Breaking News

BigTv News

ರೈತರು ಬೆಳೆದ ಧಾನ್ಯಗಳನ್ನು ಕಳ್ಳತನ ಮಾಡಿದ ಕಳ್ಳರ ಬಂಧನ

ಧಾರವಾಡ : ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ದವಸ, ಧಾನ್ಯ ಕಳ್ಳತನ ಮಾಡಿದ್ದ ಮೂವರನ್ನು ನವಲಗುಂದ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವಲಗುಂದದ ಕಿರಣ್ ಕುಂಬಾರ, ಅಣ್ಣಿಗೇರಿಯ ಕೃಷ್ಣಾ ಗಾಣದಾಳ ಹಾಗೂ ವಿಜಯ ಉಣಕಲ್ ಎಂಬುವವರೇ ಬಂಧಿತ ಆರೋಪಿಗಳು. ನವಲಗುಂದದ ರಾಮಲಿಂಗೇಶ್ವರ ಓಣಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ 80 ಚೀಲ ಧಾನ್ಯಗಳನ್ನು ಈ ಮೂವರೂ ಸೇರಿ ಕಳ್ಳತನ ಮಾಡಿದ್ದರು. ಈ ಸಂಬಂಧ ನವಲಗುಂದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ …

Read More »

ಆಕಸ್ಮಿಕ ಅಗ್ನಿಗೆ ಗುಜರಿ ಅಡ್ಡಾ ಆಹುತಿ

ಹುಬ್ಬಳ್ಳಿ:ನಗರದ ಪಿಬಿ ರಸ್ತೆಯ ನೇಕಾರ ನಗರದಲ್ಲಿ ಗುರಿ ಅಡ್ಡಾ ಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದ್ದು, ದೊಡ್ಡ ಅವಘಡ ತಪ್ಪಿದಂತಾಗಿದೆ. ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಪಕ್ಕದಲ್ಲಿಯೇ ವಿದ್ಯುತ್ ಹೈಪರ್ ಲೈನ್ ಇದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಅಗ್ನಿ ಅವಘಡದಿಂದಾಗಿ ಕೆಲ ಕಾಲ ಬಿಗುವಿನ ವಾತಾವರಣ ಮನೆಮಾಡಿತ್ತು, ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಮುಂದಾಗಿದ್ದಾರೆಂದು ತಿಳಿದು ಬಂದಿದೆ.

Read More »

ಅಂತರ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆ

ಧಾರವಾಡ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಕಿಟೆಲ್ ವಿಜ್ಞಾನ ಕಾಲೇಜಿನಲ್ಲಿ “ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿ-2020 ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ” ಎಂಬ ವಿಷಯದ ಅಡಿಯಲ್ಲಿ ಅಂತರ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಡಾ. ಎಸ್. ಎಮ್. ತುವಾರ, ನಿರ್ದೇಶಕರು, ಕಾಲೇಜು ಅಭಿವೃದ್ದಿ ಮಂಡಳಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಇವರು ಕಾರ್ಯಕ್ರಮದಲ್ಲಿ “ರಾಷ್ಟಿಯ ಶಿಕ್ಷಣ ನೀತಿ-2020”, ಭಾರತದ ಇತಿಹಾಸದಲ್ಲಿ 4ನೇ ಮತ್ತು ಉತ್ತಮ ರಾಷ್ಟ್ರೀಯ ಶಿಕ್ಷಣ …

Read More »

ಮೈಸೂರಿನಲ್ಲಿ ಮಾಜಿ ಸೇನಾಧಿಕಾರಿ ವಿಧಿವಶ

ನಿವೃತ್ತ ಕರ್ನಲ್ ಕೃಷ್ಣಮೂರ್ತಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣಮೂರ್ತಿ ಲಕ್ಷ್ಮೀಪುರಂ ನಿವಾಸದಲ್ಲಿ ಕೊನೆಯುಸಿರನ್ನು ಚೆಲ್ಲಿದ್ದಾರೆ. ರಜಪೂತ್ ರೆಜಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೇನಾಧಿಕಾರಿ1971ರ ಯುದ್ದದಲ್ಲಿ ಕೃಷ್ಣಮೂರ್ತಿ ಭಾಗವಹಿಸಿದ್ದರು.ಲಕ್ಷ್ಮೀಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನಕ್ಕೆ ಮೈಸೂರು ಎಕ್ಸ್ ಸರ್ವಿಸ್ ಮೆನ್ ಮೂವ್ಮೆಂಟ್ (ರಿ ) ಸಂಸ್ಥಾಪಕರಾದ ಶ್ರೀಯುತ ಮಹೇಶ್ ವಿ,ಅಧ್ಯಕ್ಷರಾದ ಶ್ರೀಯುತ ಪ್ರಿನ್ಸ್ ಮತ್ತು ಪದಾಧಿಕಾರಿಗಳು ಹಾಗೂ ಸುಮಾರು 25 ಸದಸ್ಯರು ಮೃತರಿಗೆ ಸಕಲ ಗೌರವಗಳೊಂದಿಗೆ …

Read More »

ಕುಡಿಯುವ ನೀರಿನ ಸಮಸ್ಯೆ ಹಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕ ಕೋನರೆಡ್ಡಿ

ಇಂದು ಮುಂಜಾನೆ ಶಾಸಕಾದ ಶ್ರೀ ಎನ್.ಹೆಚ್. ಕೋನರಡ್ಡಿ ಅವರು ನವಲಗುಂದ ನಗರದ ನೀಲಮ್ಮನ ಕೇರೆ ಹಾಗೂ ಚೆನ್ನಮ್ಮನ ಕೇರೆಗೆ ಬೇಟಿ ನೀಡಿ ನಗರದ ಜನತೆಗೆ ನೀರಿನ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳಿಗೆ ಎಚ್ಚರಿಸಿದರು. ನಂತರ ಈಜುಕೊಳ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ನವಲಗುಂದ ಪಟ್ಟಣದಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. …

Read More »

ಹುಬ್ಬಳ್ಳಿಯಲ್ಲಿ ತಂದೆ ಮಗನ ಜಗಳ ವಿದ್ಯಾನಗರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ

ಹುಬ್ಬಳ್ಳಿಯ ಲೋಕಪ್ಪನ ಹಕ್ಕಲದಲ್ಲಿ ತಂದೆ ಮಗ ಪರಸ್ಪರ ಜಗಳವಾಡುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ 09 ದವರು ಸ್ಥಳಕ್ಕೆ ತೆರಳಿ ಅವರಿಗೆ ಸೂಕ್ತ ತಿಳಿಹೇಳಿದ್ದು ಜಗಳ ಬಗೆಹರಿಯದ ಕಾರಣ ಅವರನ್ನು ಮುಂದಿನ ಕ್ರಮಕ್ಕಾಗಿ ವಿದ್ಯಾನಗರ ಠಾಣೆಗೆ ಒಪ್ಪಿಸಿರುತ್ತಾರೆ. ಎಂದು ತಿಳಿದು ಬಂದಿದೆ. ಅಪ್ಪ ಮಗ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯರು 112 ತುರ್ತು ಸಹಾಯವಾನಿಗೆ ಕರೆ ಬಂದ ಹಿನ್ನಲೆಯಲ್ಲಿ ಪೋಲಿಸರು ಸಮಸ್ಯೆ ಬಗೆಹರಿಸಲು …

Read More »

ಹುಬ್ಬಳ್ಳಿಯಲ್ಲಿ ಹೊಯ್ಸಳ ವಾಹನದ ಪೋಲಿಸ್‌ ಸಿಬ್ಬಂದಿಗಳಿಂದ ಜಾಗೃತಿ ಕಾರ್ಯಕ್ರಮ

ಹೊಯ್ಸಳ ವಾಹನದ ಸಿಬ್ಬಂದಿ-ಅಧಿಕಾರಿಗಳು ಹುಬ್ಬಳ್ಳಿ ಧಾರವಾಡದ ವಿವಿಧ ಪ್ರದೇಶ, ಹಾಗೂ ಶಾಲಾ ಕಾಲೇಜು ಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದರು. ನಾಗರಿಕರಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 112 ಸಹಾಯವಾಣಿ ಸ್ಪಂದನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ತುರ್ತು ಸಂದರ್ಭಗಳಲ್ಲಿ ಯಾವುದೇ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಿದರು. 112 ತುರ್ತು ಸಹಾಯವಾಣಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತದೆ ಎನ್ನುವುದನ್ನು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಮಯದಲ್ಲಿ …

Read More »

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಅಪರಾಧಿಗೆ 3 ವರ್ಷ ಶಿಕ್ಷೆ

ಚಾಮರಾಜನಗರ :  ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ, ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 2 ಲಕ್ಷ ರೂ.ಪರಿಹಾರ ನೀಡುವಂತೆ ನಗರದ ಮಕ್ಕಳ ಸ್ನೇಹಿ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್  ನ್ಯಾಯಾಲಯ ಆದೇಶ ನೀಡಿದೆ. ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಶಿವಕುಮಾರ( 37) ಶಿಕ್ಷೆಗೆ ಗುರಿಯಾದ ಅಪರಾಧಿ. 2021ರ ಜನವರಿ 1ರಂದು 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ,ಪೋಷಕರಿಗೆ …

Read More »

ಧಾರವಾಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 16 ರಂದು

ಧಾರವಾಡ:ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಕರ್ನಾಟಕ ರಾಜ್ಯ ಸಮಗಾರ ಅಭಿವೃದ್ಧಿ ಸಂಘದ ವತಿಯಿಂದ ಬರುವ ಜು.16 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕರ್ನಾಟಕ ಕುಲ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸುಭಾಷ್ ನೇತ್ರೇಕರ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ ಜಂಟಿ ಕಾರ್ಯದರ್ಶಿಗಳಾದ ಚಂದ್ರಕಾಂತ ಪೂಜಾರ ಅವರ ತಂದೆ ತಾಯಿಯವರ ಸ್ಮರಣಾರ್ಥವಾಗಿ ಎಸ್ …

Read More »

ಧಾರವಾಡದಲ್ಲಿ ಕಳೆಗಟ್ಟಿದ ಬಕ್ರೀದ್ ಹಬ್ಬದ ಸಂಭ್ರಮ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಧಾರವಾಡ: ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಇಂದು ಬಕ್ರೀದ್ ಹಬ್ಬದ ಸಂಭ್ರಮ ಜೋರಾಗಿದೆ. ಧಾರವಾಡದ ಮೆಹಬೂಬ್ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದು, ಮುಸ್ಲಿಂ ಧರ್ಮ ಗುರುಗಳಿಂದ ಬಕ್ರೀದ್ ಪ್ರಾರ್ಥನೆ ಬೋಧನೆ ಮಾಡಲಾಯಿತು. ಬಕ್ರೀದ್ ಹಬ್ಬದ ಪ್ರಾರ್ಥನೆಯೊಂದಿಗೆ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದರು. ಪುರುಷರು ಮಕ್ಕಳು ಸೇರಿ ಮುಸ್ಲಿಂ ಸಮುದಾಯದ ಹಿರಿಯರು ಪ್ರಾರ್ಥನೆಯಲ್ಲಿ ಭಾಗಿಯಾಗಿ ಸಾಮೂಹಿಕ ಪ್ರಾರ್ಥನೆ ಬಳಿಕ ಒಬ್ಬರಿಗೊಬ್ಬರು ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡರು. ಹೊಸ …

Read More »