ಆರೋಪಿ ಬಸವರಾಜು ಹೈದರಾಬಾದ್: ಪ್ರಿಯತಮೆ ಮೋಸ ಮಾಡಿದ್ದಾಳೆ ಎಂದು ಆಕೆಯ ಮೇಲೆ ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದ ಆರೋಪಿ ಬಸವರಾಜು ಎಂಬಾತನನ್ನು ಬಂಧಿಸಲಾಗಿದ್ದು, ಪೊಲೀಸರು ರಂಗಾರೆಡ್ಡಿ ನ್ಯಾಯಾಲಯಕ್ಕೆ (Rangareddy Court) ಹಾಜರುಪಡಿಸಿದ್ದರು. ಈಗ ನ್ಯಾಯಾಲಯ ಆತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಬಸವರಾಜುನನ್ನು ಚರ್ಲಪಲ್ಲಿ ಜೈಲಿಗೆ (Charlapalli jail) ಸ್ಥಳಾಂತರಿಸಿದ್ದಾರೆ. ಪ್ರಿಯಕರ ಬಸವರಾಜುನಿಂದ ಗಾಯಗೊಂಡಿರುವ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 24 ಗಂಟೆಗಳ …
Read More »ಬಸವರಾಜದ ಯತ್ನಾಳ ಅಪಪ್ರಚಾರ ಖಂಡಿಸಿ ಪ್ರತಿಭಟನೆ-ಬಿಜೆಪಿ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ
ಕಲಬುರಗಿ: ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಬಿಜೆಪಿ ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡುತ್ತಿರುವದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿಭಾಗದಿಂದ ಬಿಜೆಪಿ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ನಗರ ಅನ್ನಪೂರ್ಣ ಕ್ರಾಸ್ ಹತ್ತಿರ ಬಿಜೆಪಿ ಶಾಸಕ ಬಸವರಾಜ್ ಪಾಟೀಲ್ ಮತ್ತಿಮೂಡ್, ರಾಜಕುಮಾರ್ ಪಾಟೀಲ್ ತೇಲ್ಕೂರು, ಬಸವನಗೌಡ ಪಾಟೀಲ್ ಯತ್ನಾಳ್, ಅನಂತಕುಮಾರ್ ಹೆಗ್ಗಡೆ ಅವರ …
Read More »ತರಾತುರಿಯಲ್ಲಿ ಬೊಮ್ಮಾಯಿ ಪ್ರಧಾನಿ ಮೀಟ್ ಆಗಿದ್ದೇಕೆ:ಎಚ್.ಕೆ.ಪಾಟೀಲ್ ಪ್ರಶ್ನೇ?
ಕೊಪ್ಪಳ: ರಾಜ್ಯದ ಸಿಎಂ.ಬಸವರಾಜ್ ಬೊಮ್ಮಾಯಿ ತಯಾರ ತುರಿಯಲ್ಲಿಯೇ ಮೋದಿಯನ್ನ ಭೇಟಿ ಆಗಿದ್ದು ಯಾಕೆ.? ಇದನ್ನ ಜನರಿಗೆ ಸ್ಪಷ್ಟ ಪಡಿಸಬೇಕು ಅಂತಲೇ ಎಚ್.ಕೆ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ. ಮೋದಿಯನ್ನ ಭೇಟಿ ಆಗಿರೋದು ನೋಡಿದ್ರೆ,ಬಿಜೆಪಿಯಲ್ಲಿ ಏನೋ ಗೊಂದಲ ಇದೆ. ಈಗೀನ ಬೆಳವಣಿಗೆ ಕಂಡ್ರೆ ರಾಜಕೀಯ ಗೊಂದ ಸೃಷ್ಟಿಯಾಗಿದೆ. ಕರ್ನಾಟಕದ ಜನರಿಗೆ ಅಲ್ಲಿ ಏನು ಚರ್ಚೆ ಆಗಿದೆ ಅಂತಲೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರೂ ಕೇಳಿ ಬರುತ್ತಿದೆ ಅನ್ನೋದಕ್ಕೆ …
Read More »ಅಕ್ರಮ ಗಾಂಜಾ ಮಾರಾಟ ಮಡುತ್ತಿದ್ದವರ ಇಬ್ಬರ ಬಂಧನ
ಗಾಂಜಾ ಮಾರುತ್ತಿದ್ದ ಆರೋಪಿಗಳು ಧಾರವಾಡ :ಧಾರವಾಡದ ಸಪ್ತಾಪುರ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.ನಗರದ ಶಿವಗಿರಿ, ಸಾಯಿ ಹಾಸ್ಟೇಲ್,ಜಯನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ದೃವ ಅನಿಲ್ ಮದನ್,ಶಿವಕುಮಾರ ಮಡಿವಾಳ ಬಂಧಿತ ಆರೋಪಿಗಳು.ವಿದ್ಯಾರ್ಥಿಗಳನ್ನು ದಾಳವಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.ಖಚಿತ ಮಾಹಿತಿ ಮೇರೆಗೆ ದಾಳಿ ನೆಡೆಸಿದ ಅಬಕಾರಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read More »ಶ್ರೀ ಸಹಸ್ರಾರ್ಜುನ ಜಯಂತಿ ಸರ್ಕಾರಿ ಆಚರಣೆಯಾಗಲಿ : ನಾರಾಯಣ್
ಹುಬ್ಬಳ್ಳಿ : ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯೋತ್ಸವವನ್ನು ನಗರದ ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.ಈ ವೇಳೆ ಮಾತನಾಡಿದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀ ನಾರಾಯಣ್,ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಕಛೇರಿಯಲ್ಲಿ ಶ್ರೀ ಸಹಸ್ರಾರ್ಜುನ ಜಯಂತಿ ಆಚರಿಸಲಾಗುತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ಶ್ರೀ ಸಹಸ್ರಾರ್ಜುನ ಜಯಂತಿಯನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಿ ಜಯಂತಿಯನ್ನಾಗಿ ಆಚರಿಸುವಂತಾಗಬೇಕು ಹಾಗೂ ಜಯಂತಿ ಅಂಗವಾಗಿ ಸರ್ಕಾರಿ ರಜೆಯನ್ನು ಘೋಷಣೆ ಮಾಡಬೇಕೆಂದು ಅವರು ತಿಳಿಸಿದರು. …
Read More »ಭೀಮಪಲಾಸ’ ಸಂಗೀತೋತ್ಸವ-ಧಾರವಾಡದಲ್ಲಿ ನ. 12 ರಂದು ಗಾನಲಹರಿ ಕಾರ್ಯಕ್ರಮ
ಧಾರವಾಡ: ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನ. ೧೩ ರಂದು ಸಂಜೆ ೫.೪೫ಕ್ಕೆ ಸೃಜನಾ ರಂಗಮAದಿರದಲ್ಲಿ ಸಂಗೀತದ ರಸಮಾಧುರ್ಯ ಹರಿದುಬರಲಿದೆ. ಮೈಸೂರಿನ ಪಿ.ಶ್ರೀಮತಿದೇವಿ ಹಾಗೂ ಪುಣೆಯ ರಮಾಕಾಂತ ಗಾಯಕವಾಡ ಅವರಿಂದ ಗಾನಸುಧೆ ಮೂಡಿಬರಲಿದೆ. ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ …
Read More »T-20 World Cup: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಪಾಕ್ಗೆ ಶಾಕ್..ಇಬ್ಬರು ಪ್ರಮುಖ ಆಟಗಾರರು ಹೊರಕ್ಕೆ..?
ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಪಾಕ್ ತಂಡಕ್ಕೆ ಆಘಾತ ಉಂಟಾಗಿದೆ. ಇಬ್ಬರು ಪ್ರಮುಖ ಆಟಗಾರರು ಜ್ವರದ ಕಾರಣದಿಂದಾಗಿ ಇಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದುಬೈ: ಟಿ-20 ವಿಶ್ವಕಪ್ ಟೂರ್ನಿಯ (T20 World Cup) ಸೆಮಿಫೈನಲ್ ಪಂದ್ಯದಲ್ಲಿಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ (AUSvsPAK) ಮುಖಾಮುಖಿಯಾಗಲಿವೆ. ಈಗಾಗಲೇ ಆಡಿರುವ ಎಲ್ಲ ಪಂದ್ಯಗಳಲ್ಲೂ ಭರ್ಜರಿ ಜಯದಾಖಲಿಸಿರುವ ಪಾಕ್ ತಂಡಕ್ಕೆ ಆಘಾತ ಉಂಟಾಗಿದೆ. ಪಾಕ್ನ ಇಬ್ಬರು ಪ್ರಮುಖ ಆಟಗಾರರು ಇಂದು ನಡೆಯುವ ಪಂದ್ಯಕ್ಕೆ ಅಲಭ್ಯರಾಗುವ …
Read More »100 ಮಹಿಳಾ ಶವಗಳ ಮೇಲೆ ಅತ್ಯಾಚಾರ- 24 ವರ್ಷಗಳ ಬಳಿಕ ಡೇವಿಡ್ ಬಂಧನ
ಲಂಡನ್ : ನೂರು ಮಹಿಳಾ ಶವಗಳ (Female Corpses) ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು 34 ವರ್ಷಗಳ ಬಳಿಕ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇಂಗ್ಲೆಂಡ್ ನ ಈಸ್ಟ್ ಸುಸೆಕ್ಸ್ ನಲ್ಲಿ ನಡೆದಿದೆ. ಇಲ್ಲಿಯ ಟೌನ್ ಹಿಥಫ್ಲೀಡ್ (Heathfield East Sussex ) ಮೂಲದ ವ್ಯಕ್ತಿಗೆ ಶಿಕ್ಷೆ ಪ್ರಕಟವಾಗುತ್ತಿದೆ.ಸದ್ಯ ಅಪರಾಧಿಗೆ 67 ವರ್ಷ. ಅಪರಾಧಿ ಡೇವಿಡ್ ಫುಲ್ಲರ್ (David Fuller) ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ದೋಷಿ 12 …
Read More »ಬೆಳಗಾವಿ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭಾರಿ ವಿರೋಧ: ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ರೈತ!
ಸಾಂದರ್ಭಿಕ ಚಿತ್ರ ಬೆಳಗಾವಿ: ಬೆಳಗಾವಿ ನಗರದ ಹೊರವಲಯದಲ್ಲಿ ಉದ್ದೇಶಿತ ಹಲಗಾ – ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಕಾಮಗಾರಿ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ರೈತನ ಮಗನೊಬ್ಬ ಮರವೇರಿ ಆತ್ಮಹತ್ಯೆ ಬೆದರಿಕೆ ಹಾಕಿದರೆ, ಇನ್ನೊಬ್ಬ ರೈತ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ. ಅಲ್ಲದೇ, ಇನ್ನೊಬ್ಬ ರೈತ ಕೈಯಲ್ಲಿ ಕುಡುಗೋಲು ಹಿಡಿದು ಕತ್ತು ಕುಯ್ದುಕೊಳ್ಳಲು ಯತ್ನಿಸಿದ್ದಾನೆ. ಹಲಗಾ- ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲು ರಾಷ್ಟ್ರೀಯ …
Read More »ಹುಬ್ಬಳ್ಳಿಯಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಅನಿಲ ಸೋರಿಕೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಹುಬ್ಬಳ್ಳಿ: ಗ್ಯಾಸ್ ಪೈಪ್ಲೈನ್ ಒಡೆದು ಅನಿಲ ಸೋರಿಕೆಯಾಗಿರುವ ಘಟನೆ ಸುಳ್ಳದ ರಸ್ತೆಯ ತ್ರಿಬಿ ಹೋಟೆಲ್ ಮುಂಭಾಗದಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.ಮಹಾನಗರ ಪಾಲಿಕೆಯವರು ಒಳಚರಂಡಿ ದುರಸ್ತಿ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಜೆಸಿಬಿಯಿಂದ ಅಂದಾಜು 4.5 ಅಡಿ ಆಳದಲ್ಲಿ ಅಗೆಯುವಾಗ ಗ್ಯಾಸ್ ಪೈಪ್ಗೆ ತಾಗಿ ಒಡೆದು ಹೋಗಿದೆ. ಪೈಪ್ ಒಡೆದಿದ್ದರಿಂದ ಅನಿಲ ಸೋರಿಕೆಯಾಗುತ್ತಿದೆ. ಕೂಡಲೇ ಸ್ಥಳೀಯರು ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ, ಈವರೆಗೆ ಯಾರೂ ಕೂಡ ಸ್ಥಳಕ್ಕೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





