Breaking News

Shaikh BIG TV NEWS, Hubballi

ಆರ್​ಬಿಐ ಹಾಗೂ ಕೇಂದ್ರದ ನಡುವೆ ‘ಸಾಲ’ದ ಸಮರ?

ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲಾ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಆರ್​ಬಿಐ ಅಧಿಕಾರಿಗಳ ಮಾತು ಪುಷ್ಠಿಕರಿಸುವಂತಿದೆ. ಈಗಾಗಲೇ ಆರ್​ಬಿಐ 3.6 ಲಕ್ಷ ಕೋಟಿ ಹಣವನ್ನ ಸೆಂಟ್ರಲ್​ ಬ್ಯಾಂಕ್​ಗಳಿಗೆ ನೀಡಿದ್ದು, ಇದು ಸೆಂಟ್ರಲ್​ ಬ್ಯಾಂಕ್​ ಸರ್ಕಾರಕ್ಕೆ ಮೀಸಲಿಟ್ಟ 9.59 ಲಕ್ಷ ಕೋಟಿ ಮೊತ್ತದ ಮೂರನೇ ಒಂದು ಭಾಗಕ್ಕಿಂದ ಅಧಿಕ ಮೊತ್ತವಾಗಿದೆ, ಆದರೆ ಬ್ಯಾಂಕ್​ ಮಂಡಳಿ ಇದುವರೆಗೂ ಆರ್​ಬಿಐ ನೀಡಿರುವ ಮೊತ್ತವನ್ನು ಕ್ರೂಢೀಕರಿಸುವಲ್ಲಿ ವಿಫಲವಾಗಿದೆ. ಅಂದರೆ ​ಸೆಂಟ್ರಲ್​ ಬ್ಯಾಂಕ್​ …

Read More »

ರೆಡ್ಡಿ ಬಂಧನಕ್ಕೆ ಸಿಸಿಬಿ ವ್ಯೂಹ: ಎಲ್ಲೆಲ್ಲಿ ಹುಡುಕುತ್ತಿದ್ದಾರೆ ಪೊಲೀಸರು?

ಬೆಂಗಳೂರು: ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಗಾಲಿ ಜನಾರ್ದನ ರೆಡ್ಡಿಗೆ ಬಂಧನದ ಭೀತಿ ಶುರುವಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಜನಾರ್ದನ ರೆಡ್ಡಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಮೂವರು ಎಸಿಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಹೈದ್ರಾಬಾದ್​ನಲ್ಲಿ ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದಾರೆ ಅನ್ನೋ ಸಂಶಯ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವ ಟೀಂ ಅಲ್ಲಿಗೆ ತೆರಳಿ ಹುಟುಕಾಟ ನಡೆಸುತ್ತಿದೆ. ಹಾಗೇ ಇನ್ನೊಂದು ಟೀಂ ಅಂದ್ರೆ ಎಸಿಪಿ ವೆಂಕಟೇಶ ಪ್ರಸನ್ನ ನೇತೃತ್ವದ ತಂಡ …

Read More »

ವೇತನ ಪಾವತಿಗೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ

ಹುಬ್ಬಳ್ಳಿಹು- ಧಾ ಮಹಾನಗರ ಪಾಲಿಕೆ ಕಾರ್ಮಿಕರರಿಂದ ಪ್ರತಿಭಟನೆ.ವೇತನ ನೀಡುವಂತ್ತೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಪ್ರತಿಭಟನೆ.ಹು- ಧಾ ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೊಶ.ಕಳೆದ ಎರಡು ತಿಂಗಳಿಂದ ಸರಿಯಾಗಿ ವೇತನ ನೀಡುತ್ತಿಲ್ಲ.ನಮ್ಮ ಉಪಜೀವನ ನಡೇಸುವುದು ಕಷ್ಟವಾಗಿದೆ.ಆದಷ್ಟು ಬೇಗ ನಮ್ಮ ಸಮಸ್ಯೆ ಬಗೆಹರಿಸಬೇಕು.ಸರಿಯಾಗಿ ತಿಂಗಳ ಅಂತ್ಯದಲ್ಲಿ ನಮಗೆ ವೇತನ ನೀಡಬೇಕು.ಮುಂದೆ ವೇತನ ನೀಡುವಲ್ಲಿ ವಿಳಂಬವಾದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ.ನೂರಾರು ಹು- ಧಾ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಭಾಗಿ..

Read More »

ವಿಜಿಗೆ ಡಿಸಿಪಿ ಅಣ್ಣಾಮಲೈ ಖಡಕ್ ವಾರ್ನಿಂಗ್!

ಬೆಂಗಳೂರು: ನಟ ದುನಿಯಾ ವಿಜಿ ಕೌಟುಂಬಿಕ ಕಲಹ ಪ್ರಕರಣ ಸಂಬಂಧ, ವಿಜಿ ಮತ್ತು ಅವರ ಕುಟುಂಬಸ್ಥರನ್ನ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಇಂದು ವಿಚಾರಣೆ ನಡೆಸಿದ್ರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ, ಇಂದು ದುನಿಯಾ ವಿಜಯ್ ಕುಟುಂಬ ಮತ್ತು ನಾಗರತ್ನ ಇಬ್ಬರನ್ನೂ ವಿಚಾರಣೆಗೆ ಕರೆದಿದ್ದೆವು. ಇಂದು ಬೆಳಗ್ಗೆ 10:30ಕ್ಕೆ ಕರೆಯಲಾಗಿತ್ತು. ದುನಿಯಾ ವಿಜಯ್, ಕೀರ್ತಿಗೌಡ ಮತ್ತು ಕುಟುಂಬಸ್ಥರು ಬಂದಿದ್ದರು. ಆದ್ರೆ, ನಾಗರತ್ನ ಮತ್ತು ಕುಟುಂಬಸ್ಥರು ಗೈರಾಗಿದ್ದರು. ದುನಿಯಾ ವಿಜಯ್, …

Read More »

ಸಿಸಿಬಿ ಅಧಿಕಾರಿಗಳ ಸಹಾಯದಿಂದಲೇ ಜನಾರ್ದನ ರೆಡ್ಡಿ ಎಸ್ಕೇಪ್…?

ಬೆಂಗಳೂರು: ಆ್ಯಂಬಿಡೆಂಟ್ ಮಾರ್ಕೆಟಿಂಗ್ ಮನಿ ಎಕ್ಸ್‌ಚೇಂಜ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿಗೆ ಎಸ್ಕೇಪ್ ಆಗಲು ಸಿಸಿಬಿ ಅಧಿಕಾರಿಗಳೇ ಸಹಾಯ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಜನಾರ್ದನ್ ರೆಡ್ಡಿ ಅವರನ್ನ ಭೇಟಿ ಮಾಡುವ ನೆಪದಲ್ಲಿ ರೆಡ್ಡಿ ನಿವಾಸ ಪಾರಿಜಾತಗೆ ಹೋಗಿ ಮಾಹಿತಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಅಂದರೆ ನವೆಂಬರ್ 4 ರಂದು ರಾಜ್ಯದಿಂದ ರೆಡ್ಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗ್ತಿದೆ. ಹೈದ್ರಾಬಾದ್​ನಲ್ಲಿ ರೆಡ್ಡಿ …

Read More »

ಭಾರತದ ವಿರೋಧದ ನಡುವೆಯೂ ಪಾಕಿಸ್ತಾನ-ಚೀನಾ ಬಸ್ ಸಂಚಾರಕ್ಕೆ ಚಾಲನೆ.

ನವದೆಹಲಿ: ಪಾಕಿಸ್ತಾನ-ಚೀನಾ ನಡುವಿನ ಬಸ್ ಸಂಚಾರಕ್ಕೆ ಭಾರತದ ತೀವ್ರ ವಿರೋಧದ ನಡುವೆಯೂ ಮಂಗಳವಾರದಂದು ಲಾಹೋರ್ ನಿಂದ ಚಾಲನೆ ನೀಡಲಾಗಿದೆ ಎಂದು ಪಾಕ್ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ.ಪಾಕಿಸ್ತಾನ ಮೂಲದ ಡಾನ್ ನ್ಯೂಸ್ ಪ್ರಕಾರ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ನಲ್ಲಿರುವ ಐಷಾರಾಮಿ ಬಸ್ ಸೇವೆಯನ್ನು ಪಾಕಿಸ್ತಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಶುಜಾ ಎಕ್ಸ್ಪ್ರೆಸ್ ನಿರ್ವಹಿಸುತ್ತಿದೆ.ಈಗ ಈ ಕ್ರಮಕ್ಕೆ ಭಾರತ ಈ ಬಸ್ ಸಂಚಾರ ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ ಭಾರತದ ಸಾರ್ವಭೌಮತ್ವ …

Read More »

ಸಿಸಿಬಿ ಬಲೆ ಸಿಕ್ಕಿಬಿದ್ದ ಜನಾರ್ಧನರೆಡ್ಡಿ..

ಬೆಂಗಳೂರು: ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆಂಬಿಡೆಂಟ್ ಮಾರ್ಕೆಟಿಂಗ್ ಮನಿ ಎಕ್ಸ್‌ಚೇಂಜ್ ಪ್ರಕರಣದಲ್ಲಿ ಜನಾರ್ದನ​ ರೆಡ್ಡಿ ಅರೆಸ್ಟ್​ ಆಗುವ ಸಾಧ್ಯತೆ ಇದೆ.ಪ್ರಕರಣ ಸಂಬಂಧ ತನಿಖೆ ನಡೆಸ್ತಿರುವ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ಟೀಂ, ಜನಾರ್ದನ್​​ ರೆಡ್ಡಿಯನ್ನ ಅರೆಸ್ಟ್​ ಮಾಡಲಿದ್ದಾರೆ ಎನ್ನಲಾಗಿದೆ. ಜನಾರ್ದನ​ ರೆಡ್ಡಿ ವಿರುದ್ಧ ನೋಟ್ ಬ್ಯಾನ್ ಸಂದರ್ಭದಲ್ಲಿ ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ …

Read More »

ರಾಮುಲು ಅಣ್ಣಂಗೆ, ಶಾಂತಕ್ಕಂಗೆ ತುಂಬಾ ಥ್ಯಾಂಕ್ಸ್ ಅಂತ ಡಿಕೆಶಿ ಹೇಳಿದ್ಯಾಕೆ?

ಬೆಂಗಳೂರು: ‘ಎಲ್ಲಕ್ಕಿಂತ ಮೊದಲಿ ಶ್ರೀರಾಮುಲು ಅಣ್ಣಂಗೆ ತುಂಬಾ ಥ್ಯಾಂಕ್ಸ್, ಶಾಂತ ರೀತಿಯಲ್ಲಿ ಚುನಾವಣೆ ನಡೆಸಿಕೊಟ್ಟಿದ್ದಕ್ಕೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಗೆಲುವಿನ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷ ನನಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ವಹಿಸಿತ್ತು. ಆದರೆ ಕೆಲವರು ಡಿಕೆಶಿ ವಿಷ ಬೀಜ ಬಿತ್ತಲು ಬಂದಿದ್ದಾರೆ ಎಂದು ಅಪಪ್ರಚಾರ ಮಾಡಿದ್ದರು. ಆದರೂ ಕಡೆಗೆ ಕಾಂಗ್ರೆಸ್ ಅಭ್ಯರ್ಥಿಯೇ ಗೆಲುವು ಸಾಧಿಸಿದರು …

Read More »

ಗಣಿನಾಡು ಬಳ್ಳಾರಿಯಲ್ಲಿ ದಾಖಲೆ ಬರೆದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ…

ಗಣಿನಾಡು ಬಳ್ಳಾರಿಯಲ್ಲಿ ದಾಖಲೆ ಬರೆದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ2,14,826 ಮತಗಳ ಅಂತರದಿಂದ ವಿ.ಎಸ್.ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ.ಬಳ್ಳಾರಿ: ಭಾರೀ ಕುತೂಹಲ ಮೂಡಿಸಿದ್ದ ಜಿದ್ದಾಜಿದ್ದಿನ ಲೋಕಸಭಾ ಕ್ಷೇತ್ರ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.ಹಲವು ವರ್ಷಗಳಿಂದ ಬಳ್ಳಾರಿಯನ್ನು ಭದ್ರ ಕೋಟೆ ಮಾಡಿಕೊಂಡಿದ್ದ ಬಿಜೆಪಿಗೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ಎರಡು ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ …

Read More »

ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಗೆಲುವು;

ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಗೆಲುವು; ಸಚಿವ ಸಂಪುಟ ಸೇರಲಿದ್ದಾರೆಯೇ ಅನಿತಾ ಕುಮಾರಸ್ವಾಮಿ?ಅನಿತಾ ಕುಮಾರಸ್ವಾಮಿ ಅವರು 62,238 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.ಚುನಾವಣೆಗೆ ಎರಡು ದಿನಗಳು ಬಾಕಿ ಇವೆ ಎನ್ನುವ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ಸೇರಿ ಕಣದಿಂದ ಹಿಂದೆ ಸರಿದಿದ್ದರು. ಆದಾಗ್ಯೂ ಅವರ ಹೆಸರು ಅಭ್ಯರ್ಥಿ ಪಟ್ಟಿಯಲ್ಲಿ ಇರಲಿದೆ ಎಂದು ಚುನಾವಣಾ …

Read More »