Breaking News

admin

ಮಾಜಿ‌‌‌ ಸಿಎಂಗೆ ವ್ಯಂಗ್ಯಮಾಡಿದ ಸಾ.ರಾ.ಮಹೇಶ್

ಮೈಸೂರು: ಕೆಆರ್ ನಗರದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸಕ ಸಾ.ರಾ.ಮಹೇಶ್ ವ್ಯಂಗ್ಯಮಾಡಿದರು. ಮಾತನಾಡಿದ ಅವರು, ಹೆಚ್ಚು ಸಾಲ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಾರತ ರತ್ನ ನೀಡಬೇಕು ಎಂದರು. ಹಲವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಯಾರು ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆದರೂ ಜೆಡಿಎಸ್ ಬಗ್ಗೆ ಅವರು ಮಾತನಾಡುತ್ತಾರೆಂದರು. ಇನ್ನು ಮುಂದೆಯಾದರೂ ಸಿದ್ದರಾಮಯ್ಯನವರು ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

Read More »

ನವೀನ್ ಮೃತದೇಹವನ್ನು ಭಾರತಕ್ಕೆ ತರಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸುವಂತೆ ಸೂಚನೆ : ಮೋದಿ

ನವದೆಹಲಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಉಕ್ರೇನ್‍ನಲ್ಲಿ ಕಳೆದ ಮಾರ್ಚ್ 1ರಂದು ರಷ್ಯಾ ದಾಳಿಗೆ ಬಲಿಯಾಗಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ತಮ್ಮ ಅಧಿಕಾರಿಗಳಿಗೆ ಈ ಸಂಬಂಧ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ನವೀನ್ ಮೃತದೇಹ ತಾಯ್ನಾಡಿಗೆ ಬರುವ ನಿರೀಕ್ಷೆ ಇದೆ.

Read More »

ಹಿಜಾಬ್ ಕುರಿತು ನಾಳೆ ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪು ಪ್ರಕಟ

ಬೆಂಗಳೂರು : ಹಿಜಾಬ್ ಧರಿಸಲು ಕುರಿತು ನಾಳೆ (ಮಾ.15, ಮಂಗಳವಾರ) ಕರ್ನಾಟಕ ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪು ಪ್ರಕಟವಾಗಲಿದೆ. ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಪೀಠ ಆಲಿಸಿದೆ.ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ಮೂರು ವಾರಗಳ ಕಾಲ ವಿಚಾರಣೆ ನಡೆದಿತ್ತು. ಅನಂತರ ಅಂತಿಮ ತೀರ್ಪನ್ನು ಕಾಯ್ದಿರಿಸಲಾಗಿತ್ತು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಸಹ …

Read More »

ಮಾಜಿ ಸಿಎಂ ವಿರುದ್ದ ಯೋಗೇಶ್ವರ್ ಸವಾಲು

ರಾಮನಗರ: ನಿನ್ನ ಹೆಂಡತಿ ವಿರುದ್ಧ ಗೆದ್ದೆ, ನಿನ್ನ ವಿರುದ್ಧ ಸೋತೆ, ಮತ್ತೆ ನಿನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ರೆಡಿಯಾಗಿದ್ದೀನಿ ಎಂದು ಯೋಗೇಶ್ವರ್ ಸವಾಲು ಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಏವಚನದಲ್ಲೇ ವಗ್ದಾಳಿ ನಡೆಸಿದ್ದಾರೆ.

Read More »

ಯುದ್ದಪೀಡಿತ ಉಕ್ರೇನ್ ನಲ್ಲಿ ಅಮೆರಿಕ ಪತ್ರಕರ್ತ ಬ್ರೆಂಟ್‌ ರೆನಾಡ್‌ ಬಲಿ

ಇರ್ಪಿನ್: ಉಕ್ರೇನ್ ರಾಜಧಾನಿ ಕೀವ್ ಪ್ರಾಂತ್ಯದ ಇರ್ಪಿನ್ ನಗರದಲ್ಲಿ ರಷ್ಯಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಅಮೆರಿಕದ ಪತ್ರಕರ್ತ ಬ್ರೆಂಟ್‌ ರೆನಾಡ್‌ ಅವರು ಭಾನುವಾರ ಬಲಿಯಾಗಿದ್ದಾರೆ. ಮತ್ತೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಕೀವ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಆಯಂಡ್ರಿಯ್ ನ್ಯೆಬಿತೋವ್ ತಿಳಿಸಿದ್ದಾರೆ. ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ವಿಡಿಯೋ ಜರ್ನಲಿಸ್ಟ್‌ ಆಗಿದ್ದ ಬ್ರೆಂಟ್‌ ಪ್ರತಿಭಾವಂತ ಛಾಯಾಗ್ರಾಹಕ ಮತ್ತು ಚಿತ್ರ ನಿರ್ಮಾಪಕ ಆಗಿದ್ದರು. ಅವರು ಪತ್ರಿಕೆಗೆ ಉತ್ತಮ ಕೊಡುಗೆ ನೀಡಿದ್ದರು. ಅವರ ಅಗಲಿಕೆ …

Read More »

ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಬಹುದೆಂದು ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದ್ದಾರೆ.ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಾಗುವುದು. ಅಧಿವೇಶನವು ಏಪ್ರಿಲ್ 8 …

Read More »

ಇಂದು ಚಂದಾಹುಸೇನಿ ದರ್ಗಾ 585ನೇ ಉರುಸ್

ಗೋಗಿ (ಶಹಾಪುರ): ಮಾರ್ಚ್ 14ರಿಂದ ಚಂದಾಹುಸೇನಿ ದರ್ಗಾ 585ನೇ ಉರುಸ್ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ (ಜಾತ್ರಾ ಮಹೋತ್ಸವ) ಆರಂಭವಾಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದರ್ಗಾದ ಪೀಠಾಧಿಪತಿ ಸಯ್ಯದಶಾಹ ಮಹ್ಮದ ಹುಸೇನಿ ಸಜ್ಜಾದನಷಿನ್ ಬುಜರಗ್ ತಿಳಿಸಿದ್ದಾರೆ. ಸೋಮವಾರ ಗಂಧ, ಮಂಗಳವಾರ ದೀಪ ಹಾಗೂ ಬುಧವಾರ ಜಿಯಾರತ್ ನೆರವೇರಲಿದೆ. ಅಲ್ಲದೆ ಉರುಸ್ ಅಂಗವಾಗಿ ಸೋಮವಾರ ಗೋಗಿ ಗ್ರಾಮದಲ್ಲಿ ಮನ್ಸೂರ ಹಾಗೂ ಸ್ಪಂದನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು …

Read More »

ಅದ್ದೂರಿಯಾಗಿ ಮದುವೆಯಾಗಲು ಹೋಗಿ ಸಿಲಿಕಿಕೊಂಡ ಖದೀಮರು

ಎಅದ್ದೂರಿಯಾಗಿ ಮದುವೆಯಾಗಲು ಬ್ಯಾಂಕ್ ಸಿಬ್ಬಂದಿ ಜೊತೆಗೂಡಿ ಕೋಟ್ಯಂತರ ರೂಪಾಯಿ ಕಳ್ಳತನ ಮಾಡಿದ್ದ ಆರೋಪಿಗಳನ್ನ ಮುರಗೋಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್ನಲ್ಲಿ ಕಳ್ಳತನ ಮಾಡಿದ್ದರು. ನಕಲಿ ಕೀ ಬಳಸಿ ಬ್ಯಾಂಕ್ ಸಿಬ್ಬಂದಿ ಬಸವರಾಜ ಕಳ್ಳತನ ಮಾಡಿದ್ದ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಬಸವರಾಜ ಹುಣಶಿಕಟ್ಟಿ(30), ಸಂತೋಷ್ ಕಂಬಾರ(31), ಗಿರೀಶ್ ಬೆಳವಲ(26) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 4.37 ಕೋಟಿ, 1.63 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ …

Read More »

ಕೋವಿಡ್ : ಶೂನ್ಯ ಸಾವು ಕಂಡ ಕರುನಾಡು

ಬೆಂಗಳೂರು: ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ ಅಂದರೆ 2021ರ ಮಾಚ್‌ರ್‍, ಏಪ್ರಿಲ್‌, ಮೇ ಮತ್ತು ಜೂನ್‌ನಲ್ಲಿ ದಿನನಿತ್ಯ ನೂರಾರು ಸಾವು ವರದಿಯಾಗಿತ್ತು. ಆದರೆ 2022ರ ಜನವರಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಮೂರನೇ ಅಲೆ ಅಷ್ಟೊಂದು ಮಾರಣಾಂತಿಕವಾಗಿರಲಿಲ್ಲ. ಕಳೆದ 9 ದಿನಗಳಿಂದ ದಿನನಿತ್ಯದ ಸಾವು ಒಂದಂಕಿಗೆ ಇಳಿದಿತ್ತು. ಇದೀಗ 646 ದಿನದ ಬಳಿಕ ರಾಜ್ಯ ಕೋವಿಡ್‌ ಸಾವು ಶೂನ್ಯ ದಾಖಲಾಗಿದೆ. ರಾಜ್ಯದಲ್ಲಿ ಈವರೆಗೆ 40,018 ಮಂದಿ ಕೋವಿಡ್‌ನಿಂದ ಮರಣವನ್ನಪ್ಪಿದ್ದಾರೆ. ದೇಶದಲ್ಲೇ ಕೊರೋನಾ …

Read More »

ಬುದ್ದಿವಾದ ಹೇಳಿದ ಪಾಲಕರು, ಆತ್ಮಹತ್ಯೆ ಶರಣಾದ ಮಗ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳ್ಳಿಗೆ ಪಾಲಕರು ಬುದ್ದಿವಾದ ಹೇಳುವುದೇ ಕಷ್ಟವಾಗಿದೆ. ಮಾತಾನಾಡುವ ಮುಂಚೆ ಸಾವಿರಾರು ಸಾರಿ ಯೋಚನೆ ಮಾಡುವ ಪರಿಸ್ಥಿತಿ ಉಂಟಾಗಿದೆ. ತಾಯಿ ಬೈದಿದಕ್ಕೆ ಮಗ ನೇಣಿಗೆ ಶರಣಾಗಿರುವ ಘಟನೆ ಸುಂಕದಕಟ್ಟೆ ಬಳಿಯ ಶ್ರೀನಿವಾಸ್ ನಗರದ ಪೈಪ್ ಲೈನ್ ರಸ್ತೆಯ ಮನೆಯಲ್ಲಿ ನಡೆದಿದೆ. ಸಂಜಯ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಕಳೆದ ಮೂರು ದಿನಗಳಿಂದ ಮಗ ಸಂಜಯ್ ಮನೆಗೆ ಬಂದಿರಲಿಲ್ಲ. ಯಾವುದೇ ಕೆಲಸಕ್ಕೆ ಹೋಗದೆ ಅಲೆದಾಡುತ್ತಿದ್ದ. ಹೀಗಾಗಿ ತಂದೆ ತಾಯಿ ಮಗ …

Read More »