ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗುಂಟ್ರಾಳ ಗ್ರಾಮದ ಸರ್ಕಾರಿ ಶಾಲೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಶಾಲೆಯಲ್ಲಿದ್ದ ಸಮವಸ್ತ್ರ, ಪಠ್ಯಪುಸ್ತಕಗಳು ಸುಟ್ಟು ಹೋಗಿವೆ. ಶಾಲೆಯ ಆವರಣದಲ್ಲಿ ಅನೈತಿಕ ಚಟುವಟಿಕೆ ನಡೆಸದಂತೆ ಬುದ್ಧಿವಾದ ಹೇಳಿದ್ದಕ್ಕೆ ದುಷ್ಕರ್ಮಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ/ ಶಾಲೆಯ ಆವರಣದಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನ, ಧೂಮಪಾನ ಸೇರಿದಂತೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದು, ಇತ್ತೀಚೆಗೆ ಶಾಲೆಯ ಬೀಗ ಮುರಿದು ಒಳಗೆ ಮಲಗಿದ್ದರು.ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಶಿಕ್ಷಕರು ಈ …
Read More »ಹೆಂಡತಿಯ ನಡತೆ ಮೇಲೆ ಅನುಮಾನ – ನಿದ್ರಿಸುತ್ತಿದ್ದ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ಪತಿ!
ಅಥಣಿ: ತಾಲೂಕಿನ ಕಟಗೇರಿ ಗ್ರಾಮದಲ್ಲಿ ಪತ್ನಿಯ ಮೇಲಿನ ಸಂಶಯದ ಹಿನ್ನೆಲೆ ಗಂಡನೇ ಮಲಗಿದ್ದ ಪತ್ನಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಶೋಭಾ ಪರಗೊಂಡ ಸಾರವಾಡ ಮೃತರಾಗಿದ್ದು, ಆರೋಪಿ ಪತಿ ಪರಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂಪತಿ ಅವಜೀಕರ ಮಠದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿಯ ನಡತೆಯ ಬಗ್ಗೆ ಅನುಮಾನ ಹೊಂದಿದ್ದ ಪರಗೊಂಡ, ಕೌಟುಂಬಿಕ ಕಲಹದ ನಡುವೆ ಶೋಭಾ ಗಾಢ ನಿದ್ರೆಯಲ್ಲಿದ್ದ ವೇಳೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. …
Read More »ಕೆಫೆ ಮಾಲೀಕ, ಕ್ಯಾಶಿಯರ್ ದರ್ಪ – ಡೆಲಿವರಿ ಬಾಯ್ ಮೇಲೆ ಮನಬಂದಂತೆ ಹಲ್ಲೆ!
ಬೆಂಗಳೂರು: ಉಲ್ಲಾಳದ ‘ಕೂಲ್ ಜಂಕ್ಷನ್ ಕೆಫೆ’ಯಲ್ಲಿ ಆನ್ಲೈನ್ ಆಹಾರ ಆರ್ಡರ್ ವಿಳಂಬವನ್ನು ಪ್ರಶ್ನಿಸಿದ ಡೆಲಿವರಿ ಬಾಯ್ ಮೇಲೆ ಕೆಫೆ ಮಾಲೀಕ ಹಾಗೂ ಕ್ಯಾಶಿಯರ್ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರ್ಡರ್ ‘ರೆಡಿ’ ಎಂದು ಆ್ಯಪ್ನಲ್ಲಿ ತೋರಿಸಿದ್ದರೂ ಆಹಾರ ಸಿದ್ಧವಾಗಿರಲಿಲ್ಲ. ಇದನ್ನು ಪ್ರಶ್ನಿಸಿದ ಡೆಲಿವರಿ ಬಾಯ್ ಜೊತೆ ಮಾತಿನ ಚಕಮಕಿ ನಡೆದು, ಬಳಿಕ ಕೆಫೆ ಮಾಲೀಕ ರಾಜಣ್ಣ ಮತ್ತು ಕ್ಯಾಶಿಯರ್ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ …
Read More »ಬೆಳಗಾವಿಯಲ್ಲಿ ಭೀಕರ ಮರ್ಡರ್ : ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ್ದ ಸ್ನೇಹಿತನ ಕೊಲೆ.!
ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಶುರುವಾದ ಗಲಾಟೆ ತಾರಕಕ್ಕೇರಿ, ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಗಂಡು ಮಗು ಜನಿಸಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನೇ ಮತ್ತೊಬ್ಬ ಸ್ನೇಹಿತ ಬರ್ಬರಾವಾಗಿ ಹತ್ಯೆ ಮಾಡಿದ್ದಾನೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದಲ್ಲಿ ಈ ರಕ್ತಚರಿತ್ರೆ ನಡೆದಿದೆ. ವಣ್ಣೂರು ಗ್ರಾಮದ ನಿವಾಸಿಯಾದ ಹಣಮಂತಪ್ಪ ಇಟಗಿ ಕೊಲೆಯಾದ ದುರ್ದೈವಿ. ಆರೋಪಿ ವಿಶ್ವನಾಥ್ ಪೂಜಾರಿಗೆ ಇತ್ತೀಚೆಗೆ ಗಂಡು ಮಗು ಜನಿಸಿತ್ತು. ಇದೇ ಖುಷಿಯಲ್ಲಿ …
Read More »ಪಬ್ನಲ್ಲಿ ಬಿಲ್ ವಿಚಾರಕ್ಕೆ ಕಿರಿಕ್ – ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ದೋಚಿದ ಕಿರಾತಕರು!
ಮೈಸೂರು: ಅಗ್ರಹಾರದ ‘ಸಿಪಾಯಿ ಗ್ರಾಂಡೆ’ ಪಬ್ನಲ್ಲಿ ಬಿಲ್ ಪಾವತಿ ವಿಚಾರವಾಗಿ ತಡರಾತ್ರಿ ಗಲಾಟೆ ನಡೆದು, ಪಬ್ ಮ್ಯಾನೇಜರ್ ಮೇಲೆ ಏಳು ಮಂದಿ ಯುವಕರು ಹಲ್ಲೆ ನಡೆಸಿದ ಘಟನೆ ನಡೆದಿದೆ. 15 ಸಾವಿರ ರೂ. ಮದ್ಯದ ಬಿಲ್ ಪಾವತಿಸುವ ನೆಪದಲ್ಲಿ ಮ್ಯಾನೇಜರ್ರನ್ನು ಹೊರಗೆ ಕರೆಸಿಕೊಂಡ ಆರೋಪಿಗಳು, ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ 23 ಗ್ರಾಂ ಚಿನ್ನದ ಸರ ಕಸಿದು ಬೈಕ್ಗಳಲ್ಲಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಗೊಂಡ ಮ್ಯಾನೇಜರ್ …
Read More »ಸಿಲಿಕಾನ್ ಸಿಟಿಯಲ್ಲಿ ಗೂಂಡಾಗಳ ಅಟ್ಟಹಾಸ – ಹಾಡಹಗಲೇ ನಡುರಸ್ತೆಯಲ್ಲಿ ರೌಡಿಶೀಟರ್ ಕಗ್ಗೊ*ಲೆ!
ಬೆಂಗಳೂರು: ನಗರದ ಜೆ.ಪಿ.ನಗರದ ಐಜಿ ಸರ್ಕಲ್ ಬಳಿ ರೌಡಿಶೀಟರ್ ರಾಜು ಭಾಯ್ ಅಲಿಯಾಸ್ ಅಲ್ ಮುರ್ಕ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಸಂಜೆ 5.30ರ ಸುಮಾರಿಗೆ ಚಹಾ ಕುಡಿದು ಮನೆಗೆ ಮರಳುತ್ತಿದ್ದ ವೇಳೆ ನಡೆದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜು ಭಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಸುಮಾರು 10 ವರ್ಷಗಳ ಹಿಂದಿನ ಕೊಲೆ ಪ್ರಕರಣದ ಹಳೆಯ ದ್ವೇಷವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು …
Read More »ಬೆಂಗಳೂರಿನಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ದುಷ್ಕರ್ಮಿಗಳು ಎಸ್ಕೇಪ್
ಬೆಂಗಳೂರು: ಜೆಪಿ ನಗರದ ಐಜಿ ಸರ್ಕಲ್ನಲ್ಲಿ ರೌಡಿಶೀಟರ್ ರಾಜು ಅಲಿಯಾಸ್ ಹಲ್ಮುರ್ಕ್ ರಾಜಾ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಜು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಹಳೆಯ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ರಾಜು ಹಲವು ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಸುಮಾರು 10 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ ಎಂದು …
Read More »ಹುಬ್ಬಳ್ಳಿಯಲ್ಲಿ ರೈಲ್ವೆ ಟೆಂಡರ್ ಹೆಸರಿನಲ್ಲಿ ₹86.06 ಲಕ್ಷ ಸೈಬರ್ ವಂಚನೆ
ಹುಬ್ಬಳ್ಳಿ: ರೈಲ್ವೆ ಟೆಂಡರ್ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನಗರದ ವಿಲ್ಸನ್ ತಲಪತಿ ಅವರನ್ನು ನಂಬಿಸಿ, ₹86.06 ಲಕ್ಷ ಪಡೆದು ವಂಚಿಸಿದ ವ್ಯಕ್ತಿಯ ವಿರುದ್ಧ ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿ ರಮೇಶ ವೈ.ವಿರುದ್ಧ ದೂರು ನೀಡಲಾಗಿದೆ. ರೈಲ್ವೆ ಟೆಂಡರ್ಗಳಲ್ಲಿ ಹೂಡಿಕೆ ಮಾಡಿದರೆ ಶೇ 18ರಿಂದ ಶೇ 28ರವರೆಗೆ ಲಾಭಾಂಶ ನೀಡುವುದಾಗಿ ಹೇಳಿ ಆರೋಪಿಯು, 2024ರಿಂದ ಫೆಬ್ರುವರಿ 2025ರವರೆಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ …
Read More »ಬಳ್ಳಾರಿ: ಮೊಹರಂ ಅಲಾಯಿ ಕುಣಿಗೆ ಬಿದ್ದು ಯುವಕ ಸಾವು
ಕುರುಗೋಡು (ಬಳ್ಳಾರಿ): ಮೊಹರಂ ಆಚರಣೆಗಾಗಿ ನಿರ್ಮಿಸಿದ್ದ ಅಲಾಯಿ ಕುಣಿಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕ್ಯಾದಿಗೆಹಾಳ್ನಲ್ಲಿ ಸಂಭವಿಸಿದೆ. ಮೊಹರಂ ಆಚರಣೆಗಾಗಿ ಪೀರಲು ದೇವರ ಪ್ರತಿಷ್ಠಾಪಿಸಿ ಅಲಾಯಿ ಕುಣಿ (ಬೆಂಕಿ ಉರಿಸುವ ಹೊಂಡ) ತೋಡಿ ಬೆಂಕಿ ಹಾಕಲಾಗಿತ್ತು. ಶುಕ್ರವಾರ ಹಬ್ಬದ ಆಚರಣೆ ಸಂದರ್ಭ ಈ ಕುಣಿಯ ಬೆಂಕಿಗೆ ಬಿದ್ದು ಮಡಿವಾಳ ದೇವರಾಜ್ (28) ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ …
Read More »ದಾಖಲೆಯಿಲ್ಲದೇ ಶೆಡ್ ನಲ್ಲಿ ಬಿದ್ದಿದ್ದ ಕೋಟಿ ಕೋಟಿ ರೂಪಾಯಿ ಹಣ ಸೀಜ್!
ಬೆಂಗಳೂರು: ನಗರದ ಕುರುಬರಹಳ್ಳಿಯ ಕೈಗಾರಿಕಾ ಶೆಡ್ನಲ್ಲಿ ದಾಖಲೆಗಳಿಲ್ಲದ ₹2.98 ಕೋಟಿ ನಗದನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಜಪ್ತಿ ಮಾಡಿದ್ದಾರೆ. ನಾಲ್ಕು ಬ್ಯಾಗ್ಗಳಲ್ಲಿ ಬಚ್ಚಿಟ್ಟಿದ್ದ ಹಣ ಜೂನ್ 2ರಂದು ಗಸ್ತಿನ ವೇಳೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಹಣ ತಾವರೆಕೆರೆ ನಿವಾಸಿ ನಾಗರಾಜ್ಗೆ ಸೇರಿದ್ದು, ಐಟಿ ಅಧಿಕಾರಿಗಳ ಕಣ್ಣು ತಪ್ಪಿಸಲು ಸ್ನೇಹಿತ ವೆಂಕಟೇಶ್ಗೆ ಸೇರಿದ ಶೆಡ್ನಲ್ಲಿ ಇಡಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ಕುರಿತು ಆದಾಯ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





