Breaking News

Shaikh BIG TV NEWS, Hubballi

ಮೆಟ್ರೋ ರೈಲಿನಡಿ ಜಿಗಿದರೂ ಯುವಕ ಪಾರಾಗಿದ್ದು ಹೇಗೆ…?

ಬೆಂಗಳೂರು, ಜನವರಿ 11: ಮೊಬೈಲ್ ಬಳಕೆ ಕಡಿಮೆ ಮಾಡು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮೆಟ್ರೋ ಹಳಿಗೆ ಜಿಗಿದು ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದ ಯುವಕ ವೇಣುಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಬಸವನಗುಡಿ ನಿವಾಸಿ ವೇಣುಗೋಪಾಲ್(25) ಆತ್ಮಹತ್ಯೆಗೆ ಯತ್ನಿಸಿದ ಯುವಕ, ಆತ ವೃತ್ತಿಯಲ್ಲಿ ಟೈಲರ್ ಡಿಕೆ ಟೈಲರ್ ಶಾಪ್ ನಡೆಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಹಾಗಾದರೆ ಆತ ಬದುಕುಳಿದಿದ್ದು ಹೇಗೆ ಎನ್ನುವುದನ್ನು ನೋಡುವುದಾದರೆ, ಒಂದು ಆತ ಹೈವೋಲ್ಟೇಜ್ …

Read More »

ಮಹಿಳೆಯರ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ವಾಗ್ದಾಳಿ; ಬೆಂಬಲಕ್ಕೆ ನಿಂತ ಪ್ರಕಾಶ್ ರೈ

“ರಾಹುಲ್ ಗಾಂಧಿ ಅವರು ಮಹಿಳೆಯರಿಗೆ ವಿರುದ್ಧ ಅಲ್ಲ. ಅತಿ ಮುಖ್ಯವಾಗಿ ಹುದ್ದೆಗೆ ತೃತೀಯಲಿಂಗಿಯೊಬ್ಬರನ್ನು ಅವರು ನೇಮಿಸಿದ್ದಾರೆ. ಏಕೆ ಅವರ ಹೇಳಿಕೆಯನ್ನು ಒಂದೇ ದಾರಿಯಲ್ಲಿ ನೋಡ್ತೀರಿ? ಪ್ರಧಾನಿ ಮೋದಿ ಅವರು ಉತ್ತರ (ರಫೇಲ್ ಪ್ರಶ್ನೆಗಳಿಗೆ) ಹೇಳಿಲ್ಲ ಹಾಗೂ ಸಂಸತ್ ನಲ್ಲಿ ಇಲ್ಲ ಅನ್ನೋದು ನಿಜವಲ್ಲವಾ?” ಎಂದು ನಟ ಪ್ರಕಾಶ್ ರೈ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರದ ಟೀಕಾಕಾರರಾದ ಪ್ರಕಾಶ್ ರೈ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ …

Read More »

ಹೆಮ್ಮೆಯ ಹಂಪಿಗೆ ಮತ್ತೊಂದು ವಿಶ್ವ ಮಾನ್ಯತೆ….

ಯುನೆಸ್ಕೋದ ಜಾಗತಿಕ ಪಾರಂಪರಿಕ ಪಟ್ಟಿಯಲ್ಲಿರುವ ಹಂಪಿ, ಇದೀಗ ಅಮೆರಿಕಾದ ‘ನ್ಯೂಯಾರ್ಕ್​ ಟೈಮ್ಸ್​’ ಪತ್ರಿಕೆ ಪಟ್ಟಿ ಮಾಡಿದ್ದ 52 ಪ್ರವಾಸಿ ತಾಣಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ವಿಶೇಷವೆಂದರೆ ಭಾರತದ ಒಂದೇ ಒಂದು ಪ್ರವಾಸ ತಾಣ ಮಾತ್ರ ಈ ವರ್ಷದ ಲಿಸ್ಟ್​ನಲ್ಲಿತ್ತು. 16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವಾಗಿದ್ದ ಹಂಪಿ ತನ್ನ ಶಿಲ್ಪಕಲೆಯ ಮೂಲಕ ಮೈನ್​ ಟೂರಿಸ್ಟ್​ ಸ್ಪಾಟ್​ ಆಗಿತ್ತು. ಹಾಗಾಗಿ ಹಂಪಿ ಎರಡನೇ ಸ್ಥಾನವನ್ನ ಪಡೆದಿದೆ. ಮೊದಲನೇ ಸ್ಥಾನವನ್ನ ಕೆರೆಬಿಯನ್ ದ್ವೀಪವಾದ …

Read More »

ಮಗಳ ಖಾಯಿಲೆಗೆ ಹಣ ಹೊಂದಿಸಲಾಗದೇ ವಿಷವನ್ನು ಹಾಕಿದ ತಂದೆ…

ಉತ್ತರ ಕನ್ನಡ: ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲದೇ ಹೆತ್ತ ತಂದೆಯೇ ಮಗಳಿಗೆ ವಿಷ ಉಣಿಸಿ ಸಾಯಿಸಿದ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಕುಂಬ್ರಿಯಲ್ಲಿ ನಡೆದಿದೆ. ನಾಗರಾಜ್ ಪೂಜಾರಿ (44) ಮಗಳಿಗೆ ವಿಷ ನೀಡಿರುವ ಆರೋಪಿ. ಈ ಆರೋಪಿಗೆ 11 ವರ್ಷದ ನಯನಾ ಅನ್ನೋ ಮಗಳಿದ್ದಳು. ಈ ಬಾಲಕಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಳು. ಮಗಳನ್ನು ಗುಣಪಡಿಸಲು ಅದೆಷ್ಟೋ ಆಸ್ಪತ್ರೆಗೆ ತಿರುಗಿ …

Read More »

ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್​ ವರ್ಮಾ ವಜಾ

ನವದೆಹಲಿ: ಸಿಬಿಐ ಮುಖ್ಯಸ್ಥ ಸ್ಥಾನದಿಂದ ಅಲೋಕ್​ ವರ್ಮಾ ಅವರನ್ನ ತೆಗೆದುಹಾಕಲಾಗಿದೆ. ಇಂದು ನಡೆದ ಉನ್ನತಾಧಿಕಾರ ಸಮಿತಿ (ಸೆಲೆಕ್ಟ್​ ಸಮಿತಿ) ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು, ಸುಪ್ರೀಂಕೋರ್ಟ್​ ಚೀಫ್​ ಜಸ್ಟೀಸ್ ರಂಜನ್​​ ಗೊಗೋಯ್ ಅವರ ಅನುಪಸ್ಥಿತಿಯಲ್ಲಿ ಜಸ್ಟೀಸ್ ಎ ಕೆ ಸಿಕ್ರಿ​, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಲೋಕಸಭೆಯಲ್ಲಿ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನೊಳಗೊಂಡ ಸಮಿತಿ ಇದಾಗಿದ್ದು, ಸಿಬಿಐ ಸಂಬಂಧಿತ ಮುಖ್ಯ ನಿರ್ಧಾರಗಳನ್ನು ಇಲ್ಲಿ ತೆಗೆದುಕೊಳ್ಳಲಾಗುತ್ತದೆ.ಅಲೋಕ್​ ವರ್ಮಾ ಸಿಬಿಐ …

Read More »

ಸೀತಾರಾಮ ಕಲ್ಯಾಣ' ಬಿಡುಗಡೆಗೆ ದಿನಾಂಕ ನಿಗದಿ ಆಯ್ತು.!

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಎರಡನೇ ಚಿತ್ರ ‘ಸೀತಾರಾಮ ಕಲ್ಯಾಣ’ ಬಿಡುಗಡೆಗೆ ಸಿದ್ಧವಾಗಿದೆ. ಜನವರಿ 25 ರಂದು ರಾಜ್ಯಾದ್ಯಂತ ‘ಸೀತಾರಾಮ ಕಲ್ಯಾಣ’ ರಿಲೀಸ್ ಆಗಲಿದೆ. ಎ.ಹರ್ಷ ನಿರ್ದೇಶನದ ‘ಸೀತಾರಾಮ ಕಲ್ಯಾಣ’ ಚಿತ್ರದ ವಿತರಣೆ ಹಕ್ಕುಗಳು ಜಯಣ್ಣ ಕಂಬೈನ್ಸ್ ಪಾಲಾಗಿದ್ದು, ಜನವರಿ 25 ರಂದು ಚಿತ್ರವನ್ನು ಅದ್ಧೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್, ರಚಿತಾ ನಿಖಿಲ್ ಕುಮಾರ್ ಮತ್ತು …

Read More »

ಕೆರೆ ಮಣ್ಣು ಮಾಫಿಯಾ ಗ್ಯಾಂಗ್​ ವಿರುದ್ಧ ಕಾಶೆಂಪೂರ್ ಗರಂ​​… ಈ ನಾಡು ವರದಿಗೆ ಸಚಿವರ ಸ್ಪಂದನೆ

ಬೀದರ್​: ಜಿಲ್ಲೆಯ ವಿವಿಧ ಕೆರೆಗಳಿಂದ ಫಲವತ್ತಾದ ಮಣ್ಣು ಮಾರಾಟ ಮಾಡುವ ಗ್ಯಾಂಗ್​ವೊಂದರ ಬಣ್ಣ ಬಯಲು ಮಾಡಿದ್ದ ‘ಈನಾಡು ಇಂಡಿಯಾ’ ವರದಿಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸ್ಪಂದಿಸಿದ್ದು, ರಾಜ್ಯದ ಮಣ್ಣು ಮಾರಾಟ ದಂಧೆ ನಡೆದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬರಗಾಲದಿಂದ ತತ್ತರಿಸಿ ಹೊಗಿರುವ ಜಿಲ್ಲೆಯಲ್ಲಿ ಬರ ಪರಿಹಾರ ಕಾರ್ಯ ಜೋರಾಗಿ ನಡೆಯುತ್ತಿದ್ದು ಕೆರೆಗಳ ಹೊಳೆತ್ತುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡ ಕೆಲ ಮಹಾರಾಷ್ಟ್ರ ಮೂಲದವರು ಜಿಲ್ಲೆಯ …

Read More »

ಬಂಡೀಪುರ ಕಾಡಿಗೆ ಬೆಂಕಿ.. ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಚಾಮರಾಜನಗರ: ಬೆಂಕಿ ಜ್ವಾಲೆಯಿಂದ ಕ್ಷಣಾರ್ಧದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಪಾರಾದ ಘಟನೆ ನಡೆದಿದೆ. ಅಭಯಾರಣ್ಯದ ಸೂಕ್ಷ್ಮ ವಲಯದಲ್ಲಿ ಬರುವ ಮೇಲುಕಾಮನಹಳ್ಳಿ, ಕಾರೇಮಾಳ, ಮಗುವಿನಹಳ್ಳಿ ಕಾಲೋನಿಯ ಗುಡ್ಡಗಳಲ್ಲಿ ಬೆಂಕಿ ಕಾಣಿಸಿಕೊಂಡು 25 ಕ್ಕೂ ಹೆಚ್ಚಿನ ಎಕರೆ ಪ್ರದೇಶದ ಕಾಡು ಸುಟ್ಟು ಭಸ್ಮವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.ಮೇಲುಕಾಮನಹಳ್ಳಿ ಬಳಿ ಖಾಸಗಿ ಜಮೀನಿನಲ್ಲಿ ಹಾಕಿದ್ದ ಬೆಂಕಿಯು ಗಾಳಿಯಿಂದ ಹರಡಿ ಸುಮಾರು ಒಂದು …

Read More »

ನನ್ನ ಹೃದಯ ಕದ್ದಿದ್ದಾಳೆ, ಹುಡುಕಿಕೊಡಿ; ಪೊಲೀಸರಿಗೆ ಬಂತು ಕಂಪ್ಲೇಂಟ್​..!

ನಾಗ್ಪುರ್​: ಹಣ, ಚಿನ್ನಾಭರಣ ಕಳ್ಳತನವಾಗಿದೆ ಅಥವಾ ವಾಹನ ಕಳೆದುಹೋಗಿದೆ ಅಂತ ಪೊಲೀಸರಿಗೆ ಕಂಪ್ಲೇಂಟ್​ಗಳು ಬರೋದು ಕಾಮನ್​​​. ಆದ್ರೆ ನಾಗ್ಪುರ್​​​ ಪೊಲೀಸರಿಗೆ ವ್ಯಕ್ತಿಯೊಬ್ಬ ತನ್ನ ಹೃದಯ ಕಳ್ಳತನವಾಗಿದೆ ಅಂತ ದೂರು ಕೊಟ್ಟ ವಿಚಿತ್ರ ಘಟನೆ ನಡೆದಿದೆ.ಹೌದು. ನಾಗ್ಪುರ್​​​ನ ಪೊಲೀಸ್​ ಠಾಣೆಯೊಂದರಲ್ಲಿ ಇತ್ತೀಚೆಗೆ ಇಂಥದ್ದೊಂದು ಘಟನೆ ನಡೆದಿದೆ. “ನನ್ನ ಹೃದಯ ಕದ್ದು ಬಿಟ್ಟೆ ಕಣೆ ಅಂತ ಹುಡುಗರು ಪ್ರೇಯಸಿಗೆ ಹೇಳೋದು ಕಾಮನ್”​. ಆದ್ರೆ ಯುವಕನೊಬ್ಬ ಅದನ್ನ ಸೀರಿಯಸ್​ ಆಗಿ ತೆಗೆದುಕೊಂಡು ಹುಡುಗಿಯೊಬ್ಬಳು ನನ್ನ …

Read More »

2019-20ರಲ್ಲಿ ಭಾರತದ ಆರ್ಥಿಕತೆ ವೇಗವಾಗಿ ಮುಂದುವರೆಯಲಿದೆ: ವಿಶ್ವ ಬ್ಯಾಂಕ್..

ನವದೆಹಲಿ: ನೀತಿ ಸುಧಾರಣೆಗಳು ಮತ್ತು ಮರುಬಳಕೆಯಿಂದ ಹುಟ್ಟಿಕೊಂಡ ಭಾರತದ ಆರ್ಥಿಕತೆಯು 2019-20 ರ ಹಣಕಾಸು ವರ್ಷದಲ್ಲಿ ಶೇ. 7.5ಕ್ಕೆ ಏರಿಕೆಯಾಗಲಿದೆ ಮತ್ತು ವಿಶ್ವ ಬ್ಯಾಂಕ್ನ ಬೆಳವಣಿಗೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವ ಬ್ಯಾಂಕ್ ಭವಿಷ್ಯ ನುಡಿದಿದೆ.ಮುಂದಿನ ಹಣಕಾಸು ವರ್ಷದಲ್ಲಿ ಜೂನ್ ವರದಿಯಲ್ಲಿ ಭಾರತಕ್ಕೆ ನೀಡಲಾದ ಮುನ್ಸೂಚನೆಗಳು ಮತ್ತು ಪ್ರಸಕ್ತ ಹಣಕಾಸು ವರ್ಷಕ್ಕೆ 7.3 ರಷ್ಟು ಅಂದಾಜು ಮಾಡಲಾಗಿದ್ದು, 2017 ರಲ್ಲಿ 6.7 ಶೇಕಡಾ …

Read More »