Breaking News

BigTv News

ಧಾರವಾಡ: ಹೆಬ್ಬಳ್ಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದ ರಸ್ತೆಯ ಬಳಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಸುಮಾರು 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿ ಈತನಾಗಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಮೃತಪಟ್ಟಿದ್ದಾನೆ. ಇದನ್ನು ನೋಡಿದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸಾವಿಗೀಡಾಗಿರುವ ವ್ಯಕ್ತಿ ಚಪ್ಪಲಿ ಬಿಟ್ಟ ಸ್ಥಳಕ್ಕೂ ಬಿದ್ದು ಸಾವಿಗೀಡಾಗಿರುವ ಸ್ಥಳಕ್ಕೂ‌ ಅಂತರವಿದೆ. ತಲೆಗೆ ಬಲವಾದ ಪೆಟ್ಟಾಗಿದೆ. ಸದ್ಯ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ

Read More »

ನಾಳೆಯಿಂದ ಬೆಳಗಾವಿ‌ ಅಧಿವೇಶನ ಆರಂಭ-ಮತಾಂತರ ಕಾಯ್ದೆ,ಉ.ಕ ಭಾಗದ ಅಭಿವೃದ್ಧಿ ಕುರಿತು ಚರ್ಚೆ- ಸಿಎಂ ಬೊಮ್ಮಾಯಿ

ಹುಬ್ಬಳ್ಳಿ- ನಾಳೆಯಿಂದ ಬೆಳಗಾವಿ ಅಧಿವೇಶ ಆರಂಭವಾಗುತ್ತೆ.ಈಗಾಗಲೇ ಎಲ್ಲಾ ತಯಾರಿ ಮಾಡಿದ್ದೆವೆ.ಹುಬ್ಬಳ್ಳಿಯ ನಿವಾಸ ಬಳಿ ಸಿಎಂ ಬೊಮ್ಮಾಯಿ ಹೇಳಿಕೆ.ಈ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ತೆವೆ.ಅಧಿವೇಶನದಲ್ಲಿ ಅಭೀವೃದ್ದಿ ಬಗ್ಗೆ ಚರ್ಚೆಯಾಗುತ್ತೆ. ಮತಾಂತರ ನಿಷೇದ ಕಾಯ್ದೆ ಮಂಡನೆ ವಿಚಾರ‌. ಹಿಂದೂ,ಇಸ್ಲಾಂ,ಕ್ರಿಶ್ಚಿಯನ್, ಸಿಖ್ ಸೇರಿದಂತೆಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ರಚನೆಯಾಗಿವೆ.ಅವರಿಗೆ ಯಾವುದೇ ಆತಂಕ ಬೇಡ.ಈಗಾಗಲೇ ಕ್ರಿಶ್ಚಿಯನ್ ಸಮೂದಾಯ ನಾಯಕರಿಗೆ ನಾನು ಹೇಳಿದ್ದೆನೆ.ಅವರಿಗೆ ಯಾವುದೇ ತೊಂದರೆಯಾಗಲ್ಲ.ಬದಲಾಗಿ ಬಡತನವನ್ನ ದುರುಪಯೊಗ ಮಾಡಿಕೊಂಡು ಮತಾಂತರ ಮಾಡೋದು ತಪ್ಪು.ಆಸೆ ಆಮೀಷ ಒಡ್ಡಿ …

Read More »

ಹಾಸ್ಟೆಲ್​ ಬಳಿ ಗಾಂಜಾ ಮಾರಾಟ ಪ್ರಕರಣ: ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಶಿರೂರ ಪಾರ್ಕ್ ಖೋಡೆ ಹಾಸ್ಟೆಲ್ ಬಳಿ 2019ರಲ್ಲಿ ಗಾಂಜಾ ಮಾರಾಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಸಂಗಮೇಶ ಅಂದಾನಪ್ಪ ಅಂಗಡಿ ಶಿಕ್ಷೆಗೆ ಒಳಗಾದ ಅಪರಾಧಿ. 2019ರ ಜುಲೈ 31ರಂದು ಹಾಸ್ಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ …

Read More »

ವಿಧಾನ ಪರಿಷತ್ ಚುನಾವಣೆ: ಮತ ಚಲಾಯಿಸಿದ ಶಾಸಕ ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು ಮಹಾನಗರ ಪಾಲಿಕೆಯ ಆವರಣದಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಮತಚಲಾಯಿಸಿದ ಶಾಸಕ ಪ್ರಸಾದ ಅಬ್ಬಯ್ಯ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಜನಪ್ರತಿನಿಧಿಗಳು ಹಾಗೂ ಚುನಾಯಿತ ಸದಸ್ಯರು ಉತ್ಸುಕತೆಯಿಂದ ಮತದಾನ ಮಾಡುವ ಮೂಲಕ ತಮ್ಮ ತಮ್ಮ ನೆಚ್ಚಿನ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ.

Read More »

ಹೆಲಿಕಾಪ್ಟರ್ ದುರಂತದಲ್ಲಿ ಒಬ್ಬ ಅಪ್ರತಿಮ ಯೋಧನನ್ನ ದೇಶ ಕಳೆದುಕೊಂಡಿದೆ. -ಪ್ರಲ್ಹಾದ ಜೋಶಿ

ಹುಬ್ಬಳ್ಳಿ– ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.ಬಿಪಿನ್ ರಾವತ್ ಘಟನೆ ಅಂತ್ಯಂತ ದುರಂತ.ನಮೆಗಲ್ಲಾ ತುಂಬಾ ದುಖಃ ಆಗಿದೆ. ಖಂಡಿತ ಆ ಬಗ್ಗೆ ತನೀಖೆಯಂತು ಆಗೇ ಆಗುತ್ತೆ.ಈ ಘಟನೆಯ ತನೀಖೆ ಮಾಡೋಕೆ ನಿರ್ಧಾರ ಆಗಿದೆ.ಮುಂದಿನ ದಿನಗಳಲ್ಲಿ ಈ ರೀತಿ ಘಟನೆಯಾಗದಂತೆ ನೋಡಿಕೊಳ್ಳುತ್ತವೆ.ಹುಬ್ಬಳ್ಳಿ ವಿಮಾನ ನಿಲ್ದಾಣ ದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ‌.

Read More »

ಹೊಸ ವರ್ಷ ಹಾಗೂ‌ ಕ್ರಿಸ್ಮಸ್ ಗೆ ಯಾವುದೇ ನಿರ್ಭಂದ ಇಲ್ಲ- ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಓಮಿಕ್ರಾನ್ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಯಾವುದೇ ನಿರ್ಬಂಧ ಸದ್ಯಕ್ಕಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಆಗಮಿಸಿದ್ದೇನೆ. ಶಿಗ್ಗಾಂವ ಕ್ಷೇತ್ರದಲ್ಲಿ ಮತದಾನ ಮಾಡಲಿರುವೆ. ಮುಂದೆ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಮಹದಾಯಿ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ ಮಹದಾಯಿ ಕಾಮಗಾರಿ ಆರಂಭಿಸಲು ಏನೂ …

Read More »

ಹವಾಮಾನ ವೈಪರೀತ್ಯ; ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 26 ನಿಮಿಷ ಆಗಸದಲ್ಲೇ ಸುತ್ತಿದ ಸಿಎಂ ಫ್ಲೈಟ್

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಚುನಾವಣೆಗೆ ಇಂದು ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮತದಾನಕ್ಕೆ ಮಾಡಲು ತಮ್ಮ ತವರು ಕ್ಷೇತ್ರಕ್ಕೆ ತೆರಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಹವಾಮಾನ ವೈಪರೀತ್ಯ ಬಿಸಿ ತಟ್ಟಿತ್ತು. ಬೆಂಗಳೂರಿನಿಂದ ಇಂಡಿಗೋ 6E 7227 ವಿಮಾನ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ವಿಮಾನ ನಿಗದಿತ ಸಮಯವಾದ 7.30ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನ ಲ್ಯಾಂಡಿಂಗ್‌ಗೆ …

Read More »

ಸಿ ಎಂ ಬದಲಾವಣೆ ವಿಚಾರ ಕೇವಲ ರುಮರ್ಸ್ – ಪ್ರಲ್ಹಾದ ಜೋಶಿ ಸ್ಪಷ್ಟನೆ‌

ಹುಬ್ಬಳ್ಳಿ ರಾಜ್ಯದಲ್ಲಿ ಸಿಎಂ ಬದಲಾವಣೆ ಹೇಳಿಕೆ ವಿಚಾರ ಸಿಎಂ ಬದಲಾವಣೆ ಅನ್ನೋದು ಕೇವಲ ರುಮರ್ಸ್ ಅವರು ಹೇಳಿದ್ದು ಈಗಲೇ ಆಗ್ತಾರೆ ಅಂತ ಅಲ್ಲ ಬಸವರಾಜ ಬೊಮ್ಮಾಯಿ ಬದಲಾಗಲ್ಲ, ರಾಜ್ಯದ ನಾಯಕರಿಗೆ ಕೇಂದ್ರದ ಪರವಾಗಿ ನಾನು ಹೇಳುತ್ತಿದ್ದೇನೆ ಸಿಎಂ ಬದಲಾವಣೆ ಬಗ್ಗೆ ಯಾರು ಹಾಗೆ ಮಾತನಾಡಬಾರದು ಪ್ರಧಾನಿ ಮತ್ರಿಗಳನ್ನ ದೇವೇಗೌಡರು ಭೇಟಿಯಾಗಿದ್ರು ಆದ್ರೆ ಅದರಲ್ಲಿ ಯಾವುದೇ ರಾಜಕೀಯ ಇಲ್ಲ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ ಆದ್ರೆ ಹಾಸನದಲ್ಲಿ ಐಐಟಿ ಆಗಬೇಕು ಅಂತ …

Read More »

ಶಾರ್ಟ್ ಸರ್ಕ್ಯೂಟ್ ಆಗಿ ಧಗಧಗನೇ ಹೊತ್ತಿ ಉರಿದ ಕಾರು – ಗಬ್ಬರೂ ಬೈಪಾಸ್ ಬಳಿ ಘಟನೆ

ಹುಬ್ಬಳ್ಳಿ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ಹೊತ್ತಿ ಉರಿದ ಕಾರ್ಚವರ್ಲೆಟ್ ಟವೆರಾ ಕಾರ್ ಗೆ ತಗುಲಿದ ಬೆಂಕಿ ಬೆಂಕಿ ಹತ್ತಿದ ಕೆಲವೇ ನಿಮಿಷಗಳಲ್ಲಿ ಹೊತ್ತಿ ಉರಿದ ಕಾರ್ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರ್ ಎಂಜಿಂಗ್ ಗೆ ಬೆಂಕಿ ಎನ್ನುವ ಮಾಹಿತಿ ಸದ್ಯ ಕಾರ್ ಯಾರಿಗೆ ಸೇರಿದ್ದು, ಎಲ್ಲಿಗೆ ಹೊರಟಿದ್ರು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಬೆಂಕಿ ಅವರಿಸುತ್ತಿರುತ್ತಿದ್ದಂತೆ ಅದರಲ್ಲಿದ್ದ ಜನರು ಎಸ್ಕೇಪ್ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ …

Read More »

ಗುತ್ತಿಗೆದಾರರ ಸಂಘದಿಂದ ಪ್ರಧಾನಿಗೆ ಪತ್ರ ವಿಚಾರ. ಅದೊಂದು ಬೇಸ್ ಲೆಸ್ ಆರೋಪ.-ಪ್ರಲ್ಹಾದ ಜೋಶಿ

ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.ಅವರ ಹತ್ತಿರ ಏನಾದ್ರು ಸಾಕ್ಷಿ ಇದ್ರೆ ಕೊಡ್ಲಿ.ಅದನ್ನ ತನೀಖೆ ಮಾಡೋಣ.ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರವನ್ನ ಸಹಿಸೋದಿಲ್ಲ.ಹೀಗಾಗೇ ಅವರು ದೂರು ನೀಡಲಿ. ಸಿಎಂ ಬದಲಾವಣೆಯಾಗ್ತಾರೆ ಎನ್ನೋ ಈಶ್ವರಪ್ಪ ಹೇಳಿಕೆ ವಿಚಾರ.ಆ ರೀತಿ ಏನು ಇಲ್ಲ.ಸಿಎಂ ಬದಲಾಣೆಯಾಗೋದಿಲ್ಲ.೨೦೨೩ ರ ವರೆಗೂ ಬೊಮ್ಮಾಯಿಯವರೇ ಸಿಎಂ ಆಗ್ತಾರೆ.ಈಶ್ವರಪ್ಪನವರು ಶಿಘ್ರವೇ ಬದಲಾವಣೆ ಆಗ್ತಾರೆ ಅಂತ ಹೇಳಿಲ್ಲ.ಆದ್ರೂ ಈ ರೀತಿ ಹೇಳಿಕೆ ನೀಡೋದು ತಪ್ಪು.ಪ್ರಧಾನಿಯವರನ್ನ ದೇವೆಗೌಡ್ರು ಭೇಟಿಯಾಗಿದ್ದಾರೆ.ಅವರು ಕೆಲವು ವಿಷಯಗಳ ಬಗ್ಗೆ …

Read More »