Breaking News

BigTv News

ಬೆಳಗಾವಿ | ಬೈಪಾಸ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರ ಬಂಧನ

ಬೆಳಗಾವಿ: ತಾಲ್ಲೂಕಿನ ಹಲಗಾ-ಮಚ್ಛೆ ಬೈಪಾಸ್‌ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ನಾವಗೆಯ ಕೃಷ್ಣಾ ರಾಮನ್ನವರ, ರಣಕುಂಡೆಯ ಪ್ರಮೋದ ಪಾಟೀಲ, ಮಹಾರಾಷ್ಟ್ರದ ಚಂದಗಡದ ರಾಮಕೃಷ್ಣ ಮಾವುರಕರ, ಮಚ್ಛೆಯ ಪರಶುರಾಮ ಬುಗಡಿಕಟ್ಟಿ, ಖಾನಾಪುರ ತಾಲ್ಲೂಕಿನ ಕುಂಬರಗಾದ ಜಾನು ಗಾವಡೆ ಬಂಧಿತರು. ಅವರಿಂದ ₹1.20 ಲಕ್ಷ ಮೌಲ್ಯದ 2.33 ಕೆ.ಜಿ ಗಾಂಜಾ, ಕಾರು, ಬೈಕ್‌, ಮೊಬೈಲ್‌, ₹46 ಸಾವಿರ ನಗದು ಸೇರಿದಂತೆ ₹9.21 ಲಕ್ಷ ಮೌಲ್ಯದ ವಸ್ತುಗಳನ್ನು …

Read More »

ಬೈಕ್‌ನಲ್ಲಿ ತ್ರಿಬಲ್‌ ರೈಡ್‌ ಪ್ರಶ್ನಿಸಿದ ಪೊಲೀಸ್‌ಗೆ ಹಲ್ಲೆ

ಬೆಂಗಳೂರು: ಕರ್ತವ್ಯನಿರತ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ್ದ ಇಬ್ಬರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ್ಞಾನಭಾರತಿ ಪೊಲೀಸ್‌ ಠಾಣೆಯ ಕಾನ್‌ಸ್ಟೆàಬಲ್‌ ಲಕ್ಷ್ಮಣ್‌ ನಾಯಕ್‌ ಮೇಲೆ ಹಲ್ಲೆ ನಡೆಸಿದ ಮುಬಾರಕ್‌ ಹಾಗೂ ಶಾಹೀದ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಜೂನ್‌ 1ರಂದು ಸಂಜೆ ನಮ್ಮೂರ ತಿಂಡಿ ಜಂಕ್ಷನ್‌ ಬಳಿ ಕಾನ್‌ಸ್ಟೇಬಲ್‌ ಲಕ್ಷ್ಮಣ್‌ ನಾಯಕ್‌ ಕರ್ತವ್ಯಕ್ಕೆ …

Read More »

ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ 6 ಜನರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಸೇರಿ ಆರು ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹತ್ಯಾಕಾಂಡ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇಂದು ಪ್ರಮುಖ ಆರೋಪಿ ಅಪ್ಪುಗೌಡ ಪಾಟೀಲ್ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಮೇ 29ರಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು . ಚಂದ್ರಕಾಂತ ನಿರಾಳೆ …

Read More »

ಬಳ್ಳಾರಿಯಲ್ಲಿ ಭೀಕರ ಅಪಘಾತ : ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ-ಮಗ ದುರ್ಮರಣ!

ಬಳ್ಳಾರಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ-ಮಗ ಇಬ್ಬರು ಸಾವನ್ನಪ್ಪಿರುವ ಘಟನೆ, ಜಿಲ್ಲೆಯ ಸಂಡೂರು ತಾಲೂಕಿನ ಚಿನ್ನುಬಸಪ್ಪ ಕ್ಯಾಂಪ್ ಬಳಿ ನಡೆದಿದೆ. ಬೈಕ್ ನಲ್ಲಿದ್ದ ಬೆಳ್ಳಿ ನಾಗರಾಜ್ (45) ದುರಗೇಶ (22) ಸಾವನ್ನಪ್ಪಿದ್ದಾರೆ. ಮೈನಿಂಗ್ ಕಂಪನಿಯಲ್ಲಿ ವಾಚ್ ಮೆನ್ ಆಗಿದ್ದ ಬೆಳ್ಳಿ ನಾಗರಾಜ ಪ್ಯಾರಾ ಮೆಡಿಕಲ್ ಓದುತ್ತಿದ್ದ ನಾಗರಾಜ ಪುತ್ರ ದುರಗೇಶ ತಂದೆಯನ್ನು ಕೆಲಸಕ್ಕೆ ಬಿತ್ತು ಬರಲು ಹೊರಟಿದ್ದ ದುರಗೇಶ. ವೇಗವಾಗಿ ಬಂದು ಮೈನಿಂಗ್ …

Read More »

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುರುವಾರ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 7 ತಿಂಗಳ ಹಸುಗೂಸು, ವೃದ್ಧ ದಂಪತಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಮರಾಜನಗರ ತಾಲೂಕಿನ ದೊಡ್ಡಮೂಡಹಳ್ಳಿ ಕ್ರಾಸ್ ಬಳಿ ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಮುಬಾರಕ್ (70) ಹಾಗೂ 7 ತಿಂಗಳ ಹಸುಗೂಸು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. …

Read More »

ಕೋಲಾರ : ನೇಣು ಬಿಗಿದುಕೊಂಡು ಯುವಕ-ಮಹಿಳೆ ಆತಹತ್ಯೆ

ಮರಕ್ಕೆ ನೇಣು ಬಿಗಿದುಕೊಂಡು ಯುವಕ ಹಾಗೂ ಮಹಿಳೆ ಆತಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಬೆಣಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನೇನಹಳ್ಳಿ ಗ್ರಾಮದ ಸುಮಿತ್ರ ಹಾಗೂ ಆನಂದ್‌ ಆತಹತ್ಯೆಗೆ ಶರಣಾದವರು. ಆನಂದ್‌ ಹಾಗೂ ಸುಮಿತ್ರ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಆರೋಪಗಳು ಕೇಳಿಬಂದಿದ್ದು, ಈ ವಿಚಾರ ಮಹಿಳೆ ಮನೆಯಲ್ಲಿ ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಮಹಿಳೆ ನಾಪತ್ತೆಯಾಗಿದ್ದರು. ಆದರೆ ಇಂದು ಬೆಳಿಗ್ಗೆ ಬೆಟ್ಟಬೆಣಜೇನಹಳ್ಳಿ ಗ್ರಾಮದ ಹೊರವಲಯದ ಹುಣಸೆಮರದಲ್ಲಿ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ …

Read More »

ಅಕ್ರಮ ಕಲ್ಲು ಗಣಿಗಾರಿಕೆ ಅಡ್ಡೆಗೆ ಪೊಲೀಸ್ ದಾಳಿ; ಮೂವರ ವಿರುದ್ಧ ಪ್ರಕರಣ

ಕಾರ್ಕಳ: ಕುಕ್ಕುಂದೂರು ಗ್ರಾಮದ ಅರ್ಬಿಪಾದೆ ಎಂಬಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ, ಸಾಗಾಟ ಮಾಡುತ್ತಿದ್ದ ಅಡ್ಡೆಗೆ ಕಾರ್ಕಳ ನಗರ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.​ಕುಕ್ಕುಂದೂರಿನ ಅರುಣ್‌ ಕುಮಾರ್‌ ಶೆಟ್ಟಿ, ಸದಾಶಿವ ಶೆಟ್ಟಿ , ಸತೀಶ್‌ ಕಿಣಿ ಪ್ರಕರಣದ ಆರೋಪಿಗಳಾಗಿದ್ದಾರೆ. ಜೂನ್ 2ರಂದು ರಾತ್ರಿ ಕುಕ್ಕುಂದೂರಿನ ಅರ್ಬಿಪಾದೆಯ ಸರ್ವೆ ನಂ. 281ರ ಸರಕಾರಿ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಲ್ಲು ಬಂಡೆಗಳನ್ನು ಒಡೆದು, …

Read More »

ಶಿವಮೊಗ್ಗ: ಬೆಕ್ಕುಗಳ ಕಾದಾಟಕ್ಕೆ ನೆರೆಮನೆಯವರ ಹೊಡೆದಾಟ: 20 ಮಂದಿ ವಿರುದ್ಧ ಕೇಸ್‌!

ತೀರ್ಥಹಳ್ಳಿ(ಶಿವಮೊಗ್ಗ): ಬೆಕ್ಕುಗಳ ನಡುವೆ ಜಗಳವಾಗಿದ್ದಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ಮಂಗಳವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ. ನಾಗಪಾತ್ರಿ ರಾಜಶೇಖರ್‌ ಅವರಿಗೆ ಸೇರಿದ್ದ ವಿದೇಶಿ ಬೆಕ್ಕಿಗೆ ನಾಗರಾಜ ಅವರ ಮನೆಯ ಬೆಕ್ಕು ಕಚ್ಚಿದ ವಿಚಾರದಲ್ಲಿ ಎರಡು ಮನೆಯವರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಘಟನೆಯಲ್ಲಿ ನಾಗಪಾತ್ರಿ ರಾಜಶೇಖರ್‌ ಮತ್ತು ನೆರೆಮನೆಯ ಮೇಘನಾ ಎಂಬ ಯುವತಿಗೆ …

Read More »

ಶಾರ್ಟ್ ಸರ್ಕಿಟ್‌: ಕೊಠಡಿಗೆ ಬೆಂಕಿ

ಹೆತ್ತೂರು: ಇಲ್ಲಿನ ಪಬ್ಲಿಕ್ ಶಾಲೆಯಲ್ಲಿ ಬುಧವಾರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಶಾಲೆಯ ಪ್ರಯೋಗಾಲಯ ಸಂಪೂರ್ಣ ಸುಟ್ಟಿದೆ. ಮಧ್ಯಾಹ್ನ ಊಟದ ವೇಳೆ ಶಾರ್ಟ್ ಸರ್ಕ್ಯೂಟ್‌ ಉಂಟಾಗಿದ್ದು, ಪ್ರಯೋಗಾಲಯದಲ್ಲಿದ್ದ 25 ಕಂಪ್ಯೂಟರ್, 20 ಕ್ಕೂಅಧಿಕ ಡೆಸ್ಕ್, ಟಿವಿ ಹಾಗೂ ಪ್ರಯೋಗಾಲಯದ ವಸ್ತುಗಳು ಭಸ್ಮಗೊಂಡಿವೆ. ಪ್ರಯೋಗಾಲಯದ ಕೊಠಡಿಯಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಣ್ಣು, ನೀರು ಹಾಕುವ ಮೂಲಕ ಬೆಂಕಿ ನಂದಿಸುವ ಯತ್ನ ನಡೆಸಿದರೂ ಪ್ರಯೋಜವಾಗಿಲ್ಲ. ಪಟ್ಟಣದಿಂದ ಅಗ್ನಿಶಾಮಕದಳ ಸಿಬ್ಬಂದಿ …

Read More »

ರಾಜ್ಯದಲ್ಲಿ ಆಘಾತಕಾರಿ ಘಟನೆ ; ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ತಾಯಿ ಆತ್ಮಹತ್ಯೆಗೆ ಯತ್ನ.!

ಕೋಲಾರ : ಮುಳಬಾಗಿಲಿನ ಆಲಂಗೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಪತಿಯ ನಿಧನದ ದುಃಖ ತಾಳಲಾರದೆ ಇಬ್ಬರು ಕಂದಮ್ಮಗಳನ್ನು ಕತ್ತು ಹಿಸುಕಿ ಕೊಲೆಗೈದ ಘಟನೆ ನಡೆದಿದೆ. ಘಟನೆಯ ವಿವರ ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಮದಲ್ಲಿ ಆಂಧ್ರಪ್ರದೇಶ ಮೂಲದ ಬುಜ್ಜಮ್ಮ (22) ಎಂಬಾಕೆ ತನ್ನ ಇಬ್ಬರು ಮಕ್ಕಳಾದ ಸರಸ್ವತಿ (3) ಮತ್ತು ಹೇಮಾಶ್ರೀ (1) ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬುಜ್ಜಮ್ಮ ಮತ್ತು ಆಕೆಯ ಪತಿ ಬಾಬು ಮೂಲತಃ ಆಂಧ್ರಪ್ರದೇಶದ …

Read More »