Breaking News

Shaikh BIG TV NEWS, Hubballi

ಅಭಿನಂದನ್ ದೇಶದ ಹೀರೋ.. ಸುರಕ್ಷಿತವಾಗಿ ತಾಯ್ನಾಡಿಗೆ ಕರೆತನ್ನಿ..

ನವದೆಹಲಿ: ಭಾರತೀಯ ವಾಯುಸೇನೆಯ ಮಿಗ್-21 ಫೈಟರ್ ಜೆಟ್, ಪಾಕಿಸ್ತಾನದ ಫೈಟರ್‌ ಜೆಟ್‌ಗಳ ಮೇಲೆ ಪ್ರತಿದಾಳಿ ನಡೆಸುವಾಗ ಪತನವಾಗಿತ್ತು. ಈ ವೇಳೆ ಮಿಗ್-21 ಫೈಟರ್ ಜೆಟ್‌ನ ಪೈಲಟ್‌, ವಿಂಗ್ ಕಮಾಂಡರ್ ಅಭಿನಂದನ್‌ ವರ್ಧಮಾನ್ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ. ಇದೀಗ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಕರೆತರುವಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಒಕ್ಕೊರಲ ಅಭಿಯಾನ ಆರಂಭಿಸಿದ್ದಾರೆ. ‘ಅಭಿನಂದನ್’, ‘ಬ್ರಿಂಗ್ ಬ್ಯಾಕ್ ಅಭಿನಂದನ್’, ‘ಅಭಿನಂದನ್ ಮೈ ಹೀರೋ’ ಅಂತಾ ಹ್ಯಾಷ್ ಟ್ಯಾಗ್ ಬಳಕೆ …

Read More »

ಭಾರತಕ್ಕೆ ಮಾತುಕತೆಯ ಆಹ್ವಾನವಿತ್ತ ಪಾಕ್ ಪ್ರಧಾನಿ ಇಮ್ರಾನ್ ಖಾನ್..

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ LoC ನಲ್ಲಿ ಸೇನಾ ಕಾರ್ಯಾಚರಣೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ ಪಾಕಿಸ್ತಾನಕ್ಕೆ ಭಾರತ ಕೂಡ ತಕ್ಕ ಪ್ರತಿಕ್ರಿಯೆ ನೀಡಿತ್ತು .ಇದಾದ ಬೆನ್ನಲ್ಲೇ ಈಗ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಭಯೋತ್ಪಾಧನೆ ಬಗ್ಗೆ ಪ್ರಸ್ತಾವಿಸದೆ ಮಾತುಕತೆಗೆ ಕರೆ ನೀಡಿದ್ದಾರೆ.ಭಾರತವು ಪಾಕ್ ಆಕ್ರಮಿತ ಪ್ರದೇಶಗಳಾದ ಮುಜಾಫರ್ ಬಾದ್ ಹಾಗೂ ಬಾಲಾಕೋಟ್ ನಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುಸೇನೆಯಿಂದ ದಾಳಿ ನಡೆಸಿತ್ತು.ಇದಾದ ಬೆನ್ನಲ್ಲೇ ಪಾಕ್ ಕೂಡ …

Read More »

ಶಾಂತಿ ಬೇಕೆಂದರೆ ನಮ್ಮ ಜೊತೆ ಮಾತುಕತೆ ನಡೆಸಿ ಹೊರತು ಯುದ್ಧವನ್ನಲ್ಲ-ಪಾಕ್ ನಿಂದ ಹೊಸ ರಾಗ..

ನವದೆಹಲಿ: ಭಾರತದ ದಾಳಿಗೆ ಬೆದರಿರುವ ಪಾಕ್ ಶಾಂತಿಯೊಂದೇ ಪರಿಹಾರ ಹೊರತು ಯುದ್ಧವಲ್ಲ ಎಂದು ಹೇಳಿದೆ.ಪಾಕಿಸ್ತಾನದ ಮಿಲಟರಿ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಈಗ ಭಾರತ ಸರ್ಕಾರಕ್ಕೆ ಮಾತುಕತೆ ನಡೆಸಲು ಕರೆ ನೀಡಿದ್ದಾರೆ. ‘ನಿಮಗೆ ಶಾಂತಿ ಬೇಕೆಂದರೆ ನಮ್ಮ ಜೊತೆ ಮಾತುಕತೆ ನಡೆಸಿ ಯಾವ ಸಮಸ್ಯೆಗಳನ್ನು ಸಹಿತ ಯುದ್ಧದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಭಾರತ ಶಾಂತ ಮನಸ್ಸಿನಿಂದ ಈ ಆಫರ್ ನ್ನು ಸ್ವೀಕರಿಸಬೇಕು’ ಎಂದು ಹೇಳಿದ್ದಾರೆ.ಪಾಕಿಸ್ತಾನಕ್ಕೆ ಯುದ್ದ ಬೇಕಾಗಿಲ್ಲ …

Read More »

ಕ್ಲಾಸ್ ಮೇಟ್ ಮೇಲೆ 10ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ

ಪುಣೆ: ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೊಥ್ರುಡ್ ಪೋಲಿಸ್ ಠಾಣೆಯಲ್ಲಿ ದೂರು ಸೋಮವಾರ ದೂರು ದಾಖಲಾಗಿದೆ.ಶನಿವಾರ ಸಂಜೆ ಸುಮಾರು 6.45ರ ಸಮಯದಲ್ಲಿ ಟ್ಯೂಶನ್’ಗೆ ಹೋಗುತ್ತಿದ್ದ ಹುಡುಗಿಯನ್ನು ನಿಲ್ಲಿಸಿ, ಆಕೆಯೊಂದಿಗೆ ಏನೋ ಮಾತನಾಡಬೇಕೆಂದು ಹೇಳಿ, ಬ್ಯಾಗ್ ಕಿತ್ತುಕೊಂಡು, ಕೈಹಿಡಿದು ಬಲವಂತವಾಗಿ ಎಳೆದೊಯ್ದಿದ್ದಾನೆ. ಬಳಿಕ ಹತ್ತಿರದ ಕಟ್ಟಡದ ಟೆರೇಸ್ ಮೇಲೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಹುಡುಗಿ ತನ್ನ ತಾಯಿಗೆ ವಿವರಿಸಿದ್ದಾಳೆ. …

Read More »

ಜಮ್ಮು-ಕಾಶ್ಮೀರ: ಪ್ರತ್ಯೇಕವಾದಿಗಳ ಮನೆ ಮೇಲೆ ಎನ್‌ಐಎ ದಾಳಿ!

ಶ್ರೀನಗರ: ಮಂಗಳವಾರ ಮುಂಜಾನೆ ಭಾರತೀಯ ವಾಯುಸೇನೆ ಪಿಒಕೆಯಲ್ಲಿ ದಾಳಿ ನಡೆಸಿ ಉಗ್ರರ ನೆಲೆಯನ್ನು ನಿರ್ನಾಮ ಮಾಡಿದರೆ, ಇತ್ತ ಮಂಗಳವಾರ ಬೆಳಗಿನ ಜಾವ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ತನಿಖಾ ದಳ ಶ್ರೀನಗರದಲ್ಲಿ 7 ಕಡೆ ದಾಳಿ ನಡೆಸಿದ್ದರು. ಪ್ರತ್ಯೇಕತಾವಾದಿಗಳ ಮನೆ ಮತ್ತು ಕಚೇರಿಗಳ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಉಗ್ರರಿಗೆ ನೆರವಾಗುತ್ತಿದ್ದಾರೆ ಎಂದು ಆರೋಪಿಸಲಾಗಿದ್ದ ಪ್ರತ್ಯೇಕತಾವಾದಿಗಳಾದ ಯಾಸಿನ್​ ಮಲಿಕ್​, ಶಬೀರ್ ಶಾ, ಮಿರ್ವೈಜ್ ಉಮರ್ ಫಾರೂಕ್, ಮೊಹಮದ್​ …

Read More »

ಉಗ್ರರ ವಿರುದ್ಧ ಭಾರತೀಯ ಸೇನೆಯ ಕ್ಷಿಪ್ರ ಕಾರ್ಯಚರಣೆ: 200-300 ಉಗ್ರರ ಖಲಾಸ್

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತ ಮಂಗಳವಾರ ಪಾಕಿಸ್ತಾನ ಉಗ್ರರ ವಿರುದ್ಧ ಪ್ರತೀಕಾರ ತೆಗೆದುಕೊಂಡಿದೆ. ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 21 ನಿಮಿಷಗಳ ಕಾಲ ಯಶಸ್ವಿ ಕಾರ್ಯಚರಣೆ ನಡೆಸಿದ ಭಾರತೀಯ ವಾಯುಪಡೆ 200-300 ಉಗ್ರರನ್ನು ಖಲಾಸ್ ಮಾಡಿದೆ.ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ‘ಏರ್ ಸ್ಟ್ರೈಕ್’ ನಡೆಸುವ ಮೂಲಕ ಬಾಂಬ್‌ಗಳ ಸುರಿಮಳೆಗರೆದ ಭಾರತೀಯ ಸೇನೆ, ಜೈಶ್-ಎ-ಮೊಹಮ್ಮದ್ …

Read More »

ಬಂಡೀಪುರದ 11 ಸಾವಿರ ಎಕರೆ ಅರಣ್ಯ ದಹಿಸಿದ್ದು ಆನೆ ಲದ್ದಿ..?

ಚಾಮರಾಜನಗರ: ಬಂಡೀಪುರ ಅಗ್ನಿದುರಂತದಿಂದ ಸಹಜವಾಗೇ ಜನರು ಬೆಚ್ಚಿಬಿದ್ದಿದ್ದಾರೆ. ಅರಣ್ಯದಲ್ಲಿದ್ದ ಪ್ರಾಣಿಗಳು ಬದುಕಿದ್ರೆ ಸಾಕು ಅಂತಾ ಎತ್ತೆಂದರತ್ತ ದಿಕ್ಕೆಟ್ಟು ಓಡಾಡ್ತಿವೆ. ಈ ಮಧ್ಯೆ ಕಾಡ್ಗಿಚ್ಚಿಗೆ ಕಾರಣವೇನು ಅಂತಾ ಜನರ ಮನಸಲ್ಲಿ ಪ್ರಶ್ನೆ ಮಾಡಿದೆ. ಮೂಲಗಳ ಪ್ರಕಾರ, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಹಲವು ವಿಚಾರಗಳ ಕುರಿತು ಸಂಘರ್ಷ ನಡೆಯುತ್ತಿದೆ. ಒಣಗಿದ ಆನೆಯ ಲದ್ದಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂಬ ಶಂಕೆಗಳು ವ್ಯಕ್ತವಾಗುತ್ತಿವೆ. ಒಣಗಿದ ಆನೆಯ ಲದ್ದಿಗೆ ಬೆಂಕಿ ಕೊಟ್ಟರೇ …

Read More »

ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನೆ: ಉಪಮುಖ್ಯಮಂತ್ರಿ

ಬೆಂಗಳೂರು: ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿರುವುದು ಸ್ವಾಗತಾರ್ಹ. ಈ ಮೂಲಕ ಎಚ್ಚರಿಕೆ ಸಂದೇಶವನ್ನು ಪಾಕಿಸ್ತಾನ ಹಾಗೂ ಉಗ್ರರಿಗೆ ರವಾನಿಸಿದಂತಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.ಸದಾಶಿವನಗರ ಕ್ವಾಟ್ರಸ್‌ನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಪರಮೇಶ್ವರ್, ಭಯೋತ್ಪಾದಕರ ದಾಳಿಯಿಂದ ನಮ್ಮ‌ 40 ಯೋಧರನ್ನು ಕಳೆದುಕೊಂಡಿದ್ದೆವು. ಅದಕ್ಕೆ ಪ್ರತಿಕಾರವಾಗಿ ಕೇಂದ್ರ ಸರ್ಕಾರ ಅತ್ಯಂತ ಸೂಕ್ತ ದಾಳಿ ಮಾಡಿದೆ ಎಂದರು.ಮುಂದುವರೆದು ಮಾತನಾಡಿದ ಅವರು, ಈ ರೂಪದಲ್ಲಿ ಉಗ್ರರಿಗೆ ಪಾಕಿಸ್ತಾನಕ್ಕೆ ಎಚ್ಚರಿಕೆಯ …

Read More »

ಪೊಲೀಸ್ ಇಲಾಖೆ ಮೂಲಸೌಕರ್ಯಕ್ಕೆ ಆದ್ಯತೆ: ಸಿಎಂ ಹೆಚ್.ಡಿ. ಕುಮಾರಸ್ವಾಮಿ…

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯು ದೇಶದಲ್ಲೇ ಅತ್ಯುತ್ತಮ ವ್ಯವಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಬದಲಾದ ಸನ್ನಿವೇಶಗಳಲ್ಲಿ ಪೊಲೀಸ್ ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.ಸೋಮವಾರ ಪೊಲೀಸ್ ಮುಖ್ಯ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಒದಗಿಸಲು ಸಹ ಸರ್ಕಾರ …

Read More »

ಚರ್ಚೆ ಮಾಡಿ ಆದಷ್ಟು ಬೇಗ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಮಾಡುತ್ತೇವೆ: ಪರಮೇಶ್ವರ

ಬೆಂಗಳೂರು: ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಭೆ ನಡೆಸುತ್ತೇವೆ. ಜೆಡಿಎಸ್ ನಾಯಕರ ಜೊತೆ ಇಂದು ಸಭೆ ನಡೆಸುತ್ತೇವೆ. ಇದು ಆರಂಭಿಕ ಹಂತದ ಸಭೆ ಅಷ್ಟೇ ಎಂದಿದ್ದಾರೆ.ಸಭೆಗೆ‌ ನಾನು ಹಾಗೂ ದಿನೇಶ್ ಗುಂಡೂರಾವ್ ಹೋಗುತ್ತಿದ್ದೇವೆ. ಇದುವರೆಗೂ ಇಷ್ಟೇ ಸೀಟು ಬೇಕೆಂದು ಜೆಡಿಎಸ್ ನಾಯಕರು ಕೇಳಿಲ್ಲ. ಹಾಗೇ ಎಲ್ಲರೂ ಒಂದೊಂದು ಮಾತು ಹೇಳುತ್ತಿದ್ದಾರೆ.‌ಇವತ್ತಿನ ಸಭೆಯೇ ಅಂತಿಮ ಅಲ್ಲ. ಚರ್ಚೆ ಮಾಡಿ …

Read More »