ಓಮಿಕ್ರಾನ್ ಭೀತಿ-30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ
ನವದೆಹಲಿ: ಕೊರೊನಾ ವೈರಸ್ನ ರೂಪಾಂತರ ತಳಿ ಓಮಿಕ್ರಾನ್ ತಳಿ ಹರಡುವ ಭೀತಿಯಿದ್ದು, ಅದನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಕೇಜ್ರಿವಾಲ್ ಅವರು ಸರ್ಕಾರದ ವಿವಿಧ ಇಲಾಖೆಗಳ ಜೊತೆ ಸಿದ್ಧತೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಆಮ್ಲಜನಕ ಸೌಲಭ್ಯವಿರುವ 30,000 ಬೆಡ್ಗಳು ಹಾಗೂ ಆಮ್ಲಜನಕ ಪೂರೈಕೆ ಹಾಗೂ ಸಂಗ್ರಹ ವ್ಯವಸ್ಥೆಯನ್ನು ಒಂದೆರಡು ವಾರಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗುವುದು. ಕೊರೊನಾ ರೂಪಾಂತರಿ ವೈರಸ್ …
Read More »ಹೆತ್ತ ಮಗುವಿಗೆ ವಿಷ ಹಾಕಿ ಕೊಂದ ತಾಯಿ ಆತ್ಮಹತ್ಯೆಗೆ ಯತ್ನ-ಕೋಟೆ ನಾಡಲ್ಲೋಂದು ಅಮಾನವೀಯ ಕೃತ್ಯ
ಚಿತ್ರದುರ್ಗ: ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ತಾಯಿಯೊಬ್ಬಳು ಮಗುವಿಗೆ ವಿಷವುಣಿಸಿ ತಾನು ಸಹ ಆತ್ಮಹತ್ಯೆಗೆ ಯತ್ನಿಸಿರುವ ಅಮಾನವೀಯ ಕೃತ್ಯ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ತುಮಕೂರು ನಗರದ ಲೋಕೇಶ್ ಎಂಬ ವ್ಯಕ್ತಿಯು ತನ್ನ ಪತ್ನಿಯಾದ ವನಿತಗೆ ಭಾರೀ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಪತ್ನಿಯ ಸಂಬಂಧಿಗಳಿಂದ ಕೇಳಿಬಂದಿದೆ. ನಿರಂತರವಾಗಿ ಪತಿಯ ಅವಾಚ್ಯ ಮಾತುಗಳು ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದ ವನಿತ ತನ್ನ ಮಗ ಚಾರ್ವಿತ್(4)ಗೆ ವಿಷವುಣಿಸಿದ ಬಳಿಕ ತಾನು ಕೂಡ ವಿಷ …
Read More »ಗೌರಿ ಲಂಕೇಶ್ ಹತ್ಯೆ ಪ್ರಕರಣ-ಇಂದು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೈಕ್ ಕಳ್ಳತನ ಆರೋಪದ ವಿಚಾರಣೆಗಾಗಿ ಪೊಲೀಸರು ಹುಬ್ಬಳ್ಳಿ 1ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಗೌರಿ ಹತ್ಯೆ ಪ್ರಕರಣದಲ್ಲಿ ಬೈಕ್ ಬಳಸಲಾಗಿತ್ತು. ಆ ಬೈಕನ್ನು ಹುಬ್ಬಳ್ಳಿ ತಾಲೂಕಿನ ಮಾವನೂರಲ್ಲಿ ಕಳ್ಳತನ ಮಾಡಲಾಗಿತ್ತು. ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಮತ್ತೆ ನ್ಯಾಯಾಲಯದ ಮುಂದೆ …
Read More »ಬೆಂಗಳೂರಲ್ಲಿ ಬಾಯ್ಬಿಟ್ಟ ರಸ್ತೆಗಳಿಗೆ ಪೂಜೆ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆಯ ನಂತರ ಸಾಕಷ್ಟು ರಸ್ತೆಗಳು ಬಾಯ್ಬಿಟ್ಟಿವೆ. ಇದರಿಂದ ಹಲವಾರು ಅಪಘಾತ ಸಂಭವಿಸಿ ಪ್ರಾಣಾಹುತಿ ಪಡೆದುಕೊಳ್ಳುತ್ತಿವೆ. ರಸ್ತೆ ಗುಂಡಿಗಳನ್ನು ಮುಚ್ಚಿಸದ ಬಿಬಿಎಂಪಿಯ ವಿರುದ್ಧ ನಗರದಲ್ಲಿ ಜನರು ರಸ್ತೆಗುಂಡಿಗಳ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಮಾಡಿ ಪೂಜೆ ಸಲ್ಲಿಸುವುದರ ಮೂಲಕ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆದರು. ಗುಂಡಿದೇವರಿಗೆ ಹೂವಿನಲಂಕಾರ, ಆರತಿ ನಗರದ ಕಾಕ್ಸ್ಟೌನ್ ಚಾರ್ಲ್ಸ್ ಕಾಂಪ್ಬೆಲ್ ಮುಖ್ಯ ರಸ್ತೆಯಲ್ಲಿ ಜನರು ಈ ವಿನೂತನ ಪ್ರತಿಭಟನೆ …
Read More »ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾರಿ ಅವಘಡ
ಹಾವೇರಿ :ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಎಂದರೆ ಯುವಕರಿಗೆ ಅಷ್ಟೇ ಅಲ್ಲ ವೃದ್ದರಿಗೂ ಎಲ್ಲಿಲ್ಲದ ಪ್ರೀತಿ. ಪ್ರತಿ ವರ್ಷದಂತೆ ಈ ವರ್ಷವೂ ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡಿತಾ ಇದೆ. ಅದರಲ್ಲೂ ಹಾವೇರಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಒಂದು ವಾರದ ಹಿಂದೆ ನಡೆಯಬೇಕಾಗಿದ್ದ ಸ್ಪರ್ಧೆ ಮಳೆಯ ಅವಾಂತರದಿದ ರದ್ದಾಗಿತ್ತು. ನಂತರ ಮಳೆಪ್ರಮಾಣ ಕಡಿಮೆಯಾಗುತ್ತಿದ್ದಂತೆ ಮತ್ತೆ ಭಾರಿ ಹೋರಿ ಬೆದರಿಸು ಸ್ಪರ್ಧೆ ನಿಯೋಜನೆ ಗೊಂಡಿದೆ. ಇದರಲ್ಲಿ ಸಾಕಷ್ಟು ಅವಘಡಗಳು …
Read More »ರೂಪಾಂತರಿ ಕೊರೊನಾ ವೈರಸ್ ಭೀತಿ : ಐಸಿಸಿ ಮಹಿಳಾ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿ ರದ್ದು
ನ್ಯೂಜಿಲ್ಯಾಂಡ್ನಲ್ಲಿ 2022ಕ್ಕೆ ನಡೆಯಲಿರುವ ಏಕದಿನ ವಿಶ್ವಕಪ್ಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅರ್ಹತೆ ಪಡೆದಿವೆ. ಈಗಾಗಲೇ ಭಾರತ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ.. ದುಬೈ : ಕೋವಿಡ್-19 ಕಾರಣದಿಂದ ಐಸಿಸಿ 2022ರ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯನ್ನು ರದ್ದುಗೊಳಿಸಿದೆ. ಹಾಗಾಗಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್ ತಂಡಗಳು ಪ್ರಸ್ತುತ ಶ್ರೇಯಾಂಕದ ಆಧಾರದ ಮೇಲೆ ವಿಶ್ವಕಪ್ಗೆ ಅರ್ಹತೆಗಿಟ್ಟಿಸಿಕೊಂಡಿವೆ. ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಿ ಕೊರೊನಾ …
Read More »ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ : ಡಿಸಿ ಮಂಜುನಾಥ್ ಭೇಟಿ, ಪರಿಶೀಲನೆ
ಆನೇಕಲ್ : ನಗರದ ಚಂದಾಪುರ ಮುಖ್ಯರಸ್ತೆಯ ಮರಸೂರು ಗೇಟ್ ಬಳಿಯ ಇರುವ ಸ್ಪೂರ್ತಿ ಕಾಲೇಜ್ ಆಫ್ ನರ್ಸಿಂಗ್ನ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ : ಸ್ಪೂರ್ತಿ ಕಾಲೇಜಿನ ಒಟ್ಟು 168 ಮಕ್ಕಳು ಹಾಸ್ಟೆಲ್ನಲ್ಲಿದ್ದಾರೆ. ಮೂರು ಮಂದಿಯಲ್ಲಿ ಪಾಸಿಟಿವ್ ಕಂಡು ಬಂದ ಹಿನ್ನೆಲೆ, 52 ಮಂದಿಗೆ ತಪಾಸಣೆ ನಡೆಸಿದಾದ 12 ಮಂದಿಗೆ ಸೋಂಕು ತಗುಲಿರುವುದು …
Read More »ನಾವು ಅಧಿಕಾರಕ್ಕೆ ಬಂದ್ರೆ ಪೌರಕಾರ್ಮಿಕರನ್ನ ಖಾಯಂಗೊಳಿಸುತ್ತೇವೆ: ಸಿದ್ದರಾಮಯ್ಯ
ಮೈಸೂರು: ನಾವು ಅಧಿಕಾರಕ್ಕೆ ಬಂದ ತಕ್ಷಣ ಪೌರಕಾರ್ಮಿಕರನ್ನ ಖಾಯಂ ಮಾಡುತ್ತೇವೆ. ಏನೇ ಕಾನೂನು ತೊಡಕುಗಳಿದ್ದರು ಪೌರಕಾರ್ಮಿಕರನ್ನ ಖಾಯಂ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ನಗರದ ಮಾನಸ ಗಂಗೋತ್ರಿಯಲ್ಲಿ ಪೌರಬಂಧು ಪುಸ್ತಕ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಪೌರಕಾರ್ಮಿಕರ ಪರವಾಗಿ ಹಲವು ಕೆಲಸಗಳನ್ನು ಮಾಡಿದೆ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ವೋಟ್ ಮಾಡುವ ಅಧಿಕಾರ ಇದ್ದರೆ ಸಾಲದು, ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ …
Read More »ಲಖನ್ ಸ್ಪರ್ಧಿಸಿದ್ದು ಒಳ್ಳೆಯದೇ ಆಯ್ತು: ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇ ಒಳ್ಳೆಯದಾಯ್ತು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದರು. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಲಖನ್ ಜಾರಕಿಹೊಳಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಾನೇ ನಿಲ್ಲಿಸಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮೊದಲು ಬಿಜೆಪಿ ಗೆಲ್ಲಿಸಬೇಕು, ನಂತರ ಕಾಂಗ್ರೆಸ್ ಅನ್ನು ಸೋಲಿಸಬೇಕು. ಮಹಾಂತೇಶ ಕವಟಗಿಮಠ ಸ್ವಾಮೀಜಿಗಳು ಲಿಂಗಾಯತರ ದೊಡ್ಡ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





