ಯಾದಗಿರಿ: ಜಿಲ್ಲೆಯಲ್ಲಿ ಲೀಥಿಯಮ್ ಸಿಗುತ್ತೆ ಅಂತ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೆ ಸ್ಪಷ್ಟ ಪಡಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ತಯಾರಿಕೆಯಲ್ಲಿ ಬಹುಮುಖ್ಯ ಪಾತ್ರವಾಗುವ ಲೀಥಿಯಮ್ ಅಂಶ ಯಾದಗಿರಿ ಜಿಲ್ಲೆಯಲ್ಲೂ ಸಿಗ್ತಾಯಿರೋದು ವಿಶೇಷವಾಗಿದೆ. ಆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಲೀಥಿಯಮ್ ಗಣಿಗಾರಿಕೆ ಆರಂಭಿಸಲು ಕೇಂದ್ರ ಮುಂದಾಗಿದೆ. ಇದೆ ಮೊದಲ ಬಾರಿಗೆ ದೇಶದಲ್ಲಿ ಲೀಥಿಯಮ್ ಗಣಿಗಾರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ, ಚಿನ್ನದಂತೆ ವಿರಳವಾಗಿ ಸಿಗುವ ಬಿಳಿ ಬಂಗಾರ ಅಂತ ಕರೆಸಿಕೊಳ್ಳುವ …
Read More »ವಕ್ಫ್ ಆಸ್ತಿ ಸರ್ಕಾರದ್ದಲ್ಲ ಸಮಾಜದ ದಾನಿಗಳು ನೀಡಿದ್ದು: ಸಚಿವ ಜಮೀರ ಅಹ್ಮದ
ಬೆಂಗಳೂರು: ವಕ್ಫ್ ಆಸ್ತಿ ಸರ್ಕಾರದ್ದಲ್ಲ, ಸಮಾಜದ ದಾನಿಗಳು ನೀಡಿದ್ದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು. ವಿಧಾನಸೌಧದಲ್ಲಿ ನಡೆದ ಜಿಲ್ಲಾ ವಕ್ಫ್ ಅಧ್ಯಕ್ಷರು, ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ವಕ್ಫ್ ಆಸ್ತಿಯ ಒಂದು ಇಂಚೂ ಸರ್ಕಾರದಿಂದ ಪಡೆದಿಲ್ಲ ಸಮಾಜದ ಒಳಿತಿಗಾಗಿ ದಾನಿಗಳು ಉದಾರವಾಗಿ ನೀಡಿದ್ದಾರೆ. ದೇವರ ಆಸ್ತಿಯ ಸಂರಕ್ಷಣೆ ಸಮಾಜದ ಎಲ್ಲರ ಹೊಣೆ ಎಂದರು. ವಕ್ಫ್ ಮಂಡಳಿಯಿಂದ 15 ಜಿಲ್ಲೆಗಳಲ್ಲಿ ಮಹಿಳಾ …
Read More »ಬಸ್ ಹಾಗೂ ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ: 17 ಮಂದಿ ಸಾವು
ಲಖನೌ: ಧಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಬಸ್ ಹಾಗೂ ಟೆಂಪೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ಮಂದಿ ಮೃತಪಟ್ಟು, 18ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಹತ್ರಾಸ್ನ ರಾಷ್ಟ್ರೀಯ ಹೆದ್ದಾರಿ 93ರಲ್ಲಿ ನಡೆದಿದೆ. ಈ ಕುರಿತು ಮಾತನಾಡಿರುವ ಅಲಿಘರ್ ಇನ್ಸ್ಪೆಕ್ಟರ್ ಜನರಲ್ ಶಲಭ್ ಮಾಥುರ್, ಶುಕ್ರವಾರ ಸಂಜೆ 6:45ರ ಸುಮಾರಿಗೆ ಅಪಘಾತ ಸಂಭಭವಿಸಿದ್ದು, ಸಾರಿಗೆ ನಿಗಮದ ಬಸ್ ಓವರ್ಟೇಕ್ ಮಾಡಲು ಮುಂದಾದಾಗ …
Read More »ಭಾರೀ ಅವಘಡದಿಂದ ಪಾರಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶ : ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಮೀಪವೇ ಹೈಸ್ಪೀಡ್ ರೈಲು ಹಾದು ಹೋಗಿದ್ದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಉನ್ನತ ಅಧಿಕಾರಿಗಳೊಂದಿಗೆ ಪ್ರವಾಹ ಪೀಡಿತ ಮಧುರಾನಗರದ ಬುಡಮೇರುಗೆ ಭೇಟಿ ನೀಡಿದ್ದರು. ಚಂದ್ರಬಾಬು ನಾಯ್ಡು ಅವರು ರೈಲ್ವೆ ಸೇತುವೆಯ ಮೇಲೆ ನಿಂತು ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದರು, ಮುಖ್ಯಮಂತ್ರಿಗಳು ರೈಲ್ವೇ ಸೇತುವೆಯ ಮೇಲೆ ನಡೆದು ಪ್ರವಾಹ ಪೀಡಿತ ಪ್ರದೇಶಗಳ ಅವಲೋಕನ ಮಾಡುತ್ತಿದ್ದಾಗ, ಹೈಸ್ಪೀಡ್ ರೈಲು ಅವರ ಮೂಲಕ ಹಾದುಹೋದಾಗ, ಅದೃಷ್ಟವಶಾತ್ ಅವರಿಗೆ …
Read More »ಎಪಿಎಂಸಿ ಕಾಯ್ದೆ ಮರುಸ್ಥಾಪನೆ: 4 ಬೆಳೆಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ
ಬೆಂಗಳೂರು: ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ಕು ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರುಕಾಳು, ಸೂರ್ಯಕಾಂತಿ, ಸೋಯಾಬಿನ್ ಮತ್ತು ಉದ್ದಿನಕಾಳನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡಲಾಗುತ್ತಿದೆ. ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಪ್ರಕ್ರಿಯೆ ಆರಂಭಿಸಲು ಸೆ.5ರ ಗುರುವಾರದಂದು …
Read More »ಗಣೇಶೋತ್ಸವ: ಕರಿಗಡಬಿನಲ್ಲಿ ಅರಳಿದ ಗಣೇಶ
ಕೋಲಾರ : ಭಾರತದ ಜನಪ್ರಿಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಸಂಪತ್ತು ಮತ್ತು ಬುದ್ದಿವಂತಿಕೆಯ ದೇವರು ಗಣೇಶನನ್ನು ಸ್ತುತಿಸುವ ಹಬ್ಬ. ದೇಶದೆಲ್ಲೆಡೆ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ಹಾಗೆ ಕೋಲಾರದಲ್ಲಿ ಸಂಕಷ್ಟಹರ ಗಣಪತಿ ದೇವಾಲಯದಲ್ಲಿ ಕರಿಗಡಬು ಗಣೇಶ, 10001 ಕರಿಗಡುಬು ಬಳಸಿ ಗಣೇಶ ತಯಾರಿ ಸುಮಾರು 15 ಅಡಿ ಎತ್ತರದ ಕರಿಗಡಬು ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ, ಗಣೇಶನನ್ನು ನೋಡಲು ಭಕ್ತರ ದಂಡು, ವಿಶೇಷವಾಗಿ ನಿರ್ಮಾಣ ಮಾಡಿರುವ ಗಣೇಶ ಗಣೇಶ ಹಬ್ಬದ …
Read More »ಮ್ಯಾನ್ಮಾರ್ ನಲ್ಲಿ ವೈಮಾನಿಕ ದಾಳಿ: 11 ನಾಗರಿಕರು ಸಾವು
ಯಾಂಗಾನ್ : ಉತ್ತರದ ಶಾನ್ ರಾಜ್ಯದಲ್ಲಿ ಮ್ಯಾನ್ಯಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 11 ನಾಗರಿಕರು ಸಾವನ್ನಪ್ಪಿದ್ದು ಇತರ 11 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಶಾನ್ ರಾಜ್ಯದ ನಮ್ಕಾಮ್ ನಗರದ ಎರಡು ಪ್ರದೇಶಗಳ ಮೇಲೆ ಸೇನೆಯ ವಿಮಾನಗಳು ಬಾಂಬ್ ದಾಳಿ ನಡೆಸಿವೆ ಎಂದು ಸೇನಾಡಳಿತದ ವಿರುದ್ಧ ಹೋರಾಡುತ್ತಿರುವ ಜನಾಂಗೀಯ ಅಲ್ಪಸಂಖ್ಯಾತ ಸಶಸ್ತ್ರ ಹೋರಾಟಗಾರರ ಗುಂಪು ತಾಂಗ್ ನ್ಯಾಷನಲ್ ಲಿಬರೇಷನ್ ಆರ್ಮಿ ವಕ್ತಾರೆ …
Read More »ಹರಿಯಾಣ ಚುನಾವಣೆ: ಜುಲಾನಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ವಿನೇಶ್ ಫೋಗಟ್ ಗೆ ಟಿಕೆಟ್
ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ 32 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಗಡಿ ಸಂಪ್ಲಾ ಕಿಲೋಯ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನ್ ಅವರನ್ನು ಹೊಡಲ್ ಹಾಗೂ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಜುಲಾನಾ ಕ್ಷೇತ್ರದಿಂದ ಉಮೇದುವಾರರನ್ನಾಗಿ ಮಾಡಿದೆ, ದೆಹಲಿಯಲ್ಲಿ ನಡೆದ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ …
Read More »ಗಣೇಶನ ಸ್ವಾಗತಕ್ಕೆ ಸಿದ್ಧತೆಗಳು ಜೋರು: ಮಾರುಕಟ್ಟೆಯಲ್ಲಿ ಸಂಭ್ರಮ
ಕೊಪ್ಪಳ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪ್ರಮುಖ ರಸ್ತೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ತರಹೇವಾರಿ ಬಣ್ಣಗಳ ವಿದ್ಯುತ್ ದೀಪಗಳ ಹೊಳಪು ಕಂಡುಬರುತ್ತಿದೆ. ಎಲ್ಲೆಡೆಯೂ ಗಣೇಶ ಮೂರ್ತಿಗಳ ಮಾರಾಟ ಹಾಗೂ ಖರೀದಿಯ ಉತ್ಸಾಹವೂ ಇದೆ. ಶ್ರಾವಣ ಮಾಸ ಮುಗಿದ ತಕ್ಷಣವೇ ಬರುವ ಮೊದಲ ಹಬ್ಬ ಗೌರಿ ಹಾಗೂ ಗಣೇಶನ ಪ್ರತಿಷ್ಠಾಪನೆ ಜನರಲ್ಲಿ ಹುಮ್ಮಸ್ಸು ಮೂಡಿಸಿದೆ, ಅದರಲ್ಲಿಯೂ ವಿಶೇಷವಾಗಿ ಯುವಜನತೆಯಲ್ಲಿ ಗಣಪತಿ ಹಬ್ಬ ಹಬ್ಬದ ಹುಮಸ್ಸು ನೂರ್ಮಡಿಯಾಗಿದೆ. ಹಬ್ಬದ ತಿಂಗಳು ಮೊದಲೇ ಸಾರ್ವಜನಿಕರಿಂದ ಹಾಗೂ ಬಡಾವಣೆಯ …
Read More »ಸಿಡ್ನಿಯ ವಾಯುವ್ಯ ಭಾಗದಲ್ಲಿ ಭೂಕಂಪ
ಸಿಡ್ನಿ: ಸಿಡ್ನಿಯ ವಾಯುವ್ಯ ಭಾಗದಲ್ಲಿ ಶನಿವಾರ ಬೆಳಿಗ್ಗೆ 4.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಾವಿರಾರು ಜನರು ವಿದ್ಯುತ್ ಕಡಿತ ಅನುಭವಿಸಿದ್ದಾರೆ. ನ್ಯೂ ಸೌತ್ ವೇಲ್ಸ್ ರಾಜ್ಯದ ಅಪ್ಪರ್ ಹಂಟರ್ ಪ್ರದೇಶದ ಸಿಡ್ನಿಯಿಂದ ವಾಯುವ್ಯಕ್ಕೆ ಸುಮಾರು 170 ಕಿ.ಮೀ ದೂರದಲ್ಲಿರುವ ಮಸ್ವೆಲ್ಬ್ರೂಕ್ ಪಟ್ಟಣದ ಬಳಿ ಸ್ಥಳೀಯ ಸಮಯ ಬೆಳಿಗ್ಗೆ 5: 58 ಕ್ಕೆ ಭೂಕಂಪನ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಐದು ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





