Breaking News

admin

ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಎಣ್ಣೆ ಏರಿಕೆ ವಿರುದ್ಧ ಆಟೋ ಚಾಲಕರ ಸಂಘದಿಂದ ಪ್ರತಿಭಟನೆ

ಹುಬ್ಬಳ್ಳಿ:-ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಎಣ್ಣೆ ಸೇರಿದಂತೆ ಇತರ ಬೆಲೆ ಏರಿಕೆ ಮಾಡಿರುವ ಸರಕಾರದ ವಿರುದ್ಧ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಇಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಪ್ರತಿಭಟನಾ ರ್ಯಾಲಿ ಮಾಡಿದ ಅವರು ಆಟೋ ರಿಕ್ಷಾಗೆ ಬಳಸುವ ಎಲ್.ಪಿ.ಜಿ, ಪೇಟ್ರೋಲ್, ಮನೆ ಸಿಲಿಂಡರ್ ಮತ್ತು ಆರ್.ಟಿ.ಓ ಆಟೋ ನೋಂದಣಿಯನ್ನು ಬೆಲೆ ಹೆಚ್ಚಳ ಮಾಡಿರುವುದರಿಂದ ನಾವೆಲ್ಲರೂ …

Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ನಂ. ೪೮(೫೯) ರ ಪ್ರತಿ ಪ್ರದೇಶಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಿಕೊಡುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಲ್ಲ ಎಂಬುದನ್ನು ಖಂಡಿಸಿ ವಾರ್ಡ್ ನ ಸದಸ್ಯರೂ ಹಾಗೂ ಕಾಂಗ್ರೆಸ್ ಪಕ್ಷದ ಮಹಿಳಾ ಧುರೀಣೆಯಾದ ಸುವರ್ಣಾ ಕಲ್ಲಕುಂಟಲಾ ಅವರ ನೇತೃತ್ವದಲ್ಲಿ ಹು-ಧಾ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸುವರ್ಣ ಅವರು ವಾರ್ಡ್ ನ ಅಭಿವೃದ್ಧಿಗೆ …

Read More »

ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಧರಣಿ ಸತ್ಯಾಗ್ರಹ ನಾಳೆಯಿಂದ

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಇದೇ ದಿ. 5 ರಂದಿ ಎರಡು ವಾರಗಳ ಕಾಲ ಹೋರಾಟ ವೇದಿಕೆ ಧರಣಿ ಸತ್ಯಾಗ್ರಹ ಕೈಗೊಳ್ಳಲಿದೆ. ಸಮಯ ಪ್ರತಿ ದಿನ ಮುಂಜಾನೆ 10:00 ಗಂಟೆಯಿಂದ ಸಾಯಂಕಾಲ 6: ಗಂಟೆವರೆಗೆ. ಮಹಾನಗರ ಪಾಲಿಕೆ, ಧಾರವಾಡ ಕಚೇರಿ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಚಾಲಕರಾದ ಮನೋಜ ಪಾಟೀಲ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಧರಣಿ ಸತ್ಯಾಗ್ರಹ ನಡೆಸುವುದಕ್ಕೆ ನಗರದ …

Read More »

ಯುವಕನಿಗೆ ದಂಡ ಹಾಕಿ ಚಳಿ ಬಿಡಿಸಿದ ಇನ್ಸ್ಪೆಕ್ಟರ್ ಕಾಡದೇವರಮಠ

ಹುಬ್ಬಳ್ಳಿ: ಯುವಕನೊಬ್ಬ ನಿನ್ನೆ ಸಾಯಂಕಾಲ ನಗರದ ಚನ್ನಮ್ಮ ಸರ್ಕಲ್ ಬಳಿ ರಾಂಗ್ ರೂಟ್ ನಲ್ಲಿ ಬಂದಿದ್ದಲ್ಲದೇ, ಯದ್ವಾತದ್ವಾ ಬೈಕ್ ಚಾಲನೆ ಮಾಡುತ್ತಿದ್ದನ್ನು ಗಮನಿಸಿದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಾಡದೇವರಮಠ ಅವರು ಯುವಕನನ್ನು ತಡೆದು ದಂಡ ಹಾಕಿ ಚಳಿ ಬಿಡಿಸಿದ್ದಾರೆ. ಇನ್ನೊಂದು ಬಾರಿ ಈ ರೀತಿ ಮಾಡಿದರೆ ಬೈಕ್ ಸೀಜ್ ಮಾಡಲಾಗುತ್ತದೆ ಎಂದು ವಾರ್ನ್ ಮಾಡಿ ಕಳಿಸಿದ್ದಾರೆ….

Read More »

ರಥೋತ್ಸವಕ್ಕೆ ಈ ಸಲ ಕಪ್ ನಮ್ದೆ ಎಂದು ಬಾಳೆಹಣ್ಣು ಎಸೆದ ಆರ್.ಸಿ.ಬಿ ಅಭಿಮಾನಿ

ಧಾರವಾಡ : ಯುಗಾದಿ ಹಬ್ಬದ ಪ್ರಯುಕ್ತ ಧಾರವಾಡ ತಾಲೂಕಿನ ಕಲ್ಲೆ ಗ್ರಾಮದ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವ ಜರುಗಿತು ಈ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಯುವಕನೋರ್ವ ಈ ಸಲ ಕಪ್ ನಮ್ದೆ ಆರ್.ಸಿ.ಬಿ ಎಂದು ಬರೆದು ಬಾಳೆಹಣ್ಣು ಎಸೆದು ಗಮನ ಸೆಳೆದಿದ್ದಾನೆ. ಆರ್ ಸಿ ಬಿ ಐಪಿಎಲ್ ನಲ್ಲಿ ಗೆಲುವು ಸಾಧಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಅಭಿಮಾನಿ ಈ ಸಲ ಕಪ್ ನಮ್ದೆ ಎಂದು ಬಾಳೆಹಣ್ಣಿನಲ್ಲಿ ಬರೆದು …

Read More »

ಶ್ರೀ ಕಾಳಿಕಾದೇವಿಯ ಜಾತ್ರೆಯಲ್ಲಿ ಪ್ರಸಾದ್ ಅಬ್ಬಯ್ಯ ಭಾಗಿ

ಹುಬ್ಬಳ್ಳಿ ; ಹಳೇ ಹುಬ್ಬಳ್ಳಿ ಅಕ್ಕಸಾಲಿಗರ ಓಣಿಯ ಸುಪ್ರಸಿದ್ಧ ಶ್ರೀ ಕಾಳಿಕಾದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ದೇವಿಯ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಯ ತೇರನೆಳೆರು ಸಂಭ್ರಮಿಸಿದರು . ಈ ವೇಳೆಯಲ್ಲಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವರು ಇದ್ದರು.

Read More »

ಕಾಂಕ್ರೀಟ್ ಕಾಮಗಾರಿಗೆ ಮಾಜಿ ಸಿಎಂ ಚಾಲನೆ

ಹುಬ್ಬಳ್ಳಿಯ ವಾರ್ಡ್ ನಂ . 46 ಅಶೋಕ ನಗರದ ಒಳರಸ್ತೆಗಳು ಮತ್ತು ಮುಖ್ಯರಸ್ತೆಗಳ ರಸ್ತೆ ಡಾಂಬರಿಕರಣವನ್ನು 42 ಲಕ್ಷ ರೂ ವೆಚ್ಚದಲ್ಲಿ ಮತ್ತು ಕಾಂಕ್ರೀಟ್ ಕಾಮಗಾರಿಯನ್ನು 14 ಲಕ್ಷ ರೂ ಭೂಮಿ ಪೂಜೆ ನೆರವೇರಿಸುವುದರ ಮೂಲಕ ಶಾಸಕ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಶ್ರೀ ನಾಗೇಶ್ ಕಲಬುರಗಿ , ಈರಣ್ಣಸವಡಿ , ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು .

Read More »

135 ಪೋಲಿಸರಿಗೆ ಮುಖ್ಯಮಂತ್ರಿ ಪದಕ

ಬೆಂಗಳೂರು: ದಕ್ಷತೆಯಿಂದ ಸೇವೆ ಸಲ್ಲಿಸಿರುವ ರಾಜ್ಯದ ಒಟ್ಟು 135 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ  2021ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನ ಮಾಡಿದರು. ಪೊಲೀಸ್ ಧ್ವಜ ದಿನಾಚರಣೆ ದಿನದಂದು ಕೋರಮಂಗಲದಲ್ಲಿರುವ ಕೆಎಸ್‍ಆರ್‍ಪಿ ಮೈದಾನದಲ್ಲಿ ಪದಕ ಪ್ರಧಾನ ಮಾಡಲಾಯಿತು.

Read More »

ಸಿದ್ಧಾರೂಢರ 186ನೇಯ ಜಾತ್ರಾ ಮಹೋತ್ಸವ

ಖಟಕಚಿಂಚೋಳಿ: ಐತಿಹಾಸಿಕ ಹಿನ್ನೆಲೆಯುಳ್ಳ ಸಿದ್ಧಾರೂಢರ ಜನ್ಮಭೂಮಿ ಚಳಕಾಪುರ ಗ್ರಾಮದಲ್ಲಿ ಸಿದ್ಧಾರೂಢರ 186ನೇಯ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏಪ್ರಿಲ್ 4 ರಿಂದ 10 ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಪ್ರವಚನ, ಸಿದ್ಧಾರೂಢರ ಜೀವನ ಚರಿತ್ರೆ ಪಾರಾಯಣ, ಅಭಿಷೇಕ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Read More »

ಬೆಂಗಳೂರು ದೇಶದ ಸ್ಟಾರ್ಟಪ್ ರಾಜಧಾನಿ ಎನಿಸಿ ಕೊಂಡಿದೆ : ಅಶ್ವಥ್ ನಾರಾಯಣ

ಬೆಂಗಳೂರು : ಉದ್ಯಮಿಗಳು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಿ. ಅದನ್ನು ಬಿಟ್ಟು ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಬಾರದು ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ. ಮಾತನಾಡಿದ ಅವರು, ಸ್ಟಾರ್ಟಪ್ ಸೇರಿದಂತೆ ಯಾವುದೇ ಉದ್ದಿಮೆಗಳಿಗೆ ಬೆಂಗಳೂರಿನಲ್ಲಿ ಇರುವಂತಹ ಮೂಲಸೌಕರ್ಯ ಮತ್ತು ಕಾರ್ಯ ಪರಿಸರ ಜಾಗತಿಕ ಮಟ್ಟದಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿಯೇ ಬೆಂಗಳೂರು ದೇಶದ ಸ್ಟಾರ್ಟಪ್ ರಾಜಧಾನಿ ಎನಿಸಿ ಕೊಂಡಿದೆ ಎಂದರು.

Read More »