ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತೆ 5,000ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಂದರೆ 5,076 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಈವರೆಗೆ 5,28,150 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. 24 ಗಂಟೆಯಲ್ಲಿ 6,322 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ 47,945 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಶೇ.98.70ರಷ್ಟು ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,39,19,264 …
Read More »ಹಬ್ಬಕ್ಕೆ ಬಂದ ತಾಯಿ ಮಗಳು ಸ್ಮಶಾನ ಸೇರಿದರು
ಚಂಗರಂಕುಲಂ: ಓಣಂ ಹಬ್ಬದ ರಜಾ ದಿನ ಹಿನ್ನೆಲೆಯಲ್ಲಿ ತವರಿಗೆ ಬಂದಿದ್ದ ಅಮ್ಮ-ಮಗಳು ಸ್ನಾನಕ್ಕೆಂದು ಹೋಗಿ ಕರೆ ದಂಡೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೃತರನ್ನು ಶೈನಿ (40) ಮತ್ತು ಆಕೆಯ ಮಗಳು ಆಶ್ಚರ್ಯ (13) ಎಂದು ಗುರುತಿಸಲಾಗಿದೆ. ಈ ಘಟನೆ ಶನಿವಾರ ಬೆಳಗ್ಗೆ ಪಡಿಂಜಟ್ಟುಮುರಿಯ ಪಲ್ಲಿಕ್ಕಾರೈನ್ನಲ್ಲಿ ನಡೆದಿದೆ. ಇಬ್ಬರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅವರನ್ನು ದಡಕ್ಕೆ ಎಳೆದು ಚಂಗರಂಕುಲಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದದ್ದರೂ ಜೀವ ಉಳಿಸಲು …
Read More »ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ ಗೆ ಬಿಗ್ ಟ್ವಿಸ್ಟ್
ಮಂಡ್ಯ: ಇಲ್ಲಿನ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ನಿಜವಾಗಿಯೂ ಹನಿಟ್ರ್ಯಾಪ್ನಲ್ಲಿ ಸಿಕ್ಕಿಹಾಕಿಕೊಂಡರಾ?ಎಂಬ ಅನುಮಾನ ಈಗ ಮೂಡುತ್ತಿದೆ. ಇವರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಹಲವು ದಿನಗಳಿಂದ ಪ್ಲಾನ್ ನಡೆದಿತ್ತಂತೆ. ಈ ವ್ಯಾಪಾರಿಯ ಜೊತೆಗೆ ಲಾಡ್ಜ್ನಲ್ಲಿ ಕಾಣಿಸಿಕೊಂಡ ಯುವತಿಯೂ ಕೂಡ ಸಲ್ಮಾ ಭಾನು ಆಂಡ್ ಟೀಂನ ಸದಸ್ಯೆ. ಆ ಯುವತಿಯ ಮೂಲಕವೇ ಜಗನ್ನಾಥ್ ಶೆಟ್ಟಿಗೆ ಖೆಡ್ಡಾ ತೋಡಿದ್ದಾರೆ ಎಂಬುದು ಲೇಟೆಸ್ಟ್ ವಿಚಾರ. ಫೋನ್ ಮೂಲಕ ಯುವತಿ ಜಗನ್ನಾಥ್ ಶೆಟ್ಟಿ ಅವರ ಸ್ನೇಹ ಸಂಪಾದಿಸಿದ್ದಳು. …
Read More »ಹಿರಿಯ ಪುರಾತತ್ವ ಶಾಸ್ತ್ರಜ್ಞ ಬೃಜ್ಬಾಸಿ ಲಾಲ್ ನಿಧನ
ನವದೆಹಲಿ(ಪಿಟಿಐ): ಪದ್ಮವಿಭೂಷಣ ಪುರಸ್ಕೃತ ಹಿರಿಯ ಪುರಾತತ್ವ ಶಾಸ್ತ್ರಜ್ಞ ಬೃಜ್ಬಾಸಿ ಲಾಲ್ (101) ಶನಿವಾರ ಇಲ್ಲಿ ನಿಧನರಾದರು. ಬಿ.ಬಿ.ಲಾಲ್ ಅವರು ಭಾರತೀಯ ಪುರಾತತ್ವ ಇಲಾಖೆಯ ಮಹಾ ನಿರ್ದೇಶಕರಾಗಿದ್ದರು. ರಾಮ ಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ಉತ್ಖನನ ವೇಳೆ ದೇವಸ್ಥಾನ ಮಾದರಿಯ ನಾಲ್ಕು ಕಂಬಳನ್ನು ಅವರು ಗುರುತಿಸಿದ್ದರು. ಅಯೋಧ್ಯೆಯಲ್ಲಿ ಮಂದಿರ ಇತ್ತು ಎಂಬ ವಾದಕ್ಕೆ ಇದುವೇ ಪ್ರಮುಖ ಸಾಕ್ಷ್ಯವಾಗಿ ಬದಲಾಗಿತ್ತು. ಲಾಲ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಸ್ಕೃತಿ ಸಚಿವ ಕೃಷ್ಣಾ ರೆಡ್ಡಿ …
Read More »ಐದನೇ ದಿನಕ್ಕೆ ಕಾಲಿಟ್ಟಿ ಕಾಂಗ್ರೆಸ್ನ ಭಾರತ್ ಜೋಡೊ ಯಾತ್ರೆ
ತಿರುವನಂತಪುರಂ (ಕೇರಳ): ಪಕ್ಷದ ಸಂಸದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಭಾರತ್ ಜೋಡೊ ಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಯಾತ್ರೆಯು ಇಂದು ಕೇರಳಕ್ಕೆ ಪ್ರವೇಶಿಸಿದೆ. ಕಾಂಗ್ರೆಸ್ ನಾಯಕರು ಕೇರಳ ಮತ್ತು ತಮಿಳುನಾಡು ಗಡಿಯ ಸಮೀಪದಲ್ಲಿರುವ ಸಣ್ಣ ಪಟ್ಟಣವಾದ ಪರಸ್ಸಾಲವನ್ನು ತಲುಪಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಮೀ ಪಾದಯಾತ್ರೆ 150 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಮತ್ತು 12 ರಾಜ್ಯಗಳನ್ನು ಒಳಗೊಂಡಿದೆ. ಕೇರಳದಿಂದ, ಯಾತ್ರೆಯು ಮುಂದಿನ 18 ದಿನಗಳ ಕಾಲ ರಾಜ್ಯದ ಮೂಲಕ ಸಂಚರಿಸಲಿದ್ದು, …
Read More »ಗಣಪತಿ ಮೆರವಣಿಗೆಯಲ್ಲಿ ಯುವಕನ ಬರ್ಬರವಾಗಿ ಹತ್ಯೆ
ಬೆಳಗಾವಿ: ಗಣಪತಿ ಮೆರವಣಿಗೆಯಲ್ಲೇ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಗಣಪತಿ ವಿಸರ್ಜನೆ ವೇಳೆ ಚಾಕುವಿನಿಂದ ಇರಿದು ಅರ್ಜುನಗೌಡ ಪಾಟೀಲ(20) ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅರ್ಜುನಗೌಡ ಕುಸಿದು ಬೀಳುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮುರಗೋಡ ಪೊಲೀಸ್ ಠಾಣೆ …
Read More »ಮೈಸೂರು ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಲನೆ
ಬೆಂಗಳೂರು: ರಾಷ್ಟ್ರದ ಪ್ರಥಮ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಕಟಿಸಿದ್ದಾರೆ. ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ವೇಳೆ ಸಿಎಂ ಬೊಮ್ಮಾಯಿ ಅವರು ಈ ಮಹತ್ವ ಘೋಷಣೆ ಮಾಡಿದ್ದಾರೆ.ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಾರಿ ಮೈಸೂರು ದಸರಾ ಉತ್ಸವನ್ನು …
Read More »ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರೊಬ್ಬರಿಗೆ ಸಿಎಂ ಕಚೇರಿಯಲ್ಲಿ ಕೆಲಸ
ಬೆಂಗಳೂರು: ಕರಾವಳಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರೊಬ್ಬರಿಗೆ ತಮ್ಮ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಘೋಷಣೆ ಮಾಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ವೇಳೆ ಸಿಎಂ ಬೊಮ್ಮಾಯಿ ಅವರು ಈ ಮಹತ್ವ ಘೋಷಣೆ ಮಾಡಿದ್ದಾರೆ.ತಮ್ಮ ಭಾಷಣವನ್ನು ಮುಗಿಸಿ ವೇದಿಕೆಯ ಮೇಲೆ ಕುತಿದ್ದ ಸಿಎಂ ಬಳಿಕ ಪುನಃ ಬಂದು ಈ ಘೋಷಣೆಯನ್ನು ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದ ನೆರವು ನೀಡುತ್ತೇವೆ. …
Read More »ಹಾಡಹಗಲೇ ಬಂಗಾರದ ಅಂಗಡಿಗೆ ಕನ್ನ;ಬೆಚ್ಚಿ ಬಿದ್ದ ಕುಸುಗಲ್ ಜನತೆ!
ಹುಬ್ಬಳ್ಳಿ- ಹಾಡಹಗಲೇ ಬಂಗಾರದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮರು ಕಳ್ಳತನಕ್ಕೆ ಯತ್ನಿಸಿದ ದೃಶ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕುಸಗಲ್ ಗ್ರಾಮದ ಪಂಚಾಯತಿ ಹತ್ತಿರ ನಡೆದಿದೆ. ಹೌದು,,, ಇತ್ತೀಚಿನ ದಿನಗಳಲ್ಲಿ ಕುಸಗಲ್ ಗ್ರಾಮದಲ್ಲಿ ಕಳ್ಳತನ ಹಾವಳಿ ಹೆಚ್ಚಾಗಿದೆ. ಕುಸಗಲ್ ಗ್ರಾಮದಲ್ಲಿ ಗುರುನಾಥ ಕಮ್ಮಾರ ಎಂಬುವವರಿಗೆ ಸೇರಿದ ಈ ಬಂಗಾರ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಗಲ್ಲೆಗೆ ಕೈ ಹಾಕಿ ಕಳ್ಳತನಕ್ಕೆ ಯತ್ನ ಮಾಡಿರುವ ಸಿಸಿ ಕ್ಯಾಮರಾದಲ್ಲಿ …
Read More »2023 ರ ಚುನಾವಣೆ ಯಲ್ಲಿ ಭಾಜಪದ ಕಮಲ ಅರಳುವ ಸಂದೇಶ ಸ್ಪಷ್ಟ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು : ಜನಸ್ಪಂದನ ಕರ್ನಾಟಕದ ಹಳ್ಳಿ ಹಳ್ಳಿಗೂ, ಮೂಲೆ ಮೂಲೆಗೂ, ಕರ್ನಾಟಕದ ಪ್ರತಿ ತಾಲ್ಲೂಕು, ಕ್ಷೇತ್ರಕ್ಕೆ ಪ್ರಯಾಣಿಸಲಿದೆ.2023 ರ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ ದ ಕಮಲ ಅರಳುವ ಸಂದೇಶ ಸ್ಪಷ್ಟವಾಗಿ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು. ಅವರು ಇಂದು ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಆಯೋಜಿಸಿದ್ದ “ ಜನಸ್ಪಂದನ” ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಗಳ ಆನಾವರಣ ಹಾಗೂ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ದಿಟ್ಟ ನಿಲುವಿನಿಂದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





