆ ತೆರಳಿ ಪೂಜೆ ಸಲ್ಲಿಸಿ ಎಣ್ಣೆ ಬದಲಾಗಿ ಹಳ್ಳದ ನೀರಿನಿಂದಲೇ ದೀಪ ಹಚ್ಚಿದ ಪ್ರತಿತ ಪಡೆದಿರುವ ಗಂಧದ ಗಂದಾಭಿಷೇಕದ ಮೂರ್ತಿಯನ್ನು ಹೊತ್ತ ಬರ್ಗೆ ಮನೆತನದವರಿಂದ ಪೂಜೆ ನಡೆಯುತ್ತದೆ. ರಾಜ್ಯ ರಾಜ್ಯದಿಂದ ಜನರು ಆಗಮಿಸಿ ಜಾತ್ರೆ ಗೆ ಮತ್ತಷ್ಟು ಮೆರಗು ತಂದರು.

Read More »

ಯಮನೂರು ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ

ನವಲಗುಂದ ತಾಲೂಕು ಯಮನೂರು ಚಾಂಗದೇವರು ಉರ್ಫ ರಾಜಾ ಬಾಗಸವಾರ ದೇವರ ಜಾತ್ರೆಗೆ ಬರುವ ಭಕ್ತಾದಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.ಮಾರ್ಚ್ 17 ರಿಂದ 21 ರವರೆಗೆ ಜಾತ್ರೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ, ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣ ಅಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ವಿಶೇಷ ಬಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.ಭಕ್ತ ಸಮುದಾಯಕ್ಕೆ ಸಾಕಷ್ಟು ಅನುಕೂಲ ನೀಡಲಾಗಿದೆ.

Read More »

ನವಲಗುಂದ ‘ಕಾಮಣ್ಣ’ ರಾಜ್ಯಕ್ಕೆ ಪ್ರಸಿದ್ಧಿ.ವೈಭವದ ಹೋಳಿ ಹುಣ್ಣಿಮೆ ಆಚರಣೆ.

ಧಾರವಾಡ ಜಿಲ್ಲೆಯ ನವಲಗುಂದ ಸಾಮರಸ್ಯದ ಊರು. ವೈಶಿಷ್ಟ್ಯಪೂರ್ಣವಾಗಿ ಹೋಳಿ ಹುಣ್ಣೆಮೆಯನ್ನು ಆಚರಣೆ ಮಾಡುವ ನವಲಗುಂದ ಶ್ರೀ ರಾಮಲಿಂಗ ಕಾಮಣ್ಣನು ಇಷ್ಟಾರ್ಥ ಸಿದ್ಧಿ ಪುರುಷನಾಗಿ ಪೂಜೆಗೊಳ್ಳುತ್ತಿರುವ ಕಾಮದೇವನಾಗಿದ್ದಾನೆ. ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲು ಬೆಳ್ಳಿಯ ತೊಟ್ಟಿಲು, ಕಂಕಣ ಭಾಗ್ಯಕ್ಕಾಗಿ ಬೆಳ್ಳಿಯ ಬಾಸಿಂಗ, ಅನಾರೋಗ್ಯ ನಿವಾರಣೆಗೆ ಬೆಳ್ಳಿ ಕುದುರೆ, ಮನೆ ವಸತಿ ಇಲ್ಲದವರು ಛತ್ರಿ ಛಾಮರ ಸೇರಿದಂತೆ ಬೆಳ್ಳಿ ಸಾಮಗ್ರಿಗಳನ್ನು ತೆಗೆದುಕೊಂಡು ತಮ್ಮ ಹರಕೆಯನ್ನು ತೀರಿಸುವುದು ಇಲ್ಲಿನ ನಂಬಿಕೆಯಾಗಿದೆ.

Read More »

ಪ್ರವಾಹದಿಂದ ಹಾನಿಗೊಳಗಾದ ರೈತರ ಭೂಮಿಯ ದಾಖಲೆ ಸಲ್ಲಿಕೆ ಅವಧಿ ವಿಸ್ತರಣೆಗೆ ಮನವಿ

ನವಲಗುಂದ: ಬೆಣ್ಣೆಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹದಿಂದ ಹಾನಿಗೊಳಗಾದ ರೈತರ ಭೂಮಿಯ ದಾಖಲೆಗಳನ್ನು ಕೃಷಿ ಇಲಾಖೆಗೆ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ತಹಶೀಲ್ದಾರ್ ಕಚೇರಿ ಶಿರಸ್ತೇದಾರ ಕೃಷ್ಣ ಅರೇರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಗಂಗಪ್ಪ ಮನಮಿ ಮಾತನಾಡಿ, ಪ್ರವಾಹ ಹಾಗೂ ಅತಿವೃಷ್ಟಿಯಾದಾಗ 72 ಗಂಟೆಯ ಒಳಗೆ ದಾಖಲೆ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಕೃಷಿ ಇಲಾಖೆ ರೈತರಿಗೆ ಸಕಾಲದಲ್ಲಿ ತಿಳಿಸಿಲ್ಲ. ಅ.15 ಕೊನೆಯ ದಿನ ಎಂದು ಹೇಳಲಾಗಿದೆ. …

Read More »

ಕಾಲುವೆಗಳಲ್ಲಿ ಹಾಕಿದ ಕಾಂಕ್ರೀಟ ಬೆಡ್ ಗಳನ್ನು ಹಾಡು ಹಗಲೇ ಕೆಲವರು ದೋಚುತ್ತಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ….

ನವಲಗುಂದ : ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನ ಬಸಾಪೂರ ಮಧ್ಯದ ಮಲಪ್ರಭಾ ಕಾಲುವೆಗಳಲ್ಲಿ ಹಾಕಿದ ಕಾಂಕ್ರೀಟ ಬೆಡ್ ಗಳನ್ನು ಹಾಡು ಹಗಲೇ ಕೆಲವರು ದೋಚುತ್ತಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ಬಸಾಪೂರ ಸಮೀಪದ ಮಲಪ್ರಭಾ ಕಾಲುವೆಯಲ್ಲಿ ನೀರು ರೈತರ ಬೆಳೆಗಳಿಗೆ ಹಾಗೂ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ಸರಾಗವಾಗಿ ಹರಿದು ಹೋಗಲೆಂದು ಕರ್ನಾಟಕ ಸರಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡಿ ಕಾಲುವೆಗಳನ್ನು ಕಾಂಕ್ರೀಟ ಮಾಡಿದ್ದಾರೆ. ಆದರೆ ಕೆಲವು ದುಷ್ಟರು ಕಾಲುವೆಯಲ್ಲಿ ಬಿರುಕು …

Read More »

ಹುಬ್ಬಳ್ಳಿಯಲ್ಲಿ ಅ. 13ರಂದು ಇಷ್ಟಲಿಂಗ ಪೂಜೆ ನೆರವೇರಿಸಲಿದ್ದಾರೆ….

ನವಲಗುಂದ: ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹಾಗೂ ಲಿಂಗಾಯತ ಒಳ ಪಂಗಡಗಳಿಗೆ ಕೇಂದ್ರ ಸರಕಾರ ಓಬಿಸಿ ಮೀಸಲಾತಿ ಪಟ್ಟಿ ಸೇರ್ಪಡೆಗೆ ಒತ್ತಾಯಿಸಿ ರಾಜ್ಯಾದ್ಯಂತ ಕೈಗೊಂಡಿರುವ ಪ್ರಯುಕ್ತ ಧಾರವಾಡ ಜಿಲ್ಲಾ ಮಟ್ಟದ ಹೋರಾಟದ ಅಂಗವಾಗಿ ಹುಬ್ಬಳ್ಳಿಯಲ್ಲಿ ಅ. 13ರಂದು ಇಷ್ಟಲಿಂಗ ಪೂಜೆ ನೆರವೇರಿಸಲಿದ್ದಾರೆ. ಅದರ ಪೂರ್ವ ಭಾವಿಯಾಗಿ ನವಲಗುಂದ ತಾಲೂಕಿನ ಸಮಾಜ ಭಾಂದವರ ಸಭೆಯನ್ನು ಪಟ್ಟಣದ ಪಿಎಲ್‌ಡಿ ಬ್ಯಾಂಕಿನ ಶ್ರೀ ಶಂಕರಗೌಡ ಪಾಟೀಲ ಸಭಾ …

Read More »

ಆರೇಕುರಹಟ್ಟಿ ಗ್ರಾಮದ ಕೆರೆ ವೀಕ್ಷಣೆ…

ನವಲಗುಂದ : ತಾಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ಕುಡಿಯಲು ಬಳಸುವ ಕೆರೆ ಅಸ್ವಚ್ಛತೆಯಿಂದ ಇದ್ದು, ಅದನ್ನು ಸ್ವಚ್ಛಗೊಳಿಸಿ ನೀರು ಸರಬರಾಜು ಮಾಡಿ ಅಂತಾ ಗ್ರಾಮಸ್ಥರು ಆಗ್ರಹಿಸಿದ್ದರು. ಈಗಾ ಸ್ವಚ್ಛತೆ ಕಾರ್ಯ ಬಿರುಸಿನಿಂದ ನಡೆದಿದ್ದು, ತಾಪಂ ಇಓ ಭಾಗ್ಯಶ್ರೀ ಜಹಾಗೀರದಾರ ಅವರು ಇಂದು ಗ್ರಾಮಕ್ಕೆ ಭೇಟಿ ನೀಡಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಅವರೊಂದಿಗೆ ಇದ್ದರು.

Read More »

ಕೆಎಸ್ ಆರ್ ಟಿಸಿ ಬಸ್-ಬೈಕ್ ನಡುವೆ ಡಿಕ್ಕಿ – ಬೈಕ್ ಸವಾರರು ಸ್ಥಳದಲ್ಲೇ ಸಾವು…

ನವಲಗುಂದ : ತಾಲೂಕಿನ ಅಮರಗೋಳ ಕ್ರಾಸ್ ಬಳಿ ರವಿವಾರ ತಡರಾತ್ರಿ ಕೆ ಎಸ್ ಆರ್ ಟಿ ಸಿಯ ರಾಜಹಂಸ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರರಾದ ಸುರೇಶ್ ಕಾಶಪ್ಪ ಕಂಬಾರ (38)ರಮೇಶ್ ನಿಂಗಪ್ಪ ಕಂಬಾರ (38)ಮೃತ ದುರ್ದೈವಿಗಳು ಮೂಲತಃ ಬದಾಮಿ ತಾಲೂಕಿನ ಮಾದಿಗಿ ಗ್ರಾಮದವರಾಗಿದ್ದು ಅವರು ಕಲಘಟಗಿ ತಾಲೂಕಿನ ಹೂಲಕೋಪ್ಪ ಗ್ರಾಮಕ್ಕೆ ತೆರಳುವ ವೇಳೆ ಮಾರ್ಗ ಮಧ್ಯದಲ್ಲಿ …

Read More »