Breaking News

BigTv News

ಅರಣ್ಯ ಹುತಾತ್ಮರ ಕುಟುಂಬಕ್ಕೆ ಭದ್ರತೆ ಒದಗಿಸಿದ ಸಿಎಂ

ಬೆಂಗಳೂರು: ಅರಣ್ಯ ಹುತಾತ್ಮರ ಕುಟುಂಬಕ್ಕೆ ಸ್ಥಿರತೆ ಮತ್ತು ಭದ್ರತೆ ನೀಡುವ ದೃಷ್ಟಿಯಿಂದ ಹಾಲಿ 30 ಲಕ್ಷ ರೂ.ಇದ್ದ ಪರಿಹಾರದ ಮೊತ್ತವನ್ನು 50 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಬೆಂಗಳೂರಿನಲ್ಲಿ ಭಾನುವಾರ ಅರಣ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2022 ಸಮಾರಂಭದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿ ಮಾತನಾಡಿದರು. ಅರಣ್ಯ ಹುತಾತ್ಮರಿಗೆ 20 ಲಕ್ಷ ರೂ.ಗಳಿದ್ದ ಪರಿಹಾರವನ್ನು 30 ಲಕ್ಷ ರೂ.ಗಳಿಗೆ ಮಾಜಿ ಮುಖ್ಯಮಂತ್ರಿ …

Read More »

ಪಿಎಸ್ ಐ ನೇಮಕಾತಿ ಹಗರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್

ಕೊಪ್ಪಳ : ಪಿಎಸ್ ಐ ನೇಮಕಾತಿ ಹಗರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪಿಎಸ್ ಐ ಹುದ್ದೆಗಾಗಿ ಶಾಸಕರು 15 ಲಕ್ಷ ರೂ. ಪಡೆದುಕೊಂಡಿದ್ದಾರೆ ಎಂಬ ಆಡಿಯೋ ವೈರಲ್ ಬೆನ್ನಲ್ಲೇ ಶಾಸಕರು ಹಣ ವಾಪಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಪರಸಪ್ಪ ಮೇಗೂರು ಎಂಬುವರು ಪಿಎಸ್ ಐ ಹುದ್ದೆಗಾಗಿ ಶಾಸಕ ಬಸವರಾಜ ದಡೇಸಗೂರು ಅವರಿಗೆ 15 ಲಕ್ಷ ರೂ. ನೀಡಿರುವುದಾಗಿ ಹೇಳಿಕೊಂಡಿದ್ದ ಆಡಿಯೋ ವೈರಲ್ ಆಗಿತ್ತು. ಆಡಿಯೋ ವೈರಲ್ ಬೆನ್ನಲ್ಲೇ ಪರಸಪ್ಪಗೆ ಶಾಸಕರು …

Read More »

ರೀಲ್ಸ್​ ಮಾಡುಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಸಲುವಾಗಿ ರೀಲ್ಸ್​ ಮಾಡುವ ಒಂದೇ ಕಾರಣಕ್ಕೆ ಏನೇನೋ ಸಾಹಸಕ್ಕೆ ಮುಂದಾಗಿ ಅನಾಹುತ ಮಾಡಿಕೊಂಡ ಪ್ರಕರಣಗಳು ಬೇಕಾದಷ್ಟು ಇವೆ. ಇನ್ನು ಕೆಲವರು ಹಾಗೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದೂ ಇದೆ.ಅಂಥದ್ದೇ ಒಂದು ಪ್ರಕರಣವಿದು. ಇಲ್ಲೊಬ್ಬಳು ಯುವತಿ ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗಾನಹಳ್ಳಿ ಗ್ರಾಮದ ಬಳಿ ಈ ಅವಘಡ ನಡೆದಿದೆ. ಅಮೃತ (22) ಸಾವಿಗೀಡಾದ ಯುವತಿ. ಈಕೆ ಮೂಲತಃ …

Read More »

ಜವರಾಯನ ಅಟ್ಟಹಾಸಕ್ಕೆ ಏಳು ಮಂದಿ ದುರ್ಮರಣ

ಕೊರ್ಬಾ(ಛತ್ತೀಸ್​​ಗಢ): ಇಂದುಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ಏಳು ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಛತ್ತೀಸ್​​ಗಢದ ಕೊರ್ಬಾ ಎಂಬಲ್ಲಿ ನಡೆದಿದೆ.ಇಲ್ಲಿನ ಪಾಂಡಿ ಉಪೋರ್ಡಾ ರಾಷ್ಟ್ರೀಯ ಹೆದ್ದಾರಿ 130ರಲ್ಲಿ ಅಪಘಾತ ಸಂಭವಿಸಿತು. ವೇಗವಾಗಿ ಚಲಿಸುತ್ತಿದ್ದ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅನೇಕ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಖಾಸಗಿ ಟ್ರಾವೆಲ್ಸ್​​ಗೆ ಸೇರಿದ್ದ ಬಸ್​ ಛತ್ತೀಸ್​​​ಗಢ ರಾಜಧಾನಿ …

Read More »

ಬಾಲಿವುಡ್ ನಟನ ಮೇಲೆ ಆರೋಪ ಮಾಡಿದ ಸ್ವರಾ ! ಯಾರು ಗೊತ್ತಾ?

ಬಾಲಿವುಡ್ ನಲ್ಲಿ ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ತನಗೆ ಅನಿಸಿದ್ದನ್ನು ಹೇಳುವ ನಟಿಮಣಿಯರಲ್ಲಿ ಸ್ವರಾ ಭಾಸ್ಕರ್ ಕೂಡ ಒಬ್ಬಳು. ಯಾರು ಏನೆಂದುಕೊಳ್ಳುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ವರಾ ಮಾತುಗಳನ್ನು ಆಡುತ್ತಾಳೆ. ಸ್ವರಾ ನಟನೆ ಮಾಡುವ ಚಿತ್ರಗಳಿಗಿಂತ ಅವಳು ನೀಡುವ ಹೇಳಿಕೆಗಳೇ ಭಾರಿ ಹೆಡ್ಲೈನ್ ಗಿಟ್ಟಿಸುತ್ತವೆ. ಇದೀಗ ಮತ್ತೊಮ್ಮೆ ಗಂಭೀರ ಹೇಳಿಕೆ ನೀಡುವ ಮೂಲಕ ಸ್ವರಾ ಭಾರಿ ಚರ್ಚೆಗೆ ಗ್ರಾಸವಾಗಿದ್ದಾಳೆ. ಆದರೆ, ಈ ಬಾರಿ ಖ್ಯಾತ ಬಾಲಿವುಡ್ ನಟ ಶಾರುಕ್ …

Read More »

ರಿಯಾಜ್ ಫರಂಗಿಪೇಟೆ ಮನೆ ಮೇಲೆ NIA ದಾಳಿ ಖಂಡಿಸಿ ಹುಬ್ಬಳ್ಳಿಯಲ್ಲಿ SDPI ಪ್ರತಿಭಟನೆ…!

ಹುಬ್ಬಳ್ಳಿ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪಂಗಿಪೇಟೆ ಅವರ ಮನೆಯ ಮೇಲಿನ ಎನ್ಐಎ ದಾಳಿಯನ್ನು ಖಂಡಿಸಿ ಎಸ್ ಡಿಪಿಐ ಜಿಲ್ಲಾ ಘಟಕದ ಪದಾಧಿಕಾರಿಗಳು ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಮತ್ತು ವಿವಿಧ ಸುಳ್ಳು ಪ್ರಕರಣಗಳನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಸರ್ಕಾರ ಎಸ್ ಡಿಪಿಐ ವಿರುದ್ಧ ಷಡ್ಯಂತರ ರೂಪಿಸುತ್ತಿದೆ. ಎಸ್‌ಡಿಪಿಐ ಸಂಬಂಧಿತ ಕಾರ್ಯಕರ್ತರ ಮತ್ತು ಕಚೇರಿಗಳ …

Read More »

ಗಣೇಶ ವಿಸರ್ಜನೆ ವೇಳೆ ವ್ಯಕ್ತಿಗೆ ಚಾಕು ಇರಿತ, ದುಷ್ಕರ್ಮಿ ಪರಾರಿ..!

ಧಾರವಾಡ: ಗಣೇಶ ಮೆರವಣಿಗೆ ಸಂದರ್ಭದಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ದುಷ್ಕರ್ಮಿ ನಂತರ ಸ್ಥಳದಿಂದ ಕಾಲ್ಕಿತ್ತ ಘಟನೆ ಕೆಲಗೇರಿ ಆಂಜನೇಯ ನಗರದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪ್ರಜ್ವಲ್ ಎಂಬುವವರ ಕಣ್ಣು ಹುಬ್ಬಿನ ಮೇಲೆ ಇರಿದು ಗಾಯಗೊಳಿಸಲಾಗಿದೆ. ಗಂಭೀರ ಗಾಯಗೊಂಡಿರುವ ಪ್ರಜ್ವಲ್​ನನ್ನು ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ. ಕೆಲಗೇರಿ ಆಂಜನೇಯ ನಗರದಲ್ಲಿ 11ನೇ ದಿನದ ಗಣೇಶ ನಿಮಜ್ಜನಾ ಮೆರವಣಿಗೆಯಲ್ಲಿ ಘಟನೆ ನಡೆಯಿತು. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಲಾರಿ ಬಿಡಿ ಭಾಗ ಮಾರುವ ದುರುದ್ದೇಶ , ಅಂತರಾಜ್ಯ ಕಳ್ಳನ ಬಂಧನ

ಕುಂದಗೋಳ : ಮಹಾರಾಷ್ಟ್ರದ ಕೊಲ್ಲಾಪುರದಿಂದ ಲಾರಿಯನ್ನ ಕದ್ದು ಹುಬ್ಬಳ್ಳಿ ಲಕ್ಷ್ಮೀಶ್ವರ ರಾಜ್ಯ ಹೆದ್ದಾರಿಯ ರಸ್ತೆಯ ಮೂಲಕ ಸಾಗಾಟ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಕುಂದಗೋಳ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ . ಪೊಲೀಸರು ದಾಳಿ ಮಾಡಿ ಆರೋಪಿ ಸಮೇತ ಲಾರಿಯನ್ನ ವಶಕ್ಕೆ ಪಡೆದುಕೊಂಡಿದ್ದು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ . ಮಹಾರಾಷ್ಟ್ರದಿಂದ ಲಾರಿಯನ್ನು ಎಗರಿಸಿದ ಕಳ್ಳ ವಾಹನದ ನಂಬರ್ ಪ್ಲೇಟ್‌ಗೆ ಹಳದಿ ಬಣ್ಣ ಬಳಿದು , ವಾಹನ ಬಿಡಿ ಭಾಗಗಳನ್ನು ಹಾಗೂ ವಾಹನದ ಇಂಜಿನ್ …

Read More »

ಸೋನಿಯಾ ಗಾಂಧಿಗೆ ಶಾಕ್ ಕೊಟ್ಟ ಕಾಂಗ್ರೆಸ್ ಸಂಸದರು

ನವದೆಹಲಿ : ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟದ ಕಾಲವನ್ನು ಎದುರಿಸುತ್ತಿದೆ. ಇತ್ತೀಚೆಗೆ ಹಿರಿಯ ನಾಯಕರು ಒಬ್ಬೊಬ್ಬರಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದಾರೆ. ಇತ್ತೀಚೆಗೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕೂಡ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ನಾಯಕತ್ವದ ಧೋರಣೆ ಟೀಕೆಗೆ ಗುರಿಯಾಗಿದೆ.ಈ ಎಲ್ಲಾ ಬೆಳವಣಿಗೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ …

Read More »

ತೋಟದಲ್ಲಿ ಹಾವು ಕಚ್ಚಿ ಯುವಕ ಸಾವು

ಚನ್ನಗಿರಿ: ತೋಟದಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಹಾವು ಕಚ್ಚಿ ಮೃತ ಮಟ್ಟಿರುವ ಘಟನೆ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಟ್ಟಣದ ನಿವಾಸಿ ಶಂಕರ್(41) ಮೃತ ದುರ್ದೈವಿ. ಮುದ್ದೇನಹಳ್ಳಿ ಗ್ರಾಮದಲ್ಲಿ ತೋಟಕ್ಕೆ ಕಳೆನಾಶಕವನ್ನು ಸಿಂಪಡಿಸುವ ವೇಳೆ ಕಾಲಿಗೆ ಹಾವು ಕಚ್ಚಿದ್ದು ಸ್ಥಳದಲ್ಲಿಯೇ ಕುಸಿದು ಬಿದಿದ್ದು, ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕರಿಯಾಗದೇ ಸಾವನ್ನಪಿದ್ದಾರೆ. ಮೃತರ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಚನ್ನಗಿರಿ …

Read More »