Breaking News

ಹುಬ್ಬಳ್ಳಿಯಲ್ಲಿ ಕಾಟೇರ್ ಎಲ್ಲ ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ…..

ಹುಬ್ಬಳ್ಳಿ: ಈಗ ಎಲ್ಲಿ ಕೇಳಿದರೂ ಎಲ್ಲಿ ನೋಡಿದರೂ ಒಂದೇ ಸೌಂಡು ಅದು ಕಾಟೇರ. ಹೌದು, ನಟ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಸಿ ಬೊಬ್ಬರಿಯುತ್ತಿದೆ. ಅದರಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಟ ದರ್ಶನ ಅಭಿಮಾನಿಗಳು ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೆ ಇಷ್ಟವಾಗುತ್ತಿದೆ. ಎಲ್ಲೆಡೆ ಉತ್ತಮ ರೆಸ್ಪಾನ್ಸ್‌ ವ್ಯಕ್ತವಾಗ್ತಿದೆ. ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿ ಪಟ್ಟಿದ್ದಾರೆ. ಅಲ್ದೇ ನಟ ದರ್ಶನ ಪರವಾಗಿ ಘೋಷಣೆ ಕೂಗಿ ಕಾಟೇರ್ ಸಿನಿಮಾ 100 ದಿನ ಪೂರೈಸಲಿ ಎಂದು ಆಶಿಸಿದ್ದಾರೆ. ಇನ್ನು ಈ ಸಿನಿಮಾ ಈ ಮಟ್ಟಕ್ಕೆ ಹಿಟ್ ಆಗೋಕೆ ಪ್ರಮುಖ ಕಾರಣ ಅದು ಚಾಲೆಂಜಿಗ್ ಸ್ಟಾರ್‌ ದರ್ಶನ ಅವರ ಅಭಿನಯ. ಹೌದು ಕಾಟೇರ ಸಿನಿಮಾದಲ್ಲಿ ದರ್ಶನ್‌ ಒನ್‌ಮ್ಯಾನ್‌ ಶೋನಂತೆ ಮಿಂಚುತ್ತಿದ್ದಾರೆ. ತುಂಬಾ ದಿನಗಳ ನಂತರ ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರೋ ಪಾತ್ರದಲ್ಲಿ ದರ್ಶನ್‌ ಅವರು ಜೀವಿಸಿದ್ದಾರೆ. ಹೀಗಾಗಿ ದರ್ಶನ ಅಭಿಮಾನಿಗಳು ಸಾಲುಗಟ್ಟಿ ನಿಂತು ಚಿತ್ರವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಕಾಟೇರ್ ಎಲ್ಲ ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

Share News

About BigTv News

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *