ಹುಬ್ಬಳ್ಳಿ: ಜನರ ಜೀವನ ನಿಜಕ್ಕೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಒಂದಾದ ಮೇಲೆ ಒಂದರಂತೆ ಜನರಿಗೆ ಗಾಯದ ಮೇಲೆ ಬರೆ ಬೀಳುವಂತಾಗಿದೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಸಿ ಜನರಿಗೆ ಬರೆ ಎಳೆದ ಸರಕಾರದಿಂದ ರೈತರಿಗೆ ಬಿಕ್ ಶಾಕ್ ಎದುರಾಗಿದೆ. ಅಷ್ಟಕ್ಕೂ ಏನಿದು ಬಿಗ್ ಶಾಕ್ ಅಂತೀರಾ ತೋರಸ್ತಿವಿ ನೋಡಿ..ಸರ್ಕಾರಿ ಸ್ವಾಮ್ಯದ ಅಮುಲ್ ಹಾಲು ಉತ್ಪಾದಕರ ಸಂಘದ ಒಕ್ಕೂಟದಿಂದ ರೈತರಿಗೆ ಬಿಗ್ ಶಾಕ್ ನೀಡಿದ್ದು, 2 ರೂಪಾಯಿ ಹಾಲಿನ ದರ ಇಳಿಕೆ ಮಾಡುವ ಮೂಲಕ ಆಮುಲ್ ಹಾಲು ಉತ್ಪಾದಕ ರೈತರಿಗೆ ಬಿಗ್ ಶಾಕ್ ನೀಡಿದೆ. ಹೌದು..ಪ್ರತಿ ಲೀಟರ್ ಹಾಲಿನ ದರದಲ್ಲಿ 2 ರೂಪಾಯಿ ಇಳಿಕೆ ಮಾಡಿದ ಆಮುಲ್, ಹಾವೇರಿ ಜಿಲ್ಲೆಯ ಹಾಲು ಉತ್ಪಾದಕರಿಗೆ ಶಾಕ್ ನೀಡಿದೆ. ಹಾಲು ಉತ್ಪಾದಕರಿಗೆ ನೀಡುವ ಹಾಲಿನ ದರದಲ್ಲಿ ಏಕಾಏಕಿ 2 ರೂಪಾಯಿ ಇಳಿಕೆ ಮಾಡಿದ್ದು, ಜಿಲ್ಲೆಯ ಹಾಲು ಉತ್ಪಾದಕರಿಗೆ 13.89 ಕೋಟಿ ರೂಪಾಯಿ ಪ್ರೋತ್ಸಾಹಧನ ನೀಡದ ಸರಕಾರ ಈಗ ಏಕಾಏಕಿ ಹಾಲಿನ ದರ ಕಡಿಮೆ ಮಾಡಿದ್ದು,ಸರ್ಕಾರದ ನಡೆಯ ವಿರುದ್ಧ ಕೇಂದ್ರ ಸಚಿವ ಲೇವಡಿ ಕೂಡ ಮಾಡಿದ್ದಾರೆ.ಬೈಟ್: ಎಚ್.ಡಿ.ಕುಮಾರಸ್ವಾಮಿ (ಕೇಂದ್ರ ಸಚಿವರು)ಇನ್ನೂ ಪ್ರತಿನಿತ್ಯ ಅಮುಲ್ ಗೆ ಜಿಲ್ಲೆಯಲ್ಲಿರುವ 21 ಸಾವಿರ ರೈತರು ಹಾಲು ನೀಡುತ್ತಿದ್ದಾರೆ. ಕೋವಿಡ್ ವೇಳೆ ಪ್ರತಿನಿತ್ಯ 90 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈಗ ಪ್ರತಿನಿತ್ಯ 1.53 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹೆಚ್ಚಿನ ಹಾಲು ಸಂಗ್ರಹದಿಂದ ಒಕ್ಕೂಟಕ್ಕೆ ಲಾಭಾಂಶ ಕಡಿಮೆ ಎನ್ನುತ್ತಿರುವ ಒಕ್ಕೂಟ, ಲಾಭಾಂಶ ಕಡಿಮೆಯಾದ ಹಿನ್ನೆಲೆಯಲ್ಲಿ 2 ರೂಪಾಯಿ ದರ ಇಳಿಕೆ ಮಾಡಿ ಅಮುಲ್ ಈಗ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ. ಈ ಬಗ್ಗೆ ಎಂಟು ತಿಂಗಳ ಪ್ರೋತ್ಸಾಹ ದಿನ ನೀಡದಿರುವ ಬಗ್ಗೆ ಎಚ್‌ಡಿಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.ಬೈಟ್: ಎಚ್.ಡಿ.ಕುಮಾರಸ್ವಾಮಿ (ಕೇಂದ್ರ ಸಚಿವರು)ಒಟ್ಟಿನಲ್ಲಿ ಹಾಲು ಒಕ್ಕೂಟದದಿಂದ ಸಾಕಷ್ಟು ಭರವಸೆ ಇಟ್ಟುಕೊಂಡ ರೈತರ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಅನ್ನದಾತನ ಪರವಾದ ಸರ್ಕಾರ ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಕೂಡಲೇ ಪ್ರೋತ್ಸಾಹ ಧನ ಹಾಗೂ ಬೆಲೆಯನ್ನು ಏರಿಕೆ ಮಾಡಬೇಕಿದೆ.
Check Also
ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ
ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …
bigtvnews | Hubli Dharwad News | Kannada News | Karnataka News Hubli News | News In Hubli | Local news

