Breaking News

Shaikh BIG TV NEWS, Hubballi

ಆಶ್ರಮದ ಮಕ್ಕಳಿಂದ ಕಲಿತ ಅಮೂಲ್ಯ ಪಾಠ

ಆ ದಿನ ಸುರಿದ ಜಿಟಿ ಜಿಟಿ ಮಳೆಯಿಂದ ವಾತಾವರಣತಂಪಾಗಿತ್ತು. ಅದರಾಗ ಬೇರೆ ಅಂದು ಭಾನುವಾರ; ಕಾಲೇಜಿಗೆ ರಜೆ ಇತ್ತು. ಈ ಮನಸ್ಸಿಗೆ ಏನು ಮಾಡಬೇಕೆಂದುತೋಚುತ್ತಿರಲಿಲ್ಲ. ಓದಲೆಂದು ಪುಸ್ತಕ ಹಿಡಿದರೆ ಓದೋಕೂ ಆಗುತ್ತಿರಲಿಲ್ಲ. ಸಾಹಿತ್ಯ ಅಂದ್ರೆ ನನಗೆ ಪಂಚಪ್ರಾಣ. ಪಠ್ಯದ ಪುಸ್ತಕಗಳಿಗಿಂತ ಹೆಚ್ಚಾಗಿ ಕಾದಂಬರಿ, ಕಥೆ, ಲೇಖನಗಳ ಸಂಗ್ರಹ ಓದಿದ್ದೇ ಹೆಚ್ಚು.ಆದರೆ ಇಂದು ಅದ್ಯಾಕೋ ಗೊತ್ತಿಲ್ಲ; ಮನಸ್ಸಿಗೆ ಬೇಜಾರು. ಏನಪ್ಪಾ ಮಾಡಬೇಕು ಈ ಬೇಜಾರು ಕಳೆಯಲು ಎಂದು ಒಂದು ಕ್ಷಣ ಆಲೋಚನೆ …

Read More »

ಸಂವಹನ ಕೌಶಲ್ಯ ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿ ಹಾಕುತ್ತದೆ: ನಾಡಗೌಡ

ಹಾವೇರಿ:ವಿದ್ಯಾರ್ಥಿಯೂ ಪ್ರತಿಯೊಂದು ಸಾಧನೆಗೆ ಪೂರಕವಾದ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅಗತ್ಯವಾಗಿದೆ.ಅದೇರೀತಿ ಸಂವಹನ ಕೌಶಲ್ಯದಿಂದ ವ್ಯಕ್ತಿಯು ತನ್ನ ವಿಚಾರ ಹಾಗೂ ಬೌದ್ದಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಸಂವಹನ ಕೌಶಲ್ಯ ಪೂರಕ ಆಯುಧವಾಗಿದೆ. ಅಲ್ಲದೇ ವಿದ್ಯಾರ್ಥ ತನ್ನ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯಗಳನ್ನು ಹೊಂದಿರಬೇಕು ಎಂದು ಜಿ.ಎಚ್.ಕಾಲೇಜ ನಿವೃತ್ತ ಪ್ರಾಚಾರ್ಯರಾದ ಪ್ರೋ.ಎಸ್.ಬಿ.ನಾಡಗೌಡ ತಿಳಿಸಿದರು.ನಗರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಂವಹನ ಕೌಶಲ್ಯಗಳು ಹಾಗೂ ನೆಟ್ ಸೆಟ್ ಪರೀಕ್ಷಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ …

Read More »

ಕ್ರೈಂ ಕಥೆ ಆಧಾರಿತ "ಸಾರ್ವಜನಿಕರಲ್ಲಿ ವಿನಂತಿ" ಚಿತ್ರ ಮಾರ್ಚ್ ಕೊನೆವಾರ ತೆರೆಗೆ….

ಹುಬ್ಬಳ್ಳಿ: ಇತ್ತೀಚಿನ ಸಮಾಜದಲ್ಲಿ ನಡೆಯುತ್ತಿರುವ ಕ್ರೈಂ ಆಧಾರಿತ “ಸಾರ್ವಜನಿಕರಲ್ಲಿ ವಿನಂತಿ” ಚಲನಚಿತ್ರ ಇದೇ ಮಾರ್ಚ್ ಕೊನೆಯ ವಾರ ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೆಶಕ ಕೃಪಾಸಾಗರ್ ಟಿ.ಎನ್‌. ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಕ್ರೈಂ ಎಂಬುವಂತದ್ದು, ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದೆ. ಸರಗಳ್ಳತನ, ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ ಹಲವಾರು ಪ್ರಕರಣಗಳನ್ನು ಬೇದಿಸುವಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವ ಕಥೆ ಆಧಾರಿತ ಚಿತ್ರ ಇದಾಗಿದ್ದು, ಪ್ರಸ್ತುತ ದಿನಮಾನಗಳಲ್ಲಿ ಜನರಲ್ಲಿ …

Read More »

ತಾಯ್ನಾಡಿಗೆ ಮರಳಿದ ರಿಯಲ್ ಹೀರೋ ಅಭಿ; ಅದ್ದೂರಿ ಸ್ವಾಗತ, Z+ ಭದ್ರತೆ

ನವದೆಹಲಿ:ಅಂತಾರಾಷ್ಟ್ರೀಯ ಹಾಗೂ ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸುರಕ್ಷಿತವಾಗಿ ಶುಕ್ರವಾರ ಮಧ್ಯಾಹ್ನ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಕರೆತಂದಿದ್ದು, ಭಾರತೀಯ ಸೇನಾ ವರಿಷ್ಠರಿಗೆ, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು.ಸೇನಾ ಮುಖ್ಯಸ್ಥರಿಗೆ …

Read More »

ವೀರಪುತ್ರ ಅಭಿನಂದನ್‌ ಬರಮಾಡಿಕೊಂಡ ಕ್ರಿಕೆಟಿಗರು

ಹೊಸದಿಲ್ಲಿ: ಪಾಕಿಸ್ತಾನ ಸೆರೆಯಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮಾರ್ಚ್‌ 01 ಶುಕ್ರವಾರದಂದು ತಾಯ್ನಾಡಿಗೆ ಮರಳುತ್ತಿದ್ದಾರೆ.ರಾಜತಾಂತ್ರಿಕವಾಗಿ ತೀವ್ರ ಒತ್ತಡ ಹೇರಿರುವ ಹಿನ್ನಲೆಯಲ್ಲಿ ಕೊನೆಗೂ ಅಭಿನಂದನ್ ಬಿಡುಗಡೆ ಮಾಡಲು ಪಾಕಿಸ್ತಾನ ನಿರ್ಧರಿಸಿದೆ.ಈ ಮೊದಲು ಗಡಿ ನಿಯಂತ್ರಣ ರೇಖೆಯಲ್ಲಿ ತಮ್ಮ ಜೀವವನ್ನೇ ಪಣವಾಗಿಟ್ಟ ಅಭಿನಂದನ್ ಮಿಗ್ 16 ವಿಮಾನ ಮೂಲಕ ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ್ದರು. ಈ ವೇಳೆ ಪ್ಯಾರಾಚೂಟ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದಿದ್ದರು. ತಕ್ಷಣವೇ …

Read More »

ಸೀಟಿಗಾಗಿ ದೋಸ್ತಿ ಕುಸ್ತಿ’ಕೈ ಬಗ್ಗಿಸುತ್ತಾ ‘ತೆನೆ?

ಬೆಂಗಳೂರು: ಲೋಕಸಭಾ ಚುನಾವಣೆಗೆ‌ ದೋಸ್ತಿಗಳ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್​​​​​ಗೆ ಕಾಂಗ್ರೆಸ್ ಶರಣಾಗದಿರಲು ತೀರ್ಮಾನಿಸಿದೆ. ಕಾಂಗ್ರೆಸ್, ಜೆಡಿಎಸ್​​ ಕೇಳಿರುವ 12 ಕ್ಷೇತ್ರಗಳನ್ನ ಬಿಟ್ಟುಕೊಡದಿರಲು ನಿರ್ಧರಿಸಿದೆ. ರಾಜ್ಯದಲ್ಲಿನ 28 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳನ್ನ ಜೆಡಿಎಸ್​​ಗೆ ಬಿಟ್ಟುಕೊಡುವುದು ಬೇಡವೆಂಬ ಅಭಿಪ್ರಾಯದಲ್ಲಿ ಕಾಂಗ್ರೆಸ್ ಮುಖಂಡರು ಇದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಸೀಟು ಹಂಚಿಕೆಯಲ್ಲಿ ಜೆಡಿಎಸ್​​ಗೆ ಶರಣಾಗದಿರಲು ಪಕ್ಷದೊಳಗೆ ಒತ್ತಡ ಹೆಚ್ಚಾಗಿದೆ ಎನ್ನಲಾಗುತ್ತಿದೆ.ನಮ್ಮ ಗುರಿ ಇರುವುದು ಬಿಜೆಪಿಯನ್ನ ಹೆಚ್ಚು ಸೀಟುಗಳ ಅಂತರದಿಂದ ಸೋಲಿಸುವುದು. ಹೀಗಿರುವಾಗ …

Read More »

ಭಾರತದ ಜೊತೆ ನಾವಿದ್ದೇವೆ -ರಷ್ಯಾ ಅಧ್ಯಕ್ಷ ಪುಟಿನ್‌ ಅಭಯ..

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ 40 ಸಿಆರ್​ಪಿಎಫ್​ ಸೈನಿಕರು ಹುತಾತ್ಮರಾಗಿರುವುದಕ್ಕೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ವಿಷಾದ ವ್ಯಕ್ತ ಪಡಿಸಿದ್ದಾರೆ. ಪಾಕಿಸ್ತಾನ ಮೂಲದ ಜೈಷ್ ಎ ಸಂಘಟನೆಯ ಭಯೋತ್ಪಾದಕರ ದಾಳಿಯನ್ನು ಖಂಡಿಸಿ, ನಾವು ಸದಾ ಭಾರತದ ಜನರೊಂದಿಗೆ ಇದ್ದೇವೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ರಷ್ಯಾ ಸದಾ ನಿಲ್ಲುತ್ತದೆ ಎಂದು ಪುಟಿನ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ಗಡಿ ದಾಳಿಯಿಂದ ತನ್ನ ಪ್ರದೇಶವನ್ನು ರಕ್ಷಿಸುವಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ದೃಢವಾದ ಬೆಂಬಲಕ್ಕಾಗಿ ಮೋದಿ, …

Read More »

ಗ್ರಾಹಕರಿಗೆ ಸಿಲಿಂಡರ್ ಶಾಕ್: ಸಬ್ಸಿಡಿ ಸಹಿತ ಎಲ್‌ಪಿಜಿ ದರ 2.08 ರೂ. ಹೆಚ್ಚಳ..

ನವದೆಹಲಿ: ಮೂರು ತಿಂಗಳ ಕಡಿತದ ನಂತರ ಸಿಲಿಂಡರ್ಗಳ ಬೆಲೆ ಏರಿಕೆಯಾಗಿದ್ದು, ಸಬ್ಸಿಡಿ ಹೊಂದಿರುವ ಗೃಹಬಳಕೆಯ ಅಡುಗೆ ಅನಿಲ ದರದಲ್ಲಿ 2.08ರೂ. ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ದರದಲ್ಲಿ 42.50ರೂ. ಏರಿಕೆ ಮಾಡಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಗುರುವಾರ ತಿಳಿಸಿದೆ.ಇಂಧನ ಬೆಲೆ ಏರಿಕೆ ಹಾಗೂ ತೆರಿಗೆ ಕಾರಣದಿಂದಾಗಿ ಸಿಲಿಂಡರ್ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎಲ್‌ಪಿಜಿ ದರ ಹೆಚ್ಚಳದ ಬಳಿಕ ದೆಹಲಿಯಲ್ಲಿ 493.53 ರೂ. …

Read More »

ಕಾಂಗ್ರೆಸ್​ ಆಘಾತ, ದೊಡ್ಡ ಬಂಗಲೆ ಖಾಲಿ ಮಾಡಲು ಹೈಕೋರ್ಟ್​ ಆದೇಶ..

ನವದೆಹಲಿ: ನ್ಯಾಷನಲ್ ಹೆರಾಲ್ಡ್​ ಪ್ರಕರಣದ ವಿಚಾರದಲ್ಲಿ ಕಾಂಗ್ರೆಸ್​ ಮತ್ತೊಂದು ದೊಡ್ಡ ಆಘಾತ ಆಗಿದೆ. ದೆಹಲಿ ಹೈಕೋರ್ಟ್​ನ ಏಕ ಸದಸ್ಯ ಪೀಠದಲ್ಲಿ ನ್ಯಾಷನಲ್ ಹೆರಾಲ್ಡ್​ ಕೇಸ್​ನ ವಿಚಾರಣೆ ನಡೆಯಿತು. ಅಸೋಸಿಯೇಟೆಡ್​​ ಜರ್ನಲ್ಸ್​ ಲಿಮೆಟೆಡ್​​ನ ಹೆರಾಲ್ಡ್​ ಬಿಲ್ಡಿಂಗ್​​ನಿಂದ ಕೂಡಲೇ ಖಾಲಿ ಮಾಡುವಂತೆ ಕೋರ್ಟ್​ ಸೂಚನೆ ನೀಡಿದೆ. ಆದರೆ ಕಟ್ಟಡವನ್ನ ಖಾಲಿ ಮಾಡಲು ಸಮಯವನ್ನ ಕೋರ್ಟ್ ನಿಗದಿ ಮಾಡಿಲ್ಲ. ದ ನ್ಯಾಷನಲ್ ಹೆರಾಲ್ಡ್​ ನ್ಯೂಸ್​ ಪೇಪರ್​​ನ ಎಲ್ಲಾ ಕಾರ್ಯಗಳು ಇದೇ ಕಟ್ಟದಲ್ಲಿ ನಡೆಯುತ್ತಿದ್ದು, The …

Read More »

ಪಂಜಾಬ್, ರಾಜಸ್ತಾನ, ಗುಜರಾತ್ ಗಡಿ ಭಾಗಗಳಲ್ಲಿ ಹೈಅಲರ್ಟ್…

ಕಚ್: ಭಾರತ-ಪಾಕಿಸ್ತಾನ ನಡುವಿನ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ದೇಶದ ಗಡಿ ಭಾಗಗಳಲ್ಲಿ, ಕಡಲ ತೀರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಇದಲ್ಲದೆ, ಪ್ರಮುಖ ಸ್ಥಳಗಳಲ್ಲಿ ಕಣ್ಗಾವಲು ಹೆಚ್ಚಳದಿಂದ ಗಡಿ ಭಾಗಗಳಲ್ಲಿ ಜನರ ಭೇಟಿ ನಿಷೇಧಿಸಲಾಗಿದೆ. ಗಡಿನಾಡಿನ ಎಲ್ಲಾ ನಾಗರಿಕ ಕಾರ್ಯಕ್ರಮಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ ಗಡಿ ಜಿಲ್ಲೆಗಳಲ್ಲಿನ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್, ರಾಜಸ್ತಾನ, ಗುಜರಾತ್ …

Read More »