ಧಾರವಾಡದ : ಲೈನ್ ಬಜಾರ್ ಹನುಮಂತದೇವರ ದೇವಸ್ಥಾನದ ಹಿಂಭಾಗದಲ್ಲಿ ಇರುವಂತಹ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಧಾರವಾಡದ ಶಹರ ಪೊಲೀಸರು ಬಾವಿಯೊಳಗೆ ಇದ್ದಂತಹ ಅಪರಿಚಿತ ವ್ಯಕ್ತಿಯ ಮೃತದೇಹ ವನ್ನು ಹೊರತೆಗೆದು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಪೋಸ್ಟ್ ಮಾಟಂಗಾಗಿ ಕಳುಹಿಸಿದ್ದಾರೆ.ಇನ್ನು ಸ್ಥಳದಲ್ಲಿ ಬೀಡುಬಿಟ್ಟಿರುವ ಪೊಲೀಸರು ಘಟನೆಯ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದು ವ್ಯಕ್ತಿಯ ಗುರುತು ಹಾಗೂ …
Read More »ಅತಿವೃಷ್ಟಿಯಿಂದ ಹಾನಿಯಾದ ಜಮೀನುಗಳಿಗೆ ಕುಸುಮಾ ಶಿವಳ್ಳಿ ಭೇಟಿ
ಹುಬ್ಬಳ್ಳಿ: ಗುಡಗೇರಿಯ ರೈತ ಬೆಳೆ ರಕ್ಷಕ ಸಂಘದವರು ಶಾಸಕಿಯಾದ ಕುಸುಮಾವತಿ ಸಿ ಶಿವಳ್ಳಿಯವರನ್ನು ಅತಿವೃಷ್ಟಿಯಿಂದ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆದಂತಹ ಮೆಣಶಿನಕಾಯಿ ಬೆಳೆಯನ್ನು ವೀಕ್ಷಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀ ವೆಂಕನಗೌಡ್ರ ಪೊಲೀಸಪಾಟೀಲ,ದಯಾನಂದ ಕುಂದುರು, ರವಿರಾಜ ಬಸ್ತಿ,ದೃತಿ ಸಾಲ್ಮನಿ,ಸುರೇಶ ಗಂಗಾಯಿ,ವಿನಾಯಕ ಮನ್ನಾಳಕೆರಿ ಗಂಗಾಧರ ಬಾರಕೇರ,ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
Read More »ಪ್ರಾಮಾಣಿಕತೆ ಮೆರೆದ ಆಟೋ ಡ್ರೈವರ್
ಹುಬ್ಬಳ್ಳಿ: ಗ್ರಾಹಕರೊಬ್ಬರು ಆಟೋದಲ್ಲಿ ಮರೆತು ಹೋಗಿದ್ದು 50 ಸಾವಿರ ರೂ ಹಾಗೂ 15 ಸಾವಿರ ರೂ ಇರುವ ಬ್ಯಾಗ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇಮ್ರಾನ್ ಕಾಲಿವಾರ್ ಎಂಬುವವರೇ ಆಟೋ ಚಾಲಕನಾಗಿದ್ದು, ಮಹೇಶ ಹಾಗೂ ರೂಪಾಲಿ ಎಂಬುವವರು ಇವರ ಆಟೋದಲ್ಲಿ ಪ್ರಯಾಣಿಸಿ ನಂತರ ಇಳಿಯುವಾಗ ಬ್ಯಾಗ ಆಟೋದಲ್ಲಿ ಮರೆತು ಹೋಗಿದ್ದಾರೆ.ಕೂಡಲೇ ಇಮ್ರಾನ್ ಆಟೋದಲ್ಲಿದ್ದ ಬ್ಯಾಗ ಕಂಡು ಹಳೇ ಹುಬ್ಬಳ್ಳಿಯ ಪೋಲಿಸ್ ಠಾಣೆಗೆ ತಂದು ಒಪ್ಪಿಸಿ ಪ್ರಾಮಣಿಕತೆ ಮೆರೆದಿದ್ದಾನೆ. ನಂತರ ಠಾಣಾ ಎಸ್ …
Read More »ಬೈಕ್ ಹಾಗೂ ಟ್ರ್ಯಾಕ್ಟರ್ ಡಿಕ್ಕಿ- ಬೈಕ್ ಸವಾರ ಸಾವು
ಹುಬ್ಬಳ್ಳಿ : ಬೈಕ್ ಹಾಗೂ ಟ್ರ್ಯಾಕ್ಟರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಧಾರವಾಡ ಜಿಲ್ಲೆ ಶಿವಳ್ಳಿ ಗ್ರಾಮದ ಬಳಿ ನೆಡೆದಿದೆ. ಬೆಳಗಿನ ಜಾವ ಈ ಅಪಘಾತ ನೆಡೆದಿದ್ದು, 29 ವರ್ಷದ ಶ್ರೀಕಾಂತ ಎಂಬ ಯುವಕನೇ ಸಾವನ್ನಪ್ಪಿದ್ದು, ಸ್ಥಳದಲ್ಲಿದ್ದು ಜನರು ಶ್ರೀಕಾಂತನನ್ನು ಆಸ್ಪತ್ರೆ ಸಾಗಿಸುವ ಮಾರ್ಗ ಮದ್ಯದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಮಾಲ್ ಹಾಗೂ ಚಿತ್ರಮಂದಿರಗಳಲ್ಲಿ ಶೇ 50 ರಷ್ಟು ಅನುಮತಿ-ತಜ್ಞರ ಮುಂದೆ ಪ್ರಸ್ತಾವನೆ-ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ರೂಪಾಂತರಿ ಒಮಿಕ್ರಾನ್ ಹಾಗು ಡೆಲ್ಟಾ ಹೆಚ್ಚಳ ಹಿನ್ನೆಲೆಯಲ್ಲಿ ಮಾಲ್ ಹಾಗು ಚಿತ್ರಮಂದಿರದಲ್ಲಿ ಸಾರ್ವಜನಿಕರಿಗೆ ಶೇ50ರಷ್ಟು ಅನುಮತಿ ನೀಡುವ ಪ್ರಸ್ತಾವನೆಯನ್ನು ತಜ್ಞರ ಸಮಿತಿ ಮುಂದಿಟ್ಟು ಪರಿಶೀಲನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ತಜ್ಞರ ಸಲಹೆಗಳನ್ನು ಪಡೆದು ನಿರ್ಧಾರ ಕೈಗೊಳ್ಳಲಾಗುವುದು. ಬೆಂಗಳೂರು ವೈದ್ಯರಿಗೆ ಒಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕ ಪತ್ತೆ ಮಾಡಿದ್ದೇವೆ ಎಂದು ತಿಳಿಸಿದರು. ಸಂಪುಟ ವಿಸ್ತರಣೆ …
Read More »ಬಿಗ್ ಟಿವಿ ಇಂಪ್ಯಾಕ್ಟ್-ವರದಿಗೆ ಎಚ್ಚೆತ್ತ ಅಧಿಕಾರಿಳು-ರಸ್ತೆ ಕಾಮಗಾರಿ ಪ್ರಾರಂಭ
ವರದಿಗೆ ಎಚ್ಚೆತ್ತು ರಸ್ತೆ ಕಾಮಗಾರಿ ಪ್ರಾರಂಭ ಧಾರವಾಡ : ತೇಜಸ್ವಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿತ್ತು, ಈ ಕುರಿತು ಬಿಗ್ ಟಿವಿ ವಾಹಿನಿ ವರದಿ ಪ್ರಸಾರ ಮಾಡಿತ್ತು .ವರದಿಗೆ ಎಚ್ಚೆತ್ತು ಅಧಿಕಾರಿಗಳು ನಿನ್ನೆ ರಾತ್ರಿಯಿಂದಲೇ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದು,ಇದು ಬಿಗ್ ಟಿವಿ ವಾಹನಿಯ ಬಿಗ್ ಇಂಪ್ಯಾಕ್ಟ್. ದುರಸ್ತಿ ಪಡಿಸೋ ಮುನ್ನ ರಸ್ತೆಯ ಸಾಂದರ್ಭಿಕ ಚಿತ್ರ ಒಟ್ಟಿನಲ್ಲಿ ನಿತ್ಯ ವಾಹನ ಸವಾರರ ಸಂಚಾರಕ್ಕೆ ಕಿರಿಕಿರಿಯಾಗಿದ್ದ ರಸ್ತೆಗೆ ಕೊನೆಗೂ …
Read More »3 ಸಾವಿರ ಪರವಾನಗಿ ಭೂಮಾಪಕರ ಆಯ್ಕೆ ಅಧಿಸೂಚನೆ
ಬೆಂಗಳೂರು: ರಾಜ್ಯ ಸರ್ಕಾರದಿಂದ ಇತ್ತೀಚಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇದ್ದಂತ 3 ಸಾವಿರ ಪರವಾನಗಿ ಭೂಮಾಪಕರ ಆಯ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದ್ರೇ ಈಗ ಈ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ. ಈ ಕುರಿತಂತೆ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಹೊಸದಾಗಿ ಪರವಾನಗಿ ಭೂಮಾಪಕರನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ವಿಧಾನ …
Read More »ಅಂಬೇಡ್ಕರ್ ಪ್ರತಿಮೆ ವಶ – ದಲಿತ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು: ಅಂಬೇಡ್ಕರ್ ಪ್ರತಿಮೆ ವಶ ಹಿನ್ನೆಲೆಯಲ್ಲಿ ಪಡುವಾರಹಳ್ಳಿ ನಿವಾಸಿಗಳು ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಮೈಸೂರಿನ ಮಾತೃ ಮಂಡಳಿ ವೃತ್ತದ ಬಳಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾತೃ ಮಂಡಳಿ ವೃತ್ತ ಬಂದ್ ಮಾಡಿದ್ದು, ಇದರಿಂದಾಗಿ ಕೆಲ ಸಮಯ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಶಾಸಕ ಎಲ್.ನಾಗೇಂದ್ರ, ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಡಿಸಿಪಿ ಪ್ರದೀಪ್ ಗುಂಟಿ ಸ್ಥಳಕ್ಕಾಗಮಿಸಿ ವಾತಾವರಣವನ್ನು ತಿಳಿಗೊಳಿಸಲು …
Read More »ಬಲಿಗಾಗಿ ಕಾಯ್ತಾ ಇದೇ ಈ ರಸ್ತೆ ! ಈ ರಸ್ತೆಯಲ್ಲಿ ಹೊದ್ರೆ ವಾಪಸ್ ಬರೋದು ಅನುಮಾನ
ಹಿರಿಯ ನಟ ಶಿವರಾಮ್ ನಿಧನ.. ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಇಂದು ಕಳಚಿದೆ. ಸ್ಯಾಂಡಲ್ವುಡ್ನಲ್ಲಿ ಶಿವರಾಮಣ್ಣ ಎಂದು ಗುರುತಿಸಿಕೊಂಡಿದ್ದ ನಟ ಶಿವರಾಮ್(83) ಇಂದು ಕೊನೆಯುಸಿರೆಳೆದಿದ್ದಾರೆ. ಇವರ ನಿದಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಪೂಜೆ ಮಾಡುತ್ತಿದ್ದ ವೇಳೆ ತಲೆ ತಿರುಗಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿತ್ತು. ಆದರೆ ಇಂದು ಅವರ ಆರೋಗ್ಯ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





