ಧಾರವಾಡ: ಧಾರವಾಡದ ಕೆಲಗೇರಿ ಕೆರೆಗೆ ಹಾರಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಧಾರವಾಡ ಸಂತೋಷನಗರದ ನಿವಾಸಿ ಅನಿತಾ ಹೆಗಡೆ ಎಂಬುವವರೇ ಸಾವನ್ನಪ್ಪಿದವರು. ಅನಿತಾ ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅಲ್ಲದೇ ಹಲವು ದಿನಗಳಿಂದ ಧಾರವಾಡದ ಡಿಮಾನ್ಸ್ನಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇಂದು ಬೆಳಗಿನಜಾವ ಏಕಾಏಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
Read More »ಕೋವಿಡ್ ಪ್ರಕರಣಗಳ ಹೆಚ್ಚಳ: ದೆಹಲಿಯಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ
ನವದೆಹಲಿ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಮತ್ತು ಓಮೈಕ್ರಾನ್ ಆತಂಕದ ನಡುವೆ ದೆಹಲಿಯಲ್ಲಿ ಇಂದಿನಿಂದ (ಡಿ.27) ರಾತ್ರಿ 11 ಗಂಟೆಯಿಂದ ಬೆಳಗ್ಗೆ 5ರವರೆಗೆ ರಾತ್ರಿ ಕಫ್ಯೂ ವಿಧಿಸಿ ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ) ಆದೇಶಿಸಿದೆ. ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೆಹಲಿಯಲ್ಲೇ ಅಧಿಕ 142 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ನ್ಯಾಯಾಂಗದ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಗರ್ಭಿಣಿಯರು ಮತ್ತು …
Read More »ಹುಬ್ಬಳ್ಳಿಯಿಂದ ಎರಡು ಎಲೆಕ್ಟ್ರಿಕ್ ರೈಲುಗಳ ಯಶಸ್ವಿ ಸಂಚಾರ
ಹುಬ್ಬಳ್ಳಿ : ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಬಹುದಿನಗಳ ನಿರೀಕ್ಷೆಯಲ್ಲಿದ್ದ ಎಲೆಕ್ಟ್ರಿಕಲ್ ರೈಲು ಸಂಚಾರವನ್ನು ಆರಂಭಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ.ಹುಬ್ಬಳ್ಳಿಯಿಂದ ಟ್ರೈನ್ No 16592 ಮೈಸೂರು- ಹುಬ್ಬಳ್ಳಿ ಹಂಪಿ ಎಕ್ಸ್ಪ್ರೆಸ್ ಮತ್ತು ಟ್ರೈನ್ No 17225 ವಿಜಯವಾಡ - ಹುಬ್ಬಳ್ಳಿ ಅಮರಾವತಿ ಎಕ್ಸ್ಪ್ರೆಸ್ ಎಲೆಕ್ಟ್ರಿಕಲ್ ಎರಡು ರೈಲುಗಳು …
Read More »ಸದೃಢ ಸಮಾಜ ನಿರ್ಮಾಣ ಸಂಕಲ್ಪದ ಯಾತ್ರೆ-
ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಮಹಾಸಭಾ ಧಾರವಾಡ ಜಿಲ್ಲೆ ಮುಖ್ಯ ಘಟಕ ಕೈಗಾರಿಕಾ ಘಟಕ ಮಹಿಳಾ ಘಟಕ ಯುವ ಘಟಕ ಆಶ್ರಯದಲ್ಲಿ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕ್ಲಿಂಗ್ ಧೂಮಪಾನ ಮಧ್ಯಪಾನ ದುಶ್ಚಟಗಳಿಂದ ಯುವಕರು ದೂರವಿದ್ದು ಸದೃಢ ಸಮಾಜ ನಿರ್ಮಾಣ ಮಾಡಲು ಜಾಗೃತಿಗಾಗಿ ಯಾತ್ರೆ ಹೊರಟ ಪೊಲೀಸ್ ಅಧಿಕಾರಿಗಳಾದ ಮುರುಗೇಶ್ ಚನ್ನನ್ನವರ್, ಪ್ರಶಾಂತ್ ಹಿಪ್ಪರಗಿ, ಸದಾನಂದ ಅಮರಾಪುರ ,ಹುಬ್ಬಳ್ಳಿಗೆ ಆಗಮಿಸಿದಾಗ ಚಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಸ್ವಾಗತಿಸಿ ,ಸನ್ಮಾನಿಸಿ, ಗೌರವಿಸಲಾಯಿತು. …
Read More »ಧ್ವಜಕ್ಕೆ ಅವಮಾನ ಮಾಡಿದರೇ ದೇಶಕ್ಕೆ ಅವಮಾನ ಮಾಡಿದಂತೆ: ಹಿರಿಯ ನಟ ಮುಖ್ಯಮಂತ್ರಿ ಚಂದ್ರು
ಬೆಂಗಳೂರು: ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಎಂಇಎಸ್ ಪುಂಡಾಟಿಕೆಯ ಕುರಿತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ. ಕಲಾ ಗಂಗೋತ್ರಿ 50ನೇ ವರ್ಷದ ಪ್ರೇಸ್ ಮೀಟ್ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಮರಾಠ ಮಂಡಳಿಯನ್ನು ತಡೆಹಿಡಿಯಬೇಕು. ಇದೊಂದು ರಾಜಕೀಯ ಪಿತೂರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದಿದ್ದಾರೆ. ನಾನು ಮರಾಠ ವಿರೋಧಿಯಲ್ಲ. ಆದರೆ ಯಾವುದೇ ಕಾರಣಕ್ಕೂ ಬಾವುಟವನ್ನು ಸುಡುವುದು ಸರಿಯಲ್ಲ. ನಮ್ಮವರ ಮೇಲೆ ಕೇಸ್ ಹಾಕಿರುವುದನ್ನು ವಾಪಾಸ್ ತೆಗೆದುಕೊಳ್ಳಬೇಕು. ನಾವು ಬಿಡಿ …
Read More »ದಲಿತ ವಿರೋಧಿ ಗದಗ ಎಸ್ ಪಿಯವರನ್ನು ವರ್ಗಾವಣೆ ಮಾಡಲು ಒತ್ತಾಯಿಸಿ ಮನವಿ.
ರೋಣ : ಪಟ್ಟಣದ ಮಾದಿಗ ಮೀಸಲಾತಿ ಹೋರಾಟ ಸಮಿತಿಯವತಿಯಿಂದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ತಹಸೀಲ್ದಾರರ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಗದಗ ಜಿಲ್ಲಾ ಎಸ್ ಪಿಯವರ ಕಾರ್ಯಾಲಯದಲ್ಲಿ ದಲಿತರ ಕುಂದುಕೊರತೆ ಸಭೆ ಆಯೋಜಿಸಿ ಕುಂದುಕೊರತೆಯ ವಿಷಯದ ಬಗ್ಗೆ ಚೆರ್ಚೆ ಮಾಡುತ್ತಿರುವಾಗ ದಲಿತ ಸಮಾಜದ ಮುಖಂಡರೆಲ್ಲರಿಗೂ ಏರು ಧ್ವನಿಯಲ್ಲಿ ಬೆದರಿಸಿ ಏಕ ವಚನದಲ್ಲಿ ಗದರಿಸಿ ಏ ಸುಮ್ಮನೆ ಕುಳಿತುಕೊಳ್ಳಿ ಎಂದು ತಮ್ಮ ಅಧಿಕಾರದ ಧರ್ಪ …
Read More »ರಾಮಮಂದಿರ ಟ್ರಸ್ಟ್ ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ
ನವದೆಹಲಿ : ಮರ್ಯಾದ ಪುರುಷೋತ್ತಮ ಶ್ರೀರಾಮ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶ ಚುನಾವಣಾ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದುಬಾರಿ ಬೆಲೆಗೆ ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ಭೂಮಿ ಖರೀದಿಸುತ್ತಿದೆ ಎಂದು ಹೇಳಿದ್ದಾರೆ.ಶ್ರೀರಾಮ ಮಂದಿರ ನಿರ್ಮಾಣ ಘೋಷಣೆ ಬಳಿಕ ದೇವಸ್ಥಾನದ ಸುತ್ತಲಿನ ಭೂಮಿಗೆ ಭಾರೀ ಬೇಡಿಕೆ ಬಂದಿದೆ. ಇದನ್ನೇ ಬಂಡವಾಳ …
Read More »ಅರಮನೆ ನಗರಿ ಜನರಿಗೆ ಓಮಿಕ್ರಾನ್ ಆತಂಕ-9 ವರ್ಷದ ವಿದ್ಯಾರ್ಥಿನಿಗೆ ಸೋಂಕು
ಮೈಸೂರು: ವಿಶ್ವದಲ್ಲಿ ಮೂರನೇ ಅಲೆಯ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ನ ಹೊಸ ರೂಪಾಂತರಿ ಓಮಿಕ್ರಾನ್ ಮೈಸೂರಿಗೂ ಕಾಲಿಟ್ಟಿದ್ದು, ವಿದೇಶದಿಂದ ಬಂದಿದ್ದ ಬಾಲಕಿಯಲ್ಲಿ ಪತ್ತೆಯಾಗಿದೆ. ಕೊರೊನಾದಿಂದ ತತ್ತರಿಸಿದ್ದ ಮೈಸೂರು ಈಗತಾನೇ ಚೇತರಿಸಿಕೊಳ್ಳುತ್ತಿದೆ. ಆದರೆ ಈಗ ಅರಮನೆ ನಗರಿಯಲ್ಲಿ ಓಮಿಕ್ರಾನ್ ಆತಂಕ ಶುರುವಾಗಿದೆ. ವಿದೇಶದಿಂದ ಆಗಮಿಸಿದ್ದ 9 ವರ್ಷದ ಬಾಲಕಿಗೆ ಓಮಿಕ್ರಾನ್ ದೃಢವಾಗಿತ್ತು. ಬಾಲಕಿಯು ಸ್ವಿಜರ್ಲೆಂಡ್ನಿಂದ ಮೈಸೂರಿಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಪಾಸಿಟಿವ್ ಬಂದಿದ್ದರಿಂದ, ಮಾದರಿಯನ್ನು ಜೀನೋಮ್ …
Read More »ರುಡ್ಸೆಟ್ ಸಂಸ್ಥೆಯಿಂದ ಸ್ವ-ಉದ್ಯೋಗ ಮಾಹಿತಿ ಕಾರ್ಯಕ್ರಮ
ಕಲಘಟಗಿ: ವೇದಾಂತ ಫೌಂಡೇಶನ್ ನ ನಂದಘರ್ ಅಂಗನವಾಡಿ ಕೇಂದ್ರ ಹಾಗೂ ರುಡ್ಸೆಟ್ ಸಂಸ್ಥೆಯ ಸಹಯೋಗದೊಂದಿಗೆ ಗ್ರಾಮೀಣ ಯುವಜನತೆಯ ಸಹಕಾರದಿಂದ ಕಲಘಟಗಿಯ ತಾಲೂಕಿನ ಜಿನ್ನೂರು ಗ್ರಾಮದಲ್ಲಿ ಉಚಿತವಾಗಿ ಕೌಶಲ್ಯಾಭಿವೃದ್ದಿಯ ಸ್ವದ್ಯೋಗ ತರಬೇತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರುಡ್ ಸೆಟ್ ಸಂಸ್ಥೆಯ ಸಹಾಯಕರಾದ ನಾಗೇಶ್ ಶಿಂಧೆ ಇವರು ಮಾತನಾಡಿ ನಾಲ್ಕು ವಿಭಾಗಗಳ ತರಬೇತಿಗಳಾದ ಕೃಷಿ,ಸೇವಾ,ಉತ್ಪಾದನಾ,ವ್ಯವಹಾರ ವಿಭಾಗ ಹೀಗೆ ಹೈನುಗಾರಿಕೆ ಮೊಬೈಲ್ ರಿಪೇರಿ,ಸಿದ್ದ ಉಡುಪು ತಯಾರಿಕೆ ಆಹಾರ ಉತ್ಪನ್ನಗಳ ತಯಾರಿಕೆ ಕಂಪ್ಯೂಟರ್ ಡಿಡಿಟಿಪಿ ಕಂಪ್ಯೂಟರ್ …
Read More »ಸಾರಿಗೆ ಸಂಸ್ಥೆ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಧಾರವಾಡ: ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ಸಮೀಪ ನಡೆದಿದೆ. ಮುಳಮುತ್ತಲ ಗ್ರಾಮದ ಚನ್ನಪ್ಪ ಬಸಪ್ಪ ಬನವಣ್ಣವರ (21) ಎಂಬ ಯುವಕನೇ ಸಾವನ್ನಪ್ಪಿದವನು. ಈತ ಬೈಕ್ ತೆಗೆದುಕೊಂಡು ಧಾರವಾಡ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಧಾರವಾಡ ಕಡೆಯಿಂದ ಯಾದವಾಡ ಕಡೆಗೆ ಬರುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಯುವಕ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





