Breaking News

admin

ಜೂಜಾಟದ ಅಡ್ಡೆಯ ಮೇಲೆ‌ ದಾಳಿ- ನಾಲ್ವರ ಬಂಧನ, ನಗದು ವಶ

ಹುಬ್ಬಳ್ಳಿ: ಇಲ್ಲಿನ ಉಣಕಲ್ ಟಿಂಬರ್ ಯಾರ್ಡ್‌ನಲ್ಲಿ ಸೋಮವಾರ ಇಸ್ಪೀಟ್ ಜೂಜಾಡುತ್ತಿದ್ದ ನಾಲ್ವರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಜೂಜಾಟದ ಖಚಿತ ಮಾಹಿತಿಯನ್ನು ಕಲೆ ಹಾಕಿದ ಖಾಕಿ ಪಡೆ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿ ನಾಲ್ವರು ಜೂಜುಕೋರರನ್ನು ವಶಕ್ಕೆ ಪಡೆದಿದೆ. ಬಂಧಿತರಿಂದ 8,260 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ‌ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರಮೇಶ ಅರವಿಂದ ಅಭಿನಯದ‌ 100 ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

ಹುಬ್ಬಳ್ಳಿ: ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಉಮಾ ಹಾಗೂ ಎಂ.ರಮೇಶ ರೆಡ್ಡಿ ನಿರ್ಮಾಣಗೊಂಡಿರುವ 100 ಶೀರ್ಷಕೆಯ ಕನ್ನಡ ಚಿತ್ರ ಇದೇ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ನಟ ಹಾಗೂ ಚಿತ್ರ ನಿರ್ದೇಶಕ ರಮೇಶ ಅರವಿಂದ ಹೇಳಿದರು. ಮಾದ್ಯಮದ ಜೊತೆ ಮಾತನಾಡಿದ ಅವರು, ಚಿತ್ರದ ನಿರ್ದೇಶನವನ್ನು ಮಾಡುವ ಮೂಲಕ ಚಿತ್ರದಲ್ಲಿ ನನ್ನ ಎಲ್ಲ ಶಕ್ತಿಯನ್ನು ಹಾಕಿ ನಟಿಸಿದ್ದೇನೆ ಎಂದರು. ಚಿತ್ರದಲ್ಲಿ ರಚಿತಾ ರಾಮ್, ಪೂರ್ಣ, ವಿಶ್ವಕರ್ಣ, ಮಾಲತಿ …

Read More »

ನಗರದ ನಾಲ್ಕು ಬಿಡಿಎ ಕಚೇರಿಗಳ ಮೇಲೆ‌ ಎಸಿಬಿ ದಾಳಿ

ಬೆಂಗಳೂರು: ಭ್ರಷ್ಟಾಚಾರದ‌ ಕೂಪವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮುಖ್ಯ ಕಚೇರಿ‌ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು‌ ಇದೀಗ ನಗರದ ವಿವಿಧ ಸಬ್ ಬಿಡಿಎ ಕಚೇರಿಗಳ ಮೇಲೆ‌ ದಾಳಿ (ACB Attack On BDA) ನಡೆಸಿದ್ದಾರೆ. ಕಳೆದ ಶುಕ್ರವಾರ ಹಾಗೂ ಶನಿವಾರ ಬಿಡಿಎ ಕೇಂದ್ರ ಕಚೇರಿ ಮೇಲೆ‌ ದಾಳಿ ನಡೆಸಿ ದಾಖಲಾತಿ ವಶಕ್ಕೆ‌ ಪಡೆದುಕೊಂಡು ಪರಿಶೀಲಿಸಿದಾಗ ನಗರದ ನಾಲ್ಕು ಬಿಡಿಎ ಕಚೇರಿಗಳಲ್ಲಿ ಅಕ್ರಮ ಎಸಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅಲ್ಲದೇ ಸಾರ್ವಜನಿಕರಿಂದ …

Read More »

ಬಿಜೆಪಿ ಮೆರವಣಿಗೆ ತಡೆಯಲು ಯತ್ನಿಸಿದ ಎಸಿಪಿಗೆ ರಮೇಶ್ ಜಾರಕಿಹೊಳಿ‌ ತರಾಟೆ

ಬೆಳಗಾವಿ: ಬಿಜೆಪಿ ಮೆರವಣಿಗೆ ತಡೆಯಲು ಯತ್ನಿಸಿದ ಮಾರ್ಕೆಟ್ ಎಸಿಪಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ತರಾಟೆ ತೆಗೆದುಕೊಂಡ ಘಟನೆ ನಗರದ ಡಿಸಿ ಕಚೇರಿ ಎದುರು ನಡೆಯಿತು‌. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಇಲ್ಲಿನ ಸಾಹಿತ್ಯ ಭವನದಿಂದ ಡಿಸಿ ಕಚೇರಿಯವರೆಗೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಮಾರ್ಗಮಧ್ಯದಲ್ಲಿ ಮೆರವಣಿಗೆ ತಡೆಯಲು ಬಂದ ಎಸಿಪಿಗೆ ರಮೇಶ್​ ಜಾರಕಿಹೊಳಿ ತರಾಟೆ ತೆಗೆದುಕೊಂಡರು.ಜನಪ್ರತಿನಿಧಿಗಳಿದ್ದಾರೆ ಡಿಸಿ ಕಚೇರಿಯವರೆಗೆ ಬರಲಿ ಬಿಡಿ ಎಂದು ರಮೇಶ್ ಹೇಳಿದರು. …

Read More »

ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚನೆ

ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿಗಳನ್ನು ಮುಲಾಜಿಲ್ಲದೇ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶ್ರೀಮಂತರು ಮಾಡಿರುವ ಒತ್ತುವರಿಗಳನ್ನು ಮೊದಲ ಹಂತದಲ್ಲಿ ತೆರವುಗೊಳಿಸಲಾಗುತ್ತದೆ. ಒತ್ತುವರಿ ಮಾಡಿರುವ ಬಡವರಿಗೆ ನಿವೇಶನಗಳನ್ನು ಒದಗಿಸಿ ನಂತರ ತೆರವು ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಳೆಯಿಂದ ಪ್ರವಾಹ ಉಂಟಾಗಿರುವ ಯಲಹಂಕ ಹಾಗೂ ಜಕ್ಕೂರು ಪ್ರದೇಶಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಮೀಸಲು ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ …

Read More »

ದಾಂಪತ್ಯ ಜೀವನಕ್ಕ ಕಾಲಿಟ್ಟ ಎಸ್‌.ನಾರಾಯಣ ಪುತ್ರ ಪಂಕಜ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಕುಟುಂಬದಲ್ಲಿ ಶುಭ ಸಮಾರಂಭ ನೆರವೇರಿದೆ. ಇತ್ತೀಚೆಗೆ ಎರಡನೇ ಮಗ ಪವನ್ ಅವರ ಮದುವೆ ನಡೆದಿತ್ತು, ಈಗ ಪಂಕಜ್ ಅವರ ಮದುವೆ ನಡೆದಿದೆ. ಮೈಸೂರಿನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಪಂಕಜ್ ಅವರ ಮದುವೆ ನಡೆದಿದೆ. ಪಂಕಜ್ ಅವರನ್ನು ಮದುವೆ ಆಗಿರುವ ಹುಡುಗಿಯ ಹೆಸರು ರಕ್ಷಿತಾ ಸುರೇಂದರ್. ಕಳೆದ ತಿಂಗಳು ಪಂಕಜ್ ಮತ್ತು ರಕ್ಷಿತಾ ನಿಶ್ಚಿತಾರ್ಥ ನಡೆದಿತ್ತು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ …

Read More »

ಮಳೆಗೆ ಮನೆಯೂ ಹೋಯ್ತು,ಬೆಳೆಯೂ ಹೋಯ್ತು

ಧಾರವಾಡ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಮಳೆ ರೈತರನ್ನು ಅಕ್ಷರಶಃ ನಿದ್ದೆಗೆಡಿಸಿದೆ. ಒಂದೆಡೆ ಪೀಕುಗಳು ಮಳೆಗೆ ಹಾನಿಗೀಡಾದರೆ, ಮತ್ತೊಂದೆಡೆ ಮನೆಗಳು ನೆಲಕ್ಕುರುಳಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಧಾರವಾಡ ಜಿಲ್ಲೆಯಾದ್ಯಂತ ಅನೇಕ ಮನೆಗಳು ನೆಲಕ್ಕುರುಳಿದ್ದು, ಮನೆ ಕಳೆದುಕೊಂಡವರೆಲ್ಲ ಇದೀಗ ಸರ್ಕಾರದ ಮುಂದೆ ಕೈಚಾಚಬೇಕಾಗಿದೆ.ಧಾರವಾಡ ತಾಲೂಕಿನ ಮನಸೂರು, ಉಪ್ಪಿನ ಬೆಟಗೇರಿ, ಅಮ್ಮಿನಬಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳು ನೆಲಕಚ್ಚಿವೆ.ಮೂರ್ನಾಲ್ಕು ದಿನ ಬಿಟ್ಟೂ ಬಿಡದೇ ಸುರಿದ ಮಳೆ ಬೆಳೆಗಳಿಗೆ ಮಾತ್ರ ನಷ್ಟವನ್ನುಂಟು ಮಾಡಿಲ್ಲ. …

Read More »

ದುನಿಯಾ ವಿಜಿ ಬಂದ್ರ ಮಾತ್ರ ಹಸೆಮೆಣೇ ಏರುತ್ತೇನೆ-ದಾವಣಗೆರೆಯಲ್ಲಿ ಹಠ ಹಿಡಿದ ಅನುಷ

ದಾವಣಗೆರೆ : ಸಂಬಂಧಿಕರು, ಅಣ್ಣಂದಿರು ಬಾರದಿದ್ರೆ ಮದುವೆ ಆಗುವುದಿಲ್ಲ, ಅವರು ಬಂದು ಅಕ್ಷತೆ ಹಾಕಿದರೆ ಮಾತ್ರ ಹಸೆಮಣೆ ಏರುತ್ತೇನೆ ಎಂದು ಹೇಳೋದು ಸಾಮನ್ಯ. ಆದ್ರೆ ನಗರದ ಯುವತಿಯೊಬ್ಬಳು ತನ್ನ ಮೆಚ್ಚಿನ ನಟ ದುನಿಯಾ ವಿಜಯ್ ತನ್ನ ಮದುವೆಗೆ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡಿದ್ರೆ ಮಾತ್ರ ಮದುವೆಯಾಗುವುದಾಗಿ ಹಠ ಹಿಡಿದಿದ್ದಾರೆ. ನಗರದ ರಾಮನಗರದ ಅನುಷ ಹಠ ಹಿಡಿದ ಯುವತಿಯಾಗಿದ್ದು, ಅನುಷ ಕುಟುಂಬಸ್ಥರೆಲ್ಲರೂ ದುನಿಯಾ ವಿಜಯ್ ಅಭಿಮಾನಿಗಳಾಗಿದ್ದಾರೆ. ಕಳೆದ ಐದು ವರ್ಷದ ಹಿಂದೆ …

Read More »

ಲವ್‌ ಫೇಲ್ಯೂವರ್-ಬೆಂಗಳೂರಲ್ಲಿ 3ನೇ ಮಹಡಿಯಿಂದ ಜಿಗಿದು SSLC ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಕಿಪೇಟೆಯಲ್ಲಿ ಎಸ್​ಎಸ್​​ಎಲ್​ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ತಮ್ಮ ಮನೆಯ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ಕಿಪೇಟೆ ನಿವಾಸಿ ದೂದ್ ರಾಮ್ ಮಾಲಿಯ ಎಂಬುವರ ಮಗಳು ಮೃತ ಬಾಲಕಿ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ. ಘಟನೆ ನಂತರ ಬಾಲಕಿ ತಂದೆ ಮಗಳ ಸ್ನೇಹಿತನಾಗಿದ್ದ ಬಾಲಕನ ವಿರುದ್ಧ ದೂರು ನೀಡಿದ್ದಾರೆ. ಮಗಳ ಸಾವಿನ ಹಿಂದೆ …

Read More »

ಬೆಳಗಾವಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ‘ಕೈ’ ಅಭ್ಯರ್ಥಿ,

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರಿಂದು ನಾಮಪತ್ರ ಸಲ್ಲಿಸಿದ್ದಾರೆ. ಬೆಳಗಾವಿಯ ಡಿಸಿ ಕಚೇರಿಗೆ ಆಗಮಿಸಿದ ಅವರು ಚುನಾವಣೆ ಅಧಿಕಾರಿ ಆರ್. ವೆಂಕಟೇಶಕುಮಾರ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎ.ಬಿ.ಪಾಟೀಲ್, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕರಾದ ಅಶೋಕ ಪಟ್ಟಣ, ವೀರಕುಮಾರ ಪಾಟೀಲ, ಶ್ಯಾಮ ಘಾಟಗೆ ಉಪಸ್ಥಿತರಿದ್ದರು. ಕಾಂಗ್ರೆಸ್‌, ಬಿಜೆಪಿ ಶಕ್ತಿ ಪ್ರದರ್ಶನಪರಿಷತ್ ಚುನಾವಣೆಗಿಂದು ನಾಮಪತ್ರ ಸಲ್ಲಿಕೆಗೆ …

Read More »