Breaking News

BigTv News

ಗೊಬ್ಬರ ತುಂಬಿದ್ದ ಲಾರಿ-ಕಾರಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ

ತುಮಕೂರು: ಗೊಬ್ಬರ ತುಂಬಿದ್ದ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ದುರಂತ ಸಂಭವಿಸಿದೆ. ಗೊಬ್ಬರ ತುಂಬಿದ್ದ ಲಾರಿ ಹಾಗೂ ಆಲ್ಟೋ ಕಾರಿನ ನಡುವೆ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ಕಾರು ಛಿದ್ರವಾಗಿದೆ. ಕಾರಿನ ಚಾಲಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಕುಮಾರಸ್ವಾಮಿ, ಗಾಯತ್ರಿ ಸೇರಿದಂತೆ ಮಂಡ್ಯ ಮೂಲದ ನಾಲ್ವರು …

Read More »

ಶ್ರೀರಂಗಪಟ್ಟಣ: 280 ಗ್ರಾಂ ಚಿನ್ನಾಭರಣ, ₹3.5ಲಕ್ಷ ನಗದು ಕಳವು

ಶ್ರೀರಂಗಪಟ್ಟಣ: ತಾಲ್ಲೂಕಿನ ನಗುವನಹಳ್ಳಿ ಗ್ರಾಮದ ವಿಜಯಕಮಾರ್‌ ಅವರ ಮನೆಯ ಬಾಗಿಲು ಮುರಿದು 280 ಗ್ರಾಂ ಚಿನ್ನಾಭರಣ ಹಾಗೂ ₹3.5ಲಕ್ಷ ನಗದು ಕಳವು ಮಾಡಿರುವ ಪ್ರರಕಣ ಬುಧವಾರ ತಡರಾತ್ರಿ ನಡೆದಿದೆ. ವಿಜಯಕಮಾರ್‌ ಕುಟುಂಬ ಸದಸ್ಯರು ಕಾರ್ಯನಿಮಿತ್ತ ಬೇರೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದ್ದು, ಗುರುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ವಿಜಯಕುಮಾರ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ …

Read More »

ಹಾರೋಹಳ್ಳಿ: ವೃದ್ಧೆ ಅಡ್ಡಗಟ್ಟಿ ಸರಗಳ್ಳತನ, ಇಬ್ಬರ ಸೆರೆ

ಹಾರೋಹಳ್ಳಿ: ನಾಲ್ಕು ದಿನಗಳ ಹಿಂದೆ ಹಾರೋಹಳ್ಳಿ ಪಟ್ಟಣದಲ್ಲಿ ನಡೆದಿದ್ದ ವೃದ್ಧೆಯ ಚಿನ್ನದ ಮಾಂಗಲ್ಯಸರ ಕಳ್ಳತನ ಮತ್ತು ಆನೇಕಲ್‌ನಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಕಳ್ಳತನದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕುವೆಂಪು ನಗರದ ಆಟೊ ಚಾಲಕ ಲೋಕೇಶ(41), ಆನೇಕಲ್ ತಾಲ್ಲೂಕು ಮಟ್ಟನಹಳ್ಳಿಯ ಲಾರಿ ಚಾಲಕ ರಮೇಶ್ ವಿ.(43) ಬಂಧಿತರು. ಲಕ್ಷ್ಮಮ್ಮ ಅವರನ್ನು ಅಡ್ಡಗಟ್ಟಿದ ಬೈಕ್‌ನಲ್ಲಿದ್ದ ಅಪರಿಚಿತರಿಬ್ಬರು, ಅವರ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದರು. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. …

Read More »

ಕೊಡಿಗೇನಹಳ್ಳಿ: ಸರ ಕದ್ದ ಮಹಿಳೆ ಬಂಧನ

ಕೊಡಿಗೇನಹಳ್ಳಿ: ಚಿನ್ನದ ಸರ ಕದ್ದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದುಪುರದ ಸುಜಾತಮ್ಮ ಶುಕ್ರವಾರ ಬೆಳಿಗ್ಗೆ ದೊಡ್ಡ ಹೊಸಹಳ್ಳಿಗೆ ಜಾತ್ರೆಗೆಂದು ಬಸ್‌ನಲ್ಲಿ ಹೋಗುತ್ತಿದ್ದಾಗ ಕೊಡಿಗೇನಹಳ್ಳಿ ಬಸ್ ನಿಲ್ದಾಣದಲ್ಲಿ ವಾಂತಿಯಾಗಿದೆ. ಆ ಸಂದರ್ಭದಲ್ಲಿ ಕತ್ತಿನಲ್ಲಿದ್ದ ನೆಕ್ಲೇಸ್ ಕೆಳಗೆ ಬಿದ್ದಿರುವುದು ತಿಳಿದಿರಲಿಲ್ಲ. ಸ್ವಲ್ಪ ದೂರ ಮುಂದೆ ಹೋದ ಮೇಲೆ ನೆಕ್ಲೇಸ್ ಇಲ್ಲದಿರುವುದು ಗೊತ್ತಾದ ತಕ್ಷಣ ಕೊಡಿಗೇನಹಳ್ಳಿಗೆ ವಾಪಸ್‌ ಬಂದು 16 ಗ್ರಾಂನ ನೆಕ್ಲೇಸ್‌ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ …

Read More »

ಮೈಸೂರು: ಉದಯಗಿರಿ ಹತ್ಯೆ ಪ್ರಕರಣದ ಆರೋಪಿ ಬಂಧನ

ಮೈಸೂರು: ನಗರದ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಗೌಸಿಯಾನಗರದ ಉಮರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ದಾವಣಗೆರೆ ನಿವಾಸಿ, ಕಳೆದ 10 ವರ್ಷಗಳಿಂದ ಕ್ಯಾತಮಾರನಹಳ್ಳಿಯಲ್ಲಿ ನೆಲೆಸಿರುವ ನೆಲೆಸಿರುವ ಖಾಸಿಂಸಾಬ್ ಪುತ್ರ ಬಾಬು ಬಂಧಿತ ಆರೋಪಿ. ಕೆ.ಎನ್.ಪುರ-ಶಾಂತಿನಗರ ಬಾರ್ ಬಳಿಯ ಗಲ್ಲಿಯಲ್ಲಿ ಉಮರ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಸಾಕಷ್ಟು ಮಾಹಿತಿ …

Read More »

ಬೈಂದೂರು: 6 ಲಕ್ಷ ನಗದು ಕಳವು ಮಾಡಿದ್ದ ರಾಜಸ್ಥಾನ ಮೂಲದ ಆರೋಪಿ ಬಂಧನ

ಬೈಂದೂರು: ಯಡ್ತರೆ ಗ್ರಾಮದ ಎಸ್‌ಬಿಐ ಬ್ಯಾಂಕ್ ಹಿಂಭಾಗದ ಬಾಡಿಗೆ ಮನೆಯೊಂದರಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಭೇದಿಸಿರುವ ಬೈಂದೂರು ಪೊಲೀಸರು, ರಾಜಸ್ಥಾನ ಮೂಲದ ಆರೋಪಿಯನ್ನು ಬಂಧಿಸಿ 6 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಮಹೇಂದ್ರ ಸೈನ್ (23) ಬಂಧಿತ ಆರೋಪಿ. ಈತ ಬೈಂದೂರಿನ ಬಂಕೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಏಪ್ರಿಲ್ 23 ರಂದು ಮಧ್ಯಾಹ್ನ ಯಡ್ತರೆ ನಿವಾಸಿ ರಾವಲ್ ಸಿಂಗ್ ಎಂಬುವವರು ಮನೆಯಲ್ಲಿ ಇಲ್ಲದ ಸಮಯವನ್ನು ಹೊಂಚು …

Read More »

ವಾರಂಟ್ ಆರೋಪಿ ಬಂಧನ

ಬೆಳ್ತಂಗಡಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ್ದ ವಾರಂಟ್ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಸ್ಕೋರ್ಪಿಯಾ ಸತೀಶ್ (35) ಆರೋಪಿ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ ವಾರಂಟ್ ಆರೋಪಿ, ನೆಲ್ಯಾಡಿಯ ಸತೀಶ್ ಅಲಿಯಾಸ್ ಸ್ಕೋರ್ಪಿಯಾ ಸತೀಶ್ ತಪ್ಪಿಸಿಕೊಂಡಿದ್ದ. ಈತನನ್ನು ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್, ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ಅವರ ತಂಡ, ನೆಲ್ಯಾಡಿಯಲ್ಲಿ ಬಂಧಿಸಿ ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ …

Read More »

*”ಆಯಂಟಿ ಸ್ಟಾಬಿಂಗ್ ಸ್ಕ್ವಾಡ್” ವಿಶೇಷ ಕಾರ್ಯಾಚರಣೆ: ಆಯುಧ ಸಮೇತ ಆರೋಪಿ ವಶಕ್ಕೆ*

ಬೆಳಗಾವಿ ನಗರದಲ್ಲಿ ಇತ್ತಿಚೆಗೆ ಹೆಚ್ಚುತ್ತಿರುವ ಸ್ಟಾಬಿಂಗ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರದ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಆಯಂಟಿ ಸ್ಟಾಬಿಂಗ್ ಸ್ಕ್ವಾಡ್” ತಂಡದಿಂದ ಪರಿಶೀಲನೆ ಮುಂದುವರೆಸಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಂಡಿ-ಬುಡ್ಯಾನೂರ ರಸ್ತೆಯಲ್ಲಿ ಆರೋಪಿತನಾದ ಕಿರಣ ದುರ್ಗಪ್ಪ ಕಡ್ಯಾಗೋಳ (22) ಎಂಬಾಗ ಕಾನೂನು ಬಾಹಿರವಾಗಿ ಅರಣ್ಯ ಪ್ರದೇಶದ ಗಿಡಗಂಟಿಗಳಲ್ಲಿ ನಿಂತು ಕೈಯಲ್ಲಿ ಕಬ್ಬಿಣದ ಕುಡುಗೋಲ ಹಿಡಿದು ಜಳಪಳಿಸುತ್ತಿದ್ದ. ಈ ವೇಳೆ …

Read More »

ಮಾಗಂಲ್ಯ ಸರ ಕದ್ದವರ ಬಂಧನ

ಹಾರೋಹಳ್ಳಿ: ಚಿನ್ನದ ಮಾಂಗಲ್ಯ ಕಿತ್ತು ಪರಾರಿಯಾಗಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್​ ತಾಲೂಕಿನ ತಿಮ್ಮರಾಯಸ್ವಾಮಿ ದಿಣ್ಣೆ ಕುವೆಂಪುನಗರದ ಆಟೋ ಚಾಲಕ ಲೋಕೇಶ (41), ಮಟ್ಟನಹಳ್ಳಿ ಲಾರಿ ಚಾಲಕ ರಮೇಶ್​ ವಿ. ಬಿನ್​ ಲೇಟ್​ ವೆಂಕಟರಮಣಪ್ಪ (43) ಬಂಧಿತರು. ಆನೇಕಲ್​&ಹಾರೋಹಳ್ಳಿ ಮುಖ್ಯರಸ್ತೆಯ ನರಿಪುರಗೇಟ್​ ಬಳಿ ಸೋಮವಾರ ಸಂಜೆ ಲ್ಮಮ್ಮ ಎಂಬುವವರು ನೀರು ತೆಗೆದುಕೊಳ್ಳಲು ಬಂದಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಈ ಇಬ್ಬರು ಲಕ್ಷ್ಮಮ್ಮ ಅವರನ್ನು ಅಡ್ಡಗಟ್ಟಿ ಚಿನ್ನದ …

Read More »

ದ್ವಿಚಕ್ರ ವಾಹನ ಕಳ್ಳನ ಬಂಧನ

ಶಿಡ್ಲಘಟ್ಟ: ನಗರದ ಪೊಲೀಸರು ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿ, ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದಾಯತ್ ಎಂಬುವವರು ಸರ್ಕಾರಿ ಆಸ್ಪತ್ರೆಯ ಬಳಿ ಬಿಟ್ಟಿದ್ದ ತಮ್ಮ ದ್ವಿಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಸರ್ಕಲ್ ಇನ್‌ಸ್ಪೆಕ್ಟರ್ ಆನಂದ್ ಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ವೇಣುಗೋಪಾಲ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶೀನಿವಾಸಪುರ ನಿವಾಸಿ ಸೈಯದ್ ಯಾಸೀನ್ ಪಾಷಾ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Read More »