Breaking News

Shaikh BIG TV NEWS, Hubballi

ತಲಾಖ್​​ ವಿರುದ್ಧ ಧ್ವನಿಯೆತ್ತಿದ್ದ ಅನಂತ್​​ಕುಮಾರ್​

ತ್ರಿವಳಿ ತಲಾಖ್ ವಿಚಾರ ಸಾಕಷ್ಟು ರಾಜಕೀಯ ಜಗ್ಗಾಟಕ್ಕೆ ಕಾರಣವಾಗಿತ್ತು. ಅದ್ರಲ್ಲೂ ವಿರೋಧ ಪಕ್ಷಗಳು, ತ್ರಿವಳಿ ತಲಾಖೆ ಮಸೂದೆಯಲ್ಲಿ ಹಲವು ಬದಲಾವಣೆಗಳನ್ನ ಮಾಡಬೇಕು ಅಂತ ಪಟ್ಟು ಹಿಡಿದಿದ್ದವು. ಆದ್ರೆ, ಇದಕ್ಕೆ ಬಿಜೆಪಿ ಮಾತ್ರ ಜಗ್ಗಿರಲಿಲ್ಲ. ಇನ್ನು, ತ್ರಿವಳಿ ತಲಾಖ್​​ ವಿಚಾರವಾಗಿ ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಅನಂತಕುಮಾರ್​ ಚಾಟಿ ಬೀಸಿದ್ದರು. ತ್ರಿವಳಿ ತಲಾಖ್​​ ವಿಧೇಯಕ ಅಂಗೀಕಾರಕ್ಕೆ ಅಸಹಕಾರ ನೀಡುವ ಮೂಲಕ ಮಹಿಳೆಯರಿಗೆ ಕಾಂಗ್ರೆಸ್​​ ಅನ್ಯಾಯ ಎಸಗುತ್ತಿದೆ ಎಂದು ಗುಡುಗಿದ್ದರು.

Read More »

ಕೇಂದ್ರ ಸಚಿವ ಅನಂತ ಕುಮಾರ್ ಇನ್ನಿಲ್ಲ..

ಬೆಂಗಳೂರು: ಕೇಂದ್ರ ಸಚಿವ ಅನಂತ ಕುಮಾರ್ ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಂತ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅನಂತ ಕುಮಾರ್ ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.59 ವರ್ಷದ ಅನಂತ ಕುಮಾರ್, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಸದ್ಯ ನರೇಂದ್ರ ಮೋದಿ ಸಂಪುಟದಲ್ಲಿ …

Read More »

ಜನಾರ್ದನ ರೆಡ್ಡಿಗೆ ಸಿಕ್ತು ವಿಚಾರಣಾಧೀನ ಕೈದಿ ಸಂಖ್ಯೆ..

ಬೆಂಗಳೂರು: 14 ದಿನಗಳ ನ್ಯಾಯಾಂಗ ಬಂಧನದ ಮೇಲೆ ಇಂದು ಸಂಜೆ 4.50 ನಿಮಿಷಕ್ಕೆ ಸರಿಯಾಗಿ ಪರಪ್ಪನ ಅಗ್ರಹಾರ ಜೈಲಿಗೆ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿಗೆ ವಿಚಾರಣಾಧೀನ ಸಂಖ್ಯೆ ದೊರೆತಿದೆ. ತಕ್ಷಣವೇ, ಜೈಲಿನ ಪ್ರೊಸಿಜರ್ ಮುಗಿಸಿದ ಅಧಿಕಾರಿಗಳು ರೆಡ್ಡಿಗೆ ವಿಚಾರಣಾಧೀನ ಕೈದಿಯಾಗಿ 10902 ಸಂಖ್ಯೆಯನ್ನು ಕೊಟ್ಟಿದ್ದಾರೆ.ಆ್ಯಂಬಿಡೆಂಟ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದರು. ಇಂದು ರೆಡ್ಡಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಬಳಿಕ ಅವರನ್ನು 1ನೇ …

Read More »

ಮೊದಲು ತಮ್ಮ ಪಕ್ಷದೊಳಗಿನ ಮುಸ್ಲಿಂರ ಹೆಸರು ಬದಲಾಯಿಸಿ’..

ಉತ್ತರ ಪ್ರದೇಶ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ರಾಜ್ಯದಲ್ಲಿರುವ ನಗರಗಳ ಹೆಸರು ಮರುನಾಮಕರಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಯೋಗಿ ಆದಿತ್ಯನಾಥ್ ಮುಸ್ಲಿಂ ಹೆಸರಿರುವ ನಗರಗಳ ಮರುನಾಮಕರಣ ಮಾಡುತ್ತಿದ್ದಾರೆ ಅಂತಾ ಸುಹುಲ್‌ದೇವ್ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥ ರಾಜ್‌ಭಾರ್ ಕಿಡಿಕಾರಿದ್ದಾರೆ. ಯೋಗಿ ಆದಿತ್ಯನಾಥ್‌ ಮುಸ್ಲಿಂ ನಗರಗಳ ಹೆಸರನ್ನು ಹೇಗೆ ಬದಲಾಯಿಸುತ್ತಿದ್ದಾರೋ ಹಾಗೆಯೇ ಬಿಜೆಪಿಯೊಳಗೆ ಇರುವಂತಹ ಮುಸ್ಲಿಂ ಸಚಿವರು, ಶಾಸಕರು, ನಾಯಕರ ಹೆಸರನ್ನು ಬದಲಾಯಿಸಿ ಅಂತಾ ರಾಜ್‌ಭಾರ್ ಸವಾಲ್ ಹಾಕಿದ್ದಾರೆ. ಬಿಜೆಪಿ ವಕ್ತಾರರಾದ …

Read More »

ಮೊದಲು ಬಿಜೆಪಿಯಲ್ಲಿರುವ ಮುಸ್ಲಿಂ ನಾಯಕರ ಹೆಸರು ಬದಲಿಸಿ: ಯೋಗಿಗೆ ಯುಪಿ ಸಚಿವ ತರಾಟೆ.

ಲಖನೌ: ನಗರಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ ರಾಜಭರ್ ಅವರು, ಮೊದಲು ಬಿಜೆಪಿಯಲ್ಲಿರುವ ಮುಸ್ಲಿಂ ನಾಯಕರ ಹೆಸರು ಬದಲಾವಣೆ ಮಾಡಲಿ ಎಂದು ಶನಿವಾರ ಹೇಳಿದ್ದಾರೆ.ವಿವಿಧ ನಗರಗಳ ಹಾಗೂ ಸ್ಥಳಗಳ ಹೆಸರು ಬದಲಾವಣೆ ಮಾಡುವ ಮುನ್ನ ಬಿಜೆಪಿ ತನ್ನ ಮುಸ್ಲಿಂ ನಾಯಕರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಶಹನ್ವಾಜ್ ಹುಸೇನ್ ಉತ್ತರ ಪ್ರದೇಶ ಸಚಿವ ಮೊಹಿಸಿನ್ ರಾಜಾ …

Read More »

ಟ್ವಿನ್ನಿಂಗ್​ ಸೀನ್ಸ್​ನಲ್ಲಿ ಮಿಂಚಿದ್ರೂ ದೀಪ್​ವೀರ್​..

ಮುಂಬೈ: ಬಿಟೌನ್​ನ ಅಪ್​ಕಮಿಂಗ್​ ಕಪಲ್ಸ್​ ದೀಪಿಕಾ ಪಡುಕೋಣೆ ಮತ್ತು ರಣ್​ವೀರ್​ ಸಿಂಗ್​ರ ಮದುವೆಗೆ ಇನ್ನೇನು ಕೆಲವೇ ದಿನ ಬಾಕಿ. ಮದುವೆ ಇಟಲಿಯಲ್ಲಿ ನಡೀತಿದ್ದು, ಮದುವೆಗೆ ಮುಂಚೆ ಬೇಕಾದ ತಯಾರಿಗಳನ್ನ ಮಾಡಿಕೊಳ್ಳೋದಕ್ಕೆ ದೀಪಿಕಾ ಮತ್ತು ರಣ್​ವೀರ್​ ಫ್ಯಾಮಿಲಿ ಶನಿವಾರ ಬೆಳಿಗ್ಗೆನೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡರು. ಅದರಲ್ಲೇನಪ್ಪಾ ವಿಶೇಷತೆ ಅಂತ ಯೋಚನೆ ಮಾಡ್ತಾ ಇದ್ದೀರಾ..?, ಮೈನ್​ ಪಾಯಿಂಟ್​ ಅಲ್ಲೇ ಇರೋದು, ಸ್ಪೆಷಲ್​ ಅಂದ್ರೇ ದೀಪ್​ವೀರ್​ ಇಬ್ಬರೂ ಏರ್​ಪೋರ್ಟ್​​ನಲ್ಲಿ ಕಲರ್​ಕೋಡಿಂಗ್​ನಲ್ಲಿ ಕಂಡ್ರೂ. ಅಂದ್ರೇ, ಇಬ್ಬರೂ …

Read More »

22ಕ್ಕೆ ಬಿಜೆಪಿ ವಿರೋಧಿ ಪಕ್ಷಗಳ ಸಭೆ ಕರೆದ ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಇದೇ ನವೆಂಬರ್ 22ಕ್ಕೆ ಚಂದ್ರಬಾಬು ನಾಯ್ಡು ಬಿಜೆಪಿ ಜೊತೆ ಮೈತ್ರಿಗೆ ಕೈಜೋಡಿಸದ ದೇಶದ ಎಲ್ಲಾ ಪಕ್ಷಗಳ ಸಭೆ ಕರೆದಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ವಿರುದ್ಧವಾಗಿ ತೃತೀಯರಂಗ ನಿರ್ಮಾಣಕ್ಕೆ ಟಿಡಿಪಿ ಮುಖ್ಯಸ್ಥ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪಣತೊಟ್ಟಿದ್ದು, ಕೆಲ ದಿನಗಳಿಂದ ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಸಭೆಯನ್ನು ಕರೆದಿದ್ದಾರೆ. ಈ ಸಭೆ ದೆಹಲಿಯಲ್ಲಿರುವ ಆಂಧ್ರಪ್ರದೇಶ ಭವನದಲ್ಲಿ ನಡೆಯಲಿದ್ದು, …

Read More »

ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ ಎಂಬ ಚಿಂತೆಯೇ? ಹಾಗಿದ್ದರೆ ಈ ಜ್ಯೂಸ್ ಕುಡಿಯಿರಿ

ಬೆಂಗಳೂರು: “ಅಯ್ಯೋ, ಯಾಕೋ ದೇಹದ ತೂಕ ಹೆಚ್ಚಾಗುತ್ತಿದೆ, ಎಷ್ಟು ವಾಕಿಂಗ್ ಮಾಡಿದರೂ ಕಡಿಮೆ ಆಗ್ತಿಲ್ಲ…. ಎಲ್ಲಾ ಡ್ರೆಸ್ ಟೈಟ್ ಆಗ್ತಿದೆ, ಈ ಹೊಟ್ಟೆ ಬೊಜ್ಜು ಕರಗಿಸೋದು ಹೇಗಪ್ಪಾ…” ಎಂಬೆಲ್ಲಾ ಆಲೋಚನೆಗಳು ನಿಮ್ಮನ್ನು ಕಾಡುತ್ತಿವೆಯೇ? ಹಾಗಿದ್ದರೆ ಅದಕ್ಕೆ ಇಲ್ಲಿದೆ ಉಪಾಯ…ಸಾಮಾನ್ಯವಾಗಿ ತ್ವಚೆ, ಕೂದಲು ಸಮಸ್ಯೆ, ಗಾಯ ನಿವಾರಣೆಗಳಿಗೆ ಲೋಳೆಸರ(ಆಲೋವೆರಾ) ಸಿದ್ದೌಷಧ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.. ಆದರೆ, ಇದೇ ಆಲೋವೆರಾ ಬೋಜ್ಜು ಕರಗಿಸಲು ಸಹಾಯ ಮಾಡುತ್ತದೆ. ಸಸ್ಯಶಾಸ್ತ್ರದಲ್ಲಿ ‘ಆಲೂಬಾರ್ಬಡೆನ್ಸಿಸ್’ ಎಂದು ಕರೆಯಲ್ಪಡುವ …

Read More »

ರೆಡ್ಡಿ ಸಂಕಷ್ಟದಲ್ಲೂ ಸ್ವಾಮಿನಿಷ್ಟೆ ಮೆರೆದ ಅಲಿಖಾನ್​​​

ಬೆಂಗಳೂರು: ಆ್ಯಂಬಿಡೆಂಟ್​​​​ ಡೀಲ್​​ಗೆ ಸಂಬಂಧಿಸಿ ನಾಪತ್ತೆಯಾಗಿದ್ದ ಗಾಳಿ ಜನಾರ್ದನ್​​​ ರೆಡ್ಡಿ ಅಂತೂ ನಿನ್ನೆ ಸಿಸಿಬಿ ಪೊಲೀಸರಿಗೆ ಶರಣಾಗಿದ್ದರು. ರಾತ್ರಿಯಿಡೀ ಸತತ 10 ಗಂಟೆ ಕಾಲ ಸಿಸಿಬಿ, ಗಣಿ ಧಣಿ ರೆಡ್ಡಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ತಡರಾತ್ರಿ 2 ಗಂಟೆವರೆಗೂ ವಿಚಾರಣೆ ನಡೆದಿತ್ತು. ಈ ವೇಳೆ ರೆಡ್ಡಿ ಆಪ್ತ ಅಲಿಖಾನ್​​​ ತನ್ನ ಗುರು ಜನಾರ್ದನ ರೆಡ್ಡಿಯೊಂದಿಗೆ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಹಾಜರಾಗಿದ್ದ. ಅಲಿಖಾನ್​​​​​​​​ ವಿಚಾರಣೆ ಮುಗಿದ ಮೇಲೂ ರೆಡ್ಡಿಯನ್ನು ಬಿಟ್ಟು ಮನೆಗೆ …

Read More »

ಕಟ್ಟಡ ಕುಸಿದು ಓರ್ವ ಕಾರ್ಮಿಕ ಸಾವು

ಬೆಂಗಳೂರು: ಮೂರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಶನಿವಾರ ಸಂಜೆ ನಡೆದಿದೆ.ತ್ಯಾಗರಾಜನಗರದ ಸಾಯಿಬಾಬಾ ದೇಗುಲದ ಬಳಿ 2ನೇ ಕ್ರಾಸ್​ನಲ್ಲಿ ಈ ಘಟನೆ ನಡೆದಿದ್ದು, ಮೃತ ಕಾರ್ಮಿಕನನ್ನು ಸುಹೇಲ್ ಎಂದು ಗುರುತಿಸಲಾಗಿದೆ.ಕಟ್ಟಡದಲ್ಲಿ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಇನ್ನು ಮೂವರು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯ …

Read More »