Breaking News

Shaikh BIG TV NEWS, Hubballi

ಡ್ರಗ್ಸ್ ಮಾಫಿಯಾಗೆ ಹು- ಧಾ ಪೊಲೀಸರ ಗುನ್ನಾ..

ಹುಬ್ಬಳ್ಳಿ-ಧಾರವಾಡದಲ್ಲಿ ಗಾಂಜಾ ಮಾರಾಟ ಜಾಲ ಇವತ್ತು ನಿನ್ನೆಯದಲ್ಲ, ಮೊದಲಿನಿಂದಲೂ ಅವ್ಯಾಹತವಾಗಿ ಬೇರು ಬಿಟ್ಟಿದೆ. ಇದನ್ನ ತಡೆಯೋದಕ್ಕೆ ಈ ಮೊದಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದ್ರೂ ಅದು ಸಾಧ್ಯವಾಗಿರಲಿಲ್ಲ. ಆದ್ರೇ, ಈಗಿರೋ ಕಮೀಷನರ್ ಅದಕ್ಕೊಂದು ಪ್ಲಾನ್ ಮಾಡಿದ್ರು. ಅದರಿಂದಾಗಿ ಈಗ ಡ್ರಗ್ಸ್ ಮಾಫಿಯಾಗೆ ಕೊಕ್ಕೆ ಹಾಕ್ತಿದಾರೆ. ಇವರೋ ಇವರ ಮುಖವೋ.. ಕಳ್ರಂಗಿದಾರೆ, ಅದ್ರೇ ಇವರು ಕಳ್ರಲ್ಲ, ಖದೀಮ್ರಲ್ಲ. ಗಾಂಜಾ ಮಾರಾಟ ಮಾಡೋ ಅಂತಾರಾಜ್ಯ ಡ್ರಗ್ಸ್ ಮಾಫಿಯಾ  ಮಂದಿ.  ನರೇಶ ಲೇಕು ಪಾಂಗಿ, …

Read More »

ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು

ಹುಬ್ಬಳ್ಳಿ:- ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಇದೇ ಸೆ. 10 ರಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ, ಭಾರತ್ ಬಂದ್ ವೇಳೆ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿ ಕಚೇರಿಗೆ ಮುತ್ತಿಗೆ ಹಾಕಿದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ‌.  ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಅವರು ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಸಂಸದರ ಕಚೇರಿಗೆ ಮುತ್ತಿಗೆ ಹಾಕಿದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. …

Read More »

ಬಾಬ್ರಿ ಮಸೀದಿ ವಿಚಾರಣೆಯನ್ನು ಮುಗಿಸುತ್ತೀರಿ?-ಸುಪ್ರೀಂ ಪ್ರಶ್ನೆ

ನವದೆಹಲಿ: ವಿಶೇಷ ಸಿಬಿಐ ನ್ಯಾಯಾಲಯದ ಜಡ್ಜ್ ಎಸ್.ಕೆ.ಯಾದವ್ ಅವರು ಬಾಬ್ರಿ ಕೇಸ್ ನಿಂದಾಗಿ ತಮಗೆ ಬಡ್ತಿಯಾಗಿಲ್ಲವೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್  ಅದೇಗೆ 2019 ಏಪ್ರಿಲ್ ರ ಒಳಗೆ ಬಾಬ್ರಿ ಮಸೀದಿ ವಿಚಾರಣೆ ನಡೆಸುತ್ತಿರಿ? ಎಂದು ಸಿಬಿಐ ನ್ಯಾಯಾಧೀಶರು ಸಲಿಸಿದ್ದ ಅರ್ಜಿಯ ವಿಚಾರವಾಗಿ ಪ್ರಶ್ನಿಸಿದೆ. ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಮತ್ತು ಇಂದು ಮಲ್ಹೊತ್ರಾ ಅವರನ್ನು ಒಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿ ಸಿಬಿಐ ನ್ಯಾಯಾಧೀಶರಿಗೆ ಡೆಡ್ ಲೈನ್ ನನ್ನು ಕೇಳಿದೆ.ಯಾದವ್ …

Read More »

ಶೀಘ್ರದಲ್ಲೇ ಪೆಟ್ರೋಲ್ ಬೆಲೆ 50 ರೂ.ಗೆ ಇಳಿಯಲಿದೆ ಎನ್ನಲು ಕಾರಣ ಏನು ಗೊತ್ತೇ?

ರಾಯಪುರ್: ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಶೀಘ್ರದಲ್ಲೇ ಪೆಟ್ರೋಲ್ ಬೆಲೆ ಪ್ರತಿ ಲೀಟರ್’ಗೆ 55 ರೂ. ಮತ್ತು ಡಿಸೇಲ್ 50 ರೂ.ಗೆ ದೊರೆಯಲಿದೆ ಎನ್ನಲಾಗುತ್ತಿದೆ. ಆದರೆ, ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್’ಗೆ 80ರೂ.ವರೆಗೆ ಏರಿಕೆಯಾಗಿದೆ. ಹೀಗಿರುವಾಗ ಶೀಘ್ರದಲ್ಲಿಯೇ 30ರೂ.ಗಳಷ್ಟು ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದು, ಅದು ಹೇಗೆ ಸಾಧ್ಯ ಎಂಬುದನ್ನೂ …

Read More »

ಅಂತ್ಯಕ್ರಿಯೆಗೆ ಸಿಎಂ ಬರಲೇಬೇಕು ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ರೈತ

ಮಂಡ್ಯ: ಸಾಲ ಬಾಧೆ ತಾಳಲಾರದೆ ರಾಜೇಶ್ ಎಂಬ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ, ಮದ್ದೂರಿನ ಮಾಳಗಾರನಹಲ್ಲಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.  ಐದು ಎಕರೆ ಜಮೀನು ಹೊಂದಿದ್ದ ರಾಜೇಶ್ ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು 5 ಲಕ್ಷದವರೆಗೆ ಸಾಲ ಮಾಡಿದ್ದರು. ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಶರಣಾಗಿರುವ ರೈತ ರಾಜೇಶ್, ನನ್ನ ಅಂತ್ಯಕ್ರಿಯೆಗೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್‌, …

Read More »

ಆಧಾರ್ ಸಾಫ್ಟ್ ವೇರ್ ಹ್ಯಾಕ್, 2500 ರೂ ಕೊಟ್ರೆ ಪೂರ್ತಿ ಮಾಹಿತಿ ಲಭ್ಯ

ನವದೆಹಲಿ: ಇನ್ನು ಮುಂದೆ ಆಧಾರ ಕಾರ್ಡ್ ನಲ್ಲಿರುವ ಯಾವ ಮಾಹಿತಿಯು ಸುರಕ್ಷಿತವಲ್ಲ ಎಂದು ಹಫಿಂಗ್ತಾನ್ ಇಂಡಿಯಾ ನಡೆಸಿದ ಮೂರು ತಿಂಗಳ ತನಿಖೆಯಿಂದ ತಿಳಿದುಬಂದಿದೆ. ಆ ಮೂಲಕ ಆಧಾರ ಡಾಟಾ ಸುರಕ್ಷಿತವಲ್ಲ ಎನ್ನುವುದನ್ನು ಮತ್ತೊಮ್ಮೆ ಧೃಡಪಟ್ಟಿದೆ.ಆಧಾರ ಗುರುತಿನ ಡಾಟಾಬೇಸ್ ನ್ನು ಇತರ ಖಾಸಗಿ ವ್ಯಕ್ತಿಗಳು ಉಪಯೋಗಿಸಬೇಕಾದರೆ ಅದಕ್ಕೆ  ಕೇವಲ 2500 ರೂಪಾಯಿಗಳನ್ನು ನೀಡಿದರೆ ಸಾಕು ಎನ್ನಲಾಗುತ್ತದೆ.ಆ ಮೂಲಕ ಜಗತ್ತಿನ ಯಾವುದೇ ಭಾಗದಲ್ಲಿರುವ ವ್ಯಕ್ತಿಯೂ ಸಹಿತ ಉಪಯೋಗಿಸಬಹುದು ಎನ್ನಲಾಗಿದೆ. ಆ ಮೂಲಕ ವ್ಯಕ್ತಿಯೂಬ್ಬನ …

Read More »

ಆಟವಾಡುತ್ತಾ ಸುಣ್ಣದ ಡಬ್ಬಿ ನುಂಗಿ ಮಗು ಸಾವು

ವಿಜಯಪುರ: ಮನೆಯಲ್ಲಿ ಆಟವಾಡುತ್ತಿದ್ದ ಮಗುವೊಂದು ಸುಣ್ಣದ ಡಬ್ಬಿ ನುಂಗಿ ಸಾನ್ನಪ್ಪಿದ ಧಾರುಣ ಘಟನೆ ವಿಜಯಪುರದ ತಿಕೋಟಾದಲ್ಲಿ ಸೋಮವಾರ ರಾತ್ರಿ ನಡೆದಿದೆ.  ತಿಕೋಟಾ ನಿವಾಸಿ ವಿಶ್ವನಾಥ ತಾಳಿಕೋಟೆ ಎಂಬುವರ 9 ತಿಂಗಳ ಗಂಡು ಮಗು ಮಲ್ಲು ಮೃತಪಟ್ಟ ದುರ್ದೈವಿ. ಮನೆಯಲ್ಲಿ ಸೋಮವಾರ ಆಟ ಆಡುತ್ತಿದ್ದ ಮಗು ಆಕಸ್ಮಿಕವಾಗಿ ಸುಣ್ಣದ ಡಬ್ಬಿ ನುಂಗಿದೆ. ನಂತರ ಉಸಿರಾಟದ ತೊಂದರೆ ಮತ್ತು ನೋವಿನಿಂದ ಮಗೂ ಅಳಲಾರಂಭಿಸಿದೆ. ಇದನ್ನು ಕಂಡ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. …

Read More »

ಯಾರು ಏನೇ ಹೇಳಿದರೂ ಸಮ್ಮಿಶ್ರ ಸರ್ಕಾರ ಸುರಕ್ಷಿತ- ಜೆಡಿಎಸ್ ಸಾರಥಿ ಹೆಚ್. ವಿಶ್ವನಾಥ ಹೇಳಿಕೆ

ಕಾಂಗ್ರೆಸ್ ನ ಅತೃಪ್ತ ಶಾಸಕರು ಬಿಜೆಪಿ ಸೇರಲಿದ್ದಾರೆ. ಆ ನಂತರ ಸಮ್ಮಿಶ್ರ  ಪತನವಾಗಲಿದೆ ಎಂಬುದೆಲ್ಲಾ ಕೇವಲ ಊಹಾಪೋಹ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ನಸು ನಕ್ಕರು. ಯಾವುದೇ ರಾಜಕೀಯ ಪಕ್ಷಗಳಲ್ಲಿ ವ್ಯತ್ಯಾಸಗಳಾಗೋದು ಸಹಜ. ಅದನ್ನು ಸರಿಮಾಡಿಕೊಳ್ಳುವುದೂ ಅಷ್ಟೇ ಸಹಜ. ಏನೇ ವ್ಯತ್ಯಾಸಗಳಾದ್ರೂ ಸರಿಯಾಗುತ್ತವೆ. ಇಂಥ ಏರುಪೇರುಗಳಿಂದ ಸರಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು ಎಂದರು. ಬಿಜೆಪಿಯ ಶ್ರೀರಾಮುಲು …

Read More »

ಜಾರಕಿಹೊಳಿ ಸಹೋರರು ನಮ್ ಫ್ರೆಂಡ್ಸ್, ಅವರ್ಯಾಕೇ ಬಿಜೆಪಿ ಹೋಗ್ತಾರೆ.. – ಸಚಿವ ಕಾಶಂಪೂರ್ ಪ್ರಶ್ನೆ

ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯುತ್ತಿದೆ ಎಂಬ ಸುದ್ದಿ ಹಿನ್ನಲೆ ಈ ಬಗ್ಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಸ್ಪಷ್ಟನೆ ಕರ್ನಾಟಕದಲ್ಲಿ ಆಪರೇಶನ್ ಕಮಲ ಇಲ್ಲ.. ಯಾವುದೇ ರೀತಿಯ ಆಪರೇಶನ್ ಇಲ್ಲ  ಅದು ಓನ್ಲಿ ಒನ್ ಡೆವಲಪ್ಮೆಂಟ್, ಡೆವಲಪ್ಮೆಂಟ್, ಡೆವಲಪ್ಮೆಂಟ್ ಜಾರಕಿಹೊಳಿ ಸಹೋದರರನ್ನು ಬಿಜೆಪಿ ಸಂಪರ್ಕ ಮಾಡಿರೋ ಹಿನ್ನಲೆ ಜಾರಕಿಹೊಳಿ ಸಹೋಹದರರನ್ನ ಪಾಪಾ ಇದರಲ್ಲಿ ಯಾಕರಿ ಅವರನ್ನ ಇದರಲ್ಲಿ ತರ್ತಿರಾ..? ಅವರು ನಮಗೆ ಒಳ್ಳೆಯ ಸ್ನೇಹಿತರು ಅವರು ತಮ್ಮ …

Read More »

ಮಾದಕ ವ್ಯಸನಿಯಾಗಿ ಇತರರನ್ನೂ ಬಲೆಗೆ ಕೆಡವುತ್ತದ್ದವಳಿಗೆ ಯರ್ರಾಬಿರ್ರೀ ಏಟು

ಪತಿಯನ್ನು ಕಳೆದುಕೊಂಡ, ಪತಿಯಿಂದ ದೂರವಾಗಿರುವ  ಮಹಿಳೆಯರನ್ನು ಸಲಿಂಗಕಾಮಕ್ಕೆ ಬಳಸಿಕೊಳ್ಳುತ್ತಿದ್ದಳು ಎನ್ನಲಾದ ಮಹಿಳೆಯೊಬ್ಬರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಮಂಟೂರ ರಸ್ತೆಯ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ಲೀನಾ ಫರ್ನಾಂಡೀಸ್ ಎಂಬ ಮಹಿಳೆಯೇ ಸಾರ್ವಜನಿಕರಿಂದ ಗೂಸಾ ತಿಂದವರು. ಮಾದಕ ವ್ಯಸನಿಯಾಗಿರುವ ಲೀನಾ ಮಹಿಳೆಯೊಬ್ಬರನ್ನು ಬಲೆಗೆ ಹಾಕಿಕೊಂಡು ಕಳೆದು ಒಂದು ವಾರದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದಳು. ಇತರೆ ಮಹಿಳೆಯರನ್ನು ಮಾದಕ ವ್ಯಸನಿ ಜಾಲಕ್ಕೆ ತಳ್ಳುತ್ತಿದ್ದ ಈಕೆ ಈಗಾಗಲೇ ಮೂವರು ಮಹಿಳೆಯರನ್ನು ಮಧ್ಯ ವ್ಯಸನಿಯನ್ನಾಗಿ …

Read More »