Breaking News

BigTv News

ಅಶ್ಲೀಲ ಫೋಟೊ ವೈರಲ್ ಪ್ರಕರಣ ದಾಖಲು

ಹುಬ್ಬಳ್ಳಿ : ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಬಗ್ಗೆ ಇಲ್ಲಿಯ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್‌ನಲ್ಲಿ ಸಿನಿಮಾ ನೋಡುತ್ತಿದ್ದ ವೇಳೆಯಲ್ಲಿ ನೋಟಿಫಿಕೇ ಶನ್ ಬಂದಿದೆ ಈ ವೇಳೆ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ.ಇದರ ಸಹಾಯ ದೊಂದಿಗೆ ಅಪರಿಚಿತರು ಫೋಟೋ ಪಡೆಯುವ ಜತೆಗೆ ಇತರೆ ಮಾಹಿತಿ ಪಡೆದಿದ್ದಾರೆ. ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವ್ಯಾಟ್ಸ್‌ಆ್ಯಪ್‌ ಗ್ರುಪ್‌ಗ ಳಲ್ಲಿ ಹರಿಬಿಡುತ್ತಿದ್ದಾರೆ ಎಂದು ಪ್ರಕರಣ ದಲ್ಲಿ ದೂರಲಾಗಿದೆ.

Read More »

ಹುಬ್ಬಳ್ಳಿಯಲ್ಲಿ ರಾಯಲ್ ಓಕ್ ಪರ್ನಿಚರ್ ಉದ್ಘಾಟನೆ

ಹುಬ್ಬಳ್ಳಿ :ನಗರದ ಉಣಕಲ್ ಕ್ರಾಸ್ ಬಳಿ ಇರುವ ರಾಯಲ್ ಓಕ್ ಪರ್ನಿಚರ್ ಶೋ ರೂಂ ಉದ್ಘಾಟನೆಯನ್ನು ಮಾಜಿ ಮುಖ್ಯ ಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ರಾಯಲ್ ಓಕ್ ಶೋ ರೂಂ ಭಾರತದಲ್ಲಿ ಅತಿ ದೊಡ್ಡ ಮಳಿಗೆ ಹೊಂದಿದಾಗಿದ್ದು, ಈದೀಗ ಆರಂಭವಾಗಿದೆ. ಇದರ ಸದುಪಯೋಗವನ್ನು ಹುಬ್ಬಳ್ಳಿ – ಧಾರವಾಡ ಜನತೆ ಪಡೆದುಕೊಳ್ಳಲಿದ್ದಾರೆ ಎಂದರು. ಈ ಪರ್ನಿಚರ್ ಮಳಿಗೆಯಲ್ಲಿ ಹಲವು ರೀತಿಯ ವಸ್ತುಗಳಿದ್ದು, ಎಲ್ಲಾ ವಸ್ತುಗಳು …

Read More »

ಚಿಟಗುಪ್ಪಿ ಆಸ್ಪತ್ರೆಯಿಂದ ಬೂಸ್ಟರ್ ಡೋಸ್ ಅಭಿಯಾನ

ಹುಬ್ಬಳ್ಳಿ : ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ‘ ಸ್ವಾತಂತ್ರ್ಯದ ಅಮೃತ ಮಹೋತ್ಸವ ‘ ಅಂಗವಾಗಿ , ದೇಶಾದ್ಯಂತ 25 ದಿನಗಳ ಕಾಲ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ . ಅದೇ ರೀತಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ . ಶ್ರೀಧರ್ ದಂಡೆಪ್ಪನವರ , ಡಾ . ಪ್ರಕಾಶ ನರಗುಂದ ಅವರ ನೇತೃತ್ವದಲ್ಲಿ , ನಗರದ ಬದಾಮಿ …

Read More »

ಧಾರವಾಡದಲ್ಲಿ ಅನಧಿಕೃತ ವೋಟರ್ ಐಡಿ ಸೃಷ್ಠಿ, ಝರಾಕ್ಸ್ ಅಂಗಡಿ ಮೇಲೆ ದಾಳಿ, ಮಹ್ಮದ್ ಅಲಿ ಬಂಧನ

ಧಾರವಾಡ: ಭಾರತ ಸರಕಾರದ ಚುನಾವಣಾ ಆಯೋಗದ ವೆಬ್‌ಸೈಟ್ ಬಳಸಿ ಅನಧಿಕೃತವಾಗಿ ವೋಟರ್ ಐಡಿ ತೆಗೆದುಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆ ಪೊಲೀಸರು ಬುಧವಾರ ಮಧ್ಯಾಹ್ನ ಬಂಧಿಸಿದ್ದಾರೆ. ಧಾರವಾಡದ ಅಂಜುಮನ್ ಕಾಂಪ್ಲೆಕ್ಸ್‌ನಲ್ಲಿರುವ ಎಂಜೆಆರ್ ಝರಾಕ್ಸ್ ಸೆಂಟರ್‌ನ ಮಹ್ಮದ್‌ಅಲಿ ಎಂಬಾತನೇ ಬಂಧಿತ ಆರೋಪಿ. ಈತ ಚುನಾವಣಾ ಆಯೋಗದ ವೆಬ್‌ಸೈಟ್ ಬಳಕೆ ಮಾಡಿ ಅನಧಿಕೃತವಾಗಿ ವೋಟರ್ ಐಡಿ ತೆಗೆದುಕೊಡುತ್ತಿದ್ದ. ಈ ರೀತಿಯ ವೋಟರ್‌ ಐಡಿ ಪಡೆದ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿಯೊಂದನ್ನು ಸಲ್ಲಿಸಲು …

Read More »

ದೇಶದಲ್ಲಿ ಕಾಂಗ್ರೆಸ್ ಅವನತಿಗೆ ಇಬ್ಬರು ಸಿದ್ದುಗಳು ಕಾರಣ : ಶೆಟ್ಟರ್ ಕಿಡಿ

ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್ ಅವನತಿಗೆ ಇಬ್ಬರು ಸಿದ್ದುಗಳು ಕಾರಣ, ಒಬ್ಬರು ಪಂಜಾಬಿನ ಸಿದ್ದು ಮತ್ತೊಬ್ಬರು ರಾಜ್ಯದಲ್ಲಿನ ಸಿದ್ದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಹೆಸರಿನಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಲು ಹೊರಟಿದ್ದಾರೆ. ಇದುವೇ ಕಾಂಗ್ರೆಸ್ ನವರಿಗೆ ದೊಡ್ಡ ವಿಷಯವಾಗಿದೆ.‌ ಕಾಂಗ್ರೆಸ್ ನವರಿಗೆ ಜನರ ಸಮಸ್ಯೆಗಳು ಬೇಕಾಗಿಲ್ಲ. ಅವರಿಗೆ ಸಮಯವು ಇಲ್ಲ ಎಂದು ಹರಿಹಾಯ್ದರು. ಸಿದ್ದರಾಮಯ್ಯ ಅವರ ಜನ್ಮದಿನವನ್ನು …

Read More »

ಅತಿ ವಿಜೃಂಭಣೆಯಿಂದ ನಡೆದ ಶ್ರೀ ಗಾಳಿದುರ್ಗಮ್ಮ ದೇವಿ ಜಾತ್ರಾಮಹೋತ್ಸ

ಹುಬ್ಬಳ್ಳಿ : ಐತಿಹಾಸಿಕ ಪ್ರಸಿದ್ಧಿ ಹೊಂದಿದ ನಗರದ ಹೊಸೂರಿನ ಗ್ರಾಮ ದೇವತೆಯಾದ ಶ್ರೀ ಗಾಳಿದುರ್ಗಮ್ಮಾ ದೇವಿ ಜಾತ್ರಾಮಹೋತ್ಸವವು, ಇಂದು ಸಾವಿರಾರು ಭಕ್ತಾದಿಗಳು ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಇಂದು ಬೆಳಿಗ್ಗೆ 5 ಗಂಟೆಗೆ ಶ್ರೀ ದೇವಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಪೂಜೆಗಳೊಂದಿಗೆ ಉಡಿ ತುಂಬಿದ ನಂತರ, ಹೊಸೂರಿನ ಶ್ರೀ ಆಂಜನೇಯ ದೇವಸ್ಥಾನದಿಂದ ಶ್ರೀ ಗಾಳಿ ದುರ್ಗಾದೇವಿ ದೇವಸ್ಥಾನದ ವರೆಗೂ ನೂರಾರು ಮಹಿಳೆಯರೊಂದಿಗೆ ಕುಂಭ ಮೇಳ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆಯು …

Read More »

ಹಾರ್ಡ್‌ವೇರ್‌ ವ್ಯಾಪರಸ್ಥರೊಬ್ಬರಿಗೆ 59 ಸಾವಿರ ರೂ ವಂಚನೆ!

ಹುಬ್ಬಳ್ಳಿ : ಹಾರ್ಡ್‌ವೇರ್‌ ವ್ಯಾಪರಸ್ಥರೊಬ್ಬರಿಗೆ ಸ್ಟೀಲ್ ಪೈಪ್‌ಗಳನ್ನು ಕಳುಹಿಸಿ ಕೊ ಡುವುದಾಗಿ ನಂಬಿಸಿ 59 ಸಾವಿರ ರೂ, ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ. ಇಲ್ಲಿಯ ಮಂಗಳವಾರಪೇಟೆ ಜಯಂತಿಲಾಲ್ ಬೋಹರಾ ಎಂಬು ವರೇ ವಂಚನೆಗೊಳಗಾದವರು, ಹಾರ್ಡ್ ವೇರ್ ವ್ಯಾಪಾರ ಮಾಡಲು ಸ್ಟೀಲ್ ಪೈಪ್‌ಗಳನ್ನು ಕಳುಹಿಸುತ್ತೇನೆಂದು ಹೇ ಳಿದ ವಂಚಕರು , ಅವರ ಬ್ಯಾಂಕ್ ಖಾತೆ ಯಿಂದ 59 ಸಾವಿರ ರೂ ವರ್ಗಾಯಿಸಿ ಕೊಂಡಿದ್ದಾರೆ.ಆದರೆ , ಸ್ಟೀಲ್ ಕಳುಹಿಸದೇ , ಆನ್‌ಲೈನ್‌ನಲ್ಲಿ ವರ್ಗಾಯಿಸಿದ …

Read More »

ಏಕಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಸಭೆ

ಹುಬ್ಬಳ್ಳಿ : ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಸಭೆ ಜರುಗಿತು. ಈ ವೇಳೆ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧ ಮಾಡಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಅಭಿಯಾನ ನಡೆಸಲಾಗುತ್ತಿದೆ‌. ಜನರಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಕೆಲವಂದಿಷ್ಟು ಗೊಂದಲಗಳಿದ್ದು, ಕಂಡು ಬಂದಿದೆ. ಅದರಲ್ಲಿ ಮುಖ್ಯವಾಗಿ ಹೊಟೇಲ್ ವ್ಯಾಪಾರಸ್ಥರು ಚಟ್ನಿ, ಸಾಂಬಾರಗಳನ್ನು ಗ್ರಾಹಕರಿಗೆ …

Read More »

ಅಕ್ರಮ ಗಣಿಗಾರಿಕೆಗೆ ಬ್ರೇಕ್‌ಹಾಕಲು ಹೋದ ಡಿಎಸ್ಪಿ ಕಸದ ತೊಟ್ಟಿಯಲ್ಲಿ ಶವವಾಗಿ ಪತ್ತೆ

ಹರ್ಯಾಣ: ಇಲ್ಲಿನ ಅಕ್ರಮ ಗಣಿಗಾರಿಕೆ ಮಾಫಿಯಾ ಡಿಎಸ್ಪಿ ಸುರೇಂದ್ರ ಸಿಂಗ್ ಅವರನ್ನು ಬಲಿ ಪಡೆದಿದೆ. ಪೊಲೀಸ್ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ದೇಹವು ತೆರೆದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ. ಈ ಘಟನೆಯ ನಂತರ ಆಡಳಿತ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ಅದೇ ಸಮಯದಲ್ಲಿ, ಇಡೀ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗ ಸುಳಿವು ಸಿಕ್ಕ ಬೆನ್ನಲ್ಲೇ ಡಿಎಸ್‌ಪಿ ಸುರೇಂದರ್ ಕುಮಾರ್ ಬಿಷ್ಣೋಯ್ ಅವರು ಅಕ್ರಮ …

Read More »

ಬಾದಾಮಿ ಕ್ಷೇತ್ರದ ಜನತೆ ಸಿದ್ದರಾಮಯ್ಯನವರನ್ನು ಗೆಲ್ಲಿಸಿ ಈಗ ಪಶ್ಚಾತಾಪ ಪಡುತ್ತಿದ್ದಾರೆ: ಶ್ರೀರಾಮುಲು

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಾದಾಮಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಣಕ್ಕಿಳಿದಿದ್ದ ವೇಳೆ ಅವರ ಎದುರಾಳಿಯಾಗಿ ಬಿಜೆಪಿಯಿಂದ ಬಿ. ಶ್ರೀರಾಮುಲು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಶ್ರೀರಾಮುಲು ಪರಾಭವಗೊಂಡಿದ್ದು, ಇದೀಗ ಬೀದರ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 2023ರ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಸೂಚಿಸಿದರೆ ತಾವು ಸಿದ್ದರಾಮಯ್ಯನವರ ಎದುರಾಳಿಯಾಗಿ ಕಣಕ್ಕಿಳಿಯಲು ಸಿದ್ದ ಎಂದು ತಿಳಿಸಿದ್ದಾರೆ.ಬಾದಾಮಿ ಕ್ಷೇತ್ರದ ಜನತೆ ಸಿದ್ದರಾಮಯ್ಯನವರನ್ನು ಗೆಲ್ಲಿಸಿ ಈಗ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಹೇಳಿದ ಶ್ರೀರಾಮುಲು, …

Read More »