ಹುಬ್ಬಳ್ಳಿ: ಗಲಭೆ ಪ್ರಕರಣ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಬಂಧಿತ ಎಲ್ಲ ಗಲಭೆಕೊರರು ಕಲಬುರಗಿಗೆ ಶಿಪ್ಟ್ ಮಾಡಲಾಗಿದೆ. ಒಟ್ಟು 103 ಆರೋಪಿಗಳನ್ನ ಕೇಂದ್ರಿಯ ಕಾರಾಗೃಹಕ್ಕೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ಆರೋಪಿಗಳನ್ನ ಪೊಲೀಸರು ಸ್ಥಳಾಂತರಿಸಿದರು. 4 ನೇ ಜೆಎಮ್ಎಪ್ಸಿ ನ್ಯಾಯಾಲಯ ಅನ್ವಯ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಂದು ಮತ್ತೆ 14 ಆರೋಪಿಗಳನ್ನ ಪೊಲೀಸರು ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ.
Read More »ಹುಬ್ಬಳ್ಳಿ ಗಲಭೆ : 15 ಜನರನ್ನು ಬಂಧನ, 12 ಎಫ್ ಐ ಆರ್, 5 ಪ್ರಕರಣಗಳು ದಾಖಲು
ಹುಬ್ಬಳ್ಳಿ: ಗಲಾಟೆ ಪ್ರಕರಣ ಹಿನ್ನಲೆ 15 ಜನರನ್ನು ಗಲಭೆಕೋರರನ್ನು ಬಂಧಿಸಿದ್ದಾರೆ. ಒಟ್ಟು 12 ಎಫ್ ಐ ಆರ್ ದಾಖಲಾಗಿದ್ದು, ಮತ್ತೆ 5 ಪ್ರಕರಣಗಳು ದಾಖಲಾಗಿವೆ. ಒಟ್ಟು ಇಲ್ಲಿವರೆಗೆ 104 ಜನರ ಬಂಧನ ಮಾಡಲಾಗಿದೆ. ದೇವಸ್ಥಾನ, ಮನೆ ಹಾಗೂ ಪೋಸ್ಟ ಆಫೀಸ್ ಮೇಲೆ ಕಲ್ಲು ಎಸೆದಿರೋ ಪ್ರಕರಣ ಸಹ ಪೋಲಿಸ ಠಾಣೆಯಲ್ಲಿ ಪ್ರಕಟವಾಗಿದೆ. ಸೂಕ್ತ ಬಂದೋಬಸ್ತ್ ನ್ನು ಪೊಲೀಸರು ಮುಂದುವರೆಸಿದ್ದಾರೆ. ಬೇರೆ ಕಡೆ ಎಲ್ಲೂ ಗಲಾಟೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. …
Read More »ಹುಬ್ಬಳ್ಳಿ ಮರ್ಯಾದೆ ಹಾಳು ಮಾಡಬಾರದು: ಬಸವರಾಜ ಹೊರಟ್ಟಿ
ಹುಬ್ಬಳ್ಳಿ: ಸಮಾಜದಲ್ಲಿ ಒಡಕನ್ನು ಉಂಟು ಮಾಡಿ, ವಿನಾಕಾರಣ ಪ್ರಾಣಹಾನಿ ಮಾಡಿ, ಆಸ್ತಿ ಹಾನಿ ಆಗಬಾರದು. ಆ ದೃಷ್ಟಿಯಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿ ಗಲಭೆ ವಿಚಾರವಾಗಿ ಮಾತನಾಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಇಲ್ಲಿಯವರೆಗೆ ಬಹಳ ಶಾಂತ ರೀತಿಯಲ್ಲಿದೆ. ಮತ್ತೆ ಹಿಂದಿನ ದಿನಗಳು ಮರುಕಳಿಸಬಾರದು. ರಾಜ್ಯದಲ್ಲಿ ಹುಬ್ಬಳ್ಳಿ ಬಗ್ಗೆ ಕೆಟ್ಟ ಅಭಿಪ್ರಾಯ …
Read More »ಏ. 22 ರಂದು ಉಚಿತ ಆರೋಗ್ಯ ರಹಸ್ಯ ಶಿಬಿರ
ಹುಬ್ಬಳ್ಳಿ: ಎಸ್.ಎಸ್.ಕೆ. ಸಮಾಜ ಚಿಂತನ-ಮಂಥನ ಸಮಿತಿ ಕರ್ನಾಟಕ ಹಾಗೂ ಸಿಕರ್ಸ್ ಅಕಾಡೆಮಿ ಸಹಯೋಗದೊಂದಿಗೆ ಇದೇ. ದಿ. ೨೨, ೨೩ ಹಾಗೂ ೨೪ರಂದು ಮೂರು ದಿನಗಳ ಕಾಲ ಸಂಪೂರ್ಣ ಆರೋಗ್ಯದ ರಹಸ್ಯ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿದೆ ಎಂದು ಹೊಲಿಸ್ಟಿಕ್ ಟ್ರೇನರ್ ಸೂರ್ಯಕಾಂತ ಪೂಜಾರಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೬ ರಿಂದ ೮.೨೦ ರವರೆಗೆ ಶಿಬಿರ ಆರಂಭವಾಗಲಿದ್ದು, ಬೆ. ೫.೫೦ ಹಾಜರಾಗಬೇಕು ಎಂದರು. ಪ್ರಾಚೀನ ಕಾಲದಲ್ಲಿ ಋಷಿ-ಮುನಿಗಳು, …
Read More »ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಿದರೆ ಅಶಾಂತಿಗೆ ಅಧಿಕಾರಿಗಳು ನೇರ ಕಾರಣ
ಹುಬ್ಬಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ಟ್ರೆಸ್ ಪಾಸ್ ಹೆಸರಿನಲ್ಲಿ ತೆರವುಗೊಳಿಸುವ ಷಡ್ಯಂತ್ರ ಮಾಡುತ್ತಿದ್ದು, ಹಾಗೇನಾದರೂ ನಡೆದಲ್ಲಿ ಉಂಟಾಗುವ ಅಶಾಂತಿ ಹಾಗೂ ಕಾನೂನು ಭಂಗಕ್ಕೆ ವಿಭಾಗೀಯ ರೈಲ್ವೆ ಅಧಿಕಾರಿಗಳೇ ಹೊಣೆಗಾರರು ಎಂದು ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜನ್ಮದಿನದ ಹಿನ್ನೆಲೆಯಲ್ಲಿ ಏ.14 ರಂದು ಅವರ ಅನುಯಾಯಿಗಳು ಗದಗ ರಸ್ತೆಯ ಗಾಂಧಿವಾಡದಲ್ಲಿನ …
Read More »ಹುಬ್ಬಳ್ಳಿಯಲ್ಲಿ ವರ್ಷದ ಮೊದಲ ಅಂಗಾರಿಕ ಸಂಕಷ್ಟಿ ಆಚರಣೆ
ಹುಬ್ಬಳ್ಳಿ : ಹು-ಧಾ ಅವಳಿ ನಗರ ಸೇರಿದಂತೆ ಎಲ್ಲೆಡೆ ವರ್ಷದ ಮೊದಲ ಅಂಗಾರಿಕ ಸಂಕಷ್ಟಿಯನ್ನು ಇಂದು (ಮಂಗಳವಾರ) ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಹುಬ್ಬಳ್ಳಿಯ ಅಕ್ಕಿಹೊಂಡದ ಗಣೇಶ ದೇವಸ್ಥಾನ, ಶಿರೂರ ಪಾರ್ಕನ ಗಣೇಶ ದೇವಸ್ಥಾನ, ಬಾಕಳೆ ಗಲ್ಲಿಯ ವಿನಾಯಕ ದೇವಸ್ಥಾನ, ದಾಜಿಬಾನ್ಪೇಟ, ಗೋಡ್ಸ್ಸೆಡ್ ರಸ್ತೆಯ ಅಷ್ಟವಿನಾಯಕ ದೇವಸ್ಥಾನ, ಸೂಪರ್ ಮಾರ್ಕೇಟ್ನ ಗಣೇಶ ದೇವಸ್ಥಾನ, ಕುಂಬಾರ ಓಣಿಯ ಗಣಪತಿ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಮಾಡಲಾಗಿತ್ತು. ಬೆಳಿಗ್ಗೆನಿಂದಲೇ ಪ್ರಮುಖ …
Read More »ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರ
ಹುಬ್ಬಳ್ಳಿ:: ಭಾರತ ಸರ್ಕಾರದ ಜವಳಿ ಮಂತ್ರಾಲಯದ ಸಮರ್ಥ ಜವಳಿ ವಲಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಆದರ್ಶ್ ಕೌಶಲ್ಯ ಅಭಿವೃದ್ಧಿ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ನಗರದ ದಾಜೀಬಾನ ಪೇಟದಲ್ಲಿರುವ ಭಾರತೀಯ ಕಂಪ್ಯೂಟರ ಅಕ್ಯಾಡೆಮಿಯಲ್ಲಿ 30 ಶಿಬಿರಾರ್ಥಿಗಳಿಗಾಗಿ 50 ದಿನಗಳ ಅವಧಿಯ ” ಯಾಂತ್ರಿಕೃತ ಹೊಲಿಗೆ ಯಂತ್ರಗಳ ಮೂಲಕ ” ಉಚಿತ ಹೊಲಿಗೆ ತರಬೇತಿ ಶಿಬಿರ ” ವನ್ನು ಹಮ್ಮಿಕೊಳ್ಳಲಾಗಿದೆ . ಆಸಕ್ತರು ಸಂಪರ್ಕಿಸುವ ವಿಳಾಸ : ಭಾರತೀಯ ಕಂಪ್ಯೂಟರ ಅಕ್ಯಾಡೆಮಿ …
Read More »ಏ.22 ರಂದು ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ
ಬೆಂಗಳೂರು : ಏಪ್ರಿಲ್ 22 ರಿಂದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಏಪ್ರಿಲ್ 22 ರಿಂದ ಮೇ.18ರವರೆಗೆ ನಡೆಯಲಿದ್ದು, ಈ ಬಾರಿ ಒಟ್ಟು 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಮಾಡಲಾಗಿದ್ದು, ಹಿಜಾಬ್ ಧರಿಸಿ ಬಂದ್ರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇಲ್ಲ ಎಸ್ ಎಸ್ಎಲ್ ಸಿ ಪರೀಕ್ಷೆಯಂತೆ ದ್ವಿತೀಯ ಪಿಯುಸಿ ಪರೀಕ್ಷೆಗೂ ಹಿಜಾಬ್ ನಿಷೇಧ ಮಾಡಲಾಗುವುದು.
Read More »ರಸ್ತೆ ಡಿವೈಡರ್ಗೆ ಬೈಕ್ ಡಿಕ್ಕಿ : ಯುವಕ ಸ್ಥಳದಲ್ಲೇ ಸಾವು
ಹುಬ್ಬಳ್ಳಿ: ರಸ್ತೆ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದ ಕೆಸಿ ಪಾರ್ಕ್ ಬಳಿ ನಡೆದಿದೆ. ನಿನ್ನೆ ತಡರಾತ್ರಿ ಪರ್ಹಾನ್ ಹಾಗೂ ಮತೀನ್ ಬೈಕ್ನಲ್ಲಿ ಹೊರಟಿದ್ದು, ಅತೀ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ, ಬಳಿಕ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್ಗೆ ಡಿಕ್ಕಿ ಯಾಗಿದ್ದು, , ಅಪಘಾತದ ಭೀಕರತೆಗೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪರ್ಹಾನ್ ಹಾಗೂ ಮತೀನ್ ಮೃತ ದುರ್ದೈವಿಗಳು.ಘಟನಾ ಸ್ಥಳಕ್ಕೆ ಕೆಸಿ ಪಾರ್ಕ್ ಸಂಚಾರಿ ಠಾಣೆ …
Read More »ಸಿಎಂಗೆ ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು: ಮಠಗಳಿಗೆ ನೀಡುವ ಅನುದಾನದಲ್ಲೂ ಶೇ.30 ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ದಿಂಗಾಲೇಶ್ವರ ಶ್ರೀಗಳ ಆರೋಪ ಕುರಿತು ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿಗಳೇ ಇದಕ್ಕೇನಂತೀರಿ, ಉತ್ತರ ಕೊಡಿ ಈ ಅನ್ಯಾಯಕ್ಕೆ ಯಾರು ಹೊಣೆ, ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





