ಧಾರವಾಡ: ಬಾಡ ಗ್ರಾಮದ ಕ್ರಾಸ್ ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ನಿಗದಿ ಗ್ರಾಮಕ್ಕೆ ಶಾಸಕ ಸಿ.ಎಂ. ನಿಂಬಣ್ಣವರ ಭೇಟಿ ನೀಡಿ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಈ ಒಂದು ಅಪಘಾತದಲ್ಲಿ 9 ಜನ ಮೃತಪಟ್ಟಿದ್ದಾರೆ, ಈ ಅಪಘಾತ ನನ್ನಗು ತುಂಬಾ ದುಃಖ ತರಿಸಿದೆ. ಇದು ನಮ್ಮ ಕ್ಷೇತ್ರದಲ್ಲಿ ಆಗಿದ್ದು ಮನಸ್ಸಿಗೆ ನೋವಾಗಿದೆ. ಅಲ್ಲದೆ ಈ ಭಾಗದ ಜನರಿಗೆ ತುಂಬಾ ಆಘಾತ ತಂದಿದೆ, ಅಪಘಾತಕ್ಕೆ …
Read More »ಭೀಕರ ಅಪಘಾತ : ಸಾವಿನ ಸಂಖ್ಯೆ 9 ಕ್ಕೆ ಏರಿಕೆ
ಧಾರವಾಡ : ತಾಲೂಕಿನ ಬಾಡ ಗ್ರಾಮದ ಬಳಿ ನಡೆದ ಕ್ರೂಸರ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ . ಸ್ಥಳದಲ್ಲೇ 7 ಜನ ಸಾವನ್ನಪ್ಪಿದ್ದರು . ತೀವ್ರವಾಗಿ ಗಾಯಗೊಂಡಿದ್ದ ಇನ್ನೂ ಕೆಲವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿತ್ತು . ಅದರಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರು ಅಸುನೀಗಿದ್ದಾರೆ . ಅನನ್ಯ , ಹರೀಶ್ , ಶಿಲ್ಪಾ , ನೀಲವ್ವ , ಮಧುಶ್ರೀ , ಮಹೇಶ್ವರಯ್ಯ , ಶಂಭುಲಿಂಗಯ್ಯ , ಮನುಶ್ರೀ …
Read More »ಮಹತ್ವದ ಮಾಹಿತಿ ನೀಡಿದ ಹವಮಾನ ಇಲಾಖೆ
ಬೆಂಗಳೂರು: ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಇನ್ನೆರಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Read More »ಕಾಲು ಜಾರಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು
ಶಿವಮೊಗ್ಗ : ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಲಿನ ತುದೂರು ಬಳಿ ಗದ್ದೆಯ ಹೊಂಡದಲ್ಲಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಶಂಕರ್(53) ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಗದ್ದೆಗೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಶಂಕರ್ ಮೃತಪಟ್ಟಿದ್ದಾರೆ. ಗದ್ದೆಗೆ ತೆರಳಿದ್ದ ಶಂಕರ್ ಬೆಳಗ್ಗೆಯಾದರೂ ಮನೆಗೆ ಬಂದಿರಲಿಲ್ಲ. ಕುಟುಂಬಸ್ಥರು ಗದ್ದೆಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ
ಬಾಗಲಕೋಟೆ : ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.ಮಾನಪ್ಪ ತಳವಾರ (53) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಜಡ್ಜ್ ಆಗಿದ್ದಾರೆ. ಮೂಲತಃ ಶೆಲ್ಲಿಕೇರಿ ಗ್ರಾಮದವರಾಗಿದ್ದ ಮಾನಪ್ಪ ತಳವಾರ ಬಾಗಲಕೋಟೆಯ ನವನಗರದ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಇಂದು ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಸಿಪಿಐ ವಿಜಯಕುಮಾರ್ ಮುರಗುಂಡಿ, ಸಿಪಿಐ ಎಸ್.ಎಂ.ಆವಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂಬಂಧ ನವನಗರ …
Read More »ವರುಣಾರ್ಭಟ : ಅವಳಿ ನಗರದ ಜನರ ಜೀವನ ಅಸ್ತವ್ಯಸ್ತ
ಧಾರವಾಡ : ಇವತ್ತು ಬೆಳಗ್ಗೆ ಮತ್ತೆ ಅಬ್ಬರಿಸಿದ ವರುಣ ಧಾರವಾಡ ಜಿಲ್ಲೆಯ ಜನಜೀವನವನ್ನೇ ಅಸ್ತವ್ಯಸ್ತ ಮಾಡಿದೆ. ಧಾರವಾಡ ನಗರದ ಹಾವೇರಿಪೇಟ ಬಡಾವಣೆ, ಶುಕ್ಲಾ ವಠಾರ, ಕಂಠಿಗಲ್ಲಿ ಸೇರಿದಂತೆ ಹತ್ತಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಶುಕ್ಲಾ ವಠಾರದ 9 ಮನೆಗಳಿಗೆ ಅಕ್ಷರಶಃ ಜಲದಿಗ್ಬಂಧನವಾಗಿತ್ತು. ಇನ್ನು ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿ ಹೊಲಗಳೇ ಕೆರೆಯಂತಾಗಿವೆ. ಹಳ್ಳಗಳು ಭೋರ್ಗರೆಯುತ್ತಿರೋದ್ರಿಂದ ಕುಂದಗೋಳ ತಾಲೂಕಿನ ಮೂರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಬ್ರಿಡ್ಜ್ ಮುಳುಗಡೆಯಾಗಿ ಬಸ್ …
Read More »ಧಾರವಾಡದಲ್ಲಿ ಇಂದು ಶಾಲಾ ಕಾಲೇಜು ಪ್ರಾರಂಭ
ಧಾರವಾಡ : ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಇಳಿಮುಖವಾಗಿದೆ , ಇಂದು ಶಾಲೆ ಕಾಲೇಜುಗಳು ಕಾರ್ಯನಿರ್ವಹಿಸಲಿವೆ . ತರಗತಿಗಳು ನಡೆಯಲಿವೆ ಎಂದು ಧಾರವಾಡ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ .
Read More »ಜಮೀನುಗಳು ಜಲಾವೃತ : ಮುನೇನಕೊಪ್ಪ ಭೇಟಿ
ಹುಬ್ಬಳ್ಳಿ : ತಾಲೂಕ ಬಂಡಿವಾಡ ಹಾಗೂ ಶಿರಗುಪ್ಪಿಗ್ರಾಮದ ಮಧ್ಯ ಇರುವ ನೀರಿನ ಹಳ್ಳ ಹಾಗೂ ಬೆಣ್ಣೆ ಹಳ್ಳದಿಂದ ಸದರಿ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿದ್ದು ಸ್ಥಳಕ್ಕೆ ಸಚಿವ ಎಸ್ಪಿ ಮುನೇನಕೊಪ್ಪಭೇಟಿ ನೀಡಿದರು . ಇದೆ ವೇಳೆಯಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ಮಾಡಿದ ಸಚಿವರು ಜಲಾವೃತಗೊಂಡ ಸ್ಥಳ ಪರಿಶೀಲನೆ ಮಾಡಿದರು .
Read More »ಶೆಟ್ಟರ್ ನೇತೃತ್ವದಲ್ಲಿ ನೂತನ ವಾರ್ಡಿನ ಪ್ರಮುಖರ ಸಭೆ
ಹುಬ್ಬಳ್ಳಿ: ನಗರದ ವಾರ್ಡ್ ನಂ 49 ರೋಟರಿ ಭವನದಲ್ಲಿ ಇತ್ತಿಚೆಗೆ ನಡೆದ ಕಾರ್ಪೊರೇಶನ್ ಚುನಾವಣೆಯಲ್ಲಿ ವಾರ್ಡಗಳ ಮರು ಹಂಚಿಕೆಯಾಗಿದ್ದರಿಂದ ನೂತನ ವಾರ್ಡಿನ ( ವಾರ್ಡ್ ನಂ 49 ) ಪ್ರಮುಖರ ಸಭೆಯನ್ನು ಮಾಜಿ ಸಿಎಂ ಹಾಗೂ ಶಾಸಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆಸಲಾಯಿತು . ಈ ವೇಳೆಯಲ್ಲಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಿ ಪಕ್ಷ ಸಂಘಟನೆಯ ಕುರಿತು ಹೆಚ್ಚು ಒತ್ತು ನೀಡಲು ಕಾರ್ಯಕರ್ತರನ್ನು ಉದೇಶಿಸಿ ಶೆಟ್ಟರ್ ಮಾತನಾಡಿದರು …
Read More »ಧಾರವಾಡದಲ್ಲಿ 97 ಮನೆಗಳು ಭಾಗಶಃ ಹಾನಿ
ಧಾರವಾಡ : ಜಿಲ್ಲೆಯಲ್ಲಿ ನಿರಂತರವಾಗಿ ಆಗುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 97 ಮನೆಗಳಿಗೆ ಭಾಗಶಃ ಹಾನಿ ಆಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ . ಈ ಕುರಿತು ಪ್ರಕಟಣೆ ನೀಡಿರುವ ಅವರು , ಧಾರವಾಡ ತಾಲ್ಲೂಕಿನಲ್ಲಿ 1 , ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 12 , ಹುಬ್ಬಳ್ಳಿ ನಗರ ತಾಲೂಕಿನಲ್ಲಿ 5 , ಕುಂದಗೋಳ ತಾಲೂಕಿನಲ್ಲಿ 49 , ಕಲಘಟಗಿ ತಾಲೂಕಿನಲ್ಲಿ 1 , ನವಲಗುಂದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





