Breaking News

BigTv News

ಅಕ್ರಮ ಪಡಿತರ ಅಕ್ಕಿ ದಂಧೆ? ಎಸ್ಪಿ ಗನ್‌ಮ್ಯಾನ್ ಬಂಧನ!

ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಣೆ ಪ್ರಕರಣ ಸಂಬಂಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಎಸ್ಪಿ ಗನ್‌ಮ್ಯಾನ್ ಬಂಧಿಸಲಾಗಿದೆ. ಅಕ್ರಮ ಪಡಿತರ ಅಕ್ಕಿ ಸಾಗಣೆದಾರರಿಂದ ಸುಮಾರು 3 ಲಕ್ಷ ರೂಪಾಯಿ ಲಂಚ ವಸೂಲಿ ಮಾಡಿದ ಆರೋಪದಡಿ ಬಳ್ಳಾರಿ ಎಸ್ಪಿ ಕಚೇರಿಯ ಗನ್‌ಮ್ಯಾನ್ ದೇವರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ. ಮಾಹಿತಿಯ ಪ್ರಕಾರ, ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಕಾನೂನು ಕ್ರಮದ …

Read More »

ಆಸ್ತಿ ಕಲಹ: ಕಿಚ್ಚಿಟ್ಟು ಮಹಿಳೆಯ ಕೊಲೆ ಯತ್ನ

ಕಡಬ: ಆಸ್ತಿ ವಿಷಯಕ್ಕೆ ಸಂಬಂಧಿಸಿದ ಮನಸ್ತಾಪವೊಂದು ವಿಕೋಪಕ್ಕೆ ತಿರುಗಿ, ಐತ್ತೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕುಸಮಾಧರ ಎಂಬಾತನನ್ನು ಬಂಧಿಸಿದ್ದಾರೆ. ಐತ್ತೂರು ಗ್ರಾಮದ ಕೆರ್ಮಾಯಿ ಪಾದೆಮಜಲು ನಿವಾಸಿ ಬೇಬಿ ಹಾಗೂ ಅವರ ಮೈದುನ ಕುಸಮಾಧರ ಅವರಿಗೆ ಆಸ್ತಿ ವಿಷಯದಲ್ಲಿ ಮನಸ್ತಾಪವಿದೆ. ಬೇಬಿ ಅವರ ಪತಿ ನೋಣಯ್ಯ ಹಾಗೂ ಅವರ ಸಹೋದರ …

Read More »

ಮುರ: ರಿಕ್ಷಾ ಚಾಲಕ – ಇತರರಿಂದ ಬಸ್ಸು ಚಾಲಕನಿಗೆ ಹಲ್ಲೆ

ಪುತ್ತೂರಿನ ಮುರದಲ್ಲಿ ಬಸ್ಸು ಚಾಲಕನೋರ್ವನಿಗೆ ಆಟೋ ರಿಕ್ಷಾ ಚಾಲಕ ಹಾಗೂ ಇತರ ಮೂವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಮೇ 6ರಂದು ನಡೆದಿದೆ. ಪುತ್ತೂರು ಸಾಮೆತ್ತಡ್ಕ ನಿವಾಸಿ ರಾಕೇಶ್ ಡಿಸೋಜ ಹಲ್ಲೆಗೊಳಗಾದವರು. ಅವರು ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಮೇ 6ರಂದು ಬಸ್ಸನ್ನು ಚಲಾಯಿಸಿಕೊಂಡು ವಿಟ್ಲದಿಂದ ಮದುವೆ ದಿಬ್ಬಣವನ್ನು ಮಡಿಕೇರಿಗೆ ಕರೆದುಕೊಂಡು ಹೋಗುತ್ತಿದ್ದರು. ಬಸ್ಸು ಉರಿಮಜಲಿಗೆ ತಲುಪಿದಾಗ ಮುಂದೆ ಹೋಗುತ್ತಿದ್ದ ಆಟೋವನ್ನು ಅದರ ಚಾಲಕ ಏಕಾಏಕಿ ನಿಲ್ಲಿಸಿರುವುದನ್ನು …

Read More »

ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರೇ ಎಚ್ಚರ, ಕಾರ್ ಗ್ಲಾಸ್ ಒಡೆದು ಕನ್ನ ಹಾಕಿದ ಕಳ್ಳರು-

ಬೆಂಗಳೂರು ನಗರದ ರಸ್ತೆಬದಿಗಳಲ್ಲಿ ವಾಹನ ನಿಲ್ಲಿಸುವವರು ಈಗ ಅತೀವ ಜಾಗರೂಕರಾಗಿರಬೇಕಿದೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಸ ಮಾದರಿಯ ಕಳವು ಪ್ರಕರಣವೊಂದು ಬೆಳಕಿಗೆ ಬಂದಿದೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದ ದುಬಾರಿ ಪರಿಕರಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಾರಿನಲ್ಲೇ ಇಟ್ಟು ಮಾಲೀಕರು ಮನೆಗೆ ತೆರಳಿದ್ದರು. ಮರುದಿನ ಮುಂಜಾನೆ ಬಂದು ನೋಡಿದಾಗ, ದುಷ್ಕರ್ಮಿಗಳು ಕಿಟಕಿಯ ಗಾಜು ಪುಡಿಮಾಡಿ ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿರುವುದು ಕಂಡುಬಂದಿದೆ. ಬೆಂಗಳೂರಿನಾದ್ಯಂತ ಬೀಡುಬಿಟ್ಟಿರುವ ಇಂತಹ ಚಾಣಾಕ್ಷ …

Read More »

ಅರಣ್ಯ ಸಿಬಂದಿಗೆ ಬೆದರಿಕೆ ; ಆರೋಪಿ ಬಂಧನ

ಕುಂದಾಪುರ: ಸದಾಶಿವ ಕೋಟೆಕಾರ್ ಎಂಬುವರು ಬೆದರಿಸಿ, ಹಣಕ್ಕೆ ಬೆದರಿಕೆ ಹಾಕಿರುವುದಾಗಿ ಅರಣ್ಯ ಇಲಾಖೆಯಲ್ಲಿ ಅರಣ್ಯ ಗಸ್ತು ಪಾಲಕನಾಗಿರುವ ಆನಂದ ಬಳೆಗಾರ್ ದೂರು ನೀಡಿದ್ದಾರೆ.ಪ್ರಕರಣ ಸಂಬಂಧ ಆರೋಪಿ ಸದಾಶಿವ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಮೇ 1 ರಂದು ಆರೋಪಿಯು ನನ್ನ ಇಲಾಖಾ ಸಮವಸ್ತ್ರಕ್ಕೆ ಕೈ ಹಾಕಿ, ನಿನ್ನ ಎಲ್ಲ ವಿಚಾರ ನನಗೆ ತಿಳಿದಿದೆ. ನನಗೆ 25 ಸಾವಿರ ರೂ. ಹಣ ಕೊಡಬೇಕು. ಇಲ್ಲದಿದ್ದರೆ ಎಲ್ಲ ವಿಚಾರ …

Read More »

ಬಾರ್ ನಲ್ಲಿ ಕುಡಿದು ಹಣ ನೀಡದೆ ಗಲಾಟೆ; ದೂರು ದಾಖಲು

ಬಂಟ್ವಾಳ: ಬಾರ್ ನಲ್ಲಿ ಮದ್ಯ ಸೇವಿಸಿ ಹಣ ನೀಡದೆ ಗಲಾಟೆ ಮಾಡಿದ ಘಟನೆಗೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮ್ಮೆಮಾರ್ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತನು ಫರಂಗಿಪೇಟೆಯಲ್ಲಿರುವ ಬಾರ್ ಗೆ ಬಂದು ಮದ್ಯ ಸೇವನೆ ಮಾಡಿದ ಬಳಿಕ 1,560 ರೂ.ಗಳ ಬಿಲ್ಲು ಕೊಟ್ಟಾಗ ಹಣ ಕೊಡುವುದಿಲ್ಲ ಎಂದು ಹೇಳಿ ಉಡಾಫೆ ಹಾಗೂ ಗಲಾಟೆ ಮಾಡಿದ್ದಾನೆ ಹಾಗೂ ಬಿಲ್ ಕೊಡದೆ ಹೋಗಿದ್ದನು. ಬಾರ್ ನ ಸಿಬಂದಿ ವಾಸವಿರುವ ರೂಂ ಬಳಿಗೆ …

Read More »

ಮಾದಕ ವಸ್ತು ಸೇವನೆ: ಯುವಕನ ಬಂಧನ

ಮಂಗಳೂರು: ಮಾದಕ ವಸ್ತು ಬೆರೆಸಿದ ಸಿಗರೇಟು ಸೇವನೆ ಮಾಡಿದ ಆರೋಪದಡಿ ಯುವಕನೊಬ್ಬನನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಯ್ಗೆ ಬಜಾರ್ ನಿವಾಸಿ ಪ್ರಥಮ್ ಕೋಟಿಯಾನ್ ಆರೋಪಿ. ಬುಧವಾರ ರಾತ್ರಿ ಗಸ್ತಿನಲ್ಲಿರುವಾಗ ಬಿಜೈ ಕಾಪಿಕಾಡ್ ಆನೆಗುಂಡಿ ರಸ್ತೆಯಲ್ಲಿ ಸಿಗರೇಟ್ ಸೇದುತ್ತ ನಿಂತಿದ್ದ ಯುವಕನನ್ನು ಕಂಡು ಅವನ ಬಳಿ ಹೋದಾಗ ಆತ ಸಿಗರೇಟನ್ನು ಚರಂಡಿಗೆ ಎಸೆದಿದ್ದಾನೆ. ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ ಮಾದಕ ವಸ್ತು ಬೆರೆಸಿ ಸಿಗರೇಟು ಸೇದುತ್ತಿರುವ ಬಗ್ಗೆ ತಿಳಿಸಿದ್ದಾನೆ. ವೈದ್ಯಕೀಯ ಪರೀಕ್ಷೆಗೆ …

Read More »

ಪೆಟ್ರೋಲ್ ಸುರಿದು ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ಆನೇಕಲ್: ಪತ್ನಿ- ಮಕ್ಕಳನ್ನು ತನ್ನೊಂದಿಗೆ ಕಳುಹಿಸಿಕೊಡಿ ಎಂದ ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ತಡವಾಗಿ ವರದಿಯಾಗಿದೆ. ಸುಟ್ಟ ಗಾಯಗಳೊಂದಿಗೆ ತಮಿಳುನಾಡಿನ ಕೃಷ್ಣಗಿರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೇ 2ರಂದು ಚಿಕಿತ್ಸೆ ಫಲಕಾರಿಯಾಗದೆ ನವೀನ್(25) ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸಾಯುವ ಮುನ್ನ ಕೃಷ್ಣಗಿರಿಯ ಮಾಜಿಸ್ಟ್ರೇಟ್ ಮುಂದೆ ಡೆತ್ ಡಿಕ್ಲರೇಷನ್ ಹೇಳಿಕೆ ನೀಡಿದ್ದ ನವೀನ್ ತನ್ನ ಮೇಲೆ ಪೆಟ್ರೋಲ್ ಸುರಿದು ಹಲ್ಲೆ ಮಾಡಿ ಬೆಂಕಿ ಹಚ್ಚಿದ ಮಾವ ಸಂಪಂಗಿ …

Read More »

ಕೋಲಾರ: ಕಣ್ಣಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ್ದವರ ಬಂಧನ

ಮುಳಬಾಗಿಲು: ಚಾಕು ತೋರಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವಸೂಲಿ ಹಣ ಕಿತ್ತು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ ₹5.90 ಲಕ್ಷವನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಳಬಾಗಿಲು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಮುಳಬಾಗಿಲು ನಗರದ ಟಿಪ್ಪು ಸುಲ್ತಾನ್ (28), ಸಾಧಿಕ್ ಪಾಷಾ (30) ಹಾಗೂ ತೌಹೀದ್ ಖಾನ್ (26) ಬಂಧಿತರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಏಪ್ರಿಲ್ 7ರಂದು ಮುಳಬಾಗಿಲು ನಗರದ …

Read More »

ಸುಬ್ರಹ್ಮಣ್ಯದಲ್ಲಿ ದನ ಕಳವು; ಕಾರಿನಲ್ಲಿ ತುಂಬಿಸಿಕೊಂಡು ಹೋದ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆ

ಕುಕ್ಕೆ ಸುಬ್ರಹ್ಮಣ್ಯದ ಷಷ್ಠಿ ಲಾಡ್ಜ್ ಎದುರಿನ ರಸ್ತೆಯಲ್ಲಿ ನಿಂತಿದ್ದ ದನವೊಂದನ್ನು ಅಪರಿಚಿತರು ಕಳವು ಮಾಡಿಕೊಂಡು ಕಾರಿನಲ್ಲಿ ತುಂಬಿಸಿಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ. ಮೇ 6ರಂದು ಬೆಳಗಿನ ಜಾವ ಸುಮಾರು 2.30ರಿಂದ 2.50 ಗಂಟೆಯ ಅವಧಿಯಲ್ಲಿ ಘಟನೆ ನಡೆದಿದ್ದು, ಸಮೀಪದ ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ಘಟನೆ ಸೆರೆಯಾಗಿದೆ. ಇಬ್ಬರು ವ್ಯಕ್ತಿಗಳು ರಸ್ತೆ ಬದಿಯಲ್ಲಿದ್ದ ದನವನ್ನು ಹಿಡಿದು ಕಾರೊಂದರಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯಗಳು ದಾಖಲಾಗಿವೆ. ಈ ಕುರಿತು ಶೇಖರ ಎ. …

Read More »