Breaking News

BigTv News

ನಾವು ಶಶಿಕಲಾ‌ ಜೊಲ್ಲೆಗೆ ಹುಟ್ಟಿದವರಲ್ಲ : ನಲಪಾಡ್

ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಮತ್ತೆ ವಿವಾದವನ್ನು  ಮೈಮೇಲೆ ಎಳೆದುಕೊಂಡಿದ್ದಾರೆ. ನಲಪಾಡ್  ನಾಲಿಗೆ ಹರಿಬಿಟ್ಟಿದ್ದಾರೆ. ನಾವು ಶಶಿಕಲಾ‌ ಜೊಲ್ಲೆಗೆ  ಹುಟ್ಟಿದವರಲ್ಲ ಎಂದು ನಲಪಾಡ್ ಹೇಳಿದ್ದಾರೆ. ಕೊಡಗಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಕಾರಿನ ಮೇಲೆ ಮೊಟ್ಟೆ  ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಲೈವ್ ನಲ್ಲಿ  ನಲಪಾಡ್ ಮಾತನಾಡಿ ವಿವಾದಿತ ಹೇಳಿಕೆ ಕೊಟ್ಟಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಮುಂದಾದ ನಲಪಾಡ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ …

Read More »

ಖ್ಯಾತ ಸಾಹಿತಿ, ಕವಿ, ಪತ್ರಕರ್ತ ಉದಯ ಧರ್ಮಸ್ಧಳ ನಿಧನ

ಬೆಂಗಳೂರು: ಖ್ಯಾತ ಸಾಹಿತಿ, ಕವಿ, ಪತ್ರಕರ್ತ ಹಾಗೂ ಕನ್ನಡಪರ ಹೋರಾಟಗಾರ ʻಉದಯ ಧರ್ಮಸ್ಧಳʼ ಅನಾರೋಗ್ಯದಿಂದಾಗಿ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಸದಾ ಕ್ರೀಯಾಶೀಲರಾಗಿದ್ದ 64 ವರ್ಷದ ಉದಯ ರವರು ಕಳೆದ ಮೂರು ದಶಕಗಳಿಗಿಂತಲೂ ಹೆಚ್ಟು ಕಾಲ ಕನ್ನಡ, ಕರ್ನಾಟಕ ಹಿತರಕ್ಷಣೆಗಾಗಿ ನಡೆದ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು. ಧರ್ಮಸ್ಧಳ ಮೂಲವರಾದ ಇವರು ಹಲವು ವರ್ಷಗಳಿಂದ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲೇ ವಾಸವಿದ್ದಾರೆ.

Read More »

ಸಿದ್ದರಾಮಯ್ಯಗೆ ಭದ್ರತೆ ಹೆಚ್ಚಿಸುವಂತೆ ಸೂಚನೆ : ಸಿಎಂ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭದ್ರತೆ ಹೆಚ್ಚಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಇದೆ ಎಂಬ ಹೇಳಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಪೊಲೀಸ್‌ ಮಹಾನಿರ್ದೇಶಕರನ್ನು ಕರೆಸಿಕೊಂಡು ಚರ್ಚಿಸಿದ್ದು, ವಿರೋಧ ಪಕ್ಷದ ನಾಯಕರ ಭದ್ರತೆಯನ್ನು ತಕ್ಷಣವೇ ಹೆಚ್ಚಿಸುವಂತೆ ನಿರ್ದೇಶನ ನೀಡಿದ್ದೇನೆ’ ಎಂದರು. ‘ಸಿದ್ದರಾಮಯ್ಯ ಅವರ ಜತೆಗೂ ದೂರವಾಣಿ …

Read More »

ಹಾಳಾಗಿದ್ದ ಬಸ್ ತಂಗುದಾನಕ್ಕೆ ಜೀವ ಕಳೆಯಿಟ್ಟ ಯುವಕರು

ಹುಬ್ಬಳ್ಳಿ: ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೇಶವಾಪುರದ ಸರ್ಕಾರಿ ಬಸ್ ನಿಲ್ದಾಣ ಸುಮಾರು ವರ್ಷಗಳಿಂದ ನಿರ್ವಹಣೆ ಇಲ್ಲದೆ ದುಃಸ್ಥಿತಿಗೆ ತಲುಪಿತ್ತು ಇದನ್ನು ಗಮನಿಸಿದ ಸ್ಥಳೀಯ ಭಗತ್ ಸಿಂಗ್ ಸೇವಾ ಸಂಸ್ಥೆಯ ವಿಶಾಲ್ ಜಾಧವ್,ಅನು ಹಾಗು ಹತ್ತಾರು ಸ್ಥಳೀಯ ಯುವಕರು ಸೇರಿ ಬಸ್ ನಿಲ್ದಾಣಕ್ಕೆ ಮರು ಜೀವ ನೀಡಿದ್ದಾರೆ ,ಹಳದಿ ಕೆಂಪು ಬಣ್ಣ ಬಳಿದ ,ಬಸ್ ನಿಲ್ದಾಣವನ್ನು ಶುಭ್ರವಾಗಿರಿಸಿ ಸೈ ಎನಿಸಿಕೊಂಡಿದ್ದಾರೆ , ಸದ್ಯ ಯುವಕರ ಕಾರ್ಯಕ್ಕೆ ಸ್ಥಳೀಯರು …

Read More »

ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆತ : ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ : ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದಿದ್ದಕ್ಕೆ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಆಡಳಿತ ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದ್ದರು. ಇದೇ ವೇಳೆ ಸಿದ್ದರಾಮಯ್ಯ ಅವರು ಪದೇ ಪದೇ ವೀರ ಸಾವರ್ಕರ್ ವಿರುದ್ಧ ಹೇಳಿಕೆ ನೀಡುತ್ತಿರುವುದು ಆಕ್ರೋಶಕ್ಕೆ …

Read More »

ಹುಬ್ಬಳ್ಳಿ ಇಸ್ಕಾನ್ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಹುಬ್ಬಳ್ಳಿ: ನಗರದ ಇಸ್ಕಾನ್ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದೆ. ಸಹಸ್ರಾರು ಭಕ್ತರಿಂದ ಶ್ರೀಕೃಷ್ಣ ನ ದರ್ಶನ ಪಡೆದರು. ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ವಿಶೇಷವಾಗಿ ಶ್ರೀಕೃಷ್ಣ ಮೂರ್ತಿ ಅಲಂಕಾರ ಮಾಡಲಾಗಿತ್ತು. ಹೂವು ಮತ್ತು ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಶ್ರೀಕೃಷ್ಣ ನಿಗೆ 110 ಕೆ.ಜಿ ತೂಕದ ಬೃಹತ್ ಗಾತ್ರದ ಲಡ್ಡು ನೈವೇದ್ಯವಾಗಿ ಅರ್ಪಿಸಲಾಗಿತ್ತು. ಜೊತೆಗೆ 108 ವೈವಿಧ್ಯ ಭಕ್ಷ್ಯಗಳನ್ನಿಟ್ಟು ಪೂಜೆ ಮಾಡಲಾಯಿತು. ತೊಟ್ಟಿಲೋತ್ಸವ ನಡೆಸಿ ಭಕ್ತರು ಸಂಭ್ರಮಿಸಿದರು. ಕೃಷ್ಣ ನಿಗೆ ಇಷ್ಟವಾದ ಗೀತೆಗಳ …

Read More »

ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಮತ್ತು ಅದನ್ನು ಖಂಡಿಸುತ್ತೇನೆ : ಜೋಶಿ

ಧಾರವಾಡ : ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಮತ್ತು ಅದನ್ನು ಖಂಡಿಸುತ್ತೇನೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕರು, ಎಲ್ಲಿ ಬೇಕಾದರು ಅವರು ಹೋಗಿ ಪರಿಶೀಲನೆ ಮಾಡುವ ಹಕ್ಕು ಅವರಿಗಿದೆಎಂದರು. …

Read More »

ಬೆಂಕಿ ಅವಘಡ ಮೂರು ದನಗಳು ಸುಟ್ಟು ಕರಕಲು

ಧಾರವಾಡ : ತಾಲೂಕಿನ ಕವಲಗೇರಿ ಗ್ರಾಮದ ಬಸಪ್ಪ ಗಂಗೋಜಿ( ಸಂಕಲೀಪುರ )ಎಂಬುವವರಿಗೆ ಸೇರಿದ ದನ ಕಟ್ಟುವ ಶೆಡ್ ಗೆ ಬೆಂಕಿ ತಗುಲಿ ಎರಡು ಎತ್ತುಗಳು ಹಾಗೂ ಒಂದು ಆಕಳು ಸೇರಿ ಮೂರು ದನಗಳು ಸುಟ್ಟು ಕರಕಲು ಆಗಿರುವ ಘಟನೆ ಜರುಗಿದೆ. ಬೆಂಕಿ ಹೇಗೆ ತಗುಲಿತು ಎಂಬುವುದರ ಕುರಿತು ಮಾಹಿತಿ ದೊರೆತಿಲ್ಲ ವಿಷಯ ತಿಳಿದ ತಕ್ಷಣ ಗ್ರಾಮದ ಜನರು ಶೆಡ್ ಬಳಿ ತೆರಳಿ ಬೆಂಕಿ ನಂದಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ …

Read More »

ಮೊದಲು ವೀರಸಾವರ್ಕರ್ ಅವರ ಇತಿಹಾಸವನ್ನ ತಿಳಿದುಕೊಳ್ಳಲಿ : ಶೆಟ್ಟರ್

ಹುಬ್ಬಳ್ಳಿ : ಮಾಜಿ ಸಿಎಂ ಸಿದ್ಧರಾಮಯ್ಯ ವೀರ ಸಾವರ್ಕರ್ ವಿರುದ್ಧ ಹೇಳಿಕೆ ವಿಚಾರ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿದ್ಧರಾಮಯ್ಯ ಅವರು ಅಲ್ಪ‌ಸಂಖ್ಯಾತರನ್ನ ಓಲೈಸಲು ವೀರ ಸಾವರ್ಕರ್ ಅವರನ್ನ ಬಹಳ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಯಾವುದೋ ಒಂದು ಧರ್ಮದ ಬಗ್ಗೆ ವರ್ಗದ ಬಗ್ಗೆ ಇರುವ ಅತಿಯಾದ ಪ್ರೀತಿಯಿಂದಲೇ ವೀರ ಸಾವರ್ಕರ್ ಬಗ್ಗೆ ಈ ರೀತಿ ಮಾತನಾಡುವುದು ಶುರುವಾಗಿದೆ. ಅವರು ವೀರಸಾವರ್ಕರ್ ಅವರ ಇತಿಹಾಸವನ್ನ ತಿಳಿದುಕೊಳ್ಳಲಿ ಎಂದರು. ವೀರವಸಾವರ್ಕರ್ ಕ್ರಾಂತಿಕಾರಿ ಹೋರಾಟ …

Read More »

ಹಠಾತ್ ಪ್ರವಾಹ : 16 ಜನ ಸಾವು, 36 ಮಂದಿ ನಾಪತ್ತೆ

ಚೀನಾ: ಚೀನಾದ ವಾಯುವ್ಯ ಕ್ವಿಂಘೈ ಪ್ರಾಂತ್ಯದ ಕೌಂಟಿಯೊಂದರಲ್ಲಿ ಹಠಾತ್ ಪ್ರವಾಹ ಸಂಭವಿಸಿದ ಪರಿಣಾಮ 16 ಜನ ಸಾವನ್ನಪ್ಪಿದ್ದು, 36 ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು  ತಿಳಿಸಿದ್ದಾರೆ. ಬುಧವಾರ ರಾತ್ರಿ ದಟೊಂಗ್ ಹುಯಿ ಮತ್ತು ತು ಸ್ವಾಯತ್ತ ಕೌಂಟಿಯಲ್ಲಿ ಹಠಾತ್ ಪ್ರವಾಹ ಸಂಭವಿಸಿದೆ ವರದಿಯಾಗಿದೆ. ಆರು ಗ್ರಾಮಗಳ 1,517 ಮನೆಗಳ ಒಟ್ಟು 6,245 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ ಎನ್ನಲಾಗಿದೆ.

Read More »