Breaking News

BigTv News

ರಾಜ್ಯದಲ್ಲಿ ಘೋರ ಕೃತ್ಯ : ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ, ಮಹಿಳೆಯ ಖಾಸಗಿ ಭಾಗಕ್ಕೆ ಒದ್ದು ಕೊಂದ ಪ್ರಿಯಕರ!

ಹಾಸನ: ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳ ಮೇಲೆ ತೀವ್ರ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮ್ಯಾ.ಎ.ಆರ್ (35) ಕೊಲೆಯಾದ ಮಹಿಳೆಯಾಗಿದ್ದು, ಅದೇ ಗ್ರಾಮದ ಚಂದ್ರ (41) ಹತ್ಯೆಗೈದ ಆರೋಪಿ ಎಂದು ತಿಳಿದುಬಂದಿದೆ. ವಿಧವೆಯಾಗಿದ್ದ ರಮ್ಯಾ ಬೆಂಗಳೂರಿನಲ್ಲಿ ನರ್ಸಿಂಗ್‌ ಕೆಲಸ ಮಾಡಿಕೊಂಡಿದ್ದು, ಆರೋಪಿ ಚಂದ್ರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಏ.28ರಂದು ಅತ್ತೆಯ ಅಂತ್ಯಸಂಸ್ಕಾರಕ್ಕೆಂದು ಸ್ವಗ್ರಾಮ ಅತ್ತಿಹಳ್ಳಿಗೆ ಬಂದಿದ್ದಾಗ, ರಾತ್ರಿ ಮನೆಗೆ ಬಂದ ಚಂದ್ರ ಲೈಂ*ಗಿಕ …

Read More »

ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿ ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಮತ್ತಿಕೆರೆ ವ್ಯಾಪ್ತಿಯಲ್ಲಿ ನಡೆದಿದೆ.4 ವರ್ಷದ ನಿವೇದ್ ಹಾಗೂ 2 ವರ್ಷದ ನಿರ್ಮಲ್ ತಾಯಿ ಕೈಯಿಂದಲೇ ಕೊಲೆಯಾದ ಮಕ್ಕಳು.ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಪವಿತ್ರಾ ಅವರ ಸ್ಥಿತಿಯೂ ಗಂಭೀರವಾಗಿದೆ. ಪವಿತ್ರಾ ಹಾಗೂ ಪತಿ ಪ್ರಶಾಂತ್ ನಡುವೆ ಗಲಾಟೆಯಾಗಿತ್ತು. ಇದರಿಂದ ಬೇಸತ್ತ ಪವಿತ್ರಾ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಮಕ್ಕಳಿಬ್ಬರಿಗೂ …

Read More »

ಎಸಿ ಸ್ಫೋಟಗೊಂಡು ಭೀಕರ ಬೆಂಕಿ ಅವಘಡ: 9 ಜನರು ಸಜೀವದಹನ

ನವದೆಹಲಿ: ವಸತಿ ಕಟ್ಟಡದಲ್ಲಿ ಎಸಿ ಸ್ಫೋಟಗೊಂಡು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 9 ಜನರು ಸಜೀವದಹನವಾಗಿರುವ ಘಟನೆ ನವದೆಹಲಿಯ ವಿವೇಕ ವಿಹಾರದಲ್ಲಿ ನಡೆದಿದೆ.ವಿವೇಕ ವಿಹಾರದ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಇಂದು ಮುಂಜಾನೆ 3:47ರ ಸುಮಾರಿಗೆ ಎಸಿ ಸ್ಫೋಟಗೊಂಡ ಪರಿಣಾಮ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 9 ಜನರುಸಜೀವದಹನವಾಗಿದ್ದಾರೆ. ಘಟನೆಯಲ್ಲಿ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆ ಕಟ್ಟಡದ ತುಂಬಾ ವ್ಯಾಪಿಸಿದ್ದು, ಹಲವರು ಹೊರಬರಲಾಗದೇ …

Read More »

ಬೆಂಕಿ ಅವಘಡ: 10 ಮೇಕೆ, 20 ಕೋಳಿಗಳ ಸಾವು

ರಾಯಚೂರು: ತಾಲ್ಲೂಕಿನ ಬುರ್ದಿಪಾಡ ಗ್ರಾಮದಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿ ಕುರಿ ಶೆಡ್ ಸಂಪೂರ್ಣ ಭಸ್ಮವಾಗಿದ್ದು, 10 ಮೇಕೆಗಳು ಹಾಗೂ 20 ಕೋಳಿಗಳು ಸಜೀವ ದಹನವಾಗಿವೆ. ಒಂದು ಮನೆಗೂ ಹಾನಿಯಾಗಿದೆ. ಗ್ರಾಮದ ನಾಗಮ್ಮ ಅವರಿಗೆ ಸೇರಿದ ಕುರಿ ಶೆಡ್ ಹಾಗೂ ಮನೆ ಈ ಅವಘಡದಲ್ಲಿ ಹಾನಿಗೀಡಾಗಿವೆ. ನಾಗಮ್ಮ ಅವರ ಹೊಲದ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಹೊಲದಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗಿತ್ತು. ಅದರ ಕಿಡಿಗಳು ಗಾಳಿಗೆ ಹಾರಿ ಕುರಿಗಳಿದ್ದ ಶೆಡ್‌ಗೆ ತಗುಲಿ …

Read More »

ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಬಂಧನ

ಕೊಳ್ಳೇಗಾಲ: ತಾಲ್ಲೂಕಿನ ಸಿಲ್ಕಲ್ ಪುರ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಗ್ರಾಮದ ಮಹದೇವಯ್ಯ (70) ಎಂಬುವರನ್ನು ಪೊಲೀಸರು ಹಾಗೂ ಆಹಾರ ಇಲಾಖೆ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ 766 ಕೆ.ಜಿ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಈತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪಡಿತರ ಅಕ್ಕಿಯನ್ನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಮನೆಯ ಮುಂದೆ ಸಂಗ್ರಹಿಸಿಟ್ಟಿದ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ …

Read More »

ಪಶ್ಚಿಮ ಘಟ್ಟದಲ್ಲಿ ಧಗಧಗಿಸುವ ಬೆಂಕಿ: ಹಸಿರನ್ನು ನುಗುತ್ತಿದೆ ಭೀಕರ ಕಾಡ್ಗಿಚ್ಚು

ಕುದುರೇಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ಸಂಜೆ ಕಾಡ್ಗಿಚ್ಚು ಸಂಭವಿಸಿದ್ದು, ವೇಗವಾಗಿ ಅರಣ್ಯ ಪ್ರದೇಶವನ್ನು ಆವರಿಸಿದೆ. ಸುಲ್ಕೇರಿಮೊಗ್ರು, ಶಿರ್ಲಾಲು ಗ್ರಾಮದ ಮೇಲ್ಭಾಗದ ಅರಣ್ಯ ಪರಿಸರದಲ್ಲಿ ಬೆಂಕಿಯ ಮಾಲೆ ಕಂಡುಬಂದಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸೇತುವೆಯಿಂದ ಶನಿವಾರ ಸಂಜೆ ಕಂಡು ಬಂದ ದೃಶ್ಯ ಇದಾಗಿದೆ. ಈ ಕುರಿತು ವನ್ಯಜೀವಿ ವಿಭಾಗದ ಆರ್.ಎಫ್.ಒ. ಶರ್ಮಿಷ್ಠಾ ಅವರು ಮಾಹಿತಿ ನೀಡಿದ್ದು, ಬೆಂಕಿಯ ಪ್ರಮಾಣ ತಹಬದಿಗೆ ಬಂದಿದೆ ಎಂದು ತಿಳಿಸಿದ್ದಾರೆ.

Read More »

ರಿಕ್ಷಾಕ್ಕೆ ಕಾರು ಢಿಕ್ಕಿ: ಇಬ್ಬರಿಗೆ ಗಾಯ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಸಮೀಪ ಕಾರು ಮತ್ತು ಆಟೋ ಢಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಕುಂದಾಪುರದಿಂದ ಗಂಗೊಳ್ಳಿ ಕಡೆಗೆ ಸಾಗುತ್ತಿದ್ದ ರಿಕ್ಷಾವನ್ನು ನಾಗರಾಜ್ ದೇವಾಡಿಗ ಚಾಲನೆ ಮಾಡುತ್ತಿದ್ದು, ಅವರೊಂದಿಗೆ ಪತ್ನಿ ಸುಮತಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಹಿಂದಿನಿಂದ ಅಜಾಗರೂಕತೆಯಿಂದ ಬಂದ ಕಾರು ರಿಕ್ಷಾವನ್ನು ಓವರ್‌ಟೇಕ್ ಮಾಡಿ ಪೆಟ್ರೋಲ್ ಬಂಕ್ ಕಡೆಗೆ ಏಕಾಏಕಿ ಎಡಕ್ಕೆ ತಿರುಗಿದ ಪರಿಣಾಮ ಅಪಘಾತವಾಗಿ ರಿಕ್ಷಾ ಪಲ್ಟಿಯಾಗಿದೆ. ರಿಕ್ಷಾ ಚಾಲಕ ನಾಗರಾಜ್ ಹಾಗೂ ಸುಮತಿ ಅವರಿಗೆ …

Read More »

ಕಾರು ಚಾಲಕನಿಗೆ ತಂಡದಿಂದ ಹಲ್ಲೆ, ಕಾರಿಗೆ ಹಾನಿ

ಕೊಲ್ಲೂರು ನಿವಾಸಿ ರಾಕೇಶ್‌ ಶೇಟ್ (30) ಅವರು ಪತ್ನಿ ಹಾಗೂ ಮಗುವಿನೊಂದಿಗೆ ಕಾರಿನಲ್ಲಿ ಕೊಲ್ಲೂರಿನಿಂದ ಕಂಡ್ಲೂರಿಗೆ ಮದುವೆಗೆ ತೆರಳುತ್ತಿದ್ದಾಗ ಚಿತ್ತೂರು ಸರ್ಕಲ್ ಬಳಿಯ ಮುಖ್ಯ ರಸ್ತೆಯಲ್ಲಿ ಇನ್ನೊಂದು ಕಾರಿನ ಚಾಲಕ ದಾರಿ ಬಿಡುವ ವಿಷಯದಲ್ಲಿ ರಾಕೇಶ ಶೇಟ್ ಜತೆಗೆ ಜಗಳವಾಡಿದ್ದಾನೆ. ರಾಕೇಶರ ಕಾರನ್ನು ಅಡ್ಡಗಟ್ಟಿ, ಇತರ ಮೂವರೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಲ್ಲದೆ, ಕಾರಿನ ಮುಂಭಾಗದ ಎರಡು ಕನ್ನಡಿ ಹಾಗು ಗ್ಲಾಸನ್ನು ಒಡೆದು ಜಖಂಗೊಳಿಸಲಾಗಿದೆ. ಈ ಬಗ್ಗೆ …

Read More »

ಅಂಗಡಿಗಳಿಗೆ ಆಕಸ್ಮಿಕ ಬೆಂಕಿ: ಹಾನಿ

ಬೀದರ್ ತಾಲ್ಲೂಕಿನ ಮೊಗದಾಳ ಸಮೀಪದ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಎದುರಿನ ಮೂರು ಅಂಗಡಿಗಳಿಗೆ ಶನಿವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.ಟೈರ್, ಬ್ಯಾಟರಿ, ಪಂಕ್ಚರ್ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿತು. ಧಗ ಧಗನೆ ಉರಿಯಲಾರಂಭಿಸಿತು.ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಬೇಮಳಖೇಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More »

ಒಂದೇ ಪರವಾನಿಗೆ: ಹೆಚ್ಚಿನ ಕಲ್ಲು ಸಾಗಾಟ; ಕೇಸು

ಪುತ್ತೂರು: ಒಂದೇ ಪರವಾನಿಗೆ ಪಡೆದು ಹೆಚ್ಚಿನ ಟ್ರಿಪ್ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪುತ್ತೂರು ಪೊಲೀಸರು ಮುರದಲ್ಲಿ ತಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪುತ್ತೂರು ಸಂಚಾರ ಪೊಲೀಸ್‌ ಠಾಣಾ ಪಿಎಸ್‌ಐ ಸುಹಾಸ್ ಆರ್. ಅವರು ದೂರು ನೀಡಿದ್ದು, ಅವರು ಮೇ 1ರಂದು ಸಂಜೆ ಮುರದಲ್ಲಿ ವಾಹನ ತಪಾಸಣೆಯ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕೆಂಪುಕಲ್ಲು ತುಂಬಿದ ಲಾರಿಯೊಂದು ಆಗಮಿಸಿದೆ. ಈ ವೇಳೆ ಲಾರಿಯನ್ನು ತಡೆದು ವಿಚಾರಿಸಿದಾಗ ಚಾಲಕ ನಾರಾಯಣ ರೈ …

Read More »