Breaking News

admin

ತಂದೆಯ ಶ್ರದ್ಧಾಂಜಲಿ ಕಾರ್ಯದಲ್ಲಿ ಹೆಲ್ಮೆಟ್ ದಾನ ಮಾಡಿ ಜಾಗೃತಿ ಮೂಡಿಸಿದ ಮಗ

ಹುಬ್ಬಳ್ಳಿ: ಹೆಲ್ಮೆಟ್ ಹಾಕದೇ ಅಪಘಾತದಲ್ಲಿ ದುರ್ಮರಣಕ್ಕೀಡಾಗಿ ತನ್ನನ್ನು ಮತ್ತು ತನ್ನ ತಾಯಿಯನ್ನು ಅನಾಥರನ್ನಾಗಿಸಿ ತಂದೆಯ ಶ್ರದ್ಧಾಂಜಲಿ ಕಾರ್ಯದಲ್ಲಿ ಬಾಲಕನೋರ್ವ ಸಾರ್ವಜನಿಕರು ಬೇಷ್​ ಎನ್ನುವಂತ ಕೆಲಸ ಮಾಡಿದ್ದಾನೆ.ನನ್ನ ಸ್ಥಿತಿ ಬೇರೆ ಯಾವ ಕುಟುಂಬಕ್ಕೂ ಬಾರದಿರಲಿ ಎಂದು ಮೃತ ವ್ಯಕ್ತಿಯ ಪುತ್ರ, ಶ್ರದ್ಧಾಂಜಲಿ ಸಂದರ್ಭದಲ್ಲಿ ಹೆಲ್ಮೆಟ್ ದಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಮನೆಯಲ್ಲಿ ತಮ್ಮ ಸಂಬಂಧಿಕರು ಕಾಯುತ್ತಿದ್ದಾರೆ ಎಂಬುವಂತ ಪರಿಜ್ಞಾನ ಇಲ್ಲದ ವ್ಯಕ್ತಿವೋರ್ವನ ಸಾವಿನಿಂದ ಕುಟುಂಬ ಅನಾಥವಾಗಿದೆ. …

Read More »

ಸಾಲದ ಬಾಧೆ ತಾಳಲಾರದೆ ಪ್ರಗತಿಪರ ರೈತ ನೇಣಿಗೆ ಶರಣು.

ಮಂಡ್ಯ: ಸಾಲದ ಬಾಧೆ ತಾಳಲಾರದೆ ಮಂಡ್ಯ ಜಿಲ್ಲೆ ಮುರುಕನಹಳ್ಳಿ ಗ್ರಾಮದ ರಾಮೇಗೌಡರ ಪುತ್ರನಾದಪ್ರಗತಿಪರ ರೈತ ಎಂ.ಆರ್.ಯೋಗೇಶ್ (45) ಆತ್ಮಹತ್ಯೆಗೆ ಶರಣಾಗಿದ್ದಾರೆ.ಮಂಡ್ಯ ಜಿಲ್ಲೆ ಮುರುಕನಹಳ್ಳಿ ಗ್ರಾಮದ ಹೊರವಲಯದ ತೋಟಗಾರಿಕೆ ಫಾರಂ ಬಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃಷಿ ಚಟುವಟಿಕೆಗಳಿಗೆ ಹಾಗೂ ತಮ್ಮ ಮಗಳ ಮದುವೆಗೆ 10ಲಕ್ಷರೂಪಾಯಿಗಳಿಗೂ ಹೆಚ್ಚಿನ ಸಾಲ ಮಾಡಿದ್ದರು ಎನ್ನಲಾಗಿದೆ.ಇಂದು ಬೆಳಿಗ್ಗೆ ಮುಂಜಾನೆ ಎದ್ದು ಜಮೀನಿಗೆ ಹೋದಾಗ ಮನನೊಂದಿದ್ದ ಯೋಗೇಶ್ ಅಲ್ಲಿಯೇ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಗ್ರಾಮಾಂತರ ಠಾಣೆಯ …

Read More »

ಮಹಾಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳ ಒಳಹರಿವು ಹೆಚ್ಚಳ

ಮಂಗಳೂರು: ನಿರಂತರ ಮಳೆಯಿಂದಾಗಿದಕ್ಷಿಣ ಕನ್ನಡ ಜಿಲ್ಲೆಯ ವಿವಿಧ‌ ನದಿಗಳ ಹರಿವು ಮಟ್ಟ ಹೆಚ್ಚಳ ಹೆಚ್ಚಾಗಿದೆ.ಬಂಟ್ವಾಳ ನೇತ್ರಾವತಿ ನದಿ‌ ನೀರಿನ ಮಟ್ಟ 7.7 ಮೀ.ಹಾಗೂವಉಪ್ಪಿನಂಗಡಿ‌ ನೇತ್ರಾವತಿ ನದಿ‌ ನೀರಿನ ಮಟ್ಟ 28.2 ಮೀ. ಮಟ್ಟಕ್ಕೆ ತಲುಪಿದೆ.ಅಲ್ಲದೇ ಉಪ್ಪಿನಂಗಡಿ ಕುಮಾರಧಾರ ನದಿ‌ ನೀರಿನ ಮಟ್ಟ 21.0 ಮೀ., ಗುಂಡ್ಯ ನದಿ ನದಿ‌ ನೀರಿನ ಮಟ್ಟ 4.8 mtr(80.8 MSL) ಗೆ ಹೆಚ್ಚಳವಾಗಿದೆ.

Read More »

ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಬಂದ್

ಚಿಕ್ಕೋಡಿ: ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿಪಂಚಗಂಗಾ ನದಿ ನೀರಿನಿಂದ ರಾಷ್ಟ್ರೀಯ ಹೆದ್ದಾರಿ 4 ಸಂಪೂರ್ಣ ಜಲಾವೃತ್ತಗೊಂಡಿದೆ. ಬೆಂಗಳೂರು-ಪೂಣೆ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಮಹಾರಾಷ್ಟ್ರದ ಕೊಲ್ಲಾಪುರ ಬಳಿ, ನಿಪ್ಪಾಣಿಯ ಯಮಗರ್ಣಿ ಬಳಿ ಹೆದ್ದಾರಿಗೆ ನೀರು ಹರಿದು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಈ ಹೆದ್ದಾರಿಯಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಓಡಾಡುತ್ತವೆ.

Read More »

ಧಾರವಾಡ ಜಿಲ್ಲೆ ಇಂದು ಮತ್ತು ನಾಳೆ ಶಾಲೆ ಕಾಲೇಜುಗಳಿಗೆ ರಜೆ: ಡಿಸಿ ಚೋಳನ ಆದೇಶ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಹಿತದೃಷ್ಟಿಯೊಂದಿಗೆ ಇಂದು ಆಗಸ್ಟ್ 06 ಹಾಗೂ ನಾಳೆ ಆಗಸ್ಟ್ 07 ರಂದು ಎರಡು ದಿನಗಳ ಕಾಲ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.ಈ ಎರಡು ರಜಾ ದಿನಗಳನ್ನು ಮುಂಬರುವ ರವಿವಾರ ದಿನಗಳಂದು ಕರ್ತವ್ಯ ನಿರ್ವಹಿಸಿ ಅವಧಿಗಳನ್ನು ಸರಿದೂಗಿಸಿಕೊಳ್ಳಲು ಅವರು ಸೂಚಿಸಿದ್ದಾರೆ.

Read More »

ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ

ಧಾರವಾಡ:ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಧಾರವಾಡ ನಗರ, ಅಳ್ನಾವರ ಪಟ್ಟಣ ಮತ್ತು ತಾಲೂಕಿನ ಕೆಲ ಭಾಗಗಳ ಸಂಪರ್ಕ ಕಡಿತಗೊಂಡಿದೆ.ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ದೇಸಾಯಿ ಚಾಳ ಮತ್ತು ಎಂ.ಸಿ. ಹಿರೇಮಠ ಪ್ಲಾಟ್ ಎರಡು ಬಡಾವಣೆಗಳಿಗೆ ನೀರು ಆವರಿಸಿದೆ. ಅಳ್ನಾವರ ಬಳಿಯ ಪುರ ಮತ್ತು ಗುಂಡೊಳ್ಳಿ ಗ್ರಾಮಗಳ ರಸ್ತೆಗಳು ಜಲಾವೃತಗೊಂಡು ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.ಮಳೆ ಹಿನ್ನೆಲೆ ಜಿಲ್ಲೆಯಲ್ಲಿ‌ ಅಲ್ಲಲ್ಲಿ ನುಗ್ಗಿದ ನೀರುಅದಷ್ಟೇ ಅಲ್ಲದೇ ಧಾರವಾಡ ಹೊಯ್ಸಳ ನಗರದ ಹತ್ತಿರ ಮಧ್ಯರಾತ್ರಿ …

Read More »

ಸರ್ಕಾರದ ನಿರ್ಲಕ್ಷ್ಯಕ್ಕೆ ಕೈಗನ್ನಡಿ . ಸಾಂಕ್ರಾಮಿಕ ರೋಗಗಳಿಂದ ತತ್ತರಿಸುತ್ತಿರುವ ಗ್ರಾಮಸ್ಥರು

ಹುಬ್ಬಳ್ಳಿ:ಅರೆ ಮಲೆನಾಡಿನ ಸೆರಗನ್ನು ಹೊತ್ತಿಕೊಂಡಿರೋ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮಕ್ಕೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎದುರಾಗಿದೆ. ಇಡಿ ಗ್ರಾಮವೇ ರೋಗ ರುಜಿನಗಳಿಂದ ನರಳುತ್ತಿದ್ದು, ಗ್ರಾಮಸ್ಥರಿಗೆ ಆಸ್ಪತ್ರೆಯೇ ತವರು ಮನೆಯಂತಾಗಿದೆ. ರವಾಡ ಜಿಲ್ಲೆ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರೆಲ್ಲಾ ಅದೇ ತಾಲೂಕಿನ ತುಮರಿಕೊಪ್ಪ ಗ್ರಾಮಸ್ಥರು. ಕಳೆದ ಕೆಲವು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿರೋ ಕಾರಣದಿಂದ ಗ್ರಾಮಕ್ಕೆ ಸರಬರಾಜು ಮಾಡೋ ಕುಡಿಯುವ ನೀರಿನ ಟ್ಯಾಂಕ್​ಗಳ ನೀರು ಕಲುಷಿತಗೊಂಡಿದ್ದು, ಅದೇ ನೀರನ್ನು ತಾಲೂಕು ಆಡಳಿತ …

Read More »

ವರುಣನ ಆರ್ಭಟಕ್ಕೆ ಮನೆ ಕುಸಿತ ಲಕ್ಷಾಂತರ ರೂಪಾಯಿ ಹಾನಿ.

ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಆರ್ಭಟಕ್ಕೆ ಜನರು ತತ್ತರಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ತಾಲೂಕಿನ ಅಲ್ಲಾಪುರ, ಗುಡೇನಕಟ್ಟಿ ಭಾಗದಲ್ಲಿ ಅಧಿಕ ಹಾನಿ ಉಂಟಾಗಿದೆ. ಮಳೆಯ ರಭಸಕ್ಕೆ ಕುಂದಗೋಳ ತಾಲೂಕಿನಲ್ಲಿ ನಿಂಗಪ್ಪ ಮಡಿವಾಳರ ಎಂಬುವವರಿಗೆ ಸೇರಿದ ಮನೆ ಕುಸಿತಗೊಂಡಿದೆ. ಇದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಅಷ್ಟೇ ಅಲ್ಲದೇ ಗುಡೇನಕಟ್ಟಿ ಭಾಗದಲ್ಲಿ ಜಮೀನಿಗೆ ಮಳೆ ನುಗ್ಗಿದ ನೀರು ನುಗ್ಗಿದ ಪರಿಣಾಮ …

Read More »

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕರಿಂದ ತರಾಟೆ.

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಅಂಗನವಾಡಿ ಕೇಂದ್ರದಲ್ಲಿ ಹೋಬಳಿಯ ಎಲ್ಲಾ ಪಲಾನುಭಾವಿಗಳಿಗೆ ಬಾಂಡ್ ವಿತರಿಸುವುದಾಗಿ ಎಲ್ಲರೂ ಮಕ್ಕಳೊಂದಿಗೆ ಅಂಗನವಾಡಿ ಕೇಂದ್ರಕ್ಕೆ 9 ಗಂಟೆಗೆ ಹಾಜರಾಗಬೇಕು ಎಂದು ಅಧಿಕಾರಿಗಳು ತಿಳಿದಿದ್ದಾರೆ.ಆದರೆ ಜಿಡಿ ಜಿಡಿ ಮಳೆಯಲ್ಲಿಯೋ ಮಕ್ಕಳೊಂದಿಗೆ ಬಂದಿರುವ ತಾಯಿ ಮಕ್ಕಳಿಗೆ ಸಕಾಲಕ್ಕೆ ಅಧಿಕಾರಿಗಳು ಬಂದು ಭಾಗ್ಯಲಕ್ಷ ಬಾಂಡ್ ವಿತ್ತರಿಸದ ಕಾರಣ ಆಕ್ರೋಷ ವ್ಯೆಕ್ತಪಡಿಸಿದರು.ಅದಿಕಾರಗಳನ್ನು ಪೋನ್ ಮೂಲಕ ಸಂಪರ್ಕಿಸಿದಾಗ ಬೇಜವ್ದಾರಿ ಉತ್ತರ ನೀಡಿ ನೀವೇನು ನಮ್ಮಗೆ ಸಂಬಳ ಕೊಡುವುದಿಲ್ಲ ಬರುವವರೆಗೂ ಕಾಯಿರಿ …

Read More »

ವೀರಶೈವಲಿಂಗಾಯತ ಎನ್ನುವುದು ಒಂದು ಜಾತಿಯಲ್ಲ, ಅದು ಧಾರ್ಮಿಕ ಸಂಸ್ಕೃತಿ: ವಿರೂಪಾಕ್ಷ ರಾಜಯೋಗಿಗಳ ಅಭಿಮತ.

ಮಂಡ್ಯ: ಜಿಲ್ಲೆಯ ಶ್ರೀ ಚನ್ನಬಸವೇಶ್ವರ ಕಲ್ಲುಮಠದ ಶ್ರೀ ಡಾ.ವಿರೂಪಾಕ್ಷರಾಜಯೋಗಿಗಳು ವೀರಶೈವ ಲಿಂಗಾಯತರತ್ನ ಸಂಶೋಧನಾ ಕೃತಿಯನ್ನು ಹೊರತಂದಿದ್ದು ವೀರಶೈವ ಲಿಂಗಾಯತ ಒಂದೇ ಧರ್ಮವಾಗಿದ್ದು ಧರ್ಮವಿಭಜನೆಗೆ ಮುಂದಾಗಿರುವ ದ್ರೋಹಿಗಳು ಬಹಿರಂಗ ಚರ್ಚೆಗೆ ಬಂದರೆ ದಾಖಲೆಗಳ ಸಮೇತವಾಗಿ ಒಂದೇ ಧರ್ಮವೆಂದು ಸಾಬೀತು ಪಡಿಸುತ್ತೇನೆ ಎಂದು ಶ್ರೀವಿರೂಪಾಕ್ಷ ರಾಜಯೋಗಿಗಳು ಸವಾಲು ಹಾಕಿದ್ದಾರೆ. ವೀರಶೈವ ಧರ್ಮದ ಬಗ್ಗೆ ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ನಿರ್ಧಾರವನ್ನು ಸ್ವಾಗತಿಸಿರುವ ರಾಜಯೋಗಿಗಳು ಮಾಜಿಸಚಿವ ಎಂ.ಬಿ.ಪಾಟೀಲ್ ಧರ್ಮದ್ರೋಹಿಯಾಗಿದ್ದಾರೆ. ವೀರಶೈವ ಧರ್ಮವನ್ನು ವೀರಶೈವ ಲಿಂಗಾಯತ …

Read More »