ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಮದುವೆ ಸಮಾರಂಭವೊಂದರಲ್ಲಿ ರಸಗುಲ್ಲಾ ತಿಂದ ಎಂಬ ಕಾರಣಕ್ಕಾಗಿ 11 ವರ್ಷದ ಬಾಲಕನನ್ನು ಉರಿಯುವ ತಂದೂರಿ ಒಲೆಗೆ ಎಸೆದಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖದಿಂದ ಸೊಂಟದವರೆಗೆ ಸುಟ್ಟ ಗಾಯಗಳಿಂದ ಮಗು ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮದುವೆಯ ಊಟದ ಕೌಂಟರ್ನಲ್ಲಿ ಬಾಲಕ ಪದೇ ಪದೇ ರಸಗುಲ್ಲಾ ತೆಗೆದುಕೊಳ್ಳುತ್ತಿದ್ದನು. ಇದರಿಂದ ಕೋಪಗೊಂಡ ಕ್ಯಾಟರಿಂಗ್ ಕಾಂಟ್ರಾಕ್ಟರ್ …
Read More »13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶಕ್ಕೆ
ಕಾಪು: ಕಳೆದ ಹದಿಮೂರು ವರ್ಷಗಳಿಂದ ಉಡುಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಿಹಾರ ಮೂಲದ ಮನೋಜ್ ಕುಮಾರ್ (41) ನನ್ನು ಕಾಪು ಪೊಲೀಸರು ಬಂಧಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಕಳ ಉಡುಪಿ ವಿಭಾಗದ ಪೊಲೀಸ್ ಉಪಾಧೀಕ್ಷಕರು ಮತ್ತು ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ಠಾಣಾ ಉಪನಿರೀಕ್ಷಕರಾದ ತೇಜಸ್ವಿ ಟಿ .ಐ. ಮತ್ತು ಶುಭಕರ್ ನೇತೃತ್ವದಲ್ಲಿ ಎಚ್.ಸಿ. ಮೊಹಮ್ಮದ್ ರಫೀಕ್, ಪಿಸಿಗಳಾದ ಗಣೇಶ್ ಮತ್ತು ಗಂಗಾಧರ್ ಅವರು ಬೆಂಗಳೂರಿನ ಯಲಹಂಕದಲ್ಲಿ …
Read More »ಗಾಂಜಾ ಕೇಸ್: ಚಾರ್ಮಾಡಿ ನಿವಾಸಿಗೆ 5 ವರ್ಷ ‘ಕಠಿಣ’ ಶಿಕ್ಷೆ ವಿಧಿಸಿದ ಮಂಗಳೂರು ನ್ಯಾಯಾಲಯ
ಬೆಳ್ತಂಗಡಿ: ಸುಮಾರು ಒಂದೂವರೆ ದಶಕದ ಹಿಂದೆ ಉಜಿರೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಚಾರ್ಮಾಡಿ ನಿವಾಸಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯವು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2009ರ ಮಾರ್ಚ್ 8ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ರಥಬೀದಿ ಎಂಬಲ್ಲಿ ಮಾದಕ ದ್ರವ್ಯ ಮಾರಾಟದ ಜಾಲವೊಂದು ಸಕ್ರಿಯವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅಂದಿನ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ಬಿ.ಜಿ. ಸುಬ್ಬಾಪುರಮಠ್ ನೇತೃತ್ವದ ತಂಡ ದಾಳಿ …
Read More »ಚಿಕ್ಕಮಗಳೂರು: ಜಿಲ್ಲಾ ಆಸ್ಪತ್ರೆಯಲ್ಲಿ ಹಿಡಿತ ಸಾಧಿಸಲು ಯತ್ನಿಸಿದ್ದ ನಕಲಿ ಐಎಎಸ್
ಬಂಧನಲ್ಲಿರುವ ನಕಲಿ ಐಎಎಸ್ ಅಧಿಕಾರಿ ಮಿಥುನ್, ಮೂರು ತಿಂಗಳ ಹಿಂದಷ್ಟೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಅಸಲಿ ಅಧಿಕಾರಿ ಎಂದು ನಂಬಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್.ವಿ. ಚಂದ್ರಶೇಖರ್ ಅವರಿಂದ ಪೊಲೀಸರು ಶುಕ್ರವಾರ ಹೇಳಿಕೆ ದಾಖಲಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಮಿಥುನ್ ಕುಳಿತಿರುವ ಚಿತ್ರಗಳು, ಬಸವತತ್ವ ಪೀಠದ ಸಮಾವೇಶದಲ್ಲಿ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸನ್ಮಾನಿಸಿರುವ ಚಿತ್ರಗಳು ಈಗ …
Read More »ಯೋಗೇಶ್ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ
ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿ ಅಪರಾಧಿಗಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಮಹತ್ವದ ಶಿಕ್ಷೆಯನ್ನು ಪ್ರಕಟಿಸಿದೆ. ಬುಧವಾರವಷ್ಟೇ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ನ್ಯಾಯಾಲಯ ಅಪರಾಧಿಗಳು ಎಂದು ಘೋಷಿಸಿತ್ತು. ಗುರುವಾರ ಶಿಕ್ಷೆಯ ಪ್ರಮಾಣದ ಬಗ್ಗೆ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರಾದ …
Read More »ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ತಿಂಗಳ ಹಿಂದಷ್ಟೇ ಆರಂಭವಾಗಿದ್ದ ‘ಶುದ್ಧ ತಿಂಡಿ’ ಹೋಟೆಲ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಗುರುವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಇತ್ತೀಚಿಗಷ್ಟೇ ಆರಂಭವಾಗಿದ್ದ ಶುದ್ಧ ತಿಂಡಿ ಎಂಬ ಹೊಸ ಹೋಟೆಲ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.ಇಂದು ಮಧ್ಯಾಹ್ನ ಬೆಂಗಳೂರಿನ ನೈಸ್ ರಸ್ತೆಯ ಸೋಂಪುರ ಸರ್ಕಲ್ ಸಮೀಪ ಕಳೆದ ತಿಂಗಳು ಆರಂಭವಾಗಿದ್ದ ಶುದ್ಧ ತಿಂಡಿ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆಯೇ ಹೊತ್ತಿ ಉರಿದಿದೆ. ಕಳೆದ ಮಾರ್ಚ್ ನಲ್ಲಿ ಅಷ್ಟೇ ಈ ಶುದ್ಧ ತಿಂಡಿ ಹೋಟೆಲ್ ಹೊಸದಾಗಿ ಆರಂಭವಾಗಿತ್ತು. ಆದರೆ ಇಂದು ಇಡ್ಲಿ ಸ್ಟೀಮರ್ ಶಾರ್ಟ್ …
Read More »ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು
ಬೆಳ್ತಂಗಡಿ ತಾಲೂಕಿನ ಸರಸ್ವತಿ ಎಂಬವರು ತನ್ನ ಮಗಳೊಂದಿಗೆ ಮಡಂತ್ಯಾರಿನಿಂದ ಪೊಳಲಿಗೆ ಹೋಗಲು ಧರ್ಮಸ್ಥಳ ದಿಂದ ಸ್ಟೇಟ್ ಬ್ಯಾಂಕಿಗೆ ಹೋಗುವ ಬಸ್ಸಿನಲ್ಲಿ ಏ.15ರಂದು ಬೆಳಗ್ಗೆ ಸುಮಾರು 8.20ಕ್ಕೆ ಹತ್ತಿದ್ದರು. ಬಸ್ ನಲ್ಲಿ ಜನಸಂದಣಿ ಇದ್ದು, ಮಗಳು ಕುಳಿತಿದ್ದರೆ, ಮಹಿಳೆ ನಿಂತು ಪ್ರಯಾಣಿಸಿದ್ದರು. ಮಗಳೊಂದಿಗೆ ಬಿ.ಸಿ.ರೋಡಿನಲ್ಲಿ ಇಳಿಯುವ ವೇಳೆ ಸುಮಾರು 9 ಗಂಟೆಗೆ ಕುತ್ತಿಗೆ ನೋಡಿದ್ದು, ಈ ವೇಳೆ ಚಿನ್ನದ ಸರ ಇರಲಿಲ್ಲ. ಬಸ್ಸಿನಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಯಾರೋ ಕಳ್ಳರು ಕುತ್ತಿಗೆಯಲ್ಲಿದ್ದ 18 …
Read More »ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ
ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು ಗಲಾಟೆ ಮಾಡಿದ್ದರಿಂದ 7ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಲಾಟೆ ಬಗ್ಗೆ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದ ಪೇದೆಗಳು ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟಗಿರಿಕೋಟೆಯ ಅಯಾತ್ ಬಾಬ ಸರ್ಕಲ್ನಲ್ಲಿ ಗಸ್ತಿನಲ್ಲಿದ್ದಾಗ ಟನೆ ನಡೆದಿದೆ. ಗಸ್ತಿನಲ್ಲಿದ್ದ ಪೋಲಿಸ್ ಪೇದೆಗಳು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
Read More »ಯೂಟ್ಯೂಬ್ನಲ್ಲಿ ವರದಿ ಮಾಡಿದಕ್ಕಾಗಿ ಜೀವ ಬೆದರಿಕೆ
ಕೋಟ: ಯೂಟ್ಯೂಬ್ ಡಿಜಿಟಲ್ ಮಾಧ್ಯಮದಲ್ಲಿ ವರದಿಯೊಂದನ್ನು ಪ್ರಕಟ ಮಾಡಿದಕ್ಕಾಗಿ ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಲಾಗಿದೆ ಎಂದು ವಡ್ಡರ್ಸೆಯ ಕುಂಬಾರಬೆಟ್ಟು ನಿವಾಸಿ ಪ್ರಣುತ್ ಕುಮಾರ್ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇವರು ಡಿಜಿಟಲ್ ಚಾನೆಲ್ವೊಂದರಲ್ಲಿ ಮಾಡಿದ ವರದಿಗೆ ಆಕ್ಷೇಪ ವ್ಯಕ್ತಪಡಿಸಿ ವಡ್ಡರ್ಸೆ ಯಾಳಕ್ಲು ನಿವಾಸಿ ಅಜಿತ್ ಕುಮಾರ್ ಶೆಟ್ಟಿ ಎನ್ನುವಾತ ಚಂದ್ರಶೆಟ್ಟಿಹಾಗೂ ಅಪರಿಚಿತ ಮಹಿಳೆಯೊಬ್ಬಳ ಜತೆ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪ್ರನುತ್ ಅವರ …
Read More »ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಬೆಂಕಿ!
ಹುಳಿಯಾರು : ಪಟ್ಟಣದ ಕನಕ ಸರ್ಕಲ್ ಬಳಿಯ ಪ್ರವಾಸಿ ಮಂದಿರದ ಹತ್ತಿರ ಗುರುವಾರ ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಳಿಯಾರಿನಿಂದ ಅರಸೀಕೆರೆಗೆ ಹೊರಟಿದ್ದ ಬಸ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರವಾಸಿ ಮಂದಿರದ ಬಳಿ ಚಲಿಸುತ್ತಿದ್ದಾಗ ಇಂಜಿನ್ ಭಾಗದ ಡೀಸೆಲ್ ಪೈಪ್ ತುಂಡಾದ ಪರಿಣಾಮ ಬ್ಯಾಟರಿ ಕೇಬಲ್ನಲ್ಲಿ ಶಾರ್ಟ್ ಸಕ್ಯೂರ್ಟ್ ಉಂಟಾಗಿ ಕ್ಷಣಾರ್ಧದಲ್ಲಿ ಬೆಂಕಿ ಹತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಬಸ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





