ಕೊಡಗು: ಮಲೆನಾಡಿನ ಕೊಡಗಿನಲ್ಲಿ ಆನೆ- ಮಾನವ ಸಂಘರ್ಷ ಮುಂದುವರಿದಿದೆ. ಬೆಳ್ಳಂಬೆಳ್ಳಗೆ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಕೊಡಗಿನ ಸಿದ್ದಾಪುರ ಸಮೀಪದ ಚನ್ನಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ. ಮನೆಯ ಸಮೀಪವೇ ಮಹಿಳೆ ಮೇಲೆ ದಾಳಿ ನಡೆಸಿ ಕಾಡಾನೆ ಕೊಂದು ಹಾಕಿದೆ. ಚನ್ನಯ್ಯನಕೋಟೆ ನಿವಾಸಿ ಕಾತಯಿ (72) ಮೃತ ದುರ್ದೈವಿ. ಮಗನ ಮನೆಯಿಂದ ಹೊರ ಬರುತ್ತಿದ್ದ ವೇಳೆ ರೊಚ್ಚಿಗೆದ್ದ ಕಾಡಾನೆಯೂ ದಾಳಿ ಮಾಡಿದೆ. ವೃದ್ದೆಯಾಗಿರುವುದರಿಂದ ಆನೆಯಿಂದ ತಪ್ಪಿಸಿಕೊಳ್ಳಲು ಆಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ …
Read More »ಬೈಕ್ಗೆ ಅಪ್ರಾಪ್ತ ಬಾಲಕ ಕಾರ ಡಿಕ್ಕಿ :ವ್ಯಾಪಾರಿ ಸಾವು
ಗೋರೆಗಾಂವ್: ಹಾಲಿನ ವ್ಯಾಪಾರಿ ಇದ್ದ ಬೈಕ್ಗೆ ಅಪ್ರಾಪ್ತ ಬಾಲಕ ಕಾರನ್ನು ಡಿಕ್ಕಿ ಹೊಡೆಸಿರುವ ಘಟನೆ ಗೋರೆಗಾಂವ್ನಲ್ಲಿ ನಡೆದಿದೆ. ವ್ಯಾಪಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಎಸ್ಯುವಿ ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ದ್ವಿಚಕ್ರ ವಾಹನಕ್ಕೆ ರಾಂಗ್ ಸೈಡ್ ನಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದ್ದು ನವೀನ್ ವೈಷ್ಣವ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಚಾಲಕನಿಗೆ 17 ವರ್ಷ ವಯಸ್ಸಾಗಿರುವುದರಿಂದ, ಎಸ್ಯುವಿ ಮಾಲೀಕ ಇಟ್ಬಾಲ್ …
Read More »ನಿರ್ದೇಶಕ ರಂಜಿತ್ ವಿರುದ್ಧ ದೂರು ದಾಖಲು
ತಿರುವನಂತಪುರ: ನಿರ್ಮಾಪಕ, ನಿರ್ದೇಶಕ ರಂಜಿತ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಯುವ ನಟರೊಬ್ಬರು ಡಿಜಿಪಿಗೆ ದೂರು ನೀಡಿದ್ದಾರೆ. 2012ರಲ್ಲಿ ಸಿನಿಮಾವೊಂದರ ಆಡಿಷನ್ ವಿಚಾರವಾಗಿ 9 ಬೆಂಗಳೂರಿನ ಹೋಟೆಲ್ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದು ಆಡಿಷನ್ ಪ್ರಕ್ರಿಯೆ ಭಾಗವೆಂದು ಭಾವಿಸಿದ್ದೆ. ಇದರ ಬದಲಾಗಿ ಪಾತ್ರ ನೀಡೋದಾಗಿ ಭರವಸೆ ನೀಡಿ ರಂಜಿತ್ ತನಗೆ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ನಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆಯ ಬಳಿಕ ಮರುದಿನ ಬೆಳಗ್ಗೆ …
Read More »ದೇಶದ ಹಿರಿಯ ಖ್ಯಾತ ವಕೀಲ ನಿಧನ
ಮುಂಬೈ: ದೇಶದ ಹಿರಿಯ ಖ್ಯಾತ ವಕೀಲ, ಸಂವಿಧಾನ ತಜ್ಞ ಅಬ್ದುಲ್ ಗಫೂರ್ ಮಜೀದ್ ನೂರಾನಿ ಗುರುವಾರ ಮುಂಬೈನಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಮುಂಬೈನಲ್ಲಿ 16, 1930 ರಂದು ಜನಿಸಿದ ನೂರಾನಿ ಅವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿದ್ದರು. 1960ರ ದಶಕದ ಆರಂಭದಲ್ಲಿ ದೇಶ-ವಿದೇಶಗಳ ಪತ್ರಿಕೆಗಳಿಗೆ ಬರೆಯಲು …
Read More »ಲೈಂಗಿಕ ಕಿರುಕುಳದ ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರ ಹೊಸ ಹೆಜ್ಜೆದ
ನವದೆಹಲಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರ ಪೋರ್ಟಲ್ ವೊಂದನ್ನು ಬಿಡುಗಡೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ನೂತನ She-Box ಪೋರ್ಟಲ್ ಬಿಡುಗಡೆ ಮಾಡಿದರು. ಈ ಫೋರ್ಟಲ್ ಎಲ್ಲಾ ಮಧ್ಯಸ್ಥಗಾರರಿಗೆ ದೂರುಗಳಿಗೆ ಪರಿಹಾರದ ಖಾತ್ರಿ ಮತ್ತು ಸುವ್ಯವಸ್ಥಿತ ಪ್ರಕ್ರಿಯೆಯನ್ನು ಒದಗಿಸುತ್ತದೆ. ಅಲ್ಲದೇ ನೋಡಲ್ ಅಧಿಕಾರಿಯ ಮೂಲಕ ದೂರುಗಳ ನೈಜ-ಸಮಯದ ಮೇಲ್ವಿಚಾರಣೆ ಮಾಡಲಾಗುವುದು. ಇದು ಭಾರತದಾದ್ಯಂತ ಮಹಿಳೆಯರಿಗೆ …
Read More »ಇಂದು ಸಿಎಂ ಹಾವೇರಿಗೆ ಭೇಟಿ : ಭಾಗಿನ ಅರ್ಪಣೆ
ಹಾವೇರಿ : ಸಿಎಂ ಸಿದ್ದರಾಮಯ್ಯ ಇಂದು ಹಾವೇರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ನಂತರ ಹುಬ್ಬಳ್ಳಿ ಯಿಂದ ರಸ್ತೆ ಮಾರ್ಗವಾಗಿ ರಾಣೇಬೆನ್ನೂರ ತಾಲೂಕಿನ ದೇವರಗುಡ್ಡಕ್ಕೆ ಆಗಮಿಸಿ ಮಾಲತೇಶ ದೇವರ ದರ್ಶನ ಪಡೆಯಲಿದ್ದಾರೆ. ನಂತರ ದೇಶ ಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ & ಶ್ರೀ ಕನಕ ಭವನ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಹಾವೇರಿಯ …
Read More »ಬ್ರಿಜೇಶ್ ಚೌಟರ ನೇತೃತ್ವದಲ್ಲಿ ರಹಸ್ಯ ಸಭೆ
ಪುತ್ತೂರು: ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟರ ನೇತೃತ್ವದಲ್ಲಿ ರಹಸ್ಯ ಸಭೆ ನಡೆದಿದ್ದು, ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ಪಾಳಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯ ಜತೆಗೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿತರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿಯೇ ಈ ಗೌಪ್ಯ ಸಭೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನಡುವೆ ಸಂಸದರು ದಿಢೀರ್ ಪಕ್ಷದ ಪುತ್ತೂರು ಕಚೇರಿಗೆ ಆಗಮಿಸಿದ್ದರು. ಸಂಸದರ ಆಗಮನದ …
Read More »ನಟ ದರ್ಶನ್ ಆ್ಯಂಡ್ ಟೀಮ್ ದಿಕ್ಕಾಪಾಲ: ವಿಲ್ಸನ್ ಗಾರ್ಡನ್ ಗೂ ಶುರುವಾದ ಕಾಟ
ಬೆಂಗಳೂರು: ಜೈಲಲ್ಲಿ ನಟ ದರ್ಶನ್ ಗೆ ರಾಜತಿಥ್ಯ ಪ್ರಕರಣದಲ್ಲಿ ನಟ ದರ್ಶನ್ ಆ್ಯಂಡ್ ಟೀಮ್ ಇಗಾಗ್ಲೆ ಧಿಕ್ಕಾಪಾಲಾಗಿದೆ. ಇದ್ರ ಜೊತೆಗೆ ದರ್ಶನ್ ಜೊತೆಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಅಂಡ್ ಟೀಮ್ ಗೂ ಕಾಟ ಶುರುವಾಗಿದೆ. ನಟ ದರ್ಶನ್ ಆ್ಯಂಡ್ ಟೀಮ್ ಬೇರೆ ಜೈಲಿಗೆ ಶಿಫ್ಟ್ ಆಗಿದ್ದಾರೆ. ಇದೇ ಬೆನ್ನಲ್ಲೆ ನಾಗನನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಸಿದ್ದತೆ ನಡೆಸಿದ್ದು.ಹಿಂಡಲಗ ಅಥವಾ ಕಲಬುರ್ಗಿ …
Read More »ದೇಶ ವಿರೋಧಿ ವಿಡಿಯೋ ಹೇಳಿಕೆ, ಪೋಸ್ಟ್ಗಳನ್ನು ಮಾಡಿದವರಿಗೆ ಜೀವಾವಧಿ ಶಿಕ್ಷೆ
ಉತ್ತರಪ್ರದೇಶ: ಉತ್ತರ ಪ್ರದೇಶದ ಡಿಜಿಟಲ್ ಮಿಡಿಯಾ ಪಾಲಿಸಿ ಅನ್ವಯ ದೇಶ ವಿರೋಧಿ ವಿಡಿಯೋ ಹೇಳಿಕೆ ಹಾಗೂ ಪೋಸ್ಟ್ಗಳನ್ನು ಮಾಡಿದವರಿಗೆ ಕಠಿಣ ಅಂದ್ರೆ ಜೀವಾವಧಿ ಶಿಕ್ಷೆ ಹಾಗೂ ರಾಷ್ಟ್ರೀಯತೆಯನ್ನು ಉತ್ತೇಜಿಸುವವರಿಗೆ ದೊಡ್ಡ ಆಫರ್ ಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ಜನರಿಗೆ ನೀಡಿದೆ. ಉತ್ತರ ಪ್ರದೇಶದ ಹೊಸ ನಿಯಮದನ್ವಯ, ಸೋಷಿಯಲ್ ಮಿಡಿಯಾಗಳಾದ ಎಕ್ಸ್ ಫೇಸ್ಬುಕ್, ಯೂಟ್ಯೂಬ್, ವಾಟ್ಸಾಪ್ ಈ ತರಹದ ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಅನಿಸುವ ಪೋಸ್ಟ್ಗಳನ್ನಾಗಲಿ, ವಿಡಿಯೋಗಳನ್ನಾಗಲಿ ಹೇಳಿಕೆಗಳನ್ನಾಗಲಿ ನೀಡಿದವರಿಗೆ …
Read More »ಗುಜರಾತ್ನಲ್ಲಿ ಭಾರಿ ಮಳೆ: ಸಾವಿನ ಸಂಖ್ಯೆ 26ಕ್ಕೆ ಏರಿಕೆ
ಅಹಮದಾಬಾದ್: ಗುಜರಾತ್ನ ಕೆಲವೆಡೆ ಸತತ ನಾಲ್ಕನೇ ದಿನ ಧಾರಾಕಾರ ಮಳೆಯಾಗಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ ಮೂರು ದಿನದಲ್ಲಿ 26ಕ್ಕೆ ಏರಿದೆ. ಸುಮಾರು 17,800 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ಎಸ್ಡಿಆರ್ಎಫ್, ಸೇನೆ, ಕರಾವಳಿ ಕಾವಲು ಪಡೆಗಳನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಂದ ಪರಿಸ್ಥಿತಿಯ ಮಾಹಿತಿ ಪಡೆದರು. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





