Welcome to bigtvnews   Click to listen highlighted text! Welcome to bigtvnews
Breaking News

ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿ ವಿನೂತನ ರೀತಿ ಹುಲಿ ದಿನ ಆಚರಣೆ

ಆನೇಕಲ್: ವಿಶ್ವದಾದ್ಯಂತ ಇಂದು ಅಂತರರಾಷ್ಟ್ರೀಯ ಹುಲಿ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಬೆಂಗಳೂರಿನ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಸಹ ಹುಲಿ ದಿನವನ್ನು ವಿನೂತನವಾಗಿ ಆಚರಣೆ ಮಾಡಲಾಯಿತು. ಶಾಲಾ ಮಕ್ಕಳಿಗೆ ಹುಲಿಗಳ ಬಗ್ಗೆ ತಿಳುವಳಿಕೆ ಮೂಡಿಸುವ ಜೊತೆಗೆ 8 ಪುಟ್ಟ ಹುಲಿ ಮರಿಗಳನ್ನ ಸಫಾರಿಯಲ್ಲಿ ಪ್ರವಾಸಿಗರು ನೋಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದರ ಜೊತೆಗೆ ಒಂದು ಹೆಣ್ಣು ಹುಲಿ ಮರಿಗೆ ಅಥ್ಲೆಟ್ ಹಿಮಾದಾಸ್ ಹೆಸರಿಡುವ ಮೂಲಕ ಚಿನ್ನದ ಹುಡುಗಿಗೆ ಗೌರವ ಸಲ್ಲಿಸಲಾಯಿತು.ಭಾರತದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ, ಹಾಗಾಗಿಯೇ ಇಂದು ವಿಶ್ವ ಹುಲಿ ದಿನವನ್ನು ರಾಜ್ಯದ್ಯಾಂತ ವಿನೂತನವಾಗಿ ಆಚರಣೆ ಮಾಡಲಾಗುತ್ತಿದೆ, ರಾಜಾಧಾನಿ ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‍ನಲ್ಲಿ ಇಂದು ಶಾಲಾ ಮಕ್ಕಳಿಗೆ ರಾಷ್ಟ್ರ ಪ್ರಾಣಿ ಹುಲಿಯ ಬಗ್ಗೆ ತಿಳುವಳಿಕೆ ಮೂಡಿಸುವ ಮೂಲಕ ಅಂತರ್ ರಾಷ್ಟ್ರೀಯ ಹುಲಿ ದಿನಕ್ಕೆ ಚಾಲನೆ ನೀಡಿದ್ದು ಇಷ್ಟು ದಿನ ಹುಲಿಯನ್ನು ಪೋಟೊದಲ್ಲಿ ನೋಡುತ್ತಿದ್ದ ಶಾಲಾ ಮಕ್ಕಳು ತೀರಾ ಹತ್ತಿರದಿಂದ ಹುಲಿಗಳನ್ನು ನೋಡಿ ಸಕತ್ ಎಂಜಾಯ್ ಮಾಡಿದರು, ಸುಮಾರು 100 ವರ್ಷಗಳ ಹಿಂದೆ ವಿಶ್ವದಲ್ಲಿ 1 ಲಕ್ಷ ಹುಲಿಗಳು ಇದ್ದವು. ಆದರೆ ಈಗ ಅವುಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. ವಿಶ್ವದಲ್ಲಿ 5 ರಿಂದ 6 ಸಾವಿರ ಹುಲಿಗಳ ಮಾತ್ರ ಬದುಕುಳಿದಿವೆ. ಹಾಗಾಗಿ ಅವುಗಳನ್ನ ಸಂರಕ್ಷಣೆ ಮಾಡುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ. ನಗರೀಕರಣಕ್ಕೆ ಒಳಗಾಗಿ ಅರಣ್ಯಗಳು ಮಾಯವಾಗುತ್ತಿದ್ದು ಕಾಡು ಪ್ರಾಣಿಗಳ ಹಾಗೂ ಮನುಷ್ಯನ ನಡುವಿನ ಸಂಕರ್ಷ ಹೆಚ್ಚಾಗುತ್ತಲೇ ಇದೆ, ಹೀಗಾಗಿ ಮಕ್ಕಳಿಗೆ ಕಾಡನ್ನು ಬೆಳೆಸುವ ಮೂಲಕ ಹುಲಿಗಳನ್ನು ಯಾಕೆ ಸಂರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು . ನೂರಾರು ಮಕ್ಕಳು ಹುಲಿ ವೇಷ ತೊಟ್ಟ ವ್ಯಕ್ತಿಗಳ ಜೊತೆ ಪೊಟೊ ತೆಗೆಸಿಕೊಳ್ಳುವ ಮೂಲಕ ಹುಲಿ ದಿನವನ್ನು ಆಚರಣೆ ಮಾಡಿದರು.ಇನ್ನೂ ಹುಲಿ ದಿನದ ಅಂಗವಾಗಿ ಇಂದು 8 ಸಣ್ಣ ಹುಲಿ ಮರಿಗಳನ್ನು ಹುಲಿ ಸಫಾರಿಯಲ್ಲಿ ಪ್ರವಾಸಿಗರು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಅಮರ್ ಹಾಗೂ ವಿಸ್ಮಯ ಎಂಬ ಹುಲಿಗಳಿಗೆ ಜನಿಸಿದ 4 ಪುಟ್ಟ ಹುಲಿ ಮರಿಗಳನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆ ಗಾಗಿ ಬಿಡಲಾಗಿತ್ತು. ಇದರಲ್ಲಿ ಒಂದು ಹೆಣ್ಣು ಹುಲಿ ಮರಿಗೆ ಇನ್ನೂ ಸಹ ಹೆಸರು ಇಟ್ಟಿರಲಿಲ್ಲ, ಹೀಗಾಗಿ ಏಷ್ಯಾನ್ ಗೇಮ್ಸ್ ನಲ್ಲಿ ಮತ್ತೆ ಚಿನ್ನ ಗೆದ್ದ ಹಿಮಾದಾಸ್ ಹೆಸರನ್ನು ಹೆಣ್ಣು ಹುಲಿ ಮರಿಗೆ ಇಡುವ ಮೂಲಕ ಅವರಿಗೆ ಗೌರವ ಸೂಚಿಸಲಾಯಿತು, ಸದ್ಯ ಬನ್ನೇರುಘಟ್ಟ ಪಾರ್ಕ್‌ನಲ್ಲಿ 29 ಹುಲಿಗಳಿದ್ದು ಅವುಗಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳಲಾಗುತ್ತಿದೆ ಎಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‍ನ ಇಡಿ ವನಶ್ರೀ ಸಿಂಗ್ ತಿಳಿಸಿದರು.ಒಟ್ಟಿನಲ್ಲಿ ಮನುಷ್ಯ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷದಿಂದ ನಮ್ಮ ಪರಿಸರ ವ್ಯವಸ್ಥೆಯಲ್ಲಿ ಏರುಪೇರಾಗುತ್ತಿದೆ. ಅದರ ಜೊತೆಗೆ ದೇಶದಲ್ಲಿ ಹುಲಿಗಳ ಸಂತತಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೀಗಾಗಿ ಅವುಗಳನ್ನು ಸಂರಕ್ಷಣೆ ಮಾಡುವ ಕೆಲಸ ದೇಶದ ಪ್ರತಿಯೊಬ್ಬರು ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಹುಲಿಗಳನ್ನು ನೋಡಲು ಸಾಧ್ಯ.

Spread the love

About admin

Check Also

ಉಪನ್ಯಾಸಕರೊಬ್ಬರ ಫೇಸ್ ಬುಕ್ ಪೇಜ್ ಹ್ಯಾಕ್‌ ಮಾಡಿದ ಕಿರಾತಕರು- ಹಣ ನೀಡದಂತೆ ಮನವಿ ಮಾಡಿದ ಮಹಾಂತೇಶ ಸೊಗಲದ

ಧಾರವಾಡ :ಉಪನ್ಯಾಸಕರೊಬ್ಬರ ಪೇಸ್ ಬುಕ್ ಪೇಜ್ ಅನ್ನು ಹ್ಯಾಕ್ ಮಾಡಿದ ಅಪರಿಚಿತ ವ್ಯಕ್ತಿ ಗಳು ಹಣದ ಬೇಡಿಕೆ ಇಟ್ಟಿದ್ದಾರೆ. ಈ …

Leave a Reply

Your email address will not be published. Required fields are marked *

You cannot copy content of this page
Click to listen highlighted text!