Breaking News

BigTv News

ಕೊಕೈನ್ ಸಪ್ಲೈ : ಶ್ರೀನಿವಾಸ್ ಬಂಧನ

ಬೆಂಗಳೂರು: ಡ್ರಗ್ ಕೇಸ್ ನಲ್ಲಿ ಖ್ಯಾತ ಉದ್ಯಮಿ ದಿ.ಆದಿಕೇಶವಲು ಮಗ ಶ್ರೀನಿವಾಸ್ ಅವರನ್ನು ಬೆಂಗಳೂರಿನ NCB ಅಧಿಕಾರಿಗಳು ಬಂಧಿಸಿದ್ದಾರೆ. ಮೊನ್ನೆ ತಡರಾತ್ರಿ ಯಲಹಂಕ ಬಳಿ ಸೆಲೆಬ್ರಿಟಿ ಪಾರ್ಟಿಯಲ್ಲಿ ಕೊಕೈನ್ ಸಪ್ಲೈ ಆಗಿದ್ರ ಬಗ್ಗೆ ಖಚಿತ ಮಾಹಿತಿ ಪಡೆದ NCB ಅಧಿಕಾರಿಗಳು, ಆರೋಪಿ ಶ್ರೀನಿವಾಸ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಬಂಧಿತ ಶ್ರೀನಿವಾಸ್ ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಶ್ರೀನಿವಾಸ್ ಮನೆ ಮೇಲೂ ಎನ್ ಸಿಬಿ ಅಧಿಕಾರಿಗಳು ದಾಳಿ …

Read More »

SSLC ಪ್ರಶ್ನೆಪತ್ರಿಕೆ ಸೋರಿಕೆ : 8 ಮಂದಿ ಬಂಧನ

ಮಾಗಡಿ: ಎಸೆಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ ಬಾಬು ತಿಳಿಸಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಪ್ರಿನ್ಸಿಪಾಲ್‌ ಶ್ರೀನಿವಾಸ್‌, ಕ್ಲರ್ಕ್‌ ರಂಗೇಗೌಡ, ರಂಗನಾಥ ಶಾಲೆಯ ಕೃಷ್ಣಮೂರ್ತಿ ಹಾಗೂ ಇತರ ಐವರು ಶಿಕ್ಷಕರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.ಪ್ರಕರಣ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ದೇವರಾಜು ಎಂಬಾತನನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು …

Read More »

ಕಾಂಗ್ರೆಸ್ ಪಕ್ಷ ಬೌದ್ದಿಕ ದಿವಾಳಿ ಕೋರ ಪಾರ್ಟಿ : ಜೋಶಿ

ಧಾರವಾಡ : ಕಾಂಗ್ರೆಸ್ ಪಕ್ಷ ಬೌದ್ದಿಕ ದಿವಾಳಿ ಕೋರ ವಾಗಿದ್ದು ಈಗ ಅಸಹಿಷ್ಣತೆಯ ಬಗ್ಗೆ ಮಾತನಾಡುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಧಾರವಾಡದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಎರಡು ಬಾರಿ ಚುಣಾಯಿತ ಪ್ರಧಾನಿಯ ಬಗ್ಗೆ ಮಾತನಾಡುತ್ತಾರೆ. ಪಠ್ಯಪುಸ್ತಕ ದಲ್ಲಿ ಸಂಘದ ಸಂಸ್ಥಾಪಕರ ಹೇಸರು ಸೇರಿಸಿದಕ್ಕೆ ದೊಡ್ಡ ಪ್ರಮಾಣದಲ್ಲಿ …

Read More »

ವಿಧಾನ ಪರಿಷತ್‌ನ ನಾಲ್ಕೂ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ: ಕಟೀಲ್

ಧಾರವಾಡ: ಸದ್ಯ ನಾಲ್ಕು ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಈಗಾಗಲೇ ಬೆಳಗಾವಿಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಧಾರವಾಡದಲ್ಲಿ ಸೋಲಿಲ್ಲದ ಸರದಾರ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಪ್ರಸಕ್ತ ವರ್ಷ ಬಿಜೆಪಿ ನಾಲ್ಕೂ ಸ್ಥಾನಗಳನ್ನು ಗೆಲ್ಲಲಿದೆ. ಹೀಗಾಗಿ ಮುಂದಿನ ತಂತ್ರಗಳ ಬಗ್ಗೆ ಚರ್ಚೆ ನಡೆಸಲು …

Read More »

ಸೋಲಿನ ಭಯ ನನಗಿಲ್ಲ: ಹೊರಟ್ಟಿ

ಧಾರವಾಡ: ಸೋಲಿನ ಭಯ ನನಗಿಲ್ಲ. ನಾನು ಈ ಹಿಂದೆ ಅನೇಕ ಪಕ್ಷಗಳಿಂದ ಚುನಾಯಿತನಾಗಿ ಬಂದಿದ್ದೇನೆ. ನನ್ನನ್ನು ಚುನಾಯಿತಗೊಳಿಸಿದವರು ಶಿಕ್ಷಕರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವಿರೋಧ ಪಕ್ಷದವರು ನಮಗೇ ಮತ ಹಾಕಿ ಎಂದು ಹೇಳುವುದಿಲ್ಲ. ಏನಾದರೂ ಮಾತನಾಡಬೇಕು ಎಂಬ ಉದ್ದೇಶದಿಂದ ಸೋಲಿನ ಭಯದಿಂದ ಹೊರಟ್ಟಿ ಬಿಜೆಪಿಗೆ ಹೋಗಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇವರ ಹೇಳಿಕೆಗೆ ಜೂ.15ನೇ ತಾರೀಖಿಗೆ ಉತ್ತರ ಸಿಗುತ್ತದೆ …

Read More »

ವೇಶ್ಯಾವಾಟಿಕೆ ಕಾನೂನು ಬದ್ಧ : ಪೊಲೀಸರು ಮದ್ಯ ಪ್ರವೇಶಿಸುವಂತಿಲ್ಲಾ…

ನವದೆಹಲಿ : ವೇಶ್ಯಾವಾಟಿಕೆ ಕಾನೂನು ಬದ್ಧ ಎಂಬ ತೀರ್ಪು ನೀಡಿದೆ . ಜತೆಗೆ ಪೊಲೀಸರು ವೇಶ್ಯಾವಾಟಿಕೆ ಸಂಬಂಧ ಮಧ್ಯಪ್ರವೇಶಿಸುವಂತಿಲ್ಲ ವರ ಲೆ ಕ್ರಮ ಕೈಗೊಂಡರೆ ಪೊಲೀಸರ ವಿರುದ್ಧವೇ ಕ್ರಿಮಿನಲ್ ಮೊಖದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದೆ .ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ . ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರ ಅಧ್ಯಕ್ಷತೆಯ ಪೀಠ ಇಂದು ಆದೇಶ ನೀಡಿದೆ . ವೇಶ್ಯಾವಾಟಿಕೆಯಲ್ಲಿ ತೊಡಗಿದ ಮಹಿಳೆಯರ ಹಕ್ಕುಗಳ ರಕ್ಷಣೆ …

Read More »

ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ಹೊರಟ್ಟಿ

ಧಾರವಾಡ : ಕರ್ನಾಟಕ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಗೆ ಇಂದು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಪಕ್ಷದ ಮುಖಂಡರ ಜೊತೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮೊದಲೂ ವೇದಿಕೆ ಧಾರವಾಡ ಕಲಾಭವನ ಮೈದಾನದಲ್ಲಿ ಪಕ್ಷದ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಬಳಿಕ ಧಾರವಾಡ ಡಿಸಿ ಕಚೇರಿಯಲ್ಲಿ ಬಸವರಾಜ್ ಹೊರಟ್ಟಿ ನಾಮಿನೇಷನ್ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಮ್ ಹೆಬ್ಬಾರ, ಸಿ ಸಿ ಪಾಟೀಲ, ಹಾಲಪ್ಪಾ ಆಚಾರ, ಶಂಕರ ಪಾಟೀಲ …

Read More »

ಏಕಾಏಕಿ ವಾಹನಗಳ ಮೇಲೆ ಕಲ್ಲು ತೂರಾಟ : ಆರೋಪಿ ಬಂಧನ

ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆಯಲ್ಲಿ ನಿಲ್ಲಿಸಿದ್ದ ಎರಡು ಕಾರು ಹಾಗೂ ಕಸ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಗಣೇಶ ಪೇಟ್ ನಲ್ಲಿನ ಮೊಹ್ಮದ್ ಆಸೀಫ್ ಎಂಬಾತನಿಂದ ವಾಹನಗಳ ಮೇಲೆ ಪಾಲಿಕೆ ಆಯುಕ್ತರಿಗೆ ಅವಾಚ್ಯವಾಗಿ ನಿಂದನೆ ಮಾಡುತ್ತಾ ಏಕಾಏಕಿ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಇಂದು ಮುಂಜಾನೆ 8.30ಕ್ಕೇ ಪಾಲಿಕೆ ಕಚೇರಿಗೆ ಬೈಕ್ ನಲ್ಲಿ ಬಂದಿದ್ದ ಆರೋಪಿ ಮೊಹ್ಮದ್ ಏಕಾಎಕಿ ದಾಳಿ ನಡೆಸಿದ್ದಾರೆ. ಮೂರು ವಾಹನದ ಗ್ಲಾಸ್ ಸಂಪೂರ್ಣ ಜಖಂವಾಗಿದೆ. ಸೆಕ್ಯೂರಿಟಿ ಸಿಬ್ಬಂದಿಗಳಿಂದ …

Read More »

ಮಾಜಿ ಸದಸ್ಯ ಸೇರಿದಂತೆ 17 ಜನರ ಮೇಲೆ ಎಫ್‌ಐಆರ್ ದಾಖಲು

ತನಗೆ ಜೀವ ಬೆದರಿಕೆ ಹಾಕಿ ನಂಗ್ ಗೊತ್ತಿಲ್ಲದೇ ತನ್ನ ಗಂಡನಿಗೆ ಮದುವೆ ಬೇರೆ ಮಾಡಿಸಿದ್ದಾರೆಂದು ಧಾರವಾಡದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಪರಿಣಾಮ , ಪಾಲಿಕೆ ಮಾಜಿ ಸದಸ್ಯ ಸೇರಿದಂತೆ 17 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಬೆಳಗಲಿ ಗ್ರಾಮದಲ್ಲಿ ಮದುವೆಯಾಗಿದ್ದ ಮಹಿಳೆಯೇ ದೂರು ದಾಖಲು ಮಾಡಿದ್ದು , ಇದರಲ್ಲಿ ಪಾಲಿಕೆ ಸದಸ್ಯಶಿವಾನಂದ ಮುತ್ತಣ್ಣನವರ ಐದನೇಯ ಆರೋಪಿಯಾಗಿದ್ದಾರೆ . ಸಂತೋಷ @ ಕೆಂಚಪ್ಪ ಇವರು ಮರು ಮದುವೆಯಾಗಲು ಸಹಕಾರ …

Read More »

ಹೊರಟ್ಟಿ ಅವರನ್ನು ಗೆಲ್ಲಿಸಲು ಶಾಸಕರಿಂದ ಮನವಿ

ಕಲಘಟಗಿ : ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ -2022 ಬಿಜೆಪಿ ಅಭ್ಯರ್ಥಿ ಹಿರಿಯ ನಾಯಕ ಬಸವರಾಜ ಹೊರಟ್ಟಿ ಗೆಲ್ಲಿಸುವಂತೆ ಶಿಕ್ಷಕರಿಗೆ ಕಲಘಟಗಿ ಶಾಸಕ ನಿಂಬಣ್ಣವರ ನಿಮ್ಮನ್ನು ಅವರು ಮನವಿ ಮಾಡಿದ್ದಾರೆ. ಸುಮಾರು ವರ್ಷಗಳಿಂದ ಅವರು ನಿರಂತರವಾಗಿ ಶಿಕ್ಷಕರ ಧ್ವನಿಯಾಗಿ ನಿಂತು ಕೆಲಸ ಮಾಡಿದ್ದಾರೆ . ಆದ್ದರಿಂದ ಅವರ ಗೆಲುವು ಬಹಳ ಮುಖ್ಯ , ಆದ್ದರಿಂದ ಅವರಿಗೆ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ .

Read More »