ಧಾರವಾಡ: ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ನಾಲ್ವರು ಮಾಲೀಕರಿಗೆ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.ಕಟ್ಟಡದ ಎಂಜಿನಿಯರ್ ಹೊರತುಪಡಿಸಿ ಮಾಲೀಕರಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಮಾ. 19ರಂದು ಕುಸಿದುಬಿದ್ದ ಕಟ್ಟಡದಡಿ ಸಿಲುಕಿ 19 ಜನ ಮೃತಪಟ್ಟಿದ್ದರು.ಕಟ್ಟಡ ಕುಸಿದ ಎರಡು ದಿನಗಳ ನಂತರ ಮಾಲೀಕರು ಪೊಲೀಸರಿಗೆ ಶರಣಾಗಿದ್ದರು. ಗಂಗಣ್ಣ ಶಿಂತ್ರಿ, ಬಸವರಾಜ ನಿಗದಿ, ಮಹಾಬಲೇಶ್ವರ ಪುರದನಗುಡಿ, ರವಿ ಸಬರದ ಜಾಮೀನು ಪಡೆದ ಮಾಲೀಕರಾಗಿದ್ದಾರೆ. ಕಟ್ಟಡದ ನಾಲ್ವರು …
Read More »ಪಾರಿವಾಳದ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
ಹುಬ್ಬಳ್ಳಿ : ಪಾರಿವಾಳ ಶಾಂತಿಯ ಸಂಕೇತ. ಆದ್ರೆ, ಅದೇ ಪಾರಿವಾಳವೊಂದು ಕುಟುಂಬದ ಶಾಂತಿಗೆ ಭಂಗ ತಂದಿದ್ದು, ಸಹೋದರರಂತಿದ್ದ ಎರಡು ಕುಟುಂಬಗಳು ಇದೀಗ ಶತ್ರುಗಳಾಗಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರ ಸಂಗತಿ.ಹೌದು, ದುಡಿದು ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆಯ ಬೆಡ್ ಮೇಲೆ ಯುವಕನೊಬ್ಬ ಮಲಗಿದ್ರೆ, ಮತ್ತೊಂದೆಡೆ ಆತನ ಕುಟುಂಬದವರು ಭಯದಿಂದ ಬದುಕು ಕಟ್ಟಿಕೊಂಡಿದ್ದ ಮನೆಯನ್ನೇ ಬಿಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿಗೆ …
Read More »ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 21 ರಂದು ಜಾಥಾ
ಹುಬ್ಬಳ್ಳಿ: ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 21ರಂದು ಬೆಂಗಳೂರಿನಲ್ಲಿ ರೈತ ಜಾಥಾ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಮಟ್ಟದ ಪದಾಧಿಕಾರಿ ಸಿದ್ಧನಗೌಡ ಪಾಟೀಲ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಶೀಘ್ರವಾಗಿ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳ …
Read More »ಈಡೇರದ ಸಾಲ ಮನ್ನಾ ಭರವಸೆ.
ಧಾರವಾಡ: ಸತತ 4 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದ ರೈತರಿಗೆ ಸಾಲಮನ್ನಾ ಯೋಜನೆ ವರದಾನವಾಗುತ್ತೆ ಎಂದು ನಂಬಿರುವ ರೈತರಿಗೆ ಸಂಕಷ್ಟ ಎದುರಾಗಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆಯು ಜನರಿಗೆ ಮಾತ್ರ ನಿಲುಕದ ನಕ್ಷತ್ರವಾಗಿ ಪರಿಣಮಿಸಿದೆ.ಇತ್ತ ಸಾಲ ಮನ್ನಾ ಯೋಜನೆಯನ್ನು ಘೋಷಣೆ ಮಾಡಿದ ಸಮ್ಮಿಶ್ರ ಸರ್ಕಾರ ಮುಳುಗುವ ದೋಣಿಯಾಗಿದ್ದರೆ, ಅವರ ಸಾಲಮನ್ನಾ ಯೋಜನೆ ಮಣ್ಣುಪಾಲಾದಂತೆ ಕಾಣುತ್ತಿದೆ. ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿ ಧಾರವಾಡ ಜಿಲ್ಲೆಗೆ ಬರಬೇಕಾದ 95 ಕೋಟಿ ರೂಪಾಯಿ …
Read More »ಕಾರ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
ಚಿತ್ರದುರ್ಗ: ಅಪಘಾತವಾಗಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಸಾವು, ಮೂರು ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಚಿತ್ರದುರ್ಗ ಹೊರವಲಯದ ಕುಂಚಿಗನಾಳ್ ಬಳಿ ಘಟನೆ ನಡೆದಿದೆ. ಇದೇ ಲಾರಿಗೆ ಇನ್ನೋವಾ ಕಾರು ಡಿಕ್ಕಿಯಾಗಿ 4 ಮಂದಿ ಮೃತ ಪಟ್ಟಿದ್ದರು.ಲಾರಿ ಸ್ಥಳಾಂತರಿಸದೇ ಇದಿದ್ದರಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಹುಬ್ಬಳ್ಳಿ ನಿವಾಸಿ ಅರುಣ್, (19) ಮೃತ ದುರ್ಧೈವಿ. ಶಿರಿಶಾ, ಪವನ್, ಸದಾನಂದ ಗಂಭೀರ ಗಾಯಾಳುಗಳು.ಗಾಯಾಳುಗಳಿಗೆ ಚಿತ್ರದುರ್ಗ ಜಿಲ್ಲಾ …
Read More »ಮಂಗಳೂರಿನಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ
ಮಂಗಳೂರು: ಮಂಗಳೂರಿನಲ್ಲಿ ಮತ್ತೆಮಳೆ ಚುರುಕುಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ಇಂದು ದಿನವಿಡೀ ಮಳೆಯಾಗುವ ಸಾಧ್ಯತೆ ಇದೆ. ಮಂಗಳೂರು ನಗರದಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿರುವ ಹಿನ್ನೆಲೆ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿ ಉಂಟಾಯ್ತು. ಇನ್ನೂ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಯ್ತು. ನೇತ್ರಾವತಿ, ಕುಮಾರಧಾರ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ನದಿ ಪ್ರದೇಶದಲ್ಲಿ ವಾಸಿಸುವ ಜನರ್ರಿಗೆ ಹಾಗೂ …
Read More »ಆಕಸ್ಮಿಕ ಅಗ್ನಿ ಅವಘಡ ಹೊತ್ತಿ ಉರಿದ ಡೀಸೆಲ್ ಟ್ಯಾಂಕರ್
ಮಂಡ್ಯ: ಜಿಲ್ಲೆಯ ಚಿಕ್ಕೋಸಹಳ್ಳಿ ಗ್ರಾಮದ ಹೊರವಲಯದ ಶ್ರವಣಬೆಳಗೊಳ ರಸ್ತೆಯಲ್ಲಿ ಭಾರತೀಪುರ ಬಳಿಯ ಉಪ್ಪಾರ್ ಕ್ಯಾಂಪ್ ಗೆ ಡೀಸೆಲ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಗೆ ಆಕಸ್ಮಿಕ ಬೆಂಕಿ ಹೊತ್ತುಕೊಂಡು ಉರಿದಿದೆ.ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಗ್ನಿಶಾಮಕ ಠಾಣಾಧಿಕಾರಿ ಶ್ರೀನಿವಾಸರಾವ್ ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿಬೆಂಕಿ ನಂಧಿಸಿ ಅಪಾರ ಹಾನಿ ತಪ್ಪಿಸಿದ್ದಾರೆ. ಇದ್ದಕ್ಕಿದ್ದಂತೆ ಲಾರಿಯ ಕ್ಯಾಬಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಾಗ ಲಾರಿಯ ಚಾಲಕ ಸಂಗಣ್ಣ ಅವರು ಕೆ.ಆರ್.ಪೇಟೆ …
Read More »ಆ. 3 ರಂದು ಬಸವಶ್ರೀ ಕಾಯಕಯೋಗಿ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ
ಮಂಡ್ಯ : ಜಿಲ್ಲೆ ವೀರಶೈವ ಮಹಾಸಭಾದ ವತಿಯಿಂದ ಆಗಸ್ಟ್ ಕೆ.ಆರ್.ಪೇಟೆ ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ನ್ಯೂಸ್ ಅಪಿಡೆವಿಟ್ ಆಗಿಲ್ಲ. ಬಸವಜಯಂತಿ, ಪ್ರತಿಭಾ ಪುರಸ್ಕಾರ, ಬಸವಶ್ರೀ ಕಾಯಕಯೋಗಿ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಡ್ಡರಹಳ್ಳಿ ವಿ.ಎಸ್.ಧನಂಜಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ವೀರಶೈವ ಮಹಾಸಭಾ ಘಟಕವು ಆಡಳಿತ ಮಂಡಳಿಯ ಸರ್ವಸದಸ್ಯರ ಸಭೆಯನ್ನು ಕರೆದು ಸಮಾಲೋಚನೆ ನಡೆಸಿ ಎಲ್ಲರ ಒಪ್ಪಿಗೆಯನ್ನು ಪಡೆದುಕೊಂಡು ಬಸವಜಯಂತಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಕಳೆದ …
Read More »ಶೀಘ್ರದಲ್ಲೇ ಮೈತ್ರಿ ಸರ್ಕಾರ ಪತನಕ್ಕೆ ವಿಶೇಷ ಪೂಜೆ
ಮಂಡ್ಯ: ರಾಜ್ಯದ ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿ ದಕ್ಷ ಪ್ರಾಮಾಣಿಕ ಆಡಳಿತ ನಡೆಸುವ ಶಕ್ತಿಯನ್ನು ನೀಡಲಿ ಹಾಗೂ ಶೀಘ್ರದಲ್ಲೇ ಮೈತ್ರಿ ಸರ್ಕಾರ ಪತನವಾಗಲಿ ಎಂದು ಪ್ರಾರ್ಥಿಸಿ ಬೂಕನಕೆರೆ ಗ್ರಾಮದೇವತೆ ಗೋಗಾಲಮ್ಮದೇವಿ ಮತ್ತು ಮನೆದೇವರು ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಗದ್ದುಗೆಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮದಲ್ಲಿ ಗ್ರಾಮದ ಸುಪುತ್ರ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸುವ ಶಕ್ತಿಯನ್ನು ತಾಯಿ ಗ್ರಾಮದೇವತೆ ಗೋಗಾಲಮ್ಮದೇವಿ ವಿಶೇಷ ಶಕ್ತಿಯನ್ನು ನೀಡಲಿ …
Read More »ಕಾಂಗ್ರೆಸ್' ಸತ್ಯಶೋಧನಾ ಸಭೆಯಲ್ಲಿ 'ಕೈ' ಕೈ' ವಾಗ್ವಾದ!
ಧಾರವಾಡ :ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಕುರಿತು ಮಾಹಿತಿ ಕಲೆ ಹಾಕಲು ಗುರುವಾರ ನಗರದ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಸತ್ಯಶೋಧನಾ ಸಭೆಯಲ್ಲಿ ಮುಸ್ಲಿಂ ಸಮಾಜದ ಯುವ ಮುಖಂಡ ಇಮ್ರಾನ್ ಕಳ್ಳಿಮನಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ಗುರುವಾರ ನಡೆದ ಸಭೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ, ವೀರಕುಮಾರ್ ಪಾಟೀಲ, ವೀರಣ್ಣ ಮತ್ತಿಕಟ್ಟಿ, ಎ.ಎಂ. ಹಿಂಡಸಗೇರಿ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಕುರಿತು ಇಮ್ರಾನ್ ಕಳ್ಳಿಮನಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





