ನವಲಗುಂದ : ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನವಲಗುಂದ ಪಟ್ಟಣದ ಹೊರಹೊಲಯದಲ್ಲಿನ ಜಮೀನಿನಲ್ಲಿ ನಡೆದಿದೆ . ಆತ್ಮಹತ್ಯೆಗೆ ಸಾಲಭಾದೆಯೇ ಕಾರಣ ಎನ್ನಲಾಗಿದೆ . ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯನ್ನು 48 ವರ್ಷದ ಬಸವರಾಜ ಉಣಕಲ್ ಎಂದು ಗುರುತಿಸಲಾಗಿದೆ . ಎರಡು ಎಕರೆ ಜಮೀನಿನಲ್ಲಿ ಬೆಳೆ ಬೆಳೆದಿದ್ದ ರೈತ , 3 ಲಕ್ಷ ಸಾಲ ಪಡೆದಿದ್ದ ಆದರೆ ಅಕಾಲಿಕ ಮಳೆಯಿಂದಾಗಿ ಬೆಳೆ ಸಂಪೂರ್ಣ ಹಾನಿಯಾಗಿದ್ದು , ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ …
Read More »ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ : ಗೋಕುಲ ಠಾಣೆ ಪೊಲೀಸರ ಕಾರ್ಯಾಚರಣೆ
ಹುಬ್ಬಳ್ಳಿ : ನಗರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಗೋಕುಲ್ ಠಾಣೆಯ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ . ನಗರದ ಡಾಲರ್ಸ್ ಕಾಲೋನಿಯಲ್ಲಿ ಅಕ್ರಮವಾಗಿ 2 ಕೆ.ಜಿ 93 ಗ್ರಾಂ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಹುಬ್ಬಳ್ಳಿ ಮೂಲದ ಶಾನವಾಜ ಬ್ಯಾಹಟ್ಟಿ ಹಾಗೂ ಆಯಾನಲಿ ಬಿಜಾಪುರ ಎಂಬವರನ್ನು ಗೋಕುಲ್ ಠಾಣೆಯ ಇನ್ಸೆಕ್ಟರ್ ಜೆ.ಎಂ ಖಾಲಿಮಿರ್ಚಿ ನೇತೃತ್ವದ ತಂಡ ಬಂಧಿಸಿದೆ . ಆರೋಪಿಗಳ ಮೇಲೆ …
Read More »ಹುಬ್ಬಳ್ಳಿಯಲ್ಲಿ ಸರ್ಕಾರಕ್ಕೆ ಸವಾಲು ಹಾಕಿದ ಮಾಜಿ ಡಿಸಿಎಂ
ಹುಬ್ಬಳ್ಳಿ : ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರು ಕಾಂಗ್ರೆಸ್ ನಿಂದ ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸುವ ಸರಕಾರವು ಆ ಬಗ್ಗೆ ತನಿಖೆ ನಡೆಸಲಿ. ಆಗ ಯಾರು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಹೇಗಿದ್ದರೂ ರಾಜ್ಯದಲ್ಲಿ ಬಿಜೆಪಿಯದ್ದೇ ಸರಕಾರವಿದೆ ಎಂದು ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ ಹೇಳಿದರು.ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರು ಮಾಡುತ್ತಿರುವ ಕಮಿಷನ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುವುದಾದರೆ ಆ ಬಗ್ಗೆ ಸರಕಾರ ತನಿಖೆ ಮಾಡಲಿ. …
Read More »ಗಣೇಶೋತ್ಸವ ಮೆರವಣಿಗೆಯಲ್ಲಿ ಯಾರೂ ಡಿಜೆ ಬಳಸುವಂತಿಲ್ಲ : ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದಶಿ
ಶಿವಮೊಗ್ಗ: ಈ ಬಾರಿಯ ಗಣೇಶೋತ್ಸವ ಮೆರವಣಿಗೆಯಲ್ಲಿಯಾರೂ ಡಿಜೆ ಬಳಸುವಂತಿಲ್ಲ. ಪ್ರತಿ ವರ್ಷವೂ ಡಿಜೆ ಅನ್ನು ಬ್ಯಾನ್ ಮಾಡುತ್ತಿದ್ದೆವು. ಹಾಗೆಯೇ ಈ ವರ್ಷವೂ ಡಿಜೆ ಬ್ಯಾನ್ ಮಾಡುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದೆವು. ಡಿಸಿ ಅವರು ಯಾರು ಮೆರವಣಿಗೆ ವೇಳೆ ಡಿಜೆ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಹಾಗಾಗಿ ಸಾರ್ವಜನಿಕರು ಈ ಆದೇಶ ಪಾಲಿಸಬೇಕು …
Read More »ನಾವೂ ರಾಯಚೂರನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ, ಒಂದಿಂಚು ಜಾಗ ಕೊಡಲ್ಲ : ಬೊಮ್ಮಾಯಿ
ಬೆಂಗಳೂರು: ರಾಯಚೂರನ್ನ ತೆಲಂಗಾಣಕ್ಕೆ ಸೇರಿಸೋ ಬಗ್ಗೆ ಅಲ್ಲಿನ ಜನ ಮಾತನಾಡ್ತಿದ್ದಾರೆ ಅಂತ ತೆಲಂಗಾಣ ಸಿಎಂ ಹೇಳಿಕೆ ಕೊಟ್ಟಿದ್ರಲ್ಲ ಅದಕ್ಕೆ ಈಗ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ನೀಡಿರೋ ಹೇಳಿಕೆ ರಾಜಕೀಯ ಪ್ರೇರಿತ. ತೆಲಂಗಾಣದ ಸಮಸ್ಯೆ ಡೈವರ್ಟ್ ಮಾಡೋಕೆ ಈ ಹೇಳಿಕೆ ನೀಡಿದ್ದಾರೆ. ತೆಲಂಗಾಣ ಹಿಂದುಳಿದಿದೆ ಅಂತ ಹೋರಾಟ ಮಾಡಿ, ಪ್ರತ್ಯೇಕ ರಾಜ್ಯ ತೆಗೊಂಡ್ರು. ಆದ್ರೆ ಅದು ಇನ್ನೂ ಹಿಂದುಳಿದಿದೆ. ನಾವೂ ರಾಯಚೂರನ್ನು ಸಂಪೂರ್ಣ …
Read More »ಕಾಂಗ್ರೆಸ್ನ ಪ್ರತಿ ಕಾರ್ಯಕರ್ತನೂ ಅವರ ನಿಲುವನ್ನು ತೀಕ್ಷ್ಣವಾಗಿ ವಿರೋಧಿಸುತ್ತಾನೆ : ಎಚ್.ಕೆ.ಪಾಟೀಲ
ಗದಗ: ‘ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ದೇಶವ್ಯಾಪಿ ಸಕ್ರಿಯ ಹೋರಾಟ ಪ್ರಾರಂಭಿಸಿರುವ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತ್ಯಜಿಸುವ ನಿರ್ಣಯ ಕೈಗೊಂಡಿರುವುದು ಕೋಮುವಾದಿಗೆ ಬಲ ತುಂಬುವ ಪ್ರಯತ್ನವೇ ಹೊರತು ಬೇರೆನೂ ಅಲ್ಲ.ಕಾಂಗ್ರೆಸ್ನ ಪ್ರತಿ ಕಾರ್ಯಕರ್ತನೂ ಅವರ ನಿಲುವನ್ನು ತೀಕ್ಷ್ಣವಾಗಿ ವಿರೋಧಿಸುತ್ತಾನೆ’ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು. ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪಕ್ಷ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಆಜಾದ್ ಜನದ್ರೋಹಿ ನಿರ್ಣಯ ಕೈಗೊಂಡಿದ್ದಾರೆ. ಆದರೆ, …
Read More »ಮುರುಘಾ ಮಠದ ಶರಣರ ಮೇಲಿನ ಕೇಸ್ಗೆ ಬಿಗ್ ಟ್ವಿಸ್ಟ್
ಚಿತ್ರದುರ್ಗ: ಮುರುಘಾ ಮಠದ ಶರಣರ ಮೇಲಿನ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮುರುಘಾ ಶರಣರು, ವಾರ್ಡನ್ ಮೇಲಿನ ಮೈಸೂರಿನಲ್ಲಿ ದಾಖಲಾದ ಎಫ್ಐಆರ್ ನ 2 ನೇ ಆರೋಪಿ ರಶ್ಮಿ ಅವರು ಬಸವರಾಜನ್ ದಂಪತಿ ಮೇಲೆ ಪ್ರತಿ ದೂರು ದಾಖಲು ಮಾಡಿದ್ದಾರೆ. ಬೃಹನ್ಮಠದ ಮಾಜಿ ಆಡಳಿತಾಧಿಕಾರಿಯಾಗಿರುವ ಹಾಗೂ ಮಾಜಿ ಶಾಸಕ ಎಸ್.ಕೆ ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧ ಅತ್ಯಾಚಾರಕ್ಕೆ ಯತ್ನ ಪ್ರಕರಣವನ್ನು ರಶ್ಮಿ ದಾಖಲು ಮಾಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ …
Read More »ರಾಜ್ಯದಲ್ಲಿ ಮಳೆ ಮುಂದಿನ 4 ದಿನ ಇನ್ನಷ್ಟು ಬಿರುಸು
ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಇನ್ನಷ್ಟು ಬಿರುಸುಗೊಳ್ಳಲಿದೆ. ಶನಿವಾರವೂ ವಿವಿಧ ಜಿಲ್ಲೆಗಳಲ್ಲಿ ಜೋರಾಗಿ ಮಳೆಯಾಗಿದ್ದು, ಮಾನ್ವಿ 19, ಮದ್ದೂರು 10, ಶಿರಾ 9, ರಾಮನಗರ 9, ರಾಯಚೂರು, ಬಳ್ಳಾರಿಯ ಕೊಟ್ಟೂರು, ಶ್ರೀರಂಗಪಟ್ಟಣ ಮತ್ತು ಬೆಂಗಳೂರು ತಲಾ 7 ಸೆಂಮೀ ಬಿದ್ದಿದೆ. ಚಿಕ್ಕಮಗಳೂರು, ಚಾಮರಾಜನಗರ, ಕೋಲಾರದಲ್ಲಿ ಮುಂದಿನ 4 ದಿನ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಬೆಂ.ಗ್ರಾಮಾಂತರ, ತುಮಕೂರಿನಲ್ಲಿ ಆ.29ರಿಂದ ಆ.31ರವರೆಗೆ ಭಾರಿ ಮಳೆ ಬೀಳುವ …
Read More »ರಾಯಚೂರು ನ್ನು ಏಮ್ಸ್ ಗೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ : ಸಿಎಂರಾ
ರಾಯಚೂರು: ಹಿಂದುಳಿದಿರುವಿಕೆ, ಮಹಾತ್ವಕಾಂಕ್ಷಿ ಜಿಲ್ಲೆ ಮತ್ತು ಅಪೌಷ್ಠಿಕತೆ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉನ್ನತ ಆರೋಗ್ಯ ಸಂಸ್ಥೆ ಅಗತ್ಯವಾಗಿದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಮೀಕ್ಷೆ ನಡೆಸಿ, ಏಮ್ಸ್ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಸವರಾಜ ಬೊಮ್ಮಾಯಿ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಸಿರಿಧಾನ್ಯ ಮೇಳ ಕಾರ್ಯಕ್ರಮ ಉದ್ಘಾಟನೆ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾನವ …
Read More »ಪಿಎಸ್ಐ ಹಗರಣ : ರಾಜ್ಯಕ್ಕೆ ಮೊದಲ ರ್ಯಾಂಕ್ ಅಭ್ಯರ್ಥಿ ಬಂಧನ
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಹನುಮಂತ ಅವರನ್ನು ಬಂಧಿಸಿದ್ದಾರೆ. 545 ಪಿಎಸ್ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 17ನೇ ಆರೋಪಿಯಾಗಿರುವ ರಚನಾ ಹನುಮಂತಳನ್ನು ಸಿಐಡಿ (CID) ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆದಿದೆ. ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ರಚನಾ ಹನುಮಂತ ಮೊದಲ ರ್ಯಾಂಕ್ ಪಡೆದಿದ್ದರು. ಅಕ್ರಮ ಪ್ರಕರಣ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





