Breaking News

BigTv News

ಲಾಡ್ಜ್‌ನಲ್ಲಿ ನೇಣಿಗೆ ಕೊರಳೊಡ್ಡಿದ ಮಂಜುನಾಥ

ಧಾರವಾಡ : ಪಾಲಾಕ್ಷ ಲಾಡ್ಜ್‌ನಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ . ಬೈಲಹೊಂಗಲ ತಾಲೂಕಿನ ಬಿದರಕಟ್ಟಿ ಗ್ರಾಮದ ಮಂಜುನಾಥ ನಿಂಬಾಳರ್ ( 22 ) ಎಂಬ ಯುವಕನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವನು . ಈ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ . ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ , ದೂರು ದಾಖಲಿಸಿಕೊಂಡಿದ್ದಾರೆ …

Read More »

ಚಂದ್ರಕಾಂತ ಬೆಲ್ಲದ ಮಗಳು ನಂದಾ ಇನ್ನಿಲ್ಲ

ಧಾರವಾಡ : ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಹಿರಿಯ ಮಗಳು , ಶಾಸಕ ಅರವಿಂದ ಬೆಲ್ಲದ ಇವರ ಹಿರಿಯ ಸಹೋದರಿ ಹಾಗೂ ಲಿಂ ಕರ್ನಲ್ ಮಂಜುನಾಥ ಮೂಗಿ ಇವರ ಧರ್ಮಪತ್ನಿ ಲಿಂ ನಂದಾ ಮೂಗಿ ( ಬೆಲ್ಲದ ) ಅನಾರೋಗ್ಯದಿಂದ ತಡ ರಾತ್ರಿ ವಿಧಿವಶರಾಗಿದ್ದಾರೆ . ಮೃತರ ಪಾರ್ಥಿವ ಶರೀರವನ್ನು ತಂದೆ ಚಂದ್ರಕಾಂತ ಬೆಲ್ಲದವರ ಧಾರವಾಡದ ಮರಾಠಾ ಕಾಲನಿ ರಸ್ತೆಯಲ್ಲಿರುವ ಮನೆ ಗೌರಿ ಕೃಪಾ ಇಡಲಾಗಿದ್ದು , ಅವರ …

Read More »

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ಇ ಡಿ ಶಾಕ್

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯವು (ಇಡಿ)ದೆಹಲಿಯ ಬುಧವಾರ ಹೆರಾಲ್ಡ್ ಹೌಸ್‌ನ ಒಂದು ಭಾಗಕ್ಕೆ ಬೀಗ ಜಡಿದಿದೆ. ಅಲ್ಲದೆ, ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಮನ್ಸ್‌ ಜಾರಿ ಮಾಡಿದ್ದು,’ಯಂಗ್ ಇಂಡಿಯನ್’ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಹಾಜರಿರುವಂತೆ ಸೂಚಿಸಿದೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಯಂಗ್ ಇಂಡಿಯನ್’ ಪ್ರಕಾಶನ ಸಂಸ್ಥೆಗೆ ಸಂಬಂಧಿಸಿದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು …

Read More »

ಅನೂಪ್ ಬಂಡಾರಿಗೆ ಭರ್ಜರಿ ಉಡುಗೊರೆ ನೀಡಿದ ಕಿಚ್ಚ

ಕಿಚ್ಚ ಸುದೀಪ್ ಹಾಗೂ ಅನೂಪ್ ಬಂಡಾರಿ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾ ಸೂಪರ್ ಹಿಟ್ ಆಗಿದೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಕಮಾಲ್ ಮಾಡುತ್ತಿರುವ ಸಿನಿಮಾ ಕಲೆಕ್ಷನ್ ನಲ್ಲೂ ಕಮಾಲ್ ಮಾಡುತ್ತಿದೆ. ಬಿಡುಗಡೆಯಾದ ಆರೇ ದಿನದಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಇದೇ ಖುಷಿಯಲ್ಲಿ ಸುದೀಪ್ ಚಿತ್ರದ ನಿರ್ದೇಶಕ ಅನೂಪ್ ಬಂಡಾರಿಗೆ ಉಡುಗೊರೆಯೊಂದನ್ನ ನೀಡಿದ್ದಾರೆ. ಸುದೀಪ್ ಗೆ ಯಾರದಾದರೂ ಕೆಲಸ ಇಷ್ಟವಾದಾಗ ಉಡುಗೊರೆ ನೀಡಿ ಶುಭ ಹಾರೈಸೋದು ವಾಡಿಕೆ. …

Read More »

ಕಲಾವಿದ ಮಿಥಿಲೇಸ್ ಚತುರ್ವೇದಿ ನಿಧನ

ಲಕ್ನೋ : ಹಿಂದಿ ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಮಿಥಿಲೇಸ್ ಚತುರ್ವೇದಿ ಅವರು ನಿಧನರಾಗಿದ್ದಾರೆ. ಮಿಥಿಲೇಸ್ ಚತುರ್ವೇದಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಗದರ್ ಏಕ್ ಪ್ರೇಮ್ ಕಥಾ, ಸತ್ಯ, ಬಂಟಿ ಹೌರ್ ಬಬ್ಲಿ, ಕೊಹಿ ಮಿಲ್ ಗಯಾ, ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

Read More »

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಸ್ಪರ್ಧೆಗೆ ಸಿದ್ದರಾಮಯ್ಯಗೆ ಮನವಿ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕೆಪಿಸಿಸಿ ಕಿಸಾನ್ ಘಟಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಈ ಸಂಬಂಧ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವ ಘಟಕದ ಅಧ್ಯಕ್ಷ ಸಚಿನ್ ಮೀಗಾ ತಮಗೆ ಶುಭಾಶಯಗಳನ್ನು ಕೋರುವುದರ ಜೊತೆಗೆ ನಿಮ್ಮ ಜನಮದಿನದ ಸಂದರ್ಭದಲ್ಲಿ ತಾವು 2023ರ ವಿಧಾನಸಭೆ ಚುನಾವಣೆಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕೋರಿದ್ದಾರೆ.

Read More »

ನಾಳೆ ಲಾಲ್ ಬಾಗ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಹೂವುಗಳ ಪ್ರದರ್ಶನ

ಬೆಂಗಳೂರು : ಕರ್ನಾಟಕ ರತ್ನ ದಿವಂಗತ ಡಾ.ರಾಜ್‌ಕುಮಾರ್‌ ಮತ್ತು ಡಾ.ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಾರ್ಥ ತೋಟಗಾರಿಕೆ ಇಲಾಖೆ ಹಮ್ಮಿಕೊಳ್ಳುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಜಾತಿಯ 10 ಲಕ್ಷಕ್ಕೂ ಹೆಚ್ಚು ಹೂವುಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಗಾಜಿನ ಮನೆಯ ಒಳಭಾಗದಲ್ಲಿ ಗುಲಾಬಿ, ಸೇವಂತಿಗೆ, ಜರ್ಬೆರ, ಲಿಲ್ಲಿ ಸೆರಿದಂತೆ 6.20 ಲಕ್ಷ ಮತ್ತು ಕುಂಡಗಳಲ್ಲಿ ಬೆಳೆದಿರುವ 3.50 ಲಕ್ಷ ಹೂವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ, 27 ಜಾತಿಯ ವಿದೇಶಿ ಮತ್ತು ಶೀತವಲಯದ 13 …

Read More »

JDS ಪಕ್ಷದ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅವಿರೋಧವಾಗಿ ಆಯ್ಕೆ

ಬೆಂಗಳೂರು : ಜಾತ್ಯತೀತ ಜನತಾದಳ ಪಕ್ಷದ (JDS) ರಾಜ್ಯ ಮಟ್ಟದ ಸಾಂಸ್ಥಿಕ ಚುನಾವಣೆ ಪೂರ್ಣಗೊಂಡಿದ್ದು, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ಸಾಂಸ್ಥಿಕ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ . ಕೇಂದ್ರದ ಮಾಜಿ ಸಚಿವರಾದ ಸಿ . ಎಂ . ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ . ಅವರ ನೇತೃತ್ವದಲ್ಲಿ ಸಂಘಟನೆ ಮತ್ತಷ್ಟು …

Read More »

ಜೂಡೊ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ ತೂಲಿಕಾ ಮಾನ್

ಬರ್ಮಿಂಗ್‌ಹ್ಯಾಮ್‌: ಭಾರತದ ತೂಲಿಕಾ ಮಾನ್ ಅವರು ಮಹಿಳಾ ಜೂಡೊ ಸ್ಪರ್ಧೆಯ 78 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಬುಧವಾರ ರಾತ್ರಿ ನಡೆದ ಫೈನಲ್‌ನಲ್ಲಿ ತೂಲಿಕಾ ಅವರು ಸ್ಕಾಟ್ಲೆಂಡ್‌ನ ಸಾರಾ ಅಡ್ಲಿಂಗ್ಟನ್ ಎದುರು 1-10 ರಲ್ಲಿ ಸೋತರು. ಎದುರಾಳಿಯನ್ನು ಕೆಳಕ್ಕೆ ಬೀಳಿಸಿ ಒಂದು ಪಾಯಿಂಟ್‌ ಗಿಟ್ಟಿಸಿಕೊಂಡಿದ್ದ ತೂಲಿಕಾ ಅವರು ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಪಂದ್ಯ ಕೊನೆಗೊಳ್ಳಲೇ ಸೆಕೆಂಡುಗಳು ಇರುವಾಗ ಸಾರಾ ಅವರು, ತೂಲಿಕಾ ಅವರನ್ನು ನೆಲಕ್ಕುರುಳಿಸಿ ‘ಇಪೊ’ …

Read More »

ಮಾಜಿ ಸಿಎಂಗೆ ಶುಭ ಕೋರಿದ್ದೆ ತಪ್ಪಾಯತ್ತಾ: ಪ್ರಕರಣ ದಾಖಲು

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಕಾಂಗ್ರೆಸ್ ಮುಖಂಡರಿಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಪಾಲಿಕೆಯಿಂದ ಅನುಮತಿ ಪಡೆಯದೆ ಬೃಹತ್ ಬ್ಯಾನರ್ ಅಳವಡಿಸಿದ್ದವರ ವಿರುದ್ಧ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ವಸಂತನಗರ ಉಪ ವಿಭಾಗ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿ ಬಿ.ವಿ. ವೀಣಾ, ದೂರು ನೀಡಿದ್ದಾರೆ. ಇದರ ಮೇರೆಗೆ ಕಾಂಗ್ರೆಸ್ ಮುಖಂಡರಾದ ಟಿ.ಎಸ್. ರಮೇಶ್ ಬಾಬು ಮತ್ತು ಜಯಬಾಲ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು …

Read More »