Breaking News

ಅಂತರ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆ

ಧಾರವಾಡ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಕಿಟೆಲ್ ವಿಜ್ಞಾನ ಕಾಲೇಜಿನಲ್ಲಿ “ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿ-2020 ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ” ಎಂಬ ವಿಷಯದ ಅಡಿಯಲ್ಲಿ ಅಂತರ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಡಾ. ಎಸ್. ಎಮ್. ತುವಾರ, ನಿರ್ದೇಶಕರು, ಕಾಲೇಜು ಅಭಿವೃದ್ದಿ ಮಂಡಳಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಇವರು ಕಾರ್ಯಕ್ರಮದಲ್ಲಿ “ರಾಷ್ಟಿಯ ಶಿಕ್ಷಣ ನೀತಿ-2020”, ಭಾರತದ ಇತಿಹಾಸದಲ್ಲಿ 4ನೇ ಮತ್ತು ಉತ್ತಮ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದ್ದು ವಿದ್ಯಾರ್ಥಿಗಳು ಇದರ ಸದಪಯೋಗವನ್ನು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ವೃತ್ತಿಪರ ತರಬೇತಿಯ ಹಾಗೆ ಬಿ.ಎಸ್ಸಿ. ಪದವಿ ಸಹ ಉತ್ತಮ ಜೀವನ ನಿರೂಪಿಸುವಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಹಾಗೂ ನಿರ್ಣಾಯಕ ಹಂತವಾಗಿದೆ ಎಂದು ಪ್ರಾಚಾರ್ಯರಾದ ಡಾ. ಆರ್ ಕ್ರಿಸ್ಟೋಫರ್,ಈ ಕಾರ್ಯಕ್ರಮದಲ್ಲಿ ಕಿಟೆಲ್ ವಿಜ್ಞಾನ ಮಹಾವಿದ್ಯಾಲಯ, ಡಾ. ಜಿ.ಎಮ್ ಪಾಟೀಲ, ಸಂಯೋಜಕರು, ವಿದ್ಯಾರ್ಥಿ ಪ್ರತಿನಿಧಿ ಪರಿಷತ್, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಆಕಾಶ ಹಂಸನೂರ, ಕರ್ನಾಟಕ ಕಲಾ ಕಾಲೇಜಿನ, ವಿದ್ಯಾರ್ಥಿ ಪ್ರಥಮ ಸ್ಥಾನವನ್ನು, ಕೀರ್ತಿದೊಡ್ಡುರ ಸಿ. ಎಸ. ಐ ಕಾಲೇಜಿನ, ವಿದ್ಯಾರ್ಥಿನಿ ದ್ವಿತೀಯ ಸ್ಥಾನವನ್ನು ಮತ್ತು ಪ್ರತೀಕ್ ಹೆಗ್ಡೆ, ಜೆ. ಎಸ್. ಎಸ್. ಶ್ರೀ ಮಂಜುನಾಥೇಶ್ವರ ಯುಜಿ ಮತ್ತು ಪಿಜಿ ಸಂಸ್ಥೆ ಕಾಲೇಜಿನ ವಿದ್ಯಾರ್ಥಿ ತೃತೀಯ ಸ್ಥಾನವನ್ನು ಪಡೆದುಕೊಂಡಿರು.

ಕಾಲೇಜಿನ ಶಿಕ್ಷಕರು, ಶಿಕ್ಷಕೇತರ ಸಿಬ್ಬಂಧಿ ಮತ್ತು ಒಟ್ಟು 22 ಕಾಲೇಜಿನ 44 ಸ್ಪರ್ಧಾಳುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾರ್ಥನೆ ಐಶ್ವರ್ಯ ಜೋರಾಪುರ,ಸ್ಪರ್ದೆಯ ಸಂಯೋಜಕರಾದ ಶ್ರೀಮತಿ ಸಾರಿಕಾ ಜೋಗಳೆ ಇವರು ಕಾರ್ಯಕ್ರಮವನ್ನು ನಡೆಸಿದರು, ಶಂಭುಲಿಂಗ ವಂದನಾರ್ಪಣೆ ಮಾಡಿದರು

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *