ಗದಗ: ಕಾವೇರಿ ವಿಚಾರದಲ್ಲಿ ರಾಜ್ಯಸರ್ಕಾರ ಯಡವಟ್ಟು ಮಾಡಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಸಚಿವ ಎಚ್ ಕೆ ಪಾಟೀಲ್ ಆಕ್ರೋಶ ವ್ತಕ್ತಪಡಿಸಿದ್ದಾರೆ
ಶೋಭಾ ಕರಂದ್ಲಾಜೆ ಮಹತ್ವದ ಸ್ಥಾನದಲ್ಲಿದ್ದಾರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎರಡೂ ರಾಜ್ಯಗಳನ್ನ ಕೂಡಿಸಿ ಕೇಂದ್ರ ಸರ್ಕಾರ ಪರಿಹಾರ ಕಂಡುಹಿಡಿಯಬೇಕು ಇದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ ನಮ್ಮ ಕಾವೇರಿ ಸ್ಥಿತಿ ಬಗ್ಗೆ ಚರ್ಚೆ ಮಾಡಬೇಕು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಕೆಲಸವೇ ಇದುಅದ್ರೆ ರಾಜಕೀಯ ಮಾಡಲು ಹೊರಟ್ಟಿದ್ದಾರೆ ಅಂತ ಕಿಡಿ ಯಾವುದೇ ಕಾರಣಕ್ಕೆ ಶೋಭೆ ತರುವಂತಹದಲ್ಲ ಶೋಭಾ ಕರಂದ್ಲಾಜೆ ಅವರು ಪ್ರಧಾನಿ ಮೋದಿಗೆ ಹೇಳಲಿ ಅವರಿಗೆ ತಕ್ಷಣ ಮಧ್ಯಸ್ಥಿಕೆ ವಹಿಸಿ ಪರಿಹಾರ ಮಾಡ್ರೀ ಕಾವೇರಿಯಲ್ಲಿ ನೀರು ಇದೇಯಾ..? ಯಾಕೆ ತಮಿಳುನಾಡು ಹಾಗೂ ಕರ್ನಾಟಕವನ್ನು ಕರೆದು ಮಾತಾಡೋಲ್ಲ ಇದು ನಿಮ್ಮ ಜವಾಬ್ದಾರಿ ಅಲ್ವಾ..? ಜವಾಬ್ದಾರಿ ಮೈಮರೆಯಿಸಿ.. ಜನ್ರಿಗೆ ತಪ್ಪು ಸಂದೇಶ ಕೊಡುವುದು ಸರಿಯಲ್ಲ.. ಶೋಭಾ ಕರಂದ್ಲಾಜೆ ಹೇಳಿಕೆಗೆ ಸಚಿವರು ಕೆಂಡಾಮಂಡಲವಾದರು
bigtvnews | Hubli Dharwad News | Kannada News | Karnataka News Hubli News | News In Hubli | Local news





