Breaking News

BigTv News

ಅಸಮಾಧಾನ ಬಹಿರಂಗವಾಗಿ ವ್ಯಕ್ತಪಡಿಸಿದ ವಿನಯ್ ಕುಲಕರ್ಣಿ.!

ಬೆಳಗಾವಿ: ರಾಜ್ಯದಲ್ಲಿ ಬಹುತಮದ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಈಗಾಗಲೇ ಗ್ಯಾರಂಟಿ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವನ್ನು ಕೈಗೊಂಡಿದೆ. ಆದರೆ, ಸಂಪುಟದಲ್ಲಿ ಸ್ಥಾನ ಸಿಗದೇ ಇರೋದಕ್ಕೆ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ತಮ್ಮ ಅಸಮಾಧಾನ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಈ ಸಲ ಸಹಜವಾಗಿ ಹೆಚ್ಚಿನ ಶಾಸಕರು ಆಯ್ಕೆ ಆಗಿದ್ದಾರೆ. ಅನೇಕರನ್ನು ಸಮಾಧಾನ ಮಾಡಲು ಹೋಗಿ ಸಚಿವ ಸ್ಥಾನ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದಿದ್ದಾರೆ. …

Read More »

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಪ್ರತಿಕೃತಿ ದಹಿಸಿ ಪ್ರತಿಭಟನೆ

ಧಾರವಾಡ: ದೆಹಲಿಯ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರ ಪ್ರತಿಕೃತಿ ದಹಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಎಐಯುಟಿಯುಸಿ ಸಂಘಟನೆ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಬ್ರಿಜ್ ಭೂಷಣ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕುಸ್ತಿಪಟುಗಳಿಗೆ ಬ್ರಿಜ್ ಭೂಷಣ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ. ಸ್ವತಃ ಮಹಿಳಾ ಕುಸ್ತಿಪಟುಗಳೇ ಇದನ್ನು ಖಂಡಿಸಿ …

Read More »

ಧಾರವಾಡ :ಜಯ ಕರ್ನಾಟಕ ಜನಪರ ವೇದಿಕೆಯಿಂದ,ವಿಶ್ವ ಪರಿಸರ ದಿನಾಚಾರಣೆ

ಧಾರವಾಡದ ದೈವಜ್ಞ ನಗರದ ಮುಖ್ಯರಸ್ತೆಯಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಮಂಜುನಾಥ ಅಂಗಡಿ, ಹರ್ಷದ ಪಠಾಣ್, ಶ್ರೀಶೈಲ್ ಭಾವಿಕಟ್ಟಿ, ಅನ್ವರ್ ನದಾಫ, ಅರುಣ್ ತೇಲಿಗಾರ್ , ಅಶೋಕ್, ಯಾದವ, ಅಬ್ಬಾಸಲಿ ಸೈಯದ್, ಶಂಕ್ರಪ್ಪ ಬಡಿಗೇರ್, ಸಂತೋಷ ಹೂಗ್ಗಿ, ಬಸಪ್ಪ ಹುದ್ದಾರ, ಮಲ್ಲೇಶಪ್ಪ ಹಡಪದ, ಹನೋಕ ಮೇದಗೊಪ್ಪ, ಸಿದ್ದಮ್ಮಪ್ಪ ಮಗ್ನೂರ, ನಾಗರಾಜ ಭಾವಿಕಟ್ಟಿ, ಹೊಂಬಾಳೆ ಪ್ರಸನ್ನ ಹೊಂಬಾಳೆ, ರವಿ …

Read More »

ಗಿಡ ನೆಡುವದರ ಮೂಲಕ ಪರಿಸರ ದಿನಾಚರಣೆ ಚಾಲನೆ

ಬೆಳಗಾಂವ:–ಜಿಲ್ಲೆಯ ಕಿತ್ತೂರಿನ ಡೊಂಬರಕೊಪ್ಪ ಪ್ರವಾಸಿ ಮಂದಿರದ ಆವರಣದಲ್ಲಿ ಧಾರವಾಡ ಕ್ಷೇತ್ರದ ಶಾಸಕರಾದ ವಿನಯ ಕುಲಕರ್ಣಿಯವರು ಗಿಡ ನೆಡುವದರ ಮೂಲಕ ಪರಿಸರ ದಿನಾಚರಣೆ ಆಚರಿಸಿದರು. ಈ ಸಂಧರ್ಭದಲ್ಲಿ ಧಾರವಾಡ ಜಿಲ್ಲಾಧಿಕಾರಿಗಳವರಾದ ಗುರುದತ್ತ ಹೆಗಡೆ,ಉಪವಿಭಾಗಾಧಿಕಾರಿಗಳಾದ. ಅಶೋಕ ತೇಲಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಬ್ಲಾಕ್ ಅಧ್ಯಕ್ಷರಾದ ಅರವಿಂದ ಏಗನಗೌಡರ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Read More »

ಸರಕಾರಿ ನೌಕರ ಹಿತಾಸಕ್ತಿ ಕಾಪಾಡಲು ಬದ್ದ; ಸಾರ್ವಜನಿಕರಿಗೆ ಉತ್ತಮ ಸೇವೆಯೊಂದಿಗೆ ಸರಕಾರದ ಯೋಜನೆ ತಲುಪಿಸಿ: ಶಾಸಕ ಎನ್.ಎಚ್.ಕೋನರಡ್ಡಿ

ಧಾರವಾಡ : ಸರಕಾರಿ ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವದರೊಂದಿಗೆ ರಾಜ್ಯ ಸರಕಾರದ ಜನಕಲ್ಯಾಣ ಯೋಜನೆಗಳನ್ನು ಅರ್ಹರಿಗೆ, ಪ್ರಾಮಾಣಿಕವಾಗಿ ಮುಟ್ಟಿಸಬೇಕು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಧಾರವಾಡ ಗೃಹ ಕಚೇರಿಯಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕವು ನೀಡಿದ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ರಾಜ್ಯ ಸರಕಾರಿ ನೌಕರರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಅರ್ಹ ಫಲಾನಿಭವಿಗಳಿಗೆ ಸರಕಾರದ ಯೋಜನೆಗಳು ತಲುಪುತ್ತವೆ. …

Read More »

ಹುಬ್ಬಳ್ಳಿಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಆಚರಣೆ ಕಾರ್ಯಕ್ರಮ

ಹುಬ್ಬಳ್ಳಿ ಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ದಾನೇಶ್ವರಿ ಕಾಲೋನಿಯಲ್ಲಿ S S ಶೆಟ್ಟರ ಫೌಂಡೇಶನ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷರಾದ ಸಂಕಲ್ಪ ಶೆಟ್ಟರ ಹಾಗೂ ಹುಡಾ ಮಾಜಿ ಅಧ್ಯಕ್ಷರಾದ ನಾಗೇಶ ಕಲಬುರ್ಗಿ ಯವರು ಮಾತನಾಡಿ ಉತ್ತಮ ಪರಿಸರಕ್ಕೆ ಉತ್ತಮ ಆರೋಗ್ಯ ಕಾರಣವಾಗಬಹುದು ಹಾಗಾಗಿ ಪರಿಸರ ಕಾಪಾಡುವದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ …

Read More »

ನೇಣು ಬಿಗಿದುಕೊಂಡು ಸಹೋದರಿಯರು ಆತ್ಮಹತ್ಯೆ

ಹುಬ್ಬಳ್ಳಿ: ಮನೆಯಲ್ಲಿ ನೇಣು ಬಿಗಿದುಕೊಂಡು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ. ಕಾವೇರಿ ಹಡಪದ (17) ಭೂಮಿಕಾ ಹಡಪದ (19) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿರುವ ಬಾಡಿಗೆ ಮನೆಯಲ್ಲಿ ತಾಯಿ ಇಲ್ಲದ ವೇಳೆ ಸಹೋದರಿಯರು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಬೈಕ್​ ಸವಾರನೊಬ್ಬಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ

ತುಮಕೂರು: ಇಲ್ಲೊಬ್ಬ ಬೈಕ್​ ಸವಾರನೊಬ್ಬ ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಕ್ಕೀಡಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಹನುಮಂತಪುರದಲ್ಲಿ ನಡೆದಿದೆ. ಹನುಮಂತಪುರದ ಮೂಲದ ನಿವಾಸಿ ಕೃಷ್ಣ (34) ಎಂಬುವವರು ಮಿಡಿಗೇಶಿಯಿಂದ ತಮ್ಮ ಊರಿಗೆ ಹಿಂದಿರುಗುತ್ತಿದ್ದಾಗ ಕರಡಿ ಅಡ್ಡಬಂದಿದೆ. ಇದರಿಂದ ಗಾಬರಿಗೊಂಡ ಕೃಷ್ಣ ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದಿದ್ದಾನೆ. ಬೈಕ್​ ಮೇಲೆ ಸ್ವಂತ ಊರಿಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯೆ ಏಕಾಏಕಿ ಕರಡಿ ಅಡ್ಡಬಂದಿದೆ. ಇದರಿಂದ ಅವಕ್ಕಾದ ಕೃಷ್ಣ ಕರಡಿಯಿಂದ …

Read More »

ನಾಡಿನ ಸಮಸ್ತ ಜನತೆಗೆ .ಬಿಗ್‌. ಟಿ.ವಿ, ವತಿಯಿಂದ ಕಾರು ಹುಣ್ಣಿಮೆ ಶುಭಾಶಯಗಳು..

ರೈತರ ಸಂಭ್ರಮದ ಹಬ್ಬ, ನಾಡ ಹಬ್ಬ ,ರೈತರು ಎತ್ತುಗಳನ್ನು ಶೃಂಗಾರ ಮಾಡಿ. ವಿವಿಧ ತಿಂಡಿ ತಿನಿಸುಗಳನ್ನು ರೈತನ ಮಿತ್ರನಾದ ಎತ್ತುಗಳಿಗೆ ಕೊರಳಿಗೆ ಕಟ್ಟಿ ಹಾಗೂ ಕೊಂಬಿನಂಚಿಗೆ ಬಣ್ಣಬಳಿದು ಸಂತಸ ಪಡುವ ಹಬ್ಬವೇ ಕಾರಹುಣ್ಣಿಮೆ, ಅಲ್ಲದೇ ಇಂದು ಸಾಯಂಕಾಲ ನೆಡೆಯುವ ಎತ್ತಿನ ಮೆರವಣಿಗೆಯಲ್ಲಿ ಎತ್ತುಗಳನ್ನು ಪುರುಷರು ಹಿಡಿದು ಎತ್ತಿನಿಂದ ಕೊಡಬಳಿಗೆ ಕಿತ್ತು ತಿನ್ನುವ ಸ್ಪರ್ಧೆಯು ಸಹ ಉತ್ತರ ಕರ್ನಾಟಕದ ಕೆಲವೊಂದು ಭಾಗದಲ್ಲಿ ನೆಡೆಯುತ್ತದೆ. ಅಲ್ಲದೆ ಇಂದಿನ ದಿನ ಸಂಜೆ ವೇಳೆಗೆ ಊರ …

Read More »

ಗದಗ ಬೈಕ್ ಗೆ ಸರಕಾರಿ ಬಸ್ ಡಿಕ್ಕಿ;ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಗದಗ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ಜರುಗಿದೆ. ಮೃತ ಸವಾರ ಸಮೀಪದ ಬ್ಯಾಲವಾಡಗಿ ನಿವಾಸಿ ಚಿಕನ್ ವ್ಯಾಪಾರಿ ಮಂಜುನಾಥ್ ಬಂಡಿ (45) ಮೃತಪಟ್ಟ ದುರ್ಧೈವಿ ಎಂದು ಗುರುತಿಸಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೆಸ್ಕಾಂ ಕಚೇರಿ ಬಳಿ ಈ ದುರ್ಘಟನೆ ಜರುಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ದೇಹ ನಜ್ಜು ಗುಜ್ಜಾಗಿದೆ. …

Read More »