ಹುಬ್ಬಳ್ಳಿ : UUCMS ತಂತ್ರಾಶದ ಲೋಪದೋಶದಿಂದ NEP ಯ ಪ್ರಥಮ ವರ್ಷದ ಪದವಿ ಮುಗಿಸಿರುವ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಾಡಿ, ಫಲಿತಾಂಶವನ್ನು ನೀಡದೆ ವಿದ್ಯಾರ್ಥಿಗಳು, ಗೊಂದಲದಲ್ಲಿ ಶಿಕ್ಷಣವನ್ನು ಮುಂದುವರಿಸುವಂತೆ ಆಗಿದೆ. ವಿದ್ಯಾರ್ಥಿಗೆ ದೊರೆಯುವ ಸೌಲಭ್ಯಗಳಿಂದ ವಿದ್ಯಾರ್ಥಿಗಳು, ವಂಚಿತರಾಗುವಂತೆ ಆಗಿದೆ, ಹಾಗೂ ಫಲಿತಾಂಶವನ್ನು ವಿಳಂಬವಾಗಿ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಈಗಾಗಲೆ ನಡೆದಿರುವ ಪರೀಕ್ಷೆಗಳ ಮೌಲ್ಯಮಾಪನವನ್ನು ನಡೆಸಿ ಕೂದಲೆ ಫಲಿತಾಂಶವನ್ನು ನೀಡುವ ಅಗತ್ಯವಿದೆ. ಮೊದಲ ವರ್ಷದ ಫಲಿತಾಂಶ ತಿಳಿಯದ ವಿದ್ಯಾರ್ಥಿಗಳು ಗೊಂದಲದಲ್ಲಿ ಇರುವಂತಾಗಿದೆ. ಕಳೆದ …
Read More »ಕನ್ನಡದ ಪ್ರತಿ ಶಾಲೆಯಲ್ಲಿ ಪಾಠಶಾಲಾ ಕ್ಲಿನಿಕ್ ಆರಂಭಿಸಿ- ಗಂಗಾಧರ ದೊಡವಾಡ
ಹುಬ್ಬಳ್ಳಿ ; ಪರಭಾಷಾ ಹಾವಳಿಯಿಂದ ಕನ್ನಡ ಭಾಷೆ ತತ್ತರಿಸುತ್ತಿದ್ದು ಕನ್ನಡ ಭಾಷೆ ಉಳಿವಿಗಾಗಿ ಕನ್ನಡತನದ ಬೆಳವಣಿಗೆಗಾಗಿ ಕರ್ನಾಟಕದ ಸರ್ಕಾರದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪಾಠಶಾಲಾ ಕ್ಲಿನಿಕ್ ಎಂಬ ಹೊಸ ಯೋಜನೆ ರೂಪಿಸಿ ನುರಿತ ಎಂ ಬಿ ಬಿ ಎಸ್ ಗ್ರೇಡಿನ ವೈದ್ಯರನ್ನು ನೇಮಕ ಮಾಡಿ ಎಲ್ಲಾ ಮಕ್ಕಳು ಕನ್ನಡ ಶಾಲೆಯತ್ತ ಆಕರ್ಷಣೆ ಆಗುವಂತೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ …
Read More »ಸಾವಿನಲ್ಲಿ ಒಂದಾದ ಆದರ್ಶ ದಂಪತಿಗಳು
ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮದ ನಿವಾಸಿಗಳು ಹಾಗೂ ಪ್ರಗತಿಪರ ರೈತರಾಗಿದ್ದ ಶಿವಪುತ್ರಪ್ಪ ಶಿದ್ಧಪ್ಪ ನೆಲಗುಡ್ಡ (90) ಮತ್ತು ಶಿವಪುತ್ರಪ್ಪ ಪತ್ನಿ ಬಸಮ್ಮ ಶಿವಪುತ್ರಪ್ಪ ನೆಲಗುಡ್ಡ (86) ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಗಂಡು ಮಕ್ಕಳು ಒಬ್ಬ ಪುತ್ರಿ, ಸೊಸೆ ಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಪ್ರಮಾಣದ ಬಂಧುಗಳನ್ನ ಅಗಲಿದ್ದಾರೆ. ಮೃತ ಶಿವಪುತ್ರಪ್ಪ ಶಿದ್ಧಪ್ಪ ನೆಲಗುಡ್ಡ ಕೃಷಿಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ರೈತರು ಬೆಳೆ ಹಾನಿ, ಸಾಲ ಶೂಲಕ್ಕೆ ಸಿಲುಕಿ ಸಾವನ್ನಪ್ಪಬಾರದು ಎಂದು …
Read More »ಮೊರ್ಬಿ ತೂಗುಸೇತುವೆ ದುರಂತ : ರೋಗಿಗಳ ಆರೋಗ್ಯ ವಿಚಾರಿಸಿದ ಪ್ರಧಾನಿಮೊರ್ಬಿ ತೂಗುಸೇತುವೆ ದುರಂತ : ರೋಗಿಗಳ ಆರೋಗ್ಯ ವಿಚಾರಿಸಿದ ಪ್ರಧಾನಿ
ಗುಜರಾತ್ : ಮೊರ್ಬಿ ತೂಗುಸೇತುವೆ ದುರಂತದಲ್ಲಿ ಗಾಯಗೊಂಡವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲು ಆಯ್ಕೆಯಾದವರಿಗೆ ಹೊಸ ಹಾಸಿಗೆ, ಹೊಸ ಬೆಡ್ ಶೀಟ್ ಗಳನ್ನು ವಿತರಿಸುವುದು ಬೆಳಕಿಗೆ ಬಂದಿದೆ. ಎನ್ ಡಿಟಿವಿ ಸೇರಿದಂತೆ ಖಾಸಗಿ ಟಿವಿ ಚಾನೆಲ್ ಗಳು ರಿಯಾಲಿಟಿ ಚೆಕ್ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಮೊರ್ಬಿ ಜಿಲ್ಲೆಯಲ್ಲಿ ಸಂಭವಿಸಿದ ಘಟನಾ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಧಾನಿ ಮೋದಿ ಭೇಟಿ ಮಾಡುವ ಕೆಲವೇ ಗಂಟೆಗಳ …
Read More »ಸಿಎಂಗೆ ಸವಾಲು ಹಾಕಿದ ಸಿದ್ದರಾಮಯ್ಯ
ಬೆಂಗಳೂರು: ಕುರುಬ ಸಮಾಜದವರ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಹಳ ಪ್ರೀತಿ ಬಂದಿದೆ. ಹಾಗಾಗಿ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಈಶ್ವರಪ್ಪ ಅವರನ್ನು ಸಿಎಂ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರು ಮೀಸಲಾತಿ ಹೆಚ್ಚಳದ ವಿರೋಧಿಗಳು ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಇದೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಎಂದರು. ಸಿದ್ದರಾಮಯ್ಯಗೆ ಕುರುಬರ ಮೇಲೆ …
Read More »ಕಿರುತೆರೆ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ ನಿಧನ
ಚೆನ್ನೈ (ತಮಿಳುನಾಡು): ತಮಿಳು ಕಿರುತರೆಯಲ್ಲಿ ಭಾರಿ ದುರಂತ ನಡೆದಿದೆ. ಪ್ಯಾಲಿಯೋ ಡಯಟ್ನಿಂದ ಜನಪ್ರಿಯ ಕಿರುತೆರೆ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ (43) ಸಾವನ್ನಪ್ಪಿದ್ದಾರೆ. ಭರತ್ ಕಲ್ಯಾಣ್ ದಿವಂಗತ ಕನ್ನಡದ ಖ್ಯಾತ ನಟ ಕಲ್ಯಾಣ್ ಕುಮಾರ್ ಅವರ ಪುತ್ರ. ಸದ್ಯ ಭರತ್ ಕಲ್ಯಾಣ್ ತಮಿಳು ಸಿನಿಮಾ ಮತ್ತು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಕನ್ನಡದ ಜೆಂಟಲ್ಮ್ಯಾನ್, ಆದಿಲಕ್ಷ್ಮಿ ಪುರಾಣ ಚಿತ್ರಗಳಲ್ಲೂ ನಟಿಸಿರುವ ಭರತ್, ಪ್ರಸ್ತುತ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ …
Read More »ಮಳೆರಾಯನ್ನ ಆರ್ಭಟಕ್ಕೆ ಸುಸ್ತಾದ ಬೆಂಗಳೂರು ಜನ
ಬೆಂಗಳೂರು: ನಗರದಲ್ಲಿ ಕೆಲದಿನ ಗಳಿಂದ ಬಿಡುವು ನೀಡಿದ್ದ ಮಳೆ, ಧಾರಾಕಾರವಾಗಿ ಸುರಿಯಿತು. ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡು, ಸಂಜೆ ವೇಳೆ ಜೋರು ಮಳೆಯಾಯಿತು. ರಾಜ್ಯೋತ್ಸವ ದಿನವಾಗಿದ್ದರಿಂದ ನಗರದ ಹಲವೆಡೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೋರು ಮಳೆಯಿಂದಾಗಿ ಕಾರ್ಯಕ್ರಮಗಳ ಆರಂಭಕ್ಕೆ ತೊಂದರೆ ಉಂಟಾಯಿತು. ಕೆಲವರು ಸುರಿಯುವ ಮಳೆಯಲ್ಲೇ ಕಾರ್ಯಕ್ರಮ ನಡೆಸಿದರು. ಮೆಜೆಸ್ಟಿಕ್, ಗಾಂಧಿನಗರ, ಸಂಪಂಗಿ ರಾಮನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಲಾಲ್ಬಾಗ್, ರಿಚ್ಮಂಡ್ ಟೌನ್, ಅಶೋಕನಗರ, ಎಂ.ಜಿ.ರಸ್ತೆ, ಶಿವಾಜಿನಗರ, …
Read More »ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನಕ್ಕೆ ಗಣ್ಯರ ಆಗಮನ : ರಜನಿಕಾಂತ್, ಜ್ಯೂ.ಎನ್.ಟಿ.ಆರ್ ಗೆ ಧನ್ಯವಾದ ತಿಳಿಸಿದ ಸಿಎಂ
ಬೆಂಗಳೂರು : ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಜ್ಯೂ.ಎನ್.ಟಿ.ಆರ್ ಗೆ ಸಿಎಂ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಸಿಎಂ ಬೊಮ್ಮಾಯಿ ನಮ್ಮ ಪ್ರೀತಿಯ ಕರೆಗೆ ಓಗೊಟ್ಟು, ದಿ. ಪುನೀತ್ ರಾಜ್ ಕುಮಾರ್ ರವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲು ಕರ್ನಾಟಕ್ಕೆ ಆಗಮಿಸಿ, ಕನ್ನಡದಲ್ಲಿಯೇ ಮಾತನಾಡಿ ತಮ್ಮ ಕನ್ನಡ ಪ್ರೀತಿ ತೋರಿದ ಮಹಾನ ನಟರಾದ …
Read More »ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿದ NIA
ದಕ್ಷಿಣ ಕನ್ನಡ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಘೋಷಿಸಿದೆ. ಕಳೆದ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ಅವರ ಪತ್ತೆಗಾಗಿ ಈಗ ಎನ್ಐಎ ಬಹುಮಾನವಾಗಿ ನಗದು ಘೋಷಿಸಿದೆ. ಪ್ರಮುಖ ಆರೋಪಿಗಳಾದ ಬೆಳ್ಳಾರೆಯ ಮಹಮ್ಮದ್ ಮುಸ್ತಾಫಾ ಮತ್ತು …
Read More »ಬಸ್ ನಲ್ಲಿಯೇ ಕಂಡಕ್ಟರ್ ಹೃದಯಾಘಾತದಿಂದ ಸಾವು
ಹುಬ್ಬಳ್ಳಿ: ನಗರ ಸಾರಿಗೆಯಲ್ಲಿ ಬಸ್ ಸಂಚರಿಸುತ್ತಿದ್ದಾಗಲೇ ತಪಾಸಣಾ ಅಧಿಕಾರಿ ಬಂದ ಕೆಲವೇ ಕ್ಷಣಗಳಲ್ಲಿ ನಿರ್ವಾಹಕ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ವಿದ್ಯಾನಗರದಲ್ಲಿ ಸಂಭವಿಸಿದೆ. ಮಹೇಶ್ ಹೂಗಾರ ಎಂಬ ನಿರ್ವಾಹಕ ಹೃದಯಾಘಾತದಿಂದ ಸಾವಿಗೀಡಾದವರು. ಹುಬ್ಬಳ್ಳಿಯ ಬಂಡಿವಾಡ ಅಗಸಿಯಿಂದ ಗಾಮನಗಟ್ಟಿಗೆ ಬಸ್ ಹೊರಟಿತ್ತು. ತಪಾಸಣಾ ಅಧಿಕಾರಿ ವಿದ್ಯಾನಗರದ ಬಳಿ ಬಸ್ ನಿಲ್ಲಿಸಿ ಟಿಕೆಟ್ ಬುಕ್ ಪಡೆಯುತ್ತಿದ್ದ ಹಾಗೆ ಕಂಡಕ್ಟರ್ ಮಹೇಶ್ ಹೂಗಾರ ಎದೆ ನೋವಿನಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ತಪಾಸಣಾ ಅಧಿಕಾರಿ ಅಲ್ಲಿಂದ ಪರಾರಿಯಾಗಿದ್ದಾರೆ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





