Breaking News

BigTv News

ಜನ ಸೇರಿಸಿದ ತಕ್ಷಣ ಬಿಜೆಪಿಯವರಿಗೆ ಯಾಕೆ ನಡುಕ ಹುಟ್ಟುತ್ತೆ: ಸಚಿವ ಬಿಸಿಪಿ ಪ್ರಶ್ನೆ

ಗದಗ: ಸಿದ್ಧರಾಮೋತ್ಸವ ವಿಚಾರವಾಗಿ ಗದಗನಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿ ಇದು ಸಿದ್ದರಾಮೋತ್ಸವ ಮಾಡುವಂತಹ ಟೈಮ್ ಅಲ್ಲ. ರಾಜ್ಯ ಮಳೆಯಲ್ಲಿ ತತ್ತರಿಸಿ ಹೋದಂತಹ ಸಮಯ. ರೈತರು ಕಷ್ಟದಲ್ಲಿ ಸಿಲುಕಿದಂತಹ ಸಮಯದಲ್ಲಿ ಸಿದ್ದರಾಮೋತ್ಸವ, ಶಿವಕುಮಾರೋತ್ಸವ ಮಾಡುವಂತಹ ಸಮಯ ಅಲ್ಲ. ಆದ್ರೆ ನಾವು ರೈತರ ಬಗ್ಗೆ ಚಿಂತನೆ ಮಾಡ್ತೇವೆ ಎಂದರು.ಸಿದ್ದರಾಮೋತ್ಸವದಲ್ಲಿ ಜನರನ್ನು ನೋಡಿ ಬಿಜೆಪಿಯವರಿಗೆ ನಡುಕ ಹುಟ್ಟಿದೆ ಅಂತಾ ಕಾಂಗ್ರೆಸ್ ನವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರಿಗೆ …

Read More »

ಜಗಳ ಬಿಡಿಸಲು ಹೋದ ಯುವಕನ ಮೇಲೆ ಹಲ್ಲೆ..!

ಹಳೆ ಹುಬ್ಬಳ್ಳಿಯ ಬಿರಬಂಧ್ ಓಣಿಯ ದರಗಾ ಹತ್ತಿರ ಏರಡು ಗುಂಪಿನ ನಡುವೆ ಮಾರಾ ಮಾರಿ ಕಲ್ಲು ತೂರಾಟ ನಡೆದು ಓರ್ವ ಯುವಕನಿಗೆ ತಲೆಗೆ ಪೆಟ್ಟು ಬಿದ್ದಿದ್ದು ರಕ್ತ ಶ್ರಾವ ಆಗಿದೆ. ರಫೀಕ್ ಬೆಟಗೇರಿ ಅನ್ನೋ ಯುವಕ ಹಲ್ಲೆಗೆ ಒಳಗಾಗಿದ್ದಾನೆ, ಇನ್ನೂ ಹಲ್ಲೆ ಮಾಡಿದವನ ಹೆಸರು ರಿಯಾಝ್ ಮನ್ನನ್ ಅಂತ ತಿಳಿದು ಬಂದಿದೆ. ರೀಯಾಜ ಮನ್ನನ ಮೇಲೆ ಅನೇಕ ಕೇಸುಗಳು ಇದ್ರು ಕೂಡ ಆತನ ಉಪಟಳದಿಂದ ಅಲ್ಲಿಯ ನಿವಾಸಿಗಳು ಬೇಸತ್ತು ಹೋಗಿದ್ದಾರೆ …

Read More »

ಬಿಯರ್ ಬಾಟಲಿಗಳಿಂದ ಥಳಿಸಿ ಪೊಲೀಸ್ ಕಾನ್ಸ್ ಸ್ಟೇಬಲ್ ಹತ್ಯೆ

ಆಂಧ್ರ ಪ್ರದೇಶ : ನಡು ರಸ್ತೆಯಲ್ಲೇ ಬಿಯರ್ ಬಾಟಲಿಗಳಿಂದ ಥಳಿಸಿ ಪೊಲೀಸ್ ಕಾನ್ಸ್ ಸ್ಟೇಬಲ್ ನನ್ನು ಹತ್ಯೆಗೈದಿರುವ ಅಮಾನುಷ ಘಟನೆ ಆಂಧ್ರ ಪ್ರದೇಶದ ನಂದ್ಯಾಳದಲ್ಲಿ ಬೆಳಕಿಗೆ ಬಂದಿದೆ. ಪಟ್ಟಣದ ಟ್ಯಾಟೂ ಅಂಗಡಿಯೊಂದರ ಬಳಿ ಕಾನ್ಸ್ ಸ್ಟೇಬಲ್ ಸುರೇಂದ್ರ ಕುಮಾರ್ ( 35 ) ಅವರನ್ನು ಬರ್ಬರವಾಗಿ ಹೊಡೆದು ಕೊಳ್ಳಲಾಗಿದೆ.ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು , ಸೋಮವಾರ ಬೆಳಕಿಗೆ ಬಂದಿದೆ . ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ …

Read More »

ಉಣಕಲ್ ಕೆರೆಯಲ್ಲಿ ವ್ಯಕ್ತಿ ಆತ್ಮಹತ್ಯೆ

ಹುಬ್ಬಳ್ಳಿ : ಮನನೊಂದ ವ್ಯಕ್ತಿಯೊಬ್ಬ ಹುಬ್ಬಳ್ಳಿಯ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ . ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿಲ್ಲ . ಸುಮಾರು 60-65 ವಯೋಮಿತಿ ಹೊಂದಿದ ವ್ಯಕ್ತಿ . ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ . ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ . ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ . ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ …

Read More »

ಹುಬ್ಬಳ್ಳಿ ಶಹರ ತಾಲೂಕು ಮಟ್ಟದ ಚೇಸ್ ಟೋರ್ನಿ

ಹುಬ್ಬಳ್ಳಿ: ನಗರದ ಶಾಂತಿ ಕಾಲೋನಿಯಲ್ಲಿನ ಎನ್. ಕೆ. ಟಕ್ಕರ್ ಇಂಗ್ಲಿಷ್ ಮೀಡಿಯ ಶಾಲೆಯಲ್ಲಿ ಹುಬ್ಬಳ್ಳಿ ಶಹರ ತಾಲೂಕು ಮಟ್ಟದ 14 ಮತ್ತು 17 ವಯಸ್ಸಿನ ಒಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ದಂಗವಾಗಿ ಚೇಸ್ ಪಂದ್ಯಾವಳಿ ಜರುಗಿತು. ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿ ವಿಭಾಗದಲ್ಲಿ ವಿ.ಎಸ್ ಪಿಳ್ಳೈ ಇಂಗ್ಲಿಷ್ ಮಿಡಿಯಂ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಕಲ್ಮೇಶ ಮಂಡ್ಯಾಳ ಪ್ರಥಮ, ದ್ವೀತಿಯ ಸಂಕಲ್ಪ ಬಾಗಲೇ, ತೃತೀಯ …

Read More »

ಕೊಪ್ಪ-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಬಿರುಕು

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಕೊಪ್ಪ-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಬಿರುಕು ಮೂಡಿದೆ. ಶೃಂಗೇರಿ ತಾಲೂಕಿನ ಉಳುಮೆ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡು, ರಸ್ತೆ ಕುಸಿಯುವ ಭೀತಿಯಿದೆ. ಈ ಕಾರಣದಿಂದ ಹೆದ್ದಾರಿಯಲ್ಲಿ ಪಟ್ಟಿ ಅಳವಡಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ. ಮಳೆಯ ಆರ್ಭಟಕ್ಕೆ ಕಾಫಿ ತೋಟ ಕೊಚ್ಚಿಹೋದ ಘಟನೆ ನಡೆದಿದೆ. ತುಂಬಳ್ಳಿಪುರ ಗ್ರಾಮದಲ್ಲಿ ಗುಡ್ಡ ಜರಿದು ತೋಟ ಸರ್ವನಾಶವಾಗಿದೆ. ಇಲ್ಲಿನ ಅಣ್ಣಪ್ಪ ಶೆಟ್ಟಿ …

Read More »

ಡೊನಾಲ್ಡ್ ಟ್ರಂಪ್ ಮನೆ ಮೇಲೆ ಎಸಿಬಿ ದಾಳಿ

ಫ್ಲೋರಿಡಾ: ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನೆಯ ಮೇಲೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ದಾಳಿ ನಡೆಸಿದೆ. ಟ್ರಂಪ್ ಅವರು ಅಧ್ಯಕ್ಷರಾಗಿದ್ದಾಗ ಫ್ಲೋರಿಡಾದ ಮನೆಗೆ ಕೆಲವು ಗೌಪ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ರೆಸಾರ್ಟ್ ನ್ನು ಅಧಿಕಾರಿಗಳು ಮುತ್ತಿಗೆ ಹಾಕಿ ದಾಳಿ ಮಾಡಿ ವಶಪಡಸಿಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದು ಯಾಕೆ ದಾಳಿ ಮಾಡಿದ್ದಾರೆ …

Read More »

ಗಣೇಶೋತ್ಸವಕ್ಕೆ ಯಾವ ನಿಯಮವಿಲ್ಲ : ಆರ್‌. ಅಶೋಕ

ಬೆಂಗಳೂರು: ಈ ವರ್ಷದ ಗಣೇಶೋತ್ಸವವನ್ನು ಕೋವಿಡ್‌ ಪೂರ್ವದಲ್ಲಿ ನಡೆಯುತ್ತಿದ್ದಂತೆ ನಡೆಸಲು ಅನುಮತಿ ನೀಡಲಾಗುವುದು, ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು. ಈ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಿದ್ದು ಅವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಸಾರ್ವಜನಿಕ ಗಣೇಶೋತ್ಸವಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಆಗ ಸಾರ್ವಜನಿಕರ ಪ್ರಾಣ ಉಳಿಸುವುದು ಮುಖ್ಯವಾಗಿತ್ತು. ಸರ್ಕಾರದ ಮನವಿಗೆ ಸಾರ್ವಜನಿಕರು …

Read More »

JEE ಮೇನ್ ಫಲಿತಾಂಶ ಬಿಡುಗಡೆ : ಇಲ್ಲಿದೆ ನೋಡಿ ಲಿಂಕ್

2022ನೇ ಸಾಲಿನ ಜೆಇಇ  ಮುಖ್ಯ ಪರೀಕ್ಷೆಯ ಜೂನ್ ಸೆಷನ್​ನ ಫಲಿತಾಂಶ ಇಂದು ಬಿಡುಗೆಯಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( National Testing Agency- NTA) JEE ಮೇನ್ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ಆದ jeemain.nta.nic.in ನಲ್ಲಿ ಬಿಡುಗಡೆಗೊಳಿಸಿದೆ. NTA ಈಗಾಗಲೇ JEE ಮುಖ್ಯ ಪರೀಕ್ಷೆಯ ಪ್ರಾವಿಷನಲ್ ಫೈನಲ್ ಆನ್ಸರ್ ಕೀಯನ್ನು ಜುಲೈ 6ರಂದು ಬಿಡುಗಡೆ ಮಾಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ  ಪ್ರಸಕ್ತ ಸಾಲಿನ ಅಂದರೆ, 2022ನೇ ಸಾಲಿನ ಜೆಇಇ ಮೇನ್​ …

Read More »

ಬಿಜೆಪಿ ನಾಯಕರು ಹರ್‌ ಘರ್‌ ತಿರಂಗ ಎಂದು ಮತ್ತೊಂದು ನಾಟಕ : ಸಿದ್ದರಾಮಯ್ಯ

ನಂಜನಗೂಡು/ಮೈಸೂರು : ಆರ್‌ಎಸ್‌ಎಸ್‌ನ ನಾಗಪುರದ ಕಚೇರಿಯ ಮೇಲೆ ಕಳೆದ 52 ವರ್ಷಗಳಿಂದಲೂ ಸಹ ತ್ರಿವರ್ಣ ಧ್ವಜ ಹಾರಿಸದೇ ಭಗವಧ್ವಜ ಹಾರಿಸುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕರು ಹರ್‌ ಘರ್‌ ತಿರಂಗ ಎಂದು ಮತ್ತೊಂದು ನಾಟಕವಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ತಾಲೂಕಿನ ತಗಡೂರು ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ …

Read More »