Breaking News

Shaikh BIG TV NEWS, Hubballi

ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಭರ್ಜರಿ ಸಿದ್ಧತೆ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಫೆಬ್ರವರಿ 10ರಂದು ಅಂದ್ರೆ ನಾಳೆ ಪ್ರಧಾನಿ ನರೇಂದ್ರ ಮೋದಿಯವರು ನಗರಕ್ಕೆ ಆಗಮಿಸಲಿದ್ದಾರೆ. ನಾಳೆ ಸಂಜೆ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ ಗಬ್ಬೂರು ಬಳಿಯ ಕೆಎಲ್‌ಇ ಮೈದಾನದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕುಳಿತುಕೊಳ್ಳಲು ಪ್ರಧಾನ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಪ್ರಧಾನ ವೇದಿಕೆಯ ಪಕ್ಕದಲ್ಲಿ …

Read More »

ನಾಳೆ ಶ್ರೀ ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ರಜತ ಮಹೋತ್ಸವ

ಹುಬ್ಬಳ್ಳಿ: ಶ್ರೀ ವಿಘ್ನೇಶ್ವರ ವಿದ್ಯಾವರ್ಧಕ ಸಂಘದ 25 ನೇ ವರ್ಷದ ರಜತಮಹೋತ್ಸವ ಸಂಭ್ರಮ ಕಾರ್ಯಕ್ರಮವನ್ನು ನಾಳೆ ಸಂಜೆ 4 ಗಂಟೆಗೆ ವಿದ್ಯಾನಗರದ ಶ್ರೀ ವಿಘ್ನೇಶ್ವರ ಪೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ಎನ್.ಎನ್.ಕಡಬಿಗೇರಿ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾಣೇಹಳ್ಳಿಯ ತರಳಬಾಳು ಜಗದ್ಗುರು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಡಾ. ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರು …

Read More »

12 ರಂದು ಬೆಂಗಳೂರು ಚಲೋ ಧರಣಿ ಸತ್ಯಾಗ್ರಹ

ಹುಬ್ಬಳ್ಳಿ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಧಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘಗಳು ಜಂಟಿಯಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಕೂಡಲೇ ಪ್ರಾರಂಭಿಸಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇದೇ 1 2ರಂದು ಬೆಂಗಳೂರು ಚಲೋ ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸರ್ಜನ ಅವರು ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ …

Read More »

ಪ್ರತಿಭಟನೆ ವೇಳೆ ಕಾಂಗ್ರೇಸ್ ಕಾರ್ಯಕರ್ತರ ಬಂಧನ

ಹುಬ್ಬಳ್ಳಿ: ಬಿಜೆಪಿಯ ಆಪರೇಷನ್ ಕಮಲ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ 50 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.ಆಪರೇಷನ್ ಕಮಲ ಖಂಡಿಸಿ ಕಾಂಗ್ರೆಸ್ ಕಾರ್ಯಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.ನಗರದ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ಕಾರ್ಯಕರ್ತರು ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಯಡಿಯೂರಪ್ಪ ಪ್ರತಿಕೃತಿ ದಹನ ರಸ್ತೆ ತಡೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು …

Read More »

ನಿಮ್ಮ ಪ್ರೇಮಿಗಿಂದು ಚಾಕೊಲೇಟ್ ಕೊಡೋದು ಮರೆಯಬೇಡಿ

ಪ್ರೇಮಿಗಳಿಗೆ ಫೆಬ್ರವರಿ ತಿಂಗಳೆಂದರೆ ಹಬ್ಬವೇ ಸರಿ. ಅದ್ರಲ್ಲೂ ಫೆಬ್ರವರಿ 14 ನೇ ತಾರೀಖು ಬಂದ್ರೆ ಪ್ರೇಮ ಪಕ್ಷಿಗಳು ಸಂತೋಷದಿಂದ ಬಾನೆತ್ತರಕ್ಕೆ ಹಾರುತ್ತಾರೆ. ವ್ಯಾಲೆಂಟೈನ್ಸ್​ ಡೇಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಫೆಬ್ರವರಿ 7 ರಿಂದ ವ್ಯಾಲೆಂಟೈನ್ಸ್​ ವೀಕ್ ಪ್ರಾರಂಭವಾಗಿದೆ. ಪ್ರೇಮಿಗಳು ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಈ ವಾರವನ್ನು ಆಚರಿಸಿಕೊಳ್ಳುವುದು ಇದರ ವಿಶೇಷತೆ. ಪ್ರೇಮಿಗಳ ವಾರದ ಮೊದಲ ದಿನದಿಂದಲೇ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾ ಫೆ.14 ರ ವೇಳೆಗೆ ತನ್ನ ಸಂಗಾತಿಯ …

Read More »

ಮದುವೆಯಾಗಿ ಮೂರೇ ನಿಮಿಷಕ್ಕೆ ಗಂಡನಿಗೆ ಡಿವೋರ್ಸ್ ಕೊಟ್ಟಳು ಪತ್ನಿ….

ಕುವೈತ್​: ಮದುವೆಯಾಗಿ ಒಂದೇ ವರ್ಷಕ್ಕೆ ಅಥವಾ ಒಂದೇ ತಿಂಗಳಿಗೆ ಗಂಡ ಹೆಂಡತಿ ಡಿವೋರ್ಸ್​​ ಕೇಳಿರೋ ಪ್ರಕರಣಗಳ ಬಗ್ಗೆ ಕೇಳಿರ್ತೀರ. ಆದ್ರೆ ಇಲ್ಲೊಂದು ಜೋಡಿ ಮದುವೆಯಾದ ಮೂರೇ ನಿಮಿಷಕ್ಕೆ ಡಿವೋರ್ಸ್​ ಪಡೆದಿದೆ ಎಂದರೆ ನೀವು ನಂಬಲೇಬೇಕು. ಹೌದು. ಕುವೈತ್​​ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ದಂಪತಿ ಮದುವೆಯಾಗಿ ಕೇವಲ ಮೂರೇ ನಿಮಿಷದಲ್ಲಿ ವಿಚ್ಛೇದನ ಪಡೆದಿದ್ದಾರೆ. ಮದುವೆಯಾಗಿ ಅತ್ಯಂತ ಕಡಿಮೆ ಸಮಯದಲ್ಲೇ ದಾಂಪತ್ಯ ಜೀವನ ಮುರಿದುಬಿದ್ದಿರೋದು ಕುವೈತ್​​ನ ಇತಿಹಾಸದಲ್ಲೇ ಇದೇ ಮೊದಲು ಎಂದು ಹೇಳಲಾಗ್ತಿದೆ. …

Read More »

ಮೌನ ವ್ರತ ಕೈಗೊಳ್ತಾರಂತೆ ಅಣ್ಣಾ ಹಜಾರೆ. ಜ.30ರಿಂದ

ಮುಂಬೈ: ಸ್ವಾಮಿನಾಥನ್​ ವರದಿ ಜಾರಿಗೆ ತರೋದಾಗಿ ಕೇಂದ್ರ ಕೃಷಿ ಇಲಾಖೆ ನನಗೆ ಲಿಖಿತವಾಗಿ ಭರವಸೆ ನೀಡದಿದ್ದಲ್ಲಿ ಮೌನ ವ್ರತ ಮಾಡೋದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ ಎಚ್ಚರಿಸಿದ್ದಾರೆ. ಲೋಕ್​ಪಾಲ್​ ಮತ್ತು ಸ್ವಾಮಿನಾಥನ್​ ವರದಿ ಜಾರಿಗೆ ತರಬೇಕೆಂದು ಆಗ್ರಹಿಸಿ ಅಣ್ಣ ಹಜಾರೆ ಜ.30ರಿಂದ ಫೆ.5 ರ ತನಕ ಉಪವಾಸ ಸತ್ಯಾಗ್ರಹ ಮಾಡಿದ್ರು. ಇನ್ನು ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರ ಹಜಾರೆ ಬೇಡಿಕೆ ಪೂರೈಸುವುದಾಗಿ ಭರವಸೆ ನೀಡಿತ್ತು. ಆದ್ರೆ ಈವರೆಗೆ ಕೇಂದ್ರ …

Read More »

ಸಿಎಂ ಕುಮಾರಸ್ವಾಮಿಯಿಂದ ಬಜೆಟ್‌ ಮಂಡನೆ.

ಬೆಂಗಳೂರು: ಸಿಎಂ ಕುಮಾರಸ್ವಾಮಿ ಮಂಡಿಸಲಿರುವ ಮೈತ್ರಿ ಸರ್ಕಾರದ ಎರಡನೇ ಬಜೆಟ್​ಗೆ ಕೌಂಟ್​ಡೌನ್ ಶುರುವಾಗಿದೆ. ಕಣ್ಣೆದುರಲ್ಲೇ ಲೋಕಸಭಾ ಚುನಾವಣೆಯಿರೋದ್ರಿಂದ ಜನಪರ ಹಾಗೂ ರೈತಪರ ಬಜೆಟ್ ನಿರೀಕ್ಷೆಯಂತೂ ಇದೆ. ರಾಹುಕಾಲ ಮುಕ್ತಾಯದ ಬಳಿಕ ಮಧ್ಯಾಹ್ನ 12.30ಕ್ಕೆ ಆಯವ್ಯಯ ಮಂಡಿಸಲಿದ್ದಾರೆ.ಬಜೆಟ್​ ಮೇಲಿನ ನಿರೀಕ್ಷೆಗಳೇನು..?ಬಜೆಟ್​ನಲ್ಲಿ ರೈತರಿಗೆ ಬಂಪರ್ ಆಫರ್ ನೀಡುವ ಸಾಧ್ಯತೆ ದಟ್ಟವಾಗಿದೆ. ಕಳೆದ ಬಜೆಟ್​​ನಲ್ಲಿ ಘೋಷಣೆಯಾಗಿರುವ ಸಾಲಮನ್ನಾ ಯೋಜನೆಗೆ ಹೆಚ್ಚಿನ ಹಣ ನಿಗದಿಪಡಿಸುವ ನಿರೀಕ್ಷೆಯಿದೆ. ಜೊತೆಗೆ ಬೆಂಬಲ ಬೆಲೆ, ಮಾರುಕಟ್ಟೆ ಖಾತರಿ ಯೋಜನೆ, ವಾಣಿಜ್ಯ, …

Read More »

ಅತ್ಯಾಚಾರ ಆರೋಪಿಗಳ ಬಂಧನ

ಹುಬ್ಬಳ್ಳಿ: ಯುವತಿಯನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಪ್ರಕರಣ ಆರೋಪಿಗಳನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗೋಕುಲ್ ರಸ್ತೆಯ ಯಲ್ಲಪ್ಪ ಆಶೋಕ ಮೆಹರವಾಡೆ(23) ಮತ್ತು ಆನಂದ ನಗರದ 17 ವರ್ಷದ ಬಾಲಕ ಬಂಧಿತರು.‌ಫೆ. 2 ರಂದು ರಾತ್ರಿ ವೇಳೆ ಮನೆ ಕಡೆ ಹೋಗುತ್ತುದ್ದಸುಮಾರು 20 ವರ್ಷದ ಯುವತಿಯೊಬ್ಬಳನ್ನು ಇವರು ಆಟೋದಲ್ಲಿ ಹಿಂಬಾಲಿಸಿ ಮನೆಗೆ ಬಿಡುವದಾಗಿ ಒತ್ತಾಯಪೂರ್ಕವಾಗಿ ಆಟೋದಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು. …

Read More »

ರಾಜಕೀಯ ಪಕ್ಷಗಳು ಇನ್ಮುಂದೆ ವಾಟ್ಸಪ್ ನ್ನು ದುರ್ಬಳಕೆ ಮಾಡುವಂತಿಲ್ಲ !

ನವದೆಹಲಿ: ಜನಪ್ರಿಯ ಮೆಸೆಂಜರ್ ವಾಟ್ಸಪ್ ನ್ನು ರಾಜಕೀಯ ಪಕ್ಷಗಳು ಇನ್ಮುಂದೆ ದುರುಪಯೋಗಪಡಿಸಿಕೊಳ್ಳುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದೆ.ಒಂದು ವೇಳೆ ಈ ದುರ್ಬಳಕೆ ಮಾಡಿಕೊಂಡಿದ್ದೆ, ಆದಲ್ಲಿ ಅಂತಹ ಖಾತೆಗಳನ್ನು ನಿಷೇಧ ಮಾಡುವ ಚಿಂತನೆಯನ್ನು ವಾಟ್ಸಪ್ ನಡೆಸಿದೆ.ಈಗ ವಾಟ್ಸಪ್ ಕಮುನಿಕೆಶನ್ ಹೆಡ್ ಕಾರ್ಲ್ ವೂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ನಾವು ಈಗಾಗಲೇ ಹಲವು ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ವಾಟ್ಸಪ್ ನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ನೋಡಿದ್ದೇವೆ ಒಂದು ಇದು ಮುಂದು ವರೆದಲ್ಲಿ ನಾವು ಅಂತಹ …

Read More »